Homeಮುಖಪುಟಕೇರಳದಲ್ಲಿ ಮದುವೆ ಪ್ರಸ್ತಾಪ ತಿರಸ್ಕರಿಸಿದ ಅಪ್ರಾಪ್ತೆಗೆ ಬೆಂಕಿ ಹಚ್ಚಿ ಸುಟ್ಟುಬಿಟ್ಟ ಪಾತಕಿ.. 

ಕೇರಳದಲ್ಲಿ ಮದುವೆ ಪ್ರಸ್ತಾಪ ತಿರಸ್ಕರಿಸಿದ ಅಪ್ರಾಪ್ತೆಗೆ ಬೆಂಕಿ ಹಚ್ಚಿ ಸುಟ್ಟುಬಿಟ್ಟ ಪಾತಕಿ.. 

ಘಟನೆಯಲ್ಲಿ ಅಪ್ರಾಪ್ತೆಯನ್ನು ಕಾಪಾಡಲು ಬಂದ ಆಕೆಯ ತಂದೆ ಮತ್ತು ಆರೋಪಿ ಇಬ್ಬರೂ ಬೆಂಕಿಗೆ ಆಹುತಿಯಾಗಿ ಮೃತಪಟ್ಟಿದ್ದಾರೆ..

- Advertisement -
- Advertisement -

ಕೇರಳದ ತಿರುವನಂತಪುರಂನಲ್ಲಿ ಮದುವೆ ಪ್ರಸ್ತಾಪ ತಿರಸ್ಕರಿಸಿದ ಬಾಲಕಿಯ ಮೇಲೆ ಬೆಂಕಿ ಹಚ್ಚಿದ ದುರ್ಘಟನೆ ಜರುಗಿದ್ದು ಆಕೆಯ ತಂದೆ ಮತ್ತು ಆರೋಪಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಮಿಧುನ್ ಎಂಬಾಂತನೇ ಆರೋಪಿಯಾಗಿದ್ದು ಆತ 17ರ ಹರೆಯದ ಬಾಲಕಿಯನ್ನು ಇಷ್ಟಪಟ್ಟಿದ್ದ. ಮದುವೆಯ ಪ್ರಸ್ತಾಪವನ್ನು ಆಕೆಯ ಕುಟುಂಬದವರ ಮುಂದಿಟ್ಟಿದ್ದ. ಆದರೆ ಬಾಲಕಿ ಅಪ್ರಾಪ್ತೆ ಎಂಬ ಕಾರಣದಿಂದ ಕುಟುಂಬವು ಪ್ರಸ್ತಾಪವನ್ನು ತಿರಸ್ಕರಿಸಿತ್ತು.

ಈ ಕುರಿತು ಜಗಳವಾಗಿ ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿತ್ತು. ಆತ ತಪ್ಪೊಪ್ಪಿಕೊಂಡಿದ್ದ ಮಿಧುನ್‌ ಇನ್ನು ಮುಂದು ತೊಂದರೆ ಕೊಡುವುದಿಲ್ಲ ಎಂದು ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದ.

ಆದರೆ ನಿನ್ನೆ ಏಕಾಏಕಿ ಬಾಲಕಿಯ ಮನೆಗೆ ಧಾವಿಸಿದಾಗ ಆಕೆಯ ತಂದೆ ಅವನನ್ನು ತಡೆದಿದ್ದಾರೆ. ಜಗಳ ಕೇಳಿ ಮನೆಯಿಂದ ಹೊರಬಂದ ಕೂಡಲೇ ಆಕೆಯ ಮೇಲೆ ಬೆಂಕಿ ಉಗುಳುವ ವಸ್ತುವನ್ನು ಎರಚಿದ್ದಾನೆ. ಗಾಬರಿಗೊಂಡ ಆಕೆಯ ತಂದೆ ಅವರಳನ್ನು ಕಾಪಾಡಲು ಹೋದಾಗ ಬೆಂಕಿ ಅವರಿಗೂ ಆವರಿಸಿ ಸುಟ್ಟು ಕರಕಲಾಗಿದ್ದಾರೆ.

ಬೆಂಕಿ ವ್ಯಾಪಿಸಿ ಆರೋಪಿ ಮಿಧುನ್‌ಗೂ ತಗುಲಿದೆ. ತಕ್ಷಣವೇ ಎರ್ನಾಕುಲಂನ ಆಸ್ಪತ್ರೆಗೆ ಇಬ್ಬರನ್ನೂ ಸಾಗಿಸುವಾಗ ದಾರಿ ಮಧ್ಯದಲ್ಲೇ ಜೀವ ಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...