Homeಮುಖಪುಟಬಸ್ ಓಡಿಸುತ್ತಿದ್ದಾಗಲೆ ಚಾಲಕನಿಗೆ ಹೃದಯಾಘಾತ: ಗಾಯವಿಲ್ಲದೇ ಎಲ್ಲರೂ ಪಾರು!

ಬಸ್ ಓಡಿಸುತ್ತಿದ್ದಾಗಲೆ ಚಾಲಕನಿಗೆ ಹೃದಯಾಘಾತ: ಗಾಯವಿಲ್ಲದೇ ಎಲ್ಲರೂ ಪಾರು!

ಚೆಂಬೂರಿನ ಬಸಂತ್ ಪಾರ್ಕ್ ಸಿಗ್ನಲ್ ಬಳಿ ಬಸ್ ತಲುಪುತ್ತಿದ್ದಂತೆ ಹೃದಯಾಘಾತಕ್ಕೊಳಗಾದ ಹರಿದಾಸ್ ಪಟೇಲ್ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾರೆ!

- Advertisement -
- Advertisement -

ಮುಂಬೈಯ ರಸ್ತೆಯಲ್ಲಿ ಬಸ್‌ ಓಡಿಸುತ್ತಿದ್ದ ಸರ್ಕಾರಿ ಬಸ್ಸಿನ ಚಾಲಕನಿಗೆ ಹೃದಯಾಘಾತವಾಗಿ ಬಸ್‌ ನಿಯಂತ್ರಣ ಕಳೆದು ಕೊಂಡು ಟ್ರಾಫಿಕ್ ಸಿಗ್ನಲ್‌ಗೆ ಡಿಕ್ಕಿ ಹೊಡೆದಿದೆ. ಆದರೆ ಪ್ರಯಾಣಿಕರು ಯಾವುದೆ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.

ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ (ಬೆಸ್ಟ್) ನಲ್ಲಿ ಕೆಲಸ ಮಾಡುತ್ತಿದ್ದ ಹರಿದಾಸ್ ಪಟೇಲ್ ಹೃದಯಾಘಾಕ್ಕೊಳಗಾದ ಬಸ್ ಚಾಲಕನಾಗಿದ್ದು, ಅವರು ಮುಂಬೈಯ ಘಾಟ್ಕೋಪರ್ ಬಸ್ ಡಿಪೋ ಮತ್ತು ಚೆಂಬೂರಿನ ಟಾಟಾ ಪವರ್ ಹೌಸ್ ಮಾರ್ಗದಲ್ಲಿ ಚಲಾಯಿಸುತ್ತಿದ್ದರು.

ಇದನ್ನೂ ಓದಿ: ವೈರಲ್ ವಿಡಿಯೋ; ತಪ್ಪಿದ ಭಾರಿ ಅನಾಹುತ; ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ!

ಚೆಂಬೂರಿನ ಬಸಂತ್ ಪಾರ್ಕ್ ಸಿಗ್ನಲ್ ಬಳಿ ಬಸ್ ತಲುಪುತ್ತಿದ್ದಂತೆ ಹೃದಯಾಘಾತಕ್ಕೊಳಗಾದ ಹರಿದಾಸ್ ಪಟೇಲ್ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾರೆ. ನಿಯಂತ್ರಣ ಕಳೆದುಕೊಂಡ ಬಸ್ ನೇರವಾಗಿ ಟ್ರಾಫಿಕ್ ಸಿಗ್ನಲ್‌ಗೆ ಡಿಕ್ಕಿ ಹೊಡೆದು ನಿಂತಿದ್ದು, ಅದೃಷ್ಟವಶಾತ್ ಬಸ್‌ನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.

ಚಾಲಕ ಹರಿದಾಸ್ ಪಟೇಲ್ ಅವರನ್ನು ಘಾಟ್ಕೋಪರ್‌‌ನ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನ ರಾಜವಾಡಿ ಆಸ್ಪತ್ರೆಗೆ ಸಾಗಿಸಲಾಯಿತು. “ಚಾಲಕ ಪ್ರಸ್ತುತ ಉತ್ತಮ ಸ್ಥತಿಯಲ್ಲಿದ್ದು, ಪ್ರಜ್ಞೆ ಮರಳಿ ಪಡೆದಿದ್ದಾರೆ” ಎಂದು ”ಬೆಸ್ಟ್” ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಹಿಂದುಸ್ಥಾನ್ ಟೈಮ್ಸ್‌ ವರದಿ ಮಾಡಿದೆ.


ಇದನ್ನೂ ಓದಿ: ಪ್ರವಾಹ: ಪ್ರಧಾನಿ ಮಾಡಿದ ಕನ್ನಡದ ಒಂದು ಟ್ವೀಟ್ ನೆರೆ ಪರಿಹಾರವಾಗಬಲ್ಲುದೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...