HomeಮುಖಪುಟPMO ಕಚೇರಿಯಿಂದಲೇ ಸಹಾಯ ಕೇಳಿದ್ದ ಅರ್ನಾಬ್?: BARC ಸಿಇಒ ಜೊತೆಗಿನ ವಾಟ್ಸಾಪ್ ಚಾಟ್‌ಗಳು ಲೀಕ್!

PMO ಕಚೇರಿಯಿಂದಲೇ ಸಹಾಯ ಕೇಳಿದ್ದ ಅರ್ನಾಬ್?: BARC ಸಿಇಒ ಜೊತೆಗಿನ ವಾಟ್ಸಾಪ್ ಚಾಟ್‌ಗಳು ಲೀಕ್!

ಅರ್ನಾಬ್ ಗೋಸ್ವಾಮಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್‌ರವರನ್ನು ಭೇಟಿ ಮಾಡುವುದಾಗಿ ಒಂದು ಚಾಟ್‌ನಲ್ಲಿ ಹೇಳಿದರೆ ಅದಕ್ಕೆ ಪಾರ್ಥೋ ದಾಸ್ ಗುಪ್ತಾ ಅವರರನ್ನು ಯೂಸ್‌ಲೆಸ್ ಎಂದಿರುವುದು ದಾಖಲಾಗಿದೆ.

- Advertisement -
- Advertisement -

ಬಾರ್ಕ್ ಮಾಜಿ ಸಿಇಒ ಮತ್ತು ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ನಡುವಿನ ವಾಟ್ಸಾಪ್ ಚಾಟ್‌ಗಳ 500 ಕ್ಕೂ ಹೆಚ್ಚು ಪುಟಗಳು ಸೋರಿಕೆಯಾಗಿದ್ದು, ಅರ್ನಾಬ್ ಗೋಸ್ವಾಮಿ PMO ಕಚೇರಿಯಿಂದಲೇ ಸಹಾಯ ಕೋರಿದ್ದರು ಎಂಬ ರಹಸ್ಯ ಬಯಲಾಗಿದೆ ಎಂಬ ಚರ್ಚೆಗಳು ಟ್ವಿಟ್ಟರ್‌ನಲ್ಲಿ ಆರಂಭವಾಗಿವೆ.

ಟಿಆರ್‌ಪಿ ಹಗರಣದಲ್ಲಿ ರಿಪಬ್ಲಿಕ್ ಟಿವಿ ಮತ್ತು ಅರ್ನಾಬ್ ಗೋಸ್ವಾಮಿ ವಿರುದ್ಧ ಸಾಕ್ಷಿಗಳಿಗೆ ಎಂದು ಮುಂಬೈ ಪೊಲಿಸರು ಕೋರ್ಟ್‌ಗೆ ತಿಳಿಸಿದ್ದಾರೆ. ಇಂದು ಮುಂಬೈ ಪೊಲೀಸರು ಈ ವಾಟ್ಸಾಪ್ ಚಾಟ್‌ಗಳ ಪುಟಗಳನ್ನು ಸೋರಿಕೆ ಮಾಡಿದ್ದಾರೆ ಎಂದು ನೆಟ್ಟಿಗರು ಷೇರ್ ಮಾಡುತ್ತಿದ್ದಾರೆ.

BARC ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಅವರೊಂದಿಗೆ ಅರ್ನಾಬ್ ಗೋಸ್ವಾಮಿ ನೇರವಾಗಿ ಪಿಎಂಒ ಕಚೇರಿಯಿಂದಲೇ ಸಹಾಯ ಕೇಳುತ್ತಿರುವ ಅನೇಕ ನಿದರ್ಶನಗಳಿವೆ. ಅವರ ವ್ಯವಹಾರಕ್ಕೆ ಸಹಾಯ ಮಾಡಲು ಉನ್ನತ ಮಂತ್ರಿಗಳೊಂದಿಗೆ ಸಭೆ ನಡೆಸುವಂತೆ ಅವರು ಅರ್ನಾಬ್‌ರನ್ನು ಒತ್ತಾಯಿಸಿರುವುದು ಕಂಡುಬಂದಿದೆ.

ಸೋರಿಕೆಯಾದ ಚಾಟ್‌ಗಳು ಸುಮಾರು 500 ಪುಟಗಳು ಮತ್ತು 80MB ಡೇಟಾವನ್ನು ಹೊಂದಿವೆ. ಚಾಟ್‌ಗಳಲ್ಲಿ, ಪಾರ್ಥೋ ದಾಸ್ ಗುಪ್ತಾ ಅರ್ನಾಬ್‌ಗೆ ಪಿಎಂಒ ಸಹಾಯವನ್ನು ಕೇಳುವಂತೆ ಮತ್ತು ಅವರ ವ್ಯವಹಾರಕ್ಕೆ ಸಹಾಯ ಮಾಡಲು ಉನ್ನತ ಮಂತ್ರಿಗಳೊಂದಿಗೆ ಭೇಟಿಯಾಗುವಂತಗೆ ಮಾತುಕತೆ ನಡೆಸಿದ ವಿವರಗಳಿವೆ.

ಅರ್ನಾಬ್ ಗೋಸ್ವಾಮಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್‌ರವರನ್ನು ಭೇಟಿ ಮಾಡುವುದಾಗಿ ಒಂದು ಚಾಟ್‌ನಲ್ಲಿ ಹೇಳಿದರೆ ಅದಕ್ಕೆ ಪಾರ್ಥೋ ದಾಸ್ ಗುಪ್ತಾ ಅವರರನ್ನು ಯೂಸ್‌ಲೆಸ್ ಎಂದಿರುವುದು ದಾಖಲಾಗಿದೆ. ಅಲ್ಲದೆ ಗೃಹ ಸಚಿವ ಅಮಿತ್ ಶಾ, ಸ್ಮೃತಿ ಇರಾನಿ, ಪ್ರಸಾರ್ ಭಾರತಿ ಸಿಇಓ ಶಶಿ ಶೇಖರ್ ಹೆಸರುಗಳ ಚಾಟ್‌ಗಳಲ್ಲಿ ಉಲ್ಲೇಖಗೊಂಡಿವೆ.

ಅರ್ನಾಬ್ ಗೋಸ್ವಾಮಿ ಮತ್ತು ಮಾಜಿ ಬಾರ್ಕ್ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವಿನ ಸೋರಿಕೆಯಾದ ಚಾಟ್‌ಗಳಲ್ಲಿ ಅವರು TRAI ಸುಧಾರಣಾ ಪ್ರಸ್ತಾಪದ ಬಗ್ಗೆ ಮಾತನಾಡುತ್ತಾರೆ. ಹೊಸ ಸುಧಾರಣೆಯು ಸೆಟ್-ಟಾಪ್ ಬಾಕ್ಸ್‌ನಲ್ಲಿ ಸ್ಥಾಪಿಸಲಾದ ವಿಶೇಷ ಸಾಫ್ಟ್‌ವೇರ್ ಮೂಲಕ ಟಿವಿ ವೀಕ್ಷಕರನ್ನು ಡಿಜಿಟಲ್ ಆಗಿ ಅಳೆಯುತ್ತದೆ. ಇದು ರಿಪಬ್ಲಿಕ್ ಚಾನೆಲ್ ಮತ್ತು ಬಿಜೆಪಿ ಎರಡಕ್ಕೂ ರಾಜಕೀಯವಾಗಿ ಹಿನ್ನೆಡೆ ಎಂದು ಪಾರ್ಥೋ ದಾಸ್ ಗುಪ್ತಾ ಸುಳಿವು ನೀಡಿದ್ದಾರೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಬಿಸಿ ಬಿಸಿ ಚರ್ಚೆಗಳಾಗುತ್ತಿದ್ದು ಅವುಗಳನ್ನು ಈ ಕೆಳಗೆ ನೀಡಲಾಗಿದೆ.


ಇದನ್ನೂ ಓದಿ: TRP ಹಗರಣದಲ್ಲಿ ವಿಚಾರಣೆಗೆ ಹಾಜರಾಗಲು ಸಮನ್ಸ್; ಬಂಧನ ಭೀತಿಯಲ್ಲಿ ಅರ್ನಾಬ್ ಗೋಸ್ವಾಮಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ನೀಡಿದ ಬರ ಪರಿಹಾರದ ಮೊತ್ತ ಅತ್ಯಲ್ಪ: ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರದ ವಾದ

0
ನಿಯಮಾವಳಿ ಪ್ರಕಾರ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಕರ್ನಾಟಕ ಸರ್ಕಾರ ಸೋವಾರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದೆ. ಕೇಂದ್ರ ಸರ್ಕಾರ ನೀಡಿರುವ 3,454 ಕೋಟಿ ರೂಪಾಯಿ ಮೊತ್ತ ತಾನು...