Homeಮುಖಪುಟಕದನ ವಿರಾಮ ಒಪ್ಪಿಗೆ ನಡುವೆಯೇ ರಫಾ ಮೇಲೆ ದಾಳಿ ನಡೆಸಿದ ಇಸ್ರೇಲ್: 12 ಪ್ಯಾಲೆಸ್ತೀನಿಯರು ಬಲಿ

ಕದನ ವಿರಾಮ ಒಪ್ಪಿಗೆ ನಡುವೆಯೇ ರಫಾ ಮೇಲೆ ದಾಳಿ ನಡೆಸಿದ ಇಸ್ರೇಲ್: 12 ಪ್ಯಾಲೆಸ್ತೀನಿಯರು ಬಲಿ

- Advertisement -
- Advertisement -

ಒತ್ತೆಯಾಳುಗಳ ಬಿಡುಗಡೆ ಮೂಲಕ ಕದನ ವಿರಾಮಕ್ಕೆ ಹಮಾಸ್ ಒಪ್ಪಿಗೆ ಸೂಚಿಸಿದ ನಡುವೆಯೇ ಇಸ್ರೇಲ್ ತನ್ನ ಆಕ್ರಮಣವನ್ನು ಮುಂದುವರೆಸಿದೆ. ಗಾಝಾದ ದಕ್ಷಿಣ ನಗರವಾದ ರಫಾದ ಮೇಲೆ ಸೋಮವಾರ (ಮೇ 6) ರಾತ್ರಿ ವಾಯುದಾಳಿ ನಡೆಸುವ ಮೂಲಕ ತನ್ನ ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ಇಸ್ರೇಲ್ ಹೇಳಿದೆ.

ದಾಳಿಯಲ್ಲಿ ಕನಿಷ್ಠ 12 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.

ರಫಾದಲ್ಲಿ 1 ಮಿಲಿಯನ್‌ಗೂ ಹೆಚ್ಚು ಪ್ಯಾಲೆಸ್ತೀನಿಯರು ಆಶ್ರಯ ಪಡೆದಿದ್ದಾರೆ. ಗಾಝಾದ ಇತರ ಭಾಗಗಳು ಇಸ್ರೇಲ್ ಆಕ್ರಮಣಕ್ಕೆ ಸ್ಮಶಾನದಂತೆ ಮಾರ್ಪಟ್ಟಿದ್ದು, ರಫಾದಲ್ಲಿ ಮಾತ್ರ ಜನರು ಉಸಿರಾಡುವ ಪರಿಸ್ಥಿತಿಯಿದೆ. ಅಂತಹ ರಫಾದ ಮೇಲೆ ದಾಳಿ ನಡೆಸುವುದಾಗಿ ಪದೇ ಪದೇ ಹೇಳುತ್ತಿದ್ದ ಇಸ್ರೇಲ್, ಕೊನೆಗೂ ದಾಳಿ ನಡೆಸಿಯೇ ಬಿಟ್ಟಿದೆ.

ಗಾಝಾದ ಇತರೆಡಗಳಲ್ಲಿ ಎಲ್ಲೂ ಬದುಕಲು ಸಾಧ್ಯವಿಲ್ಲದೆ ಲಕ್ಷಾಂತರು ಜನರು ರಫಾಕ್ಕೆ ತೆರಳಿ ನಿರಾಶ್ರಿತ ಶಿಬಿರಗಳಲ್ಲಿ ಇದ್ದಾರೆ. ಸೋಮವಾರ ರಫಾದ ಒಂದು ಭಾಗದ ಜನರಿಗೆ ಸ್ಥಳ ಬಿಟ್ಟು ತೆರಳುವಂತೆ ಇಸ್ರೇಲ್ ಸೂಚಿಸಿತ್ತು. ಈ ಬೆನ್ನಲ್ಲೇ ರಾತ್ರಿ ದಾಳಿ ನಡೆಸಿದೆ ಎಂದು ವರದಿಗಳು ಹೇಳಿವೆ.

ಹಮಾಸ್ ಕದನ ವಿರಾಮಕ್ಕೆ ಒಪ್ಪಿದೆ ಸೂಚಿಸಿದ್ದರಿಂದ ಸೋಮವಾರ ಸಂಜೆ ಜನರು ಸಂಭ್ರಮಾಚರಣೆ ನಡೆಸಿದ್ದರು. ಆದರೆ, ರಾತ್ರಿ ಇಸ್ರೇಲ್ ನಡೆಸಿದ ದಾಳಿಗೆ ಅವರು ದಿಗ್ಭ್ರಮೆಗೊಂಡಿದ್ದಾರೆ ಮತ್ತು ನಿರಾಶೆಯುಂಟಾಗಿದೆ.

ಗಾಝಾದ ಜನರಿಗೆ ಅಗತ್ಯ ಮಾನವೀಯ ನೆರವು ಸರಬರಾಜು ಆಗುತ್ತಿರುವ ಮತ್ತು ಗಾಝಾ ಮತ್ತು ಈಜಿಫ್ಟ್ ನಡುವಿನ ಏಕೈಕ ದಾರಿಯಾದ ‘ರಫಾ ಕ್ರಾಸಿಂಗ್‌’ ಅನ್ನು ವಶಪಡಿಸಿಕೊಳ್ಳುವುದು ಇಸ್ರೇಲ್‌ನ ಉದ್ದೇಶ ಎಂದು ವರದಿಗಳು ಹೇಳಿವೆ.

ಗಾಝಾದ ಜನತೆಗೆ ಜೀವ ಉಳಿಸಿಕೊಳ್ಳಲು ಏಕೈಕ ಸ್ಥಳವಾದ ರಫಾ ಮೇಲೆ ಇಸ್ರೇಲ್ ದಾಳಿ ಆರಂಭಿಸಿರುವುದಕ್ಕೆ ಯುಎಸ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸುವುದಿಲ್ಲ ಎಂಬ ಭರವಸೆ ನಮಗಿದೆ ಎಂದಿದೆ.

ಇದನ್ನೂ ಓದಿ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯ ಪುತ್ರನಿಗೆ ಬಿಜೆಪಿ ಟಿಕೆಟ್‌ ನೀಡಿರುವುದನ್ನು ಸಮರ್ಥಿಸಿಕೊಂಡ ನಿರ್ಮಲಾ ಸೀತಾರಾಮನ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರ ಮೇಲೆ ಅಮೆರಿಕ ಪೊಲೀಸರಿಂದ ದೌರ್ಜನ್ಯ

0
ಗಾಝಾದಲ್ಲಿ ಇಸ್ರೇಲ್‌ ಹತ್ಯಾಕಾಂಡವನ್ನು ಮುಂದುವರಿಸಿದ್ದು, ಇದನ್ನು ಖಂಡಿಸಿ ಅಮೆರಿಕದಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರನ್ನು ಥಳಿಸಿ ಪೊಲೀಸರು ದೌರ್ಜನ್ಯ ನಡೆಸಿರುವ ಬಗ್ಗೆ ಅಲ್‌ಜಝೀರಾ ವರದಿ ಮಾಡಿದೆ. ಗಾಝಾದಲ್ಲಿ...