ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂದಿನ ವರ್ಷ ನಡೆಯಲಿದ್ದು, ಈ ನಡುವೆ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಸೋಮವಾರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ, ನಟ ವಿಜಯ್ ಅವರನ್ನು ಪನೈಯೂರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ. ಸಭೆಯು ಒಂದು ಗಂಟೆಗೂ ಹೆಚ್ಚು ಕಾಲ ನಡೆದಿದೆ ಎಂದು ವರದಿ ಹೇಳಿದ್ದು, ಈ ಸಂದರ್ಭದಲ್ಲಿ ಕಿಶೋರ್ ಮತ್ತು ವಿಜಯ್ ಅವರು ಪಕ್ಷದ ಮಾರ್ಗಸೂಚಿ ಮತ್ತು ಸಂಭಾವ್ಯ ಮೈತ್ರಿಗಳ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಟಿವಿಕೆ ಅಧ್ಯಕ್ಷ
ಇಬ್ಬರ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವಾದರೂ, ವಿಜಯ್ 2026 ರಲ್ಲಿ ಚುನಾವಣಾ ಚೊಚ್ಚಲ ಪ್ರವೇಶ ಮಾಡುವ ನಿರೀಕ್ಷೆಯಿರುವುದರಿಂದ ಈ ಚರ್ಚೆ ಮಹತ್ವದ್ದಾಗಿದೆ. ಕಿಶೋರ್ ಅವರೊಂದಿಗಿನ ಸಭೆಯಲ್ಲಿ, ಪಕ್ಷದ ಚುನಾವಣಾ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಮತ್ತು ಇತರ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ. ಟಿವಿಕೆ ಅಧ್ಯಕ್ಷ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
2021 ರ ಚುನಾವಣೆಗೆ ಮುಂಚಿತವಾಗಿ ಕಿಶೋರ್ ಡಿಎಂಕೆ ಜೊತೆ ಕೆಲಸ ಮಾಡಿದ್ದರು. ಆದಾಗ್ಯೂ, ಚುನಾವಣೆಯ ನಂತರ, ಅವರು ಚುನಾವಣಾ ತಂತ್ರಜ್ಞ ಹುದ್ದೆಯಿಂದ ಹೊರಬರುವುದಾಗಿ ಘೋಷಿಸಿದ್ದರು. ಪ್ರಸ್ತುತ ಅವರು ಬಿಹಾರದಲ್ಲಿ ಜನ್ ಸ್ವರಾಜ್ ಎಂಬ ಪಕ್ಷವನ್ನು ನಡೆಸುತ್ತಿದ್ದಾರೆ.
ಫೆಬ್ರವರಿ 2, 2024 ರಂದು ನಟ ವಿಜಯ್ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ತಮಿಳುನಾಡು ಮತ್ತು ಪುದುಚೇರಿಯಲ್ಲಿ ಸ್ಥಾಪಿಸಿದ್ದರು. 2024ರ ಅಕ್ಟೋಬರ್‌ನಲ್ಲಿ ವಿಜಯ್ ಪಕ್ಷದ ರಾಜಕೀಯ ಮತ್ತು ಸೈದ್ಧಾಂತಿಕ ಆದ್ಯತೆಗಳನ್ನು ಘೋಷಿಸಿದ್ದರು.
ಅವರು ಈ ವೇಳೆ ಬಿಜೆಪಿಯನ್ನು ಟಿವಿಕೆಯ ಸೈದ್ಧಾಂತಿಕ ಎದುರಾಳಿ ಮತ್ತು ಡಿಎಂಕೆಯನ್ನು ಅದರ ರಾಜಕೀಯ ಎದುರಾಳಿ ಎಂದು ಗುರುತಿಸಿದ್ದರು. ಪೆರಿಯಾರ್, ಕಾಮರಾಜ್, ಅಂಬೇಡ್ಕರ್, ರಾಣಿ ವೇಲು ನಾಚಿಯಾರ್ ಮತ್ತು ಅಂಜಲಿ ಅಮ್ಮಲ್ ಅವರ ಪರಂಪರೆಯನ್ನು ಅನುಸರಿಸುವುದಾಗಿ ವಿಜಯ್ ಅಂದು ಪ್ರತಿಜ್ಞೆ ಮಾಡಿದ್ದರು.
ತಲಪತಿ ವಿಜಯ ಎಂದು ಜನಪ್ರಿಯವಾಗಿ ಕರೆಯಲ್ಪಡುವ ತಮಿಳು ನಟ ವಿಜಯ್ ಕಳೆದ ಮೂರು ದಶಕಗಳಲ್ಲಿ 68 ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ನಟರಲ್ಲಿ ಒಬ್ಬರಾದ ಅವರು 1984 ರಲ್ಲಿ ಬಾಲನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಪೂವೆ ಉನಕ್ಕಾಗ (1996), ಕಾದಲುಕ್ಕು ಮರಿಯಾಧೈ (1997), ಮತ್ತು ಗಿಲ್ಲಿ (2004) ಅವರ ಪ್ರಮುಖ ಚಿತ್ರಗಳಾಗಿವೆ.
ಇದನ್ನೂಓದಿ: ಚಾಲಕ, ಕಂಡಕ್ಟರ್‌ನಿಂದ ಅಶ್ಲೀಲ ಮಾತು; ಚಲಿಸುವ ಬಸ್ಸಿನಿಂದ ಹಾರಿದ ಬಾಲಕಿಯರು
ಚಾಲಕ, ಕಂಡಕ್ಟರ್‌ನಿಂದ ಅಶ್ಲೀಲ ಮಾತು; ಚಲಿಸುವ ಬಸ್ಸಿನಿಂದ ಹಾರಿದ ಬಾಲಕಿಯರು


