ಹಲವಯ ತಿಂಗಳುಗಳ ರಾಜಕೀಯ ಘರ್ಷಣೆಗಳ ನಂತರ ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದ ಜೋಹ್ರಾನ್ ಮಮ್ದಾನಿಯನ್ನು ಭೇಟಿಯಾಗುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿವೆ.
ಆಶ್ಚರ್ಯಕರ ಬದಲಾವಣೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದ ಜೋಹ್ರಾನ್ ಮಮ್ದಾನಿಯನ್ನು ಭೇಟಿ ಮಾಡಲು ತಾವು ಮುಕ್ತರಾಗಿರುವುದಾಗಿ ಸುಳಿವು ನೀಡಿದ್ದಾರೆ. ತಿಂಗಳುಗಳ ಕಾಲ ನಡೆದ ತೀಕ್ಷ್ಣ ರಾಜಕೀಯ ವೈಷಮ್ಯಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.
ಚುನಾವಣೆಗೂ ಮೊದಲು ಟ್ರಂಪ್ ಪದೇ ಪದೇ ಮಮ್ದಾನಿಯನ್ನು ಟೀಕಿಸಿದರು. ಅವರನ್ನು ‘ಕಮ್ಯುನಿಸ್ಟ್’ ಎಂದು ಹಣೆಪಟ್ಟಿ ಕಟ್ಟಿ, ಅವರ ನಾಯಕತ್ವದಲ್ಲಿ ನ್ಯೂಯಾರ್ಕ್ ಬಳಲುತ್ತದೆ ಎಂದು ಎಚ್ಚರಿಸಿದರು. ಉಗಾಂಡಾದಲ್ಲಿ ಜನಿಸಿದ ಬಳಿಕ ಯುನೈಟೆಡ್ ಸ್ಟೇಟ್ಸ್ ಪ್ರಜೆಯಾದ ಮಮ್ದಾನಿಯನ್ನು ಗಡೀಪಾರು ಮಾಡುವುದಾಗಿ ಅಧ್ಯಕ್ಷರು ಬೆದರಿಕೆ ಹಾಕಿದರು. ನಗರಕ್ಕೆ ಫೆಡರಲ್ ನಿಧಿಯನ್ನು ಕಡಿತಗೊಳಿಸಬಹುದು ಎಂದು ಎಚ್ಚರಿಸಿದರು.
ಟ್ರಂಪ್‌ಗೆ ಸವಾಲಾವಾಗಿರುವ ಮಮ್ದಾನಿಯ ಪ್ರಖ್ಯಾತಿ
ರಾಷ್ಟ್ರೀಯ ರಾಜಕೀಯ ವ್ಯಕ್ತಿಯಾಗಿರುವ ಜೋಹ್ರಾನ್ ಮಮ್ದಾನಿ ಅವರ ಪ್ರಖ್ಯಾತಿಯು ಟ್ರಂಪ್‌ಗೆ ಸವಾಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಗತಿಪರ ಭರವಸೆಗಳು ಮತ್ತು ಬಲವಾದ ಟ್ರಂಪ್ ವಿರೋಧಿ ಸಂದೇಶದ ಮೇಲೆ ನಿರ್ಮಿಸಲಾದ ಅವರ ದಿಟ್ಟ ಮೇಯರ್ ಪ್ರಚಾರವು ಸಮುದಾಯಗಳಾದ್ಯಂತ ನ್ಯೂಯಾರ್ಕರ್‌ಗಳೊಂದಿಗೆ ಆಳವಾಗಿ ಪ್ರತಿಧ್ವನಿಸಿತು. 34 ವರ್ಷದ ಅವರು ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರನ್ನು ಸುಮಾರು ಒಂಬತ್ತು ಶೇಕಡಾ ಮತಗಳಿಂದ ಸೋಲಿಸಿ, ಟ್ರಂಪ್ ಅವರ ಎರಡನೇ ಅವಧಿಯ ನೀತಿಗಳಿಗೆ ಪ್ರತಿರೋಧದ ಪ್ರಮುಖ ಮುಖಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನಮಾನವನ್ನು ಭದ್ರಪಡಿಸಿಕೊಂಡರು.
ತಮ್ಮ ವಿಜಯ ಭಾಷಣದ ಸಮಯದಲ್ಲಿ, ಅಧ್ಯಕ್ಷರನ್ನು ಎದುರಿಸಲು ರಾಷ್ಟ್ರವು ಹೇಗೆ ನಿಲ್ಲಬಹುದು ಎಂಬುದನ್ನು ನ್ಯೂಯಾರ್ಕ್ ಪ್ರದರ್ಶಿಸಬೇಕೆಂದು ಮಮ್ದಾನಿ ಹೇಳಿದರು. ಒಂದು ದಿನದ ನಂತರ, ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ನಗರವನ್ನು ‘ಟ್ರಂಪ್-ಪ್ರೂಫಿಂಗ್’ ಮಾಡುವ ತಮ್ಮ ಯೋಜನೆಗಳ ಬಗ್ಗೆ ಮಾತನಾಡಿದ ಮಮ್ದಾನಿ, ನ್ಯೂಯಾರ್ಕ್ ನಿವಾಸಿಗಳಿಗೆ ಸಹಾಯ ಮಾಡುವ ಯಾರೊಂದಿಗೂ ಕೆಲಸ ಮಾಡಲು ಸಿದ್ಧರಿದ್ದೇನೆ ಎಂದು ಒತ್ತಿ ಹೇಳಿದರು.
ಭಾನುವಾರ ಮಮ್ದಾನಿಯವರ ತಂಡದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಾರದಿದ್ದರೂ, ವಕ್ತಾರರು ಅವರ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿ, ‘ಇದು ನಗರದ ಯಶಸ್ಸಿಗೆ ನಿರ್ಣಾಯಕವಾಗುವ ಸಂಬಂಧವಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.
ತಮ್ಮ ಧ್ವನಿ ಮೃದುಗೊಳಿಸಿದ ಟ್ರಂಪ್
ಫ್ಲೋರಿಡಾದಲ್ಲಿ ವಾರಾಂತ್ಯದ ನಂತರ ವಾಷಿಂಗ್ಟನ್‌ಗೆ ಹಿಂತಿರುಗುತ್ತಿರುವಾಗ ಟ್ರಂಪ್ ವರದಿಗಾರರಿಗೆ ಪ್ರತಿಕ್ರಿಯಿಸಿ, “ನ್ಯೂಯಾರ್ಕ್ ಮೇಯರ್, ನಮ್ಮೊಂದಿಗೆ ಭೇಟಿಯಾಗಲು ಬಯಸುತ್ತಾರೆ ಎಂದು ನಾನು ಹೇಳುತ್ತೇನೆ. ನಾವು ಏನನ್ನಾದರೂ ಸರಿಪಡಿಸುತ್ತೇವೆ… ನ್ಯೂಯಾರ್ಕ್‌ಗಾಗಿ ಎಲ್ಲವೂ ಒಳ್ಳೆಯದೇ ಆಗುವುದನ್ನು ನಾವು ನೋಡಲು ಬಯಸುತ್ತೇವೆ” ಎಂದು ಟ್ರಂಪ್ ಹೇಳಿದರು.
ಸೌದಿ ಅರೇಬಿಯಾದಲ್ಲಿ ಬಸ್-ಟ್ಯಾಂಕರ್ ಡಿಕ್ಕಿ : 42 ಭಾರತೀಯ ಉಮ್ರಾ ಯಾತ್ರಿಕರು ಸಾವನ್ನಪ್ಪಿರುವ ಶಂಕೆ


