ರಾಷ್ಟ್ರೀಯ ಭದ್ರತಾ ಅಪಾಯಗಳನ್ನು ಉಲ್ಲೇಖಿಸಿ 12 ದೇಶದ ಪ್ರಜೆಗಳು ಅಮೆರಿಕ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸುವ ಆದೇಶವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
“ಟ್ರಂಪ್ ಅವರ ಘೋಷಣೆಯು ಸ್ಕ್ರೀನಿಂಗ್ ಮತ್ತು ಪರಿಶೀಲನೆಗೆ ಸಂಬಂಧಿಸಿದಂತೆ ಕೊರತೆಯನ್ನು ಹೊಂದಿರುವ ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಹೆಚ್ಚಿನ ಅಪಾಯವನ್ನುಂಟುಮಾಡುವ 12 ದೇಶಗಳ ಪ್ರಜೆಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತದೆ ಮತ್ತು ಮಿತಿಗೊಳಿಸುತ್ತದೆ” ಎಂದು ಶ್ವೇತಭವನ ಹೇಳಿಕೆಯಲ್ಲಿ ವಿವರಿಸಿದೆ.
"We cannot have open migration from any country where we cannot safely and reliably vet and screen… That is why today I am signing a new executive order placing travel restrictions on countries including Yemen, Somalia, Haiti, Libya, and numerous others." –President Trump pic.twitter.com/ER7nGM4TO2
— The White House (@WhiteHouse) June 4, 2025
“ನಮ್ಮ ದೇಶಕ್ಕೆ ಬಂದು ನಮಗೆ ಹಾನಿ ಮಾಡಲು ಬಯಸುವ ಅಪಾಯಕಾರಿ ವಿದೇಶಿಗರಿಂದ ಅಮೆರಿಕನ್ನರನ್ನು ರಕ್ಷಿಸುವ ಭರವಸೆಯನ್ನು ಅಧ್ಯಕ್ಷ ಟ್ರಂಪ್ ಈಡೇರಿಸುತ್ತಿದ್ದಾರೆ” ಎಂದು ಶ್ವೇತಭವನದ ವಕ್ತಾರೆ ಅಬಿಗೈಲ್ ಜಾಕ್ಸನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
President Trump is fulfilling his promise to protect Americans from dangerous foreign actors that want to come to our country and cause us harm.
These commonsense restrictions are country-specific and include places that lack proper vetting, exhibit high visa overstay rates, or… https://t.co/rr9jgBOzvt
— Abigail Jackson (@ATJackson47) June 4, 2025
ಟ್ರಂಪ್ ಆಡಳಿತದ ಮೊದಲ ಅವಧಿಯಲ್ಲಿ ಏಳು ಮುಸ್ಲಿಂ ರಾಷ್ಟ್ರಗಳ ಪ್ರಯಾಣಿಕರ ಮೇಲೆ ನಿರ್ಬಂಧಗಳನ್ನು ಹೇರಲಾಗಿತ್ತು. ಈ ನೀತಿಯು 2018 ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಅನುಮೋದನೆ ಪಡೆಯುವ ಮೊದಲು ಹಲವಾರು ಪರಿಷ್ಕರಣೆಗಳಿಗೆ ಒಳಗಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಟ್ರಂಪ್ ಆಡಳಿತದ ಬಳಿಕ ಬಂದ ಡೆಮಾಕ್ರಟಿಕ್ ಸರ್ಕಾರದ ಅಧ್ಯಕ್ಷ ಜೋ ಬೈಡೆನ್ 2021ರಲ್ಲಿ ಈ ನಿರ್ಬಂಧಗಳನ್ನು ರದ್ದುಗೊಳಿಸಿದರು. “ಇದು ನಮ್ಮ ರಾಷ್ಟ್ರೀಯ ಆತ್ಮಸಾಕ್ಷಿಯ ಮೇಲಿನ ಕಳಂಕ” ಎಂದು ಅವರು ಹೇಳಿದ್ದರು.
ನಿರ್ಬಂಧಕ್ಕೆ ಒಳಗಾದ 12 ದೇಶಗಳು ಯಾವುವು?
ವರದಿಗಳ ಪ್ರಕಾರ, ಅಫ್ಘಾನಿಸ್ತಾನ, ಮ್ಯಾನ್ಮಾರ್, ಛಡ್, ಕಾಂಗೋ ಗಣರಾಜ್ಯ, ಈಕ್ವಿಟೇರಿಯಲ್ ಗುನಿಯಾ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೋಮಾಲಿಯಾ, ಸುಡಾನ್, ಯೆಮನ್ ದೇಶಗಳ ಪ್ರಜೆಗಳ ಅಮೆರಿಕ ಪ್ರವೇಶಕ್ಕೆ ಟ್ರಂಪ್ ಆಡಳಿತ ನಿರ್ಬಂಧ ವಿಧಿಸಿದೆ.
ಭಾರತದ ಆಕ್ಷೇಪಗಳ ಹೊರತಾಗಿಯೂ ಪಾಕಿಸ್ತಾನಕ್ಕೆ 800 ಮಿಲಿಯನ್ ಡಾಲರ್ ನೀಡಿದ ಏಷ್ಯನ್ ಅಭಿವೃದ್ಧಿ ಬ್ಯಾಂಕ್!



All poor countries