Homeಮುಖಪುಟಕಣ್ತಪ್ಪಿನಿಂದ ಭಾರತೀಯ ಮಹಿಳೆಯನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ ಅಸ್ಸಾಂ ಬಿಜೆಪಿ ಸರ್ಕಾರ!

ಕಣ್ತಪ್ಪಿನಿಂದ ಭಾರತೀಯ ಮಹಿಳೆಯನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ ಅಸ್ಸಾಂ ಬಿಜೆಪಿ ಸರ್ಕಾರ!

- Advertisement -
- Advertisement -

ಅಸ್ಸಾಂನ ಬಿಜೆಪಿ ಸರ್ಕಾರ ನಡೆಸುತ್ತಿರುವ ದಮನ ಕಾರ್ಯಾಚರಣೆಯ ಸಮಯದಲ್ಲಿ ಅಧಿಕಾರಿಗಳ ಕಣ್ತಪ್ಪಿನಿಂದಾಗಿ ಭಾರತೀಯ ಮಹಿಳೆಯೊಬ್ಬರನ್ನು ‘ಬಾಂಗ್ಲಾದೇಶಕ್ಕೆ ಗಡಿಪಾರು’ ಮಾಡಿದ ಘಟನೆ ನಡೆದಿದ್ದು, ನಂತರ ಅವರ ದಾಖಲೆಗಳು ‘ಹೊಂದಾಣಿಕೆಯಾಗುತ್ತಿಲ್ಲ’ ಎಂದು ಕಂಡುಕೊಂಡ ನಂತರ ಹಿಂತಿರುಗಿಸಲಾಯಿತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕಣ್ತಪ್ಪಿನಿಂದ ಭಾರತೀಯ ಮಹಿಳೆಯನ್ನು

ಸಂತ್ರಸ್ತ ಮಹಿಳೆಯನ್ನು ರಹೀಮಾ ಬೇಗಂ (50) ಎಂದು ಗುರುತಿಸಲಾಗಿದೆ. ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿ, ಭದ್ರತಾ ಪಡೆಗಳು ಬಾಂಗ್ಲಾದೇಶ ಗಡಿಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ ಎಂದು ವರದಿ ಹೇಳಿದೆ. ಅವರ ಪ್ರಕರಣದಲ್ಲಿ ದೋಷವಿದೆ ಎಂದು ಕಂಡಕೊಂಡು ಅಧಿಕಾರಿಗಳು ಅವರನ್ನು ವಾಪಸ್ ಕರೆತರುವ ಮೊದಲೇ ಅವರು ಭಾರತ ಗಡಿ ದಾಟಿ ಬಾಂಗ್ಲಾದೇಶದ ನೆಲದಲ್ಲಿ ಸಂಕಷ್ಟಕ್ಕೊಳಗಾದರು ಎಂದು ಅದು ತಿಳಿಸಿದೆ.

ರಾಜ್ಯದ ವಿದೇಶಿಯರ ನ್ಯಾಯಮಂಡಳಿಗಳು (FTs) ವಿದೇಶಿಯರೆಂದು ಘೋಷಿಸಲಾದ ಜನರ ಮೇಲೆ ನಡೆಯುತ್ತಿರುವ ದಮನ ಕಾರ್ಯಾಚರಣೆಯ ಭಾಗವಾಗಿ ಕಳೆದ ಕೆಲವು ವಾರಗಳಲ್ಲಿ ಅಸ್ಸಾಂನಲ್ಲಿ ಬಂಧಿಸಲ್ಪಟ್ಟ ಹಲವಾರು ಜನರಲ್ಲಿ ರಹೀಮಾ ಬೇಗಂ ಕೂಡಾ ಒಬ್ಬರಾಗಿದ್ದಾರೆ.

ಅವರ ವಕೀಲರ ಪ್ರಕಾರ, ಕಳೆದ ತಿಂಗಳು ವಿದೇಶಿಯರ ನ್ಯಾಯಮಂಡಳಿಯು ಬೇಗಂ ಅವರ ಕುಟುಂಬವು ಮಾರ್ಚ್ 25, 1971 ರ ಮೊದಲು ಭಾರತವನ್ನು ಪ್ರವೇಶಿಸಿತ್ತು ಎಂದು ತೀರ್ಪು ನೀಡಿದೆ, ಇದು ಅಸ್ಸಾಂನಲ್ಲಿ ಪೌರತ್ವಕ್ಕೆ ಅಂತಿಮ ದಿನಾಂಕವಾಗಿದೆ.

ಶುಕ್ರವಾರದಂದು ಸುಪ್ರೀಂಕೋರ್ಟ್ ಆದೇಶವನ್ನು ಜಾರಿಗೊಳಿಸಿ ಮಾತನಾಡಿದ್ದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಜ್ಯ ಸರ್ಕಾರವು ಘೋಷಿತ ವಿದೇಶಿಯರನ್ನು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುತ್ತಿದೆ ಎಂದು ದೃಢಪಡಿಸಿದ್ದಾರೆ.

ಗೋಲಾಘಾಟ್‌ನ ತನ್ನ ಗ್ರಾಮದಲ್ಲಿರುವ ಮನೆಗೆ ಬೇಗಂ ಅವರು ಮೇ 30ರ ಶುಕ್ರವಾರ ಸಂಜೆ ಮರಳಿದ್ದಾರೆ. ಅವರನ್ನು ಮೇ 27ರ ಮಂಗಳವಾರ ರಾತ್ರಿ ಇತರ ಜನರ ಗುಂಪಿನೊಂದಿಗೆ “ಬಾಂಗ್ಲಾದೇಶಕ್ಕೆ ಗಡಿಪಾರು” ಮಾಡಲಾಗಿತ್ತು ಎಂದು ಆರೋಪಿಸಲಾಗಿರೆ.

“ಭಾನುವಾರ ಬೆಳಿಗ್ಗೆ (ಮೇ 25) ಸುಮಾರು ಬೆಳಗಿನ ಜಾವ 4 ಗಂಟೆಗೆ, ನಾವು ಇನ್ನೂ ಮಲಗಿದ್ದಾಗ, ಪೊಲೀಸರು ನಮ್ಮ ಮನೆಗೆ ಬಂದು ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಪೊಲೀಸ್ ಠಾಣೆಗೆ ಹಾಜರಾಗಲು ಹೇಳಿದರು. ಬೆಳಿಗ್ಗೆ ಅಲ್ಲಿ ಕಳೆದ ನಂತರ, ಅವರು ನನ್ನನ್ನು ಇತರ ಕೆಲವರೊಂದಿಗೆ ಗೋಲಾಘಾಟ್ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕರೆದೊಯ್ದರು. ನಾನು ನನ್ನ ದಾಖಲೆಗಳನ್ನು ತೆಗೆದುಕೊಂಡು ಹೋದೆ, ಮತ್ತು ಅವರು ನಮ್ಮ ಬೆರಳಚ್ಚುಗಳನ್ನು ಸಂಗ್ರಹಿಸಿದರು. ನಾವು ಇಡೀ ದಿನ ಅಲ್ಲೇ ಇದ್ದೆವು. ರಾತ್ರಿ, ಅವರು ನಮ್ಮನ್ನು ವಾಹನದಲ್ಲಿ ಬೇರೆಡೆಗೆ ಕರೆದೊಯ್ದರು,” ಎಂದು ಅವರು ಹೇಳಿದ್ದು, ತಮ್ಮನ್ನು ಎಲ್ಲಿಗೆ ಕರೆದೊಯ್ಯಲಾಗುತ್ತಿದೆ ಎಂದು ಅವರಿಗೆ ತಿಳಿದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

“ಬೇಗಂ ಅವರನ್ನು ಕೆರೆದೊಯ್ಯುವಾಗ ನಮ್ಮ ಇಬ್ಬರು ಹೆಣ್ಣುಮಕ್ಕಳು ಮನೆಯದ್ದರು. ಅವರು ತಮ್ಮ ತಾಯಿಯನ್ನು ರಾತ್ರಿಯಲ್ಲಿ ಕರೆದೊಯ್ಯುವುದನ್ನು ನೋಡಿದ್ದಾರೆ. ಆದರೆ ಇಷ್ಟು ದಿನ ಅವರು ಎಲ್ಲಿದ್ದಾರೆಂದು ಯಾರೂ ನಮಗೆ ಹೇಳಲಿಲ್ಲ” ಎಂದು ಅವರ ಬೇಗಂ ಅವರ ಪತಿ ಮಾಲೆಕ್ ಅಲಿ ಹೇಳಿದ್ದಾರೆ.

“ಮಂಗಳವಾರ ತಡರಾತ್ರಿ, ಅವರು ನಮ್ಮನ್ನು ಕೆಲವು ಕಾರುಗಳಲ್ಲಿ ಕೂರಿಸಿ ಗಡಿಯ ಬಳಿ ಕರೆದೊಯ್ದರು” ಎಂದು ಬೇಗಂ ಅವರು ಆರೋಪಿಸಿದ್ದಾರೆ.

“ನಮ್ಮೊಂದಿಗಿದ್ದ ಭದ್ರತಾ ಪಡೆಗಳು ನಮಗೆ ಕೆಲವು ಬಾಂಗ್ಲಾದೇಶದ ಕರೆನ್ಸಿಗಳನ್ನು ನೀಡಿ, ನಮ್ಮನ್ನು ಗಡಿ ದಾಟಲು ಮತ್ತು ಹಿಂತಿರುಗದಂತೆ ಹೇಳಿದರು. ಎಲ್ಲವೂ ನಮ್ಮ ಮೊಣಕಾಲಿನವರೆಗೆ ಮಣ್ಣು ಮತ್ತು ನೀರಿನಿಂದ ತುಂಬಿದ ಭತ್ತದ ಗದ್ದೆಗಳಾಗಿದ್ದವು. ನಮಗೆ ಏನು ಮಾಡಬೇಕೆಂದು ತಿಳಿಯಲಿಲ್ಲ; ನಾವು ಒಂದು ಹಳ್ಳಿಯನ್ನು ತಲುಪುವವರೆಗೆ ಭತ್ತದ ಗದ್ದೆಗಳ ನಡುವೆ ನಡೆದೆವು. ಆದರೆ ಅಲ್ಲಿನ ಜನರು ನಮ್ಮನ್ನು ಓಡಿಸಿದರು ಮತ್ತು ಅವರ ಗಡಿ ಪಡೆಗಳು ನಮ್ಮನ್ನು ಕರೆದವು, ನಮಗೆ ತುಂಬಾ ಹೊಡೆದವು ಮತ್ತು ನಾವು ಬಂದ ಸ್ಥಳಕ್ಕೆ ಹಿಂತಿರುಗಲು ಹೇಳಿದವು.” ಎಂದು ಮಹಿಳೆ ಹೇಳಿದ್ದಾರೆ.

“ನಾವು ಎರಡೂ ಬದಿಗಳಿಗೆ ಹೋಗಲು ಸಾಧ್ಯವಾಗದ ಕಾರಣ ನಾವು ಇಡೀ ದಿನ ಭತ್ತದ ಗದ್ದೆಯಲ್ಲಿ ನಿಂತು ಅದರಿಂದ ನೀರು ಕುಡಿಯುತ್ತಿದ್ದೆವು. (ಗುರುವಾರ ಸಂಜೆ), ಭಾರತದ ಕಡೆಯ ಪಡೆಗಳು ನಮ್ಮನ್ನು ಹಿಂದಕ್ಕೆ ಕರೆದು, ಬಾಂಗ್ಲಾದೇಶದ ಕರೆನ್ಸಿಯನ್ನು ತೆಗೆದುಕೊಂಡು, ವಾಹನಗಳಲ್ಲಿ ಕೂರಿಸಿ ಕೊಕ್ರಝಾರ್‌ಗೆ ಕರೆದೊಯ್ದವು. ಉಳಿದ ಜನರಿಗೆ ಏನಾಯಿತು ಎಂದು ನನಗೆ ತಿಳಿದಿಲ್ಲ, ಆದರೆ ನನ್ನನ್ನು ಗೋಲಾಘಾಟ್‌ಗೆ ಕರೆತರಲಾಯಿತು. ಇದು ನನಗೆ ಏಕೆ ಸಂಭವಿಸಿತು ಎಂದು ನನಗೆ ತಿಳಿದಿಲ್ಲ; ನನ್ನಲ್ಲಿ ಎಲ್ಲಾ ದಾಖಲೆಗಳಿವೆ. ಎರಡು ವರ್ಷಗಳಿಗೂ ಹೆಚ್ಚು ಕಾಲ ಹೋರಾಡಿದ ನಂತರ ವಿದೇಶಿಯರ ನ್ಯಾಯಮಂಡಳಿಯಲ್ಲಿನ ನನ್ನ ಪ್ರಕರಣವನ್ನು ಪೂರ್ಣಗೊಳಿಸಿದೆ.” ಎಂದು ಅವರು ಹೇಳಿದ್ದಾರೆ.

ಈ ನಡುವೆ ಬೇಗಂ ಅವರ ಪತಿಗೆ ಶುಕ್ರವಾರ ಮಧ್ಯಾಹ್ನ ಗೋಲಾಘಾಟ್ ಪಟ್ಟಣದಿಂದ ಅವರನ್ನು ಕರೆದುಕೊಂಡು ಹೋಗಲು ಕರೆ ಬಂತು ಎಂದು ವರದಿ ಉಲ್ಲೇಖಿಸಿದೆ.

ಜೋರ್ಹತ್ ವಿದೇಶಿಯರ ನ್ಯಾಯಮಂಡಳಿಯಲ್ಲಿ ಬೇಗಂ ಅವರ ಪ್ರಕರಣವನ್ನು ನಿರ್ವಹಿಸಿದ ವಕೀಲೆ ಲಿಪಿಕಾ ದೇಬ್ ಮಾತನಾಡಿ, “ಬೇಗಂ ಅವರ ಕುಟುಂಬವು ಭಾನುವಾರ ನನಗೆ ಕರೆ ಮಾಡಿ, ಅವರನ್ನು ವಿದೇಶಿಯರು ಎಂದು ಶಂಕಿಸಲಾಗಿರುವ ಇತರರೊಂದಿಗೆ ಕರೆದೊಯ್ಯಲಾಗಿದೆ ಎಂದು ಹೇಳಿದರು” ಎಂದು ಹೇಳಿದ್ದಾರೆ.

“ನ್ಯಾಯಮಂಡಳಿ ಅವರನ್ನು ‘ಪೋಸ್ಟ್-ಸ್ಟ್ರೀಮ್’ ಎಂದು ಘೋಷಿಸಿತು. ಇದನ್ನು ಜನವರಿ 1, 1966 ಮತ್ತು ಮಾರ್ಚ್ 25, 1971 ರ ನಡುವೆ ಭಾರತಕ್ಕೆ ಪ್ರವೇಶ ಮಾಡಿರುವ ಪ್ರಕರಣಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಅದರ ನಂತರ ಆ ವ್ಯಕ್ತಿ ಅಸ್ಸಾಂನ ಸಾಮಾನ್ಯ ನಿವಾಸಿಯಾಗುತ್ತಾರೆ. ಅಲ್ಲಿ ಪೌರತ್ವ ಕಾಯ್ದೆಯ ಸೆಕ್ಷನ್ 6A(3) ರ ಪ್ರಕಾರ, ಆ ವ್ಯಕ್ತಿಯನ್ನು ಸಂಬಂಧಿತ ವಿದೇಶಿಯರ ನೋಂದಣಿ ಕಚೇರಿಯಲ್ಲಿ (FRRO) 30 ದಿನಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಕಾಯಿದೆಯ ಪ್ರಕಾರ, ಅಂತಹ ವ್ಯಕ್ತಿಯ ಹೆಸರನ್ನು 10 ವರ್ಷಗಳ ಕಾಲ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ, ಆದರೆ ಆ ಸಮಯದಲ್ಲಿ ಅವರು ‘ಭಾರತದ ನಾಗರಿಕರಂತೆ ಅದೇ ಹಕ್ಕುಗಳು ಮತ್ತು ಬಾಧ್ಯತೆಗಳನ್ನು’ ಹೊಂದಿರುತ್ತಾರೆ. ಅವಧಿಯ ಕೊನೆಯಲ್ಲಿ, ಅವರನ್ನು ಎಲ್ಲಾ ಉದ್ದೇಶಗಳಿಗೂ ಭಾರತದ ಪ್ರಜೆ ಎಂದು ಪರಿಗಣಿಸಲಾಗುತ್ತದೆ.” ಎಂದು ವಕೀಲೆ ಲಿಪಿಕಾ ಅವರು ಹೇಳಿದ್ದಾರೆ.

“ನಾವು ಬೇಗಂ ಅವರನ್ನು ನೋಂದಾಯಿಸಿದ್ದ ಜೋರ್ಹತ್‌ನಲ್ಲಿರುವ ಪೊಲೀಸರು ಮತ್ತು FRRO ಕಚೇರಿಯಲ್ಲಿ ಪರಿಶೀಲಿಸಿದಾಗ ಅವರ ಪ್ರಮಾಣಪತ್ರದಲ್ಲಿನ ನೋಂದಣಿ ಸಂಖ್ಯೆಯಲ್ಲಿನ ಒಂದು ಅಂಕಿಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂದು ಕಂಡುಕೊಂಡೆವು. ಹೊಂದಾಣಿಕೆಯಾಗದ ಬಗ್ಗೆ ನಾವು ಎಸ್‌ಪಿಯನ್ನು ಸಂಪರ್ಕಿಸಿದ್ದೇವೆ ಮತ್ತು ಈಗ ಅವರು ಹಿಂತಿರುಗಿದ್ದಾರೆ. ಆದರೆ ಪರಿಶೀಲನೆ ಸಂಪೂರ್ಣವಾಗಿ ನಡೆಯದಿರುವುದು ದುರದೃಷ್ಟಕರ. ಹೊಂದಾಣಿಕೆಯಾಗದಿದ್ದರೆ, ಅಧಿಕಾರಿಗಳು ನೋಂದಣಿ ಕಚೇರಿಗೆ ಕರೆ ಮಾಡಿ ಪರಿಶೀಲಿಸಬೇಕಾಗಿತ್ತು, ”ಎಂದು ವಕೀಲೆ ಹೇಳಿದ್ದಾರೆ. ಕಣ್ತಪ್ಪಿನಿಂದ ಭಾರತೀಯ ಮಹಿಳೆಯನ್ನು

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಏಳು ವರ್ಷಗಳ ವಿಳಂಬ; ಜನಗಣತಿ ವೇಳಾಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಏಳು ವರ್ಷಗಳ ವಿಳಂಬ; ಜನಗಣತಿ ವೇಳಾಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...