Homeಮುಖಪುಟಅರ್ನಾಬ್‌ ಜೊತೆಗಿನ ವಾಟ್ಸಾಪ್ ಚಾಟ್ ಲೀಕ್ ಬೆನ್ನಲ್ಲೆ ಬಾರ್ಕ್‌ ಮಾಜಿ ಸಿಇಒ ದಾಸ್‌ಗುಪ್ತ ಐಸಿಯುಗೆ ದಾಖಲು

ಅರ್ನಾಬ್‌ ಜೊತೆಗಿನ ವಾಟ್ಸಾಪ್ ಚಾಟ್ ಲೀಕ್ ಬೆನ್ನಲ್ಲೆ ಬಾರ್ಕ್‌ ಮಾಜಿ ಸಿಇಒ ದಾಸ್‌ಗುಪ್ತ ಐಸಿಯುಗೆ ದಾಖಲು

- Advertisement -
- Advertisement -

ಟಿಆರ್‌ಪಿ ಹಗರಣದಲ್ಲಿ ಬಂಧನವಾಗಿದ್ದ ಬಾರ್ಕ್‌ನ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್‌ಗುಪ್ತಾ ಶುಕ್ರವಾರ ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಟಿಆರ್‌ಪಿ ಹಗರಣದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿರುವ ಮುಂಬೈ ಪೊಲೀಸರು ಇವರನ್ನು ಡಿಸಂಬರ್ 24 ರಂದು ಬಂಧಿಸಿದ್ದರು.

ದಾಸ್‌ಗುಪ್ತ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಎಎನ್‌ಐ ವರದಿ ಮಾಡಿದೆ. “ಟಿಆರ್‌ಪಿ ಹಗರಣದ ಪ್ರಮುಖ ಆರೋಪಿ ಬಾರ್ಕ್‌ನ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತ ಕಳೆದ ರಾತ್ರಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯಕ್ಕೆ ಇವರು ತುರ್ತು ನಿಗಾ ಘಟಕದಲ್ಲಿ ಕೃತಕ ಉಸಿರಾಟದ ಬೆಂಬಲದಲ್ಲಿದ್ದಾರೆ” ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಟಿಆರ್‌ಪಿ ಹಗರಣ ಭಾಗಿಯಾಗಿದ್ದಾರೆಂದು ಮುಂಬೈ ಪೊಲೀಸರು ಬಾರ್ಕ್(ರೇಟಿಂಗ್ ಏಜೆನ್ಸಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್)ನ ಮಾಜಿ ಸಿಇಒ ಪಾರ್ಥೋ ದಾಸ್‌ ಗುಪ್ತಾ ಅವರ ಬಂಧನದ ನಂತರ ಪ್ರಕರಣದಲ್ಲಿ ಹಲವು ಮಹತ್ವದ ಸುಳಿವುಗಳನ್ನು ಪಡೆದಿದ್ದರು.

ಇದನ್ನೂ ಓದಿ: PMO ಕಚೇರಿಯಿಂದಲೇ ಸಹಾಯ ಕೇಳಿದ್ದ ಅರ್ನಾಬ್?: BARC ಸಿಇಒ ಜೊತೆಗಿನ ವಾಟ್ಸಾಪ್ ಚಾಟ್‌ಗಳು ಲೀಕ್!

ಟಿಆರ್‌ಪಿ ತಿರುಚುವಿಕೆಯು 2016 ರಿಂದಲೇ ನಡೆಯುತ್ತಿದ್ದು, ಒಂದನೇ ಸ್ಥಾನದಲ್ಲಿದ್ದ ಟೈಮ್ಸ್ ನೌ ಚಾನೆಲ್ ಅನ್ನು ಎರಡನೇ ಸ್ಥಾನಕ್ಕೆ ತಳ್ಳಿ ಅರ್ನಾಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿಯನ್ನು ಒಂದನೇ ಸ್ಥಾನಕ್ಕೆ ತರಲಾಗಿದೆ ಎಂದು ಮುಂಬೈ ಜಂಟಿ ಪೊಲೀಸ್ ಆಯುಕ್ತ ಮಿಲಿಂದ್ ಭರಂಬೆ ತಿಳಿಸಿದ್ದಾರೆ.

ಈ ಕಾರಣಕ್ಕೆ ಪೊಲೀಸರು ದಾಸ್‌ಗುಪ್ತ ಅವರನ್ನು ವಿಚಾರಣೆ ನಡೆಸುತ್ತಿದ್ದರು. ಮುಂಬೈ ಪೊಲೀಸರು ಶುಕ್ರವಾರ ಅರ್ನಾಬ್ ಗೋಸ್ವಾಮಿ ಮತ್ತು ದಾಸ್‌ಗುಪ್ತ ಅವರ ನಡುವಿನ ವಾಟ್ಸಾಪ್ ಸಂದೇಶಗಳ ದಾಖಲೆಯನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಹತ್ತಾರು ಸ್ಫೋಟಕ ಮಾಹಿತಿಗಳು ಹೊರ ಬಂದಿದ್ದವು.

ಟಿಆರ್‌ಪಿ ಹಗರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಮತ್ತು BARC ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವಿನ ವಾಟ್ಸಾಪ್‌ ಚಾಟ್‌ಗಳ ಸುಮಾರು 500 ಪುಟಗಳನ್ನು ಬಹಿರಂಗಗೊಳಿಸಿದ್ದಾರೆ ಎಂಬುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.


ಇದನ್ನೂ ಓದಿ: Arnab Goswami’s leaked Whatsapp chats and the TRP Manipulation Scam

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...