ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಶಾಸಕ ಚಲ್ಲಾ ಧರ್ಮ ರೆಡ್ಡಿ ಅವರ ನಿವಾಸದ ಮೇಲೆ ಭಾನುವಾರ ಸಂಜೆ ದಾಳಿ ನಡೆಸಿದ ಆರೋಪದಡಿ ತೆಲಂಗಾಣದ ವಾರಂಗಲ್ ಪೊಲೀಸರು 39 ಬಿಜೆಪಿ ಕಾರ್ಯಕರ್ತರನ್ನು ಸೋಮವಾರ ಬಂಧಿಸಿದ್ದಾರೆ.
ಪೊಲೀಸರು ಅವರನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಅವರನ್ನು ಮಧ್ಯಾಹ್ನ ವಾರಂಗಲ್ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ಶಾಸಕರ ನಿವಾಸದ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಇನ್ನೂ 14 ಜನ ಬಿಜೆಪಿ ಕಾರ್ಯಕರ್ತರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಿದೇಶಿ ಕಂಪನಿಗಳು ಈ ನೆಲದ ಕಾನೂನನ್ನು ಗೌರವಿಸಲಿ: ಟೊಯೊಟಾ ಕಾರ್ಮಿಕರ ಹೊರಾಟದಲ್ಲಿ ಸಿದ್ದರಾಮಯ್ಯ
Non-violent protests by BJP Telengana @bjptelangnaSM goons??
They are attacking the home of TRS MLA Challa Dharma Reddy. He had questioned as to why Telangana people should donate for a Ram Mandir in Ayodhya when they already have Ramalayam in Bhadrachalam. pic.twitter.com/LAqBy8kyGL— Syed Aleem Ilahi (@AleemIlahi) February 2, 2021
ಬಿಜೆಪಿ ನಾಯಕರು ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ಯಾವುದೇ ಖಾತೆಗಳನ್ನು ತೋರಿಸದೆ ಭಾರಿ ಹಣವನ್ನು ಸಂಗ್ರಹಿಸಿ ವಂಚಿಸುತ್ತಿದ್ದಾರೆ ಎಂದು ಶಾಸಕ ಚಲ್ಲಾ ಧರ್ಮ ರೆಡ್ಡಿ ಎಂದು ಆರೋಪಿಸಿದ್ದರು. ಇದನ್ನು ವಿರೋಧಿಸಿ ಪಕ್ಷದ ವಾರಂಗಲ್(ಅರ್ಬನ್) ಜಿಲ್ಲಾ ಘಟಕದ ಅಧ್ಯಕ್ಷ ರಾವ್ ಪದ್ಮಾ ನೇತೃತ್ವದ ಬಿಜೆಪಿ ಕಾರ್ಯಕರ್ತರು ಹನಮಕೊಂಡದ ಹಂಟರ್ ರಸ್ತೆಯಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು.
ಬಿಜೆಪಿ ಕಾರ್ಯಕರ್ತರು ಶಾಸಕರ ನಿವಾಸದಲ್ಲಿ ಕಲ್ಲು ಮತ್ತು ಮೊಟ್ಟೆಗಳನ್ನು ಎಸೆದಿದ್ದು, ಮನೆಯ ಕಿಟಕಿಯ ಗಾಜು, ಹೂವಿನ ಕುಂಡಗಳು ಸೇರಿದಂತೆ ಇತರ ಆಸ್ತಿಪಾಸ್ತಿಗಳನ್ನು ಹಾನಿಗೊಳಿಸಿದ್ದರು. ಸ್ಥಳದಲ್ಲಿ ಪೊಲೀಸರು ಇದ್ದರೂ ಅವರನ್ನು ಮೀರಿ ದಾಳಿ ಮಾಡಲಾಗಿತ್ತು. ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯ್ತು.
ಇದನ್ನೂ ಓದಿ: ದೆಹಲಿ ಪೊಲೀಸರ ಕೈಗೆ ಲೋಹದ ಲಾಠಿ?: ಇದು ಯಾವುದರ ಸೂಚಕ?
#Telangana, do we need such hate politics? BJP cadre hurling sticks and stones on TRS MLA @DharmareddyTRS's house with Jai Sri Ram slogans. I don't think even Lord Sri Ram would approve such acts. pic.twitter.com/OSuuS7yia8
— మైత్రేయ (@mythreyaa) January 31, 2021
ಬಿಜೆಪಿಯ ಈ ದಾಳಿಗೆ ಆಡಳಿತಾರೂಢ ಟಿಆರ್‌ಎಸ್ ಪ್ರತೀಕಾರ ತೀರಿಸಿಕೊಂಡಿದ್ದು, ಬಿಜೆಪಿ ಪಕ್ಷದ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಟಿಆರ್‌ಎಸ್ ಕಾರ್ಯಕರ್ತರು ಕಚೇರಿಗೆ ಕಲ್ಲು ತೂರಿ ಫ್ಲೆಕ್ಸ್ ಬೋರ್ಡ್‌ಗಳು ಮತ್ತು ಬ್ಯಾನರ್‌ಗಳನ್ನು ನಾಶ ಮಾಡಿದ್ದಾರೆ. ಪೊಲೀಸರು ಅವರನ್ನು ಚದುರಿಸಿದ್ದರಾದರೂ, ಅದಕ್ಕೂ ಮೊದಲು ಸ್ಥಳೀಯ ಬಿಜೆಪಿ ನಾಯಕರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಅಂದು ರಾತ್ರಿ ಕೂಡಾ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ ರಂಜಿತ್ ಮತ್ತು ಬಿಜೆವೈಎಂ ಮುಖಂಡ ಅಪುರುಪಾ ಸಯೀ ಅವರ ಮನೆಗಳ ಮೇಲೆ ಟಿಆರ್‌ಎಸ್ ಕಾರ್ಯಕರ್ತರು ದಾಳಿ ನಡೆಸಿದ್ದರು.
ಟಿಆರ್‌ಎಸ್ ಕಾರ್ಯಕಾರಿ ಅಧ್ಯಕ್ಷ ಕೆ ಟಿ ರಾಮರಾವ್ ಅವರು ತಡರಾತ್ರಿ ನೀಡಿದ ಹೇಳಿಕೆಯಲ್ಲಿ, ಶಾಸಕನ ನಿವಾಸದ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದರು. “ತೆಲಂಗಾಣ ಪ್ರತ್ಯೇಕ ರಾಜ್ಯವನ್ನು ಕಟ್ಟುವ ರಾಜಕೀಯ ಆಂದೋಲನದಿಂದ ಟಿಆರ್‌ಎಸ್ ಹುಟ್ಟಿದೆ ಎಂಬುದನ್ನು ಬಿಜೆಪಿ ನೆನಪಿನಲ್ಲಿಡಬೇಕು. ಬಿಜೆಪಿ ಇಂತಹ ಹಿಂಸಾಚಾರವನ್ನು ಆಶ್ರಯಿಸಲು ಬಯಸಿದರೆ, ಟಿಆರ್‌ಎಸ್‌ಗೂ ತನ್ನ ಕಾರ್ಯಕರ್ತರನ್ನು ರಕ್ಷಿಸುವ ಶಕ್ತಿ ಇದೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಶೃಂಗೇರಿಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿಗಳಲ್ಲಿ ಬಹುಪಾಲು ಸಂಘಪರಿವಾರದವರು


