Homeಚಳವಳಿಶ್ರದ್ಧಾಂಜಲಿ; ವಿಠ್ಠಲ ಸರ್: ಎಂದೂ ಮುಗಿಯದ ಕಾಂತ್ರಿಗೀತೆ

ಶ್ರದ್ಧಾಂಜಲಿ; ವಿಠ್ಠಲ ಸರ್: ಎಂದೂ ಮುಗಿಯದ ಕಾಂತ್ರಿಗೀತೆ

- Advertisement -
- Advertisement -

ಹೇಳಬೇಕಾದ ಮಾತು
ಗಂಟಲಲ್ಲೇ ಉಳಿದಿದೆ..
ಕಣ್ಣಂಚಿಂದ ಜಾರಿದ ಹನಿಗಳು
ನೆನಪುಗಳ ಒತ್ತರಿಸಿ ತಂದಿವೆ..
ಬರೆದು ಕಳೆದುಕೊಳ್ಳಲಾಗದ ನೋವಿದು..
ಪ್ರಿಯ ಸಂಗಾತಿ,
ಹೀಗೆ ಎದ್ದು ನಡೆದರೆ ಹೇಗೆ?
ನಾವಾದರೂ ಎಳೆಯರು
ಸಹಿಸೋದು ಹೇಗೆ?

ಸುಮಾರು ಒಂಭತ್ತು ವರ್ಷಗಳಿಂದ ಸಹಯಾನದ ಪರಿವಾರದಲ್ಲಿ ಮನೆ ಮಗನಂತೆ ಬೆಳೆದವನು ನಾನು. ವಿಠ್ಠಲ ಸರ್ ಎಂದರೆ ಸದಾ ಅಚ್ಚರಿ ನನಗೆ. ಅವರ ಸಂಘಟನಾ ಶಕ್ತಿ, ಅಪಾರ ಶಿಸ್ತು, ಅಗಾಧ ಓದು ಮತ್ತು ಚಳುವಳಿಯ ಕುಲುಮೆಯಲಿ ಹದಗೊಂಡ ಚಿಂತನೆ, ಆ ಚಿಂತನೆಗಳನ್ನು ತೆರೆದಿಡುವ ಮಾತಿನ ಕೌಶಲ್ಯ, ಎದೆ ತುಂಬಿ ಹಂಚುತ್ತಿದ್ದ ಪ್ರೀತಿ, ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲರಿಗೂ ಮಹತ್ವ ನೀಡುತ್ತಿದ್ದ ಅವರ ವಿಶಾಲ ಗುಣ ನನ್ನನ್ನು ಸದಾ ಬೆರಗುಗೊಳಿಸುತ್ತಿತ್ತು. ಅವರ ಇನ್ನೊಂದು ವಿಶೇಷತೆಯೆಂದರೆ ಇಷ್ಟೆಲ್ಲಾ ಎತ್ತರಕ್ಕೆ ಬೆಳೆದಿದ್ದರೂ ತಮ್ಮೊಳಗಿನ ಮುಗ್ಧತೆಯನ್ನು ಹಾಗೆಯೇ ಕಾಪಿಟ್ಟುಕೊಂಡು ಬಂದಿದ್ದರು. ಮಕ್ಕಳ ರಜಾ ಶಿಬಿರಗಳಲ್ಲಿ ತಾವೂ ಒಬ್ಬ ಪುಟ್ಟ ಮಗುವಿನಂತೆ ಸಂಭ್ರಮಿಸುತ್ತಿದ್ದರು, ನಮ್ಮಂತ ಯುವಜನರೊಡನೆ ಉತ್ಸಾಹದ ಚಿಲುಮೆಯಂತೆ ಬೆರೆತು ಹೋಗುತ್ತಿದ್ದರು. ಅವರ ವಿಧ್ಯಾರ್ಥಿಗಳು ನೆನೆಯುವಂತೆ ಅವರೊಬ್ಬ ಆಪ್ತ ಗೆಳೆಯನಂತಹ ಗುರು. ಸಹಯಾನದ ಅಂಗಳದಲ್ಲಿ ನಾವೆಲ್ಲಾ ಯುವಕರು ನಡುರಾತ್ರಿಯವರೆಗೆ ವಿಠ್ಠಲ ಸರ್ ಸುತ್ತ ಕುಳಿತು ಅವರ ಆಪ್ತವಾದ ಮಾತುಗಳಿಗೆ ಕಿವಿಯಾಗುತ್ತಿದ್ದೆವು. ಅವರೂ ಅಷ್ಟೇ ಆಸಕ್ತಿಯಿಂದ ನಮ್ಮ ಮಾತುಗಳನ್ನ ಆಲಿಸುತ್ತಿದ್ದರು. ಹೀಗೆಲ್ಲಾ ನಮ್ಮ ನಡುವೆ ಚೈತನ್ಯದ ಚಿಲುಮೆಯಂತಿದ್ದ ಅವರು ಈಗ ಇಲ್ಲವೆಂಬುದನ್ನ ಮನಸ್ಸು ಒಪ್ಪುತ್ತಲೇ ಇಲ್ಲ!

ವಿಠ್ಠಲ ಸರ್ ಅಗಲುವಿಕೆಯಿಂದ ನಿಜಕ್ಕೂ ತುಂಬಲಾರದ ನಷ್ಟವಾದದ್ದು ಹೊಸ ತಲೆಮಾರಿಗೆ. ಬಹುಶಃ ಇವರಷ್ಟು ಹೊಸ ತಲೆಮಾರನ್ನು ಪ್ರೀತಿಸಿದ, ಭರವಸೆ ಇಟ್ಟ ಮತ್ತು ಅವರಿಗಾಗಿ ಶ್ರಮಿಸಿದ ಮತ್ತೊಬ್ಬ ಸಂಘಟಕರನ್ನು ಕಾಣುವುದು ಕಷ್ಟ. ಸಹಯಾನದ ವೇದಿಕೆಯಲ್ಲಿ ನಡೆವ ಪ್ರತಿಯೊಂದು ಕಾರ್ಯಕ್ರಮವೂ ಹೊಸ ತಲೆಮಾರನ್ನು, ವಿಧ್ಯಾರ್ಥಿಗಳನ್ನು, ಮಕ್ಕಳನ್ನು ಮುಖ್ಯ ಭೂಮಿಕೆಯಾಗಿಟ್ಟುಕೊಂಡೇ ನಡೆಯುತ್ತಿದ್ದವು. ಸಂವಿಧಾನ ಓದು ಎಂಬ ಚಳುವಳಿ ರೂಪದ ಅಭಿಯಾನವೂ ಕೂಡ ರಾಜ್ಯದ ಮೂಲೆ ಮೂಲೆ ಸಂಚರಿಸಿ ಲಕ್ಷಾಂತರ ವಿಧ್ಯಾರ್ಥಿಗಳನ್ನು ತಲುಪಲು ಸಾಧ್ಯವಾದದ್ದು ಕೂಡ, ಅವರ ಹೊಸತಲೆಮಾರಿನ ಬಗೆಗಿನ ಅಗಾಧವಾದ ಕಾಳಜಿಯಿಂದಲೇ. ಅಧ್ಯಯನ ಶಿಬಿರಗಳಲ್ಲಿ ಯುವಜನರು ವಿಠ್ಠಲ ಸರ್ ಮಾತುಗಳನ್ನು ಗಂಟೆಗಟ್ಟಲೆ ಆಲಿಸುತ್ತಿದ್ದರು, ಅಪಾರ ಒಳನೋಟಗಳನ್ನು ತೆರೆದಿಡುತ್ತಿದ್ದ ಅವರ ಮಾತುಗಳಲ್ಲಿ ಯುವಜನರು ತಮ್ಮ ವೈಚಾರಿಕತೆಯನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದರು. ತಾವು ಸಾಗಬೇಕಾದ ದಾರಿಯನ್ನು ನಿಚ್ಚಳಗೊಳಿಸಿಕೊಳ್ಳುತ್ತಿದ್ದರು. ನನ್ನನ್ನು ಸೇರಿ ಅವರಿಂದ ಪ್ರಭಾವಿತರಾದ ದೊಡ್ಡ ಯುವಸಮುದಾಯವೇ ಈ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಹರಡಿಕೊಂಡಿವೆ. ಮುಂದೆ ಅವರ ಅಪೂರ್ಣ ಕನಸುಗಳನ್ನು ಸಾಕಾರಗೊಳಿಸುವ ಜವಾಬ್ದಾರಿಯೂ ಕೂಡ ಈ ಹೊಸತಲೆಮಾರಿನ ಮೇಲಿದೆ.

ಮೂಲ ಸೌಕರ್ಯಗಳೇ ತಲುಪಿರದ ಕೆರೆಕೋಣದಂತಹ ಒಂದು ಪುಟ್ಟ ಹಳ್ಳಿಯಲ್ಲಿ, ಸಹಯಾನವನ್ನು ಚಳುವಳಿಯ ರೂಪದಲ್ಲಿ ಹುಟ್ಟುಹಾಕಿ, ಇಂದಿಗೆ ಅದು ರಾಜ್ಯದಲ್ಲೇ ಮಾದರಿಯಾಗಬಲ್ಲ ಒಂದು ಸಂಘಟನೆಯಾಗಿ ರೂಪುಗೊಳ್ಳುವಲ್ಲಿ ವಿಠ್ಠಲ್ ಭಂಡಾರಿಯವರ ಶ್ರಮ, ದೂರದೃಷ್ಟಿ ಮತ್ತು ಪ್ರಖರ ಚಿಂತನೆಗಳ ದೊಡ್ಡ ಕೊಡುಗೆಯೇ ಇದೆ. ಜೊತೆ ಜೊತೆಗೆ ಚಿಂತನ, ಸಮುದಾಯ, ಬಂಡಾಯ, ಸಂಘಟನೆ, ಸಂವಿಧಾನ ಓದು ಹೀಗೇ ಬೇರೇ ಬೇರೆ ರಾಜ್ಯಮಟ್ಟದ ಸಂಘಟನೆಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ವಿಠ್ಠಲ್ ಸರ್ ತಮ್ಮದೇ ಆದ ಸಂಘಟನಾ ಕೌಶಲ್ಯದಿಂದ ಆ ಎಲ್ಲಾ ಸಂಘಟನೆಗಳಲ್ಲೂ ಮಹತ್ವದ ಒಡನಾಡಿಯಾಗಿದ್ದರು. ಆ ನಿಟ್ಟಿನಲ್ಲಿ ಅವರ ಅಗಲುವಿಕೆ ಈ ರಾಜ್ಯದ ಒಟ್ಟಾರೆ ಪ್ರಗತಿಪರ, ಜನಪರ ಚಳುವಳಿಗೆ ದೊಡ್ಡ ಹಿನ್ನೆಡೆಯೇ ಹೌದು.

ಇತ್ತೀಚಿನ ಎರಡು ಮೂರು ವರುಷಗಳಲ್ಲಿ ವಿಠ್ಠಲ್ ಸರ್ ಈ ಎಲ್ಲಾ ಕಾರ್ಯ ಚಟುವಟಿಕೆಯಲ್ಲಿ ತೀವ್ರವಾಗಿ ವಿರಾಮವೇ ಇಲ್ಲದೆ ತೊಡಗಿಸಿಕೊಂಡಿದ್ದರು. ದಣಿವರಿಯದೇ ದುಡಿಯುತ್ತಿದ್ದ ಅವರನ್ನ ಈಗ ನೆನೆದರೆ ಬಹುಶಃ ಈ ಅವಸರದ ಅರಿವಿದ್ದೇ ಎಲ್ಲವನ್ನೂ ತ್ವರಿತವಾಗಿ ಕೈಗೊಳ್ಳುತ್ತಿದರೋ ಎಂಬಂತೆ ಭಾಸವಾಗುತ್ತದೆ. ಕಳೆದ ಕೆಲವು ದಿನಗಳವರೆಗೂ ಅವರು ಸಹಯಾನದಲ್ಲಿ ಹೊಸ ಬರಹಗಾರರಿಗಾಗಿ ಕಾವ್ಯ ಕಮ್ಮಟವನ್ನು ಏರ್ಪಡಿಸುವ ಕುರಿತು ಹಾಗೂ ಮುಂದಿನ ಸಹಯಾನ ಸಾಹಿತ್ಯೋತ್ಸವವನ್ನು ಉತ್ತರ ಕನ್ನಡ ಜಿಲ್ಲೆಯ ಯುವ ಬರಹಗಾರರನ್ನು ಕೇಂದ್ರವಾಗಿರಿಸಿಕೊಂಡೇ ಹಮ್ಮಿಕೊಳ್ಳುವ ಕುರಿತು ಸಾಕಷ್ಟು ಯೋಜನೆಗಳನ್ನ ಹಂಚಿಕೊಂಡಿದ್ದರು. ಆ ಕೆಲಸಗಳಿಗಾಗಿ ತಯಾರಿಯನ್ನೂ ಮಾಡಿಕೊಳ್ಳೋಣ ಎಂದು ನನ್ನೊಡನೆ ಮಾತನಾಡಿದ್ದು ಈಗ ಮಾಸದ ನೆನಪು.

ಎಡಪಂಥೀಯ ಚಳುವಳಿಗೆ ಒಂದು ಸಶಕ್ತ ಮಾಧ್ಯಮ ಬೇಕು, ಸುಳ್ಳನ್ನೇ ಭಿತ್ತರಿಸುವ, ಆಡಳಿತದ ಪರವಾಗಿ ವಕಾಲತ್ತು ವಹಿಸುವ ಮಾಧ್ಯಮಗಳಿಗೆ ಸೆಡ್ಡು ಹೊಡೆದು ಜನಪರವಾಗಿರುವ ಒಂದು ಮಾಧ್ಯಮವನ್ನ ಹುಟ್ಟು ಹಾಕಬೇಕೆಂಬುದೂ ಅವರ ಕನಸಾಗಿತ್ತು. ಅದಕ್ಕೆ ಪೂರಕವಾಗಿ ಜನಶಕ್ತಿ ಮೀಡಿಯಾ ಆರಂಭವಾದಾಗ ಅಲ್ಲಿ ತಮ್ಮ ಕನಸಿನ ‘ವಾರದ ಕವಿತೆ’, ‘ಪಿಚ್ಚರ್ ಪಯಣ’ದಂತಹ ಅಂಕಣಗಳನ್ನು ನಿರಂತರವಾಗಿ ಪ್ರಕಟಿಸಲು ಸಾಕಷ್ಟು ಪರಿಶ್ರಮವಹಿಸಿದ್ದರು.

ಹೀಗೇ ಅವಿರತವಾಗಿ ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ವಿಠ್ಠಲ್ ಸರ್ ಅಗಲುವಿಕೆ ದೊಡ್ಡ ಆಘಾತ. ಇದು ಖಾಲಿತನವನ್ನ ಸೃಷ್ಟಿಸಿದೆ. ಆದರೆ ವಿಠ್ಠಲ್ ಸರ್ ಈ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ನಿಂತಿದ್ದರೂ ಸಹ ತಮ್ಮ ಜೊತೆಗೆ ಅಷ್ಟೇ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ಒಂದು ದೊಡ್ಡ ಪಡೆಯನ್ನೇ ಸೃಷ್ಟಿಸಿದ್ದಾರೆ ಕೂಡ. ತಾವೆಂದೂ ಏಕಪಕ್ಷೀಯವಾಗಿರದೆ ಎಲ್ಲರನ್ನೂ ಒಳಗೊಳ್ಳುತ್ತಾ, ಹೊಸ ತಲೆಮಾರಿನ ಲೇಖಕರನ್ನು, ಕಲಾವಿದರನ್ನು, ಸಂಘಟಕರನ್ನು ಮುನ್ನೆಲೆಗೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ.. ಅಪಾರ ಸಂಖ್ಯೆಯ ವಿಧ್ಯಾರ್ಥಿಗಳನ್ನ ಪ್ರಭಾವಿಸಿದ ನೆಚ್ಚಿನ ಗುರು ಅವರು. ಹಾಗಾಗಿ ಅಪೂರ್ಣವಾಗಿರುವ ವಿಠ್ಠಲ್ ಸರ್ ಯೋಜನೆಗಳನ್ನು, ಶೋಷಣೆಯಿರದ ಸಮಸಮಾಜದ ಕನಸುಗಳನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ಯಶಸ್ವಿಗೊಳಿಸಲು ಈ ಪಡೆಗೆ ಅವರು ಸ್ಪೂರ್ತಿಯಾಗಿದ್ದಾರೆ ಎಂಬುದೂ ಕೂಡ ಅಷ್ಟೇ ಸತ್ಯದ ಸಂಗತಿ.

ಸಹಪಯಣವನ್ನು ಮುಂದುವರೆಸೋಣ. ವಿಠ್ಠಲ್ ಸರ್ ಎಂಬ ದಣಿವರಿಯದ ಕ್ರಾಂತಿಯೋಧನನ್ನ ಸದಾ ನಮ್ಮೊಳಗೆ ಜೀವಂತವಾಗಿರಿಸಿಕೊಳ್ಳೋಣ, ಅವರ ಚಿಂತನೆಗಳನ್ನು ಈ ನೆಲದ ಉದ್ದಗಲಕ್ಕೂ ಬಿತ್ತೋಣ…

ಕ್ರಾಂತಿ ಚಿರಾಯುವಾಗಲಿ. ಕಾಮ್ರೇಡ್ ವಿಠ್ಠಲ್ ಭಂಡಾರಿ ಲಾಲ್ ಸಲಾಮ್.


ಇದನ್ನೂ ಓದಿ:  ಕೊರೊನಾ ವೈಫಲ್ಯ: ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ನಾಯಕರ ತಲೆದಂಡ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...