Homeಮುಖಪುಟಝೀ ನ್ಯೂಸ್ ವಿರುದ್ಧ ತಿರುಗಿಬಿದ್ದ ರೈತ ಹೋರಾಟಗಾರರು: ಕಾರಣವೇನು?

ಝೀ ನ್ಯೂಸ್ ವಿರುದ್ಧ ತಿರುಗಿಬಿದ್ದ ರೈತ ಹೋರಾಟಗಾರರು: ಕಾರಣವೇನು?

- Advertisement -
- Advertisement -

ಕಳೆದ 50ದಿನಗಳಿಂದ ನಡೆಯುತ್ತಿರುವ ಹೋರಾಟವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸುವ ಪ್ರಯತ್ನವನ್ನು ಸರ್ಕಾರ ಹಾಗೂ ಮಾಧ್ಯಮಗಳನ್ನು ಮಾಡುತ್ತಲೇ ಬಂದಿವೆ. ಇದೇ ಕಾರಣಕ್ಕೆ ಹೋರಾಟ ನಿರತ ರೈತರು ಕೆಲವು ಮಾಧ್ಯಮ ಸಂಸ್ಥೆಗಳನ್ನು, ಗೋದಿ ಮೀಡಿಯಾ ಎಂದು ಟೀಕಿಸಿ ಅವುಗಳಿಗೆ ಪ್ರತಿಕ್ರಿಯಿಸುವುದನ್ನು ನಿರಾಕರಿಸಿದ್ದವು. ಇಷ್ಟುದಿನ ರಿಪಬ್ಲಿಕ್ ನ್ಯೂಸ್‌ ವಿರುದ್ಧ ಕಿಡಿಕಾರಿದ್ದ ರೈತರು ಈಗ ಝೀ ನ್ಯೂಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂದು ಬೆಳಗ್ಗೆ ಝೀ ನ್ಯೂಸ್‌, ‘ರೈತ ಹೋರಾಟ; ಖಾಲಿಸ್ತಾನದ ಯೋಜನೆ’ ಎಂಬ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡುವ ಮೂಲಕ ತೀವ್ರವಾದ ಟೀಕೆಗೆ ಗುರಿಯಾಗಿದೆ. ಕಿಸಾನ್‌ ಏಕ್ತಾ ಮೋರ್ಚಾದ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಭ್ರಷ್ಟ ಹಾಗೂ ವಿಷಯ ಹರಡುವ ಪತ್ರಿಕೋದ್ಯಮದಿಂದ ಎಚ್ಚರವಾಗಿರಿ, ಗೋದಿ ಮೀಡಿಯಾದ ಪಕ್ಷಪಾತ ಎಲ್ಲರಿಗೂ ತಿಳಿದಿರುವುದೇ ಎಂದು ಪ್ರತಿಕ್ರಿಯಿಸಿದೆ.

ಝೀ ನ್ಯೂಸ್‌ ನ ಸಂಸ್ಥಾಪಕ ಸುಭಾಷ್‌ ಚಂದ್ರ ರಾಜ್ಯಸಭೆ ಸದಸ್ಯರಾದಾಗ ಯೆಸ್‌ಬ್ಯಾಂಕ್‌ ಬಗ್ಗೆ ಏನು ಹೇಳಿದರು ಎಂದು ರೈತರು ಪ್ರಶ್ನಿಸಿದ್ದಾರೆ.

ಝೀ ನ್ಯೂಸ್‌ ನಲ್ಲಿ ಬಿತ್ತರವಾದ ವಿಶೇಷ ಕಾರ್ಯಕ್ರಮ ಮತ್ತು ಅದರ ಸಹೋದರ ಸಂಸ್ಥೆಯಾದ ಡಿಎನ್‌ಎ ಪತ್ರಿಕೆಯಲ್ಲಿ ವಿಶ್ಲೇಷಣೆಗಳೆರಡು ಹೋರಾಟವನ್ನು ತಪ್ಪಾಗಿ ವ್ಯಾಖ್ಯಾನಿಸುವ ಪ್ರಯತ್ನ ಎಂದು ರೈತ ನಾಯಕರು ಝೀ ನ್ಯೂಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ರೈತರು ಗೋದಿ ಮೀಡಿಯಾಗಳನ್ನು ನಾಯಿಗಳೆಂದು ಕರೆದು ಹರಾಜಿಗಿಟ್ಟಿದ್ದರು. ಅದರಲ್ಲಿ ರಿಪಬ್ಲಿಕ್ ನಾಯಿಗೆ ಹೆಚ್ಚಿನ ಬೆಲೆಯಿಂದೆ ವ್ಯಂಗ್ಯವಾಡಿದ್ದರು.


ಇದನ್ನು ಓದಿ: ಹೋರಾಟವನ್ನು ಬೆಚ್ಚಗಿರಿಸುತ್ತಿರುವ ‘ಟ್ರ್ಯಾಲಿ’ ಎಂಬ ರೈತರ ಬದುಕಿನ ಬಂಡಿ!

ಟ್ರ್ಯಾಲಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...