ಇಂದು ಸಂಜೆ 6 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದೆ ತಡ ನೆಟ್ಟಿಗರು ಥರೇಹವಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಪ್ರಧಾನಿ ಟ್ವೀಟ್‌ಗೆ ಕೂಡಲೇ ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತೆ ಮತ್ತು ಬರಹಗಾರ್ತಿ ಮೀನಾ ಕಂದಸ್ವಾಮಿ “ಶತಕೋಟಿ ಜನರನ್ನು ಪ್ಯಾನಿಕ್ ಅಟ್ಯಾಕ್‌ಗೊಳಪಡಿಸುವುದು ಹೇಗೆ?” ಎಂದು ವ್ಯಂಗ್ಯವಾಡಿದ್ದಾರೆ.
2016ರ ನವೆಂಬರ್ 8 ರಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿ ಮಾತನಾಡಿದ್ದ ಪ್ರಧಾನಿ ಮೋದಿಯವರು 500 ಮತ್ತು 1000 ರೂ ಮುಖಬೆಲೆಯ ನೋಟು ರದ್ಧತಿ ಘೋಷಿಸಿದ್ದರು. ಅದು ಕೋಟ್ಯಾಂತರ ಜನರ ಜೀವನದ ಮೇಲೆ ನಕರಾತ್ಮಕ ಪರಿಣಾಮ ಬೀರಿತು ಎಂಬ ಆರೋಪವಿದೆ.
ಅದೇ ರೀತಿಯಲ್ಲಿ ಈ ವರ್ಷದ ಮಾರ್ಚ್ 24 ರಂದು ಅದೇ 8 ಗಂಟೆ ಸಮಯಕ್ಕೆ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿ “ರಾತ್ರಿ 12 ಗಂಟೆಯಿಂದ ಜಾರಿಗೆ ಬರುವಂತೆ 21 ದಿನಗಳ ಕಾಲ ದೇಶಾದ್ಯಂತ ಲಾಕ್‌ಡೌನ್” ಘೋಷಿಸಿದ್ದರು. ಇದು ಕೋಟ್ಯಾಂತರ ಜನರನ್ನು ಆತಂಕಕ್ಕೆ ದೂಡಿತು ಮಾತ್ರವಲ್ಲ, ಲಾಕ್‌ಡೌನ್ ಅವಧಿಯಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೇ ನಡೆದುಕೊಂಡು ಸ್ವಂತ ಊರಿಗೆ ಹೊರಟ ಹಲವಾರು ಜನ ರಸ್ತೆ ಮಧ್ಯದಲ್ಲಿಯೇ ಪ್ರಾಣ ಬಿಟ್ಟಿದ್ದರು. ಯೋಜನೆಯಿಲ್ಲದ ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ಕೆಟ್ಟ ಸ್ಥಿತಿ ತಲುಪಿತು ಎಂಬ ಆರೋಪ ಮೋದಿಯವರ ಮೇಲಿದೆ.
ಈ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂಬ ವಾಕ್ಯಗಳನ್ನು ಕೇಳಿದರೆ ಭಯ ಬೀಳುತ್ತಾರೆ. ಅಲ್ಲದೇ ಒಂದಷ್ಟು ಜನ ಅದನ್ನೇ ಬಳಸಿ ವ್ಯಂಗ್ಯವಾಡುತ್ತಾರೆ. ಅಂತಹ ಕೆಲವೊಂದು ಹೇಳಿಕೆಗಳು ಕೆಳಗಿನಂತಿವೆ.
Today’s date: 20-10-20 = 50
+ 6 PM= 56
Waah, Modi ji. Masterstroke from Modi ji…#56Rocks
— Tushar (@tushar) October 20, 2020
ಇಂದಿನ ದಿನಾಂಕ 20, 10, 20 = 50
+ ಸಂಜೆ 6 ಗಂಟೆಗೆ
50+6 + 56
ಎಂಥಾ ಮಾಸ್ಟರ್ ಸ್ಟ್ರೋಕ್! ವಾವ್ ಮೋದಿಜಿ! ಎಂದು ತುಷಾರ್ ರವರು ತಮಾಷೆ ಮಾಡಿದ್ದಾರೆ.
Join Modi ji at 6 PM today for beard grooming tips. #PMModi pic.twitter.com/NmeNyAq4Do
— R2T2 (@tiwarituraj) October 20, 2020
ಗಡ್ಡ ಬೆಳೆಸುವುದು ಹೇಗೆ? ಎಂಬ ಟಿಪ್ಸ್‌ಗಳಿಗಾಗಿ ಇಂದು ಸಂಜೆ 6 ಗಂಟೆಗೆ ಮೋದಿ ಭಾಷಣ ಕೇಳಿ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
What else Modi has given to the country other than speech, someone will tell me
— Samrat Suraj (@samratsuraj_INC) October 20, 2020
ಭಾಷಣವಲ್ಲದೆ, ಮತ್ತೇನನ್ನೂ ಮೋದಿಯವರು ನೀಡಿದ್ದಾರೆ ಎಂಬುದನ್ನು ತಿಳಿದವರು ಹೇಳಬೇಕು ಎಂದಿರುವ ಸಮರ್ಥ್ ಸೂರಜ್, ಮೋದಿ ಭಾಷಣವನ್ನು ಬಹಷ್ಕರಿಸಿ ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: ಇಂದು ಸಂಜೆ 6 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು!


