Homeಅಂತರಾಷ್ಟ್ರೀಯಗಾಝಾ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ಟ್ರಂಪ್ : ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಯ ಭರವಸೆ

ಗಾಝಾ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ಟ್ರಂಪ್ : ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಯ ಭರವಸೆ

- Advertisement -
- Advertisement -

ಎರಡು ವರ್ಷಗಳ ನರಮೇಧದ ಬಳಿಕ, ಕತಾರ್, ಈಜಿಪ್ಟ್ ಮತ್ತು ಟರ್ಕಿಯ ನಾಯಕರೊಂದಿಗೆ ಸೋಮವಾರ (ಅ.13) ಗಾಝಾ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಯ ಭರವಸೆ ನೀಡಿದ್ದಾರೆ.

ಈಜಿಪ್ಟ್‌ನ ಶರ್ಮ್ ಅಲ್-ಶೇಖ್‌ನಲ್ಲಿ ನಡೆದ ‘ಗಾಝಾ ಶಾಂತಿ ಶೃಂಗ’ದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ವಿವಿಧ ರಾಷ್ಟ್ರಗಳ 25ಕ್ಕೂ ಹೆಚ್ಚು ಪ್ರಮುಖ ನಾಯಕರು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ಬಳಿಕ ಮಾತನಾಡಿದ ಟ್ರಂಪ್, “ಇವತ್ತಿನ ದಿನ ಮಧ್ಯಪ್ರಾಚ್ಯಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಅದ್ಭುತವಾದ ದಿನ’ ಎಂದು ಹೇಳಿದ್ದಾರೆ.

ಈ ದಾಖಲೆಯು ನೀತಿ, ನಿಯಮಗಳು ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿದೆ. ಈ ಹಂತಕ್ಕೆ ಬರಲು 3 ಸಾವಿರ ವರ್ಷಗಳು ಬೇಕಾಯಿತು ಎಂದು ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಟ್ರಂಪ್ ಆವರ್ತಿಸಿ ಹೇಳಿದ್ದಾರೆ.

ಗಾಝಾ ಶಾಂತಿ ಶೃಂಗ ಅತ್ಯಂತ ಮಹತ್ವದ ಸಭೆ. ಇದರಲ್ಲಿ ಪಾಲ್ಗೊಂಡಿರುವುದೇ ಒಂದು ‘ಗೌರವ’ ಎಂದು ಟ್ರಂಪ್ ಶ್ಲಾಘಿಷಿಸಿದ್ದಾರೆ.

ಟ್ರಂಪ್ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ನೇತೃತ್ವದಲ್ಲಿ ನಡೆದ ಶೃಂಗ ಸಭೆಯಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೋಗಾನ್, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಜೋರ್ಡಾನ್ ರಾಜ ಅಬ್ದುಲ್ಲ, ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್, ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಬಹ್ರೇನ್ ರಾಜ ಹಮದ್ ಬಿನ್ ಈಸಾ ಅಲ್ ಖಲೀಫಾ ಮುಂತಾದ ವಿಶ್ವ ನಾಯಕರು ಭಾಗವಹಿಸಿದ್ದರು.

ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್‌-ಸಿಸಿ ಅವರಿಂದ ಕೊನೆಯ ಕ್ಷಣದ ಆಹ್ವಾನ ಬಂದಿತ್ತು ಎನ್ನಲಾಗಿದೆ. ಹಾಗಾಗಿ, ಮೋದಿ ಬದಲಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಭಾರತವನ್ನು ಪ್ರತಿನಿಧಿಸಿದ್ದರು.

ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ “ಈಜಿಪ್ಟ್‌ನ ಅತ್ಯುನ್ನತ ಗೌರವವಾದ ‘ಆರ್ಡರ್ ಆಫ್ ದಿ ನೈಲ್’ ನೀಡುವುದಾಗಿ ಹೇಳಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಸಿಸಿ, ಗಾಝಾ ಕದನ ವಿರಾಮಕ್ಕಾಗಿ ಟ್ರಂಪ್ ಅವರನ್ನು ಹೊಗಳಿದ್ದಾರೆ. “ಟ್ರಂಪ್ ಅವರೇ ನಿಮ್ಮ ಶ್ರೇಷ್ಠತೆಯೇ ಈ ಕದನ ವಿರಾಮ ಒಪ್ಪಂದಕ್ಕೆ ಬರಲು ಸಾಧ್ಯವಾಗಿದೆ. ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡುವ ಸಾಮರ್ಥ್ಯ ಕೇವಲ ನಿಮಗೆ ಮಾತ್ರ ಇದೆ” ಎಂದಿದ್ದಾರೆ.

ಗಾಝಾ ಕದನ ವಿರಾಮದ ಭಾಗವಾಗಿ ಹಮಾಸ್ 20 ಇಸ್ರೇಲಿ ಒತ್ತೆಯಾಳುಗಳನ್ನು ಸೋಮವಾರ ಬಿಡುಗಡೆ ಮಾಡಿದೆ. ಇದಕ್ಕೆ ಬದಲಾಗಿ 1968 ಪ್ಯಾಲೆಸ್ತೀನ್ ಬಂಧಿತರನ್ನು ಇಸ್ರೇಲ್ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.

ಇಸ್ರೇಲ್‌-ಹಮಾಸ್‌ನಿಂದ ಬಂಧಿತರು, ಒತ್ತೆಯಾಳುಗಳ ಹಸ್ತಾಂತರ: ಇಸ್ರೇಲ್‌ ಸಂಸತ್‌ನಲ್ಲಿ ಟ್ರಂಪ್ ಭಾಷಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -