ಕಳೆದ 17 ದಿನಗಳಿಂದ ಈ ಸರ್ಕಾರ ಉಳಿಯುತ್ತೋ? ಇಲ್ಲವೋ ಎನ್ನುವ ಜಿಜ್ಞಾಸೆಗೆ ಕಾರಣವಾಗಿದ್ದ ರಾಜ್ಯ ರಾಜಕಾರಣದ ಗೊಂದಲಕ್ಕೆ ತೆರೆಬಿದ್ದಿದೆ. ಗುರುವಾರದಿಂದ ನಡೆಯಬೇಕಿದ್ದ ವಿಶ್ವಾಸಮತ ಯಾಚನೆಯನ್ನು ಎಳೆಯುತ್ತಾ ಎಳೆಯುತ್ತಾ ಮುಂದೂಡತ್ತಲೇ ಬಂದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇಂದು ಕೊನೆಗೆ ಪ್ರಕ್ರಿಯೆಗೆ ಒಳಗಾದವು. ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಬಿಜೆಪಿ ಧೀರ್ಘ ನಿಟ್ಟುಸಿರು ಬಿಟ್ಟಿತು. ಯಡಿಯೂರಪ್ಪನವರ ಮೊಗದಲ್ಲಿ ಮಂದಹಾಸ ಕಾಣಿಸಿತು.
7 ಗಂಟೆ 20 ನಿಮಿಷಕ್ಕೆ ತಮ್ಮ ಭಾಷಣ ಮುಗಿಸಿದ ಎಚ್.ಡಿ ಕುಮಾರಸ್ವಾಮಿಯವರು ವಿಶ್ವಾಸಮತ ಯಾಚಿಸಿದರು. ಸ್ಪೀಕರ್ ರವರು ಅನುಮೋಧನೆ ನೀಡಿದರು. ಮೊದಲು ಧ್ವನಿ ಮತಕ್ಕೆ ಹಾಕಲಾಯಿತು. ವಿಶ್ವಾಸಮತದ ಪರವಾಯಿಯೂ, ವಿರೋಧವಾಗಿಯೂ ಧ್ವನಿಮತಗಳು ಕೇಳಿ ಬಂದವು. ನಂತರ ಎರಡು ನಿಮಿಷದಲ್ಲಿ ಸದನದ ಎಲ್ಲಾ ಬಾಗಿಲುಗಳನ್ನು ಹಾಕಲಾಯಿತು.
7 ಗಂಟೆ 24 ನಿಮಿಷದಿಂದ ತಲೆ ಎಣಿಕೆ ಆರಂಭವಾಯಿತು. ಸದನದಲ್ಲಿ ಒಟ್ಟು 204 ಜನ ಹಾಜರಿದ್ದರು. ವಿಶ್ವಾಸಮತದ ಪರವಾಗಿ 99 ಮತಗಳು ಮತ್ತು ವಿರೋಧವಾಗಿ 105 ಮತಗಳು ಚಲಾವಣೆಯಾದವು. ಬಹುಮತಕ್ಕೆ 103 ಮತಗಳ ಅಗತ್ಯವಿತ್ತು. ಸ್ಪೀಕರ್ ರವರು ಸಮ ಮತಗಳು ಬಂದರೆ ಮಾತ್ರ ನಾನು ನನ್ನ ಮತವನ್ನು ಚಲಾವಣೆ ಮಾಡುತ್ತೇನೆ ಇಲ್ಲದಿದ್ದರೆ ಸದನದ ಗೌರವಕ್ಕಾಗಿ ಮತ ಚಲಾಯಿಸುವುದಿಲ್ಲ ಎಂದು ಮೊದಲೇ ಹೇಳಿದ್ದರು.
ಅಲ್ಲಿಗೆ ವಿಶ್ವಾಸಮತಕ್ಕೆ ಸೋಲಾಯಿತು. ಕುಮಾರಸ್ವಾಮಿಯವರು ಮಂಡಿಸಿದ ಪ್ರಸ್ತಾವವು ಬಿದ್ದು ಹೋಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಘೋಷಿಸಿದರು.



Nither BJP nor coalition is deserve in Karnataka
Go for election