ಜೀವನ ಪೂರ್ತಿ ಉಚಿತ ಕರೆಗಳು ಎಂದು ಘೋಷಿಸಿದ್ದ ಜಿಯೋ ರಿಲೆಯನ್ಸ್ ಈಗ ಇದ್ದಕ್ಕಿದ್ದಂತೆಯೇ ಇತರ ನೆಟ್‌ವರ್ಕ್‌ಗೆ ಒಂದು ನಿಮಿಷಕ್ಕೆ 6ಪೈಸೆ ದರ ನಿಗದಿ ಮಾಡಿದೆ. ಇದು ಜಿಯೋ ಬಳಕೆದಾರರದಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದ್ದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಯೋ ತನ್ನ ಹೊಸ ಪ್ಲಾನ್ ಅನ್ನು ಘೋಸಿಸುತ್ತಿದ್ದಂತೆಯೇ #BoycottJio ಜಿಯೊ ತೊಲಗಿಸಿ ಟ್ರೆಂಡಿಂಗ್ ಆಗಿದೆ. ಇದೇ ಸಂದರ್ಭದಲ್ಲಿ BSNL ಕೂಡ ಟ್ರೆಂಡಿಂಗ್ ಆಗಿದ್ದು ಜಿಯೋ ತ್ಯಜಿಸಿ ಬಿಎಸ್‌ಎನ್‌ಎಲ್ ಉಳಿಸಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ವಿಪರ್ಯಾಸವೆಂದರೆ ಬಹಳಷ್ಟು ಜನರು ಜಿಯೋ ನೆಟ್‌ವರ್ಕ್ ಬಳಸಿಯೇ #BoycottJio ಟ್ರೆಂಡಿಂಗ್ ಮಾಡುತ್ತಿರುವುದು ಮಜವಾಗಿದೆ ಎಂದು ಕೆಲವರು ಕಿಚಾಯಿಸಿದ್ದಾರೆ.
ಇದೆಲ್ಲವೂ ಪೂರ್ವಯೋಜಿತವಾಗಿದೆ…
ಉಚಿತ ಡೇಟಾವನ್ನು ನೀಡಿ
ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿ
ಅವರನ್ನು ಇಂಟರ್ನೆಟ್‌ಗೆ ವ್ಯಸನಿಯನ್ನಾಗಿ ಮಾಡಿ
ಉಚಿತ ಡೇಟಾವನ್ನು ವಿಸ್ತರಿಸಿ
1 ಕುಟುಂಬಕ್ಕೆ 1 ಫೋನ್‌ನಿಂದ 1 ವ್ಯಕ್ತಿಗೆ 1 ಫೋನ್ ಬಂದು
ಪೋರ್ಟಬಿಲಿಟಿಯನ್ನು ಪ್ರೋತ್ಸಾಹಿಸಿ
ಸಣ್ಣ ಮೊತ್ತವನ್ನು ವಿಧಿಸಿ
ಏಕಸ್ವಾಮ್ಯವನ್ನು ರಚಿಸಿ
ಶುಲ್ಕವನ್ನು ಹೆಚ್ಚಿಸಿ
ಎಲ್ಲಾ ಸೇವೆಗೂ ಶುಲ್ಕ ವಿಧಿಸಿ
ನಂತರ ಉಚಿತ ಬಳಕೆ ಇಲ್ಲ ಎಂದು ಘೋಷಿಸುವುದು ಪೂರ್ವಯೋಜಿತವಲ್ಲವೇ ಎಂದು ಡಿಗಿ ಚಂದ್ರುರವರು ಟ್ವಿಟ್ಟರ್‌ನಲ್ಲಿ ಕಿಡಿಕಾರಿದ್ದಾರೆ.

ಮೊದಲು ಅವರು ಅದನ್ನು ಉಚಿತ/ಅಗ್ಗವಾಗಿ ನೀಡುತ್ತಾರೆ.
ಜನರು ಕುರಿಗಳಂತೆ ಸೇರುತ್ತಾರೆ.
ಇತರ ಕಂಪನಿಗಳು ಭಾರಿ ನಷ್ಟವನ್ನು ಅನುಭವಿಸುತ್ತಾರೆ ಮತ್ತು ಕಾರ್ಯಾಚರಣೆಯನ್ನು ಮುಚ್ಚಬೇಕಾಗುತ್ತದೆ.
ಏಕಸ್ವಾಮ್ಯದ ಹತ್ತಿರ ತಲುಪಿದೆ.
ನಂತರ, ನಿಮಗೆ ಯಾವುದೇ ವಿಶ್ವಾಸಾರ್ಹ ಆಯ್ಕೆ ಇಲ್ಲದಿದ್ದಾಗ ನೀವು ಅವರ ನಿಜವಾದ ಬಣ್ಣಗಳನ್ನು ನೋಡುತ್ತೀರಿ ಎಂದು ಕೌ ಮಾಮ್‌ರವರು ಟ್ವೀಟ್ ಮಾಡಿದ್ದಾರೆ.

ದಯವಿಟ್ಟು ಹುಡುಗರೇ …. ಬಿಎಸ್ಎನ್ಎಲ್‌ಗೆ ಬದಲಿಸಿ ಮತ್ತು ಈ ಅನಾರೋಗ್ಯದ ಉದ್ಯಮವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿ.
ಇದರಿಂದ ನೀವು ಆರ್ಥಿಕತೆಗೆ ಸಹಾಯ ಮಾಡುತ್ತೀರಿ ಮತ್ತು ಚಿಂತೆಗೀಡಾದ ಲಕ್ಷಾಂತರ ಬಿಎಸ್‌ಎನ್‌ಎಲ್ ಸಿಬ್ಬಂದಿ ನಿಮಗೆ ಆಶೀರ್ವಾದ ನೀಡುತ್ತಾರೆ.? ಎಂದು ಮತ್ತೊಬ್ಬರು ಕಿಚಾಯಿಸಿದ್ದಾರೆ..

ಇನ್ನು ಜಿಯೋ ಮತ್ತು ಮುಖೇಶ್ ಅಂಬಾನಿ ವಿರುದ್ಧ ಕ್ಷಣಾರ್ಧದಲ್ಲಿ ಸಾವಿರಾರು ಮೀಮ್ಸ್‌ಗಳು ತಯಾರಾಗಿದ್ದು ಭಾರೀ ಟ್ರೋಲ್‌ಗಳು ಆರಂಭವಾಗಿವೆ.


