Homeಕರ್ನಾಟಕಇಂಧನ ದರ ಮತ್ತೆ ಹೆಚ್ಚಳ: 2 ವಾರಗಳಲ್ಲಿ 12ನೇ ಏರಿಕೆ; ಚಿತ್ರದುರ್ಗದಲ್ಲಿ ಪೆಟ್ರೋಲ್‌ 111.39 ರೂ.

ಇಂಧನ ದರ ಮತ್ತೆ ಹೆಚ್ಚಳ: 2 ವಾರಗಳಲ್ಲಿ 12ನೇ ಏರಿಕೆ; ಚಿತ್ರದುರ್ಗದಲ್ಲಿ ಪೆಟ್ರೋಲ್‌ 111.39 ರೂ.

ಎರಡು ವಾರಗಳಲ್ಲಿ 8.40 ರೂ. ಏರಿಕೆಯಾಗಿದೆ

- Advertisement -
- Advertisement -

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿ ಲೀಟರ್‌ಗೆ 40 ಪೈಸೆಗಳಷ್ಟು ಮತ್ತೇ ಏರಿಕೆ ಮಾಡಿದೆ. ಕಳೆದ ಎರಡು ವಾರಗಳಲ್ಲಿ ಮಾಡಲಾಗಿರುವ ನಿರಂತರವಾದ ಬೆಲೆ ಏರಿಕೆಯಿಂದಾಗಿ, ಈ ಹಿಂದಿನ ದರಕ್ಕಿಂತ ಹೆಚ್ಚುವರಿಯಾಗಿ ಪ್ರತಿ ಲೀಟರ್‌ಗೆ 8.40 ರೂ. ಏರಿಕೆಯಾಗಿದೆ.

ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈ ಹಿಂದಿನ 103.41 ರೂ. ನಿಂದ 103.81 ರೂ. ಗೆ ತಲುಪಿದ್ದು, ಡೀಸೆಲ್ ದರಗಳು ಲೀಟರ್‌ಗೆ 94.67 ರೂ. ನಿಂದ 95.07 ರೂ.ಗೆ ಕ್ಕೆ ಏರಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಇಂದಿನ ಬೆಲೆ ಏರಿಕೆಯೊಂದಿಗೆ ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 40 ಮತ್ತು 42 ಪೈಸೆ ಹೆಚ್ಚಾಗಿದೆ. ಇದರೊಂದಿಗೆ ರಾಜ್ಯ ರಾಜಧಾನಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 109.41 ರೂ. ಮತ್ತು 93.23 ರೂ.ಗೆ ಏರಿಕೆಯಾಗಿದೆ.

ಇದನ್ನೂ ಓದಿ: ಬಾಯ್ಮುಚ್ಚು, ನಿನಗೆ ಒಳ್ಳೆಯದಾಗೊಲ್ಲ: ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತನಿಗೆ ಬಾಬಾ ರಾಮ್‌ದೇವ್ ಧಮಕಿ

ಇಂದಿನ ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ರಾಜ್ಯದಲ್ಲೆ ಅತೀ ಹೆಚ್ಚು ಬೆಲೆ ಏರಿಕೆಯಾದ ಜಿಲ್ಲೆಯಾಗಿ ಚಿತ್ರದುರ್ಗ ಹೊರಹೊಮ್ಮಿದ್ದು, ಅಲ್ಲಿ ಪೆಟ್ರೋಲ್ ಬೆಲೆ ಪ್ರತೀ ಲೀಟರ್‌ಗೆ 1.15 ರೂ. ಏರಿಕೆಯಾಗಿದೆ. ಈ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ಪೆಟ್ರೋಲ್ ದರ ಜಿಲ್ಲೆಯಲ್ಲಿ ದಾಖಲಾಗಿದೆ. ಅಲ್ಲಿ ಇಂದು ಪ್ರತೀ ಲೀಟರ್‌ ಪೆಟ್ರೋಲ್ ದರ 111.39 ರೂ.ಗೆ ತಲುಪಿದೆ.

ಉಳಿದಂತೆ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್ ದರಗಳು ಕೆಳಗಿನಂತಿವೆ.

ಐದು ರಾಜ್ಯಗಳಲ್ಲಿ ಚುನಾವಣೆ ಇದ್ದುದರಿಂದ ಕಚ್ಚಾ ತೈಲ ಬೆಲೆ ಏರಿಕೆಯ ಹೊರತಾಗಿಯೂ ನಾಲ್ಕು ತಿಂಗಳ ಕಾಲ ಇಂಧನ ದರಗಳನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏರಿಸಿರಲಿಲ್ಲ. ಇದರ ಬಂತರ ದರ ಪರಿಷ್ಕರಣೆ ಮಾರ್ಚ್ 22 ರ ನಂತರ ಮತ್ತೆ ಪ್ರಾರಂಭವಾಗಿತ್ತು.

ಶುಕ್ರವಾರದಂದು ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸಿರಲಿಲ್ಲ. ಅದರ ಬದಲಿಗೆ ವಾಣಿಜ್ಯ ಉದ್ದೇಶಕ್ಕೆ ಬಳಸುವ 19 KG ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಏಕಾಏಕಿ 250ರೂ.ಗೆ ಏರಿಸಿ, ಗ್ರಾಹಕರ ಕಿಸೆಗೆ ಕನ್ನ ಹಾಕಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಇದನ್ನೂ ಓದಿ: ದಲಿತ ಯುವತಿಯನ್ನು ಪ್ರೀತಿಸಿ, ನಂತರ ಮದುವೆಗೆ ನಿರಾಕರಿಸಿ ಪೆಟ್ರೋಲ್ ಸುರಿದು ಹತ್ಯೆಗೈದ ಆರೋಪ: ಸವರ್ಣೀಯ ಯುವಕನ ವಿರುದ್ಧ ಪ್ರಕರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...