HomeಮುಖಪುಟCJI ಬೋಬ್ಡೆ ಹೆಲಿಕಾಪ್ಟರ್ ಕುರಿತು ಟ್ವೀಟ್‌: ಪ್ರಶಾಂತ್‌ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಮನವಿ

CJI ಬೋಬ್ಡೆ ಹೆಲಿಕಾಪ್ಟರ್ ಕುರಿತು ಟ್ವೀಟ್‌: ಪ್ರಶಾಂತ್‌ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಮನವಿ

ಕಳೆದ ತಿಂಗಳಷ್ಟೇ ಸುಪ್ರೀಂಕೋರ್ಟ್ ಅವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ಅಪರಾಧಿ ಎಂದು ಒಂದು ರುಪಾಯಿ ದಂಡ ಕಟ್ಟುವಂತೆ ಆದೇಶಿಸಿತ್ತು

- Advertisement -
- Advertisement -

ಕಳೆದ ತಿಂಗಳಷ್ಟೇ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ವಿರುದ್ದ ಮತ್ತೇ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಒಪ್ಪಿಗೆ ನೀಡಬೇಕು ಎಂದು ಸುಪ್ರೀಂಕೋರ್ಟ್‌ ವಕೀಲ ಸುನಿಲ್‌ ಸಿಂಗ್‌ ಅವರು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕಳೆದ ಬಾರಿ ಪ್ರಶಾಂತ್‌ ಭೂಷಣ್ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೋಬ್ಡೆ ಕೊರೊನಾ ನಿಯಮಗಳನ್ನು ಮೀರಿ ರಾಜಕೀಯ ನಾಯಕನ ಬೈಕ್ ಮೇಲೆ ಕೂತಿರುವ ಫೋಟೋಗೆ ಟ್ವಿಟ್ಟರ್‌‌ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಇದಕ್ಕಾಗಿ ಸುಪ್ರೀಂಕೋರ್ಟ್ ಅವರ ಮೇಲೆ ನಿಂದನೆ ಪ್ರಕರಣ ದಾಖಲಿಸಿ ಅಪರಾಧಿ ಎಂದು ಒಂದು ರುಪಾಯಿ ದಂಡ ಕಟ್ಟುವಂತೆ ಆದೇಶಿಸಿತ್ತು.

ಇದೀಗ ಕನ್ಹಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು, ಆ ಬಳಿಕ ನಾಗಪುರದ ತಮ್ಮ ನಿವಾಸಕ್ಕೆ ಮರಳಲು ಮಧ್ಯಪ್ರದೇಶ ಸರ್ಕಾರವು ಒದಗಿಸಿದ ವಿಶೇಷ ಹೆಲಿಕಾಪ್ಟರ್‌ನಲ್ಲಿ ನ್ಯಾಯಮೂರ್ತಿ ಬೊಬ್ಡೆ ಪ್ರಯಣ ಬೆಳೆಸಿದ್ದರು. ಇದಕ್ಕಾಗಿ ಪ್ರಶಾಂತ್ ಭೂಷಣ್, “ಸಂಸದರು ಮತ್ತು ಶಾಸಕರನ್ನು ಅನರ್ಹಗೊಳಿಸುವ ಪ್ರಮುಖ ಪ್ರಕರಣವೊಂದನ್ನು ಅವರು ವಿಚಾರಣೆ ನಡೆಸಬೇಕಿದೆ. ಮಧ್ಯಪ್ರದೇಶ ಸರ್ಕಾರದ ಅಳಿವು ಉಳಿವು ಆ ಪ್ರಕರಣವನ್ನು ಅವಲಂಬಿಸಿದೆ. ಸರ್ಕಾರದ ಆತಿಥ್ಯವನ್ನು ಸಿಜೆಐ ಪಡೆದಿರುವುದು ವಾಡಿಕೆಯೇ? ಈ ಆತಿಥ್ಯವನ್ನು ಸ್ವೀಕರಿಸುವ ಮೂಲಕ ನ್ಯಾಯಾಂಗ ಮೌಲ್ಯಗಳನ್ನು ಉಲ್ಲಂಘಿಸಲಾಗಿದೆಯೇ” ಎಂಬುದಾಗಿ ಭೂಷಣ್‌ ಟ್ವೀಟ್‌ ಮಾಡಿದ್ದರು.

ಇದನ್ನೂ ಓದಿ: ವಾಕ್‌ ಸ್ವಾತಂತ್ರ್ಯ ಹತ್ತಿಕ್ಕಲು ನ್ಯಾಯಾಂಗ ನಿಂದನೆ ಕಾನೂನಿನ ದುರುಪಯೋಗ: ಪ್ರಶಾಂತ್‌ ಭೂಷಣ್

ಈ ಟ್ವೀಟ್ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಸುಪ್ರೀಂಕೋರ್ಟ್‌ಗೆ ಕಳಂಕ ತಂದಿರುವುದಲ್ಲದೆ, ಜನರು ನ್ಯಾಯಾಲಯದ ಬಗ್ಗೆ ಪೂರ್ವಾಗ್ರಹಪೀಡಿತಗೊಳ್ಳುತ್ತಾರೆ. ಅಲ್ಲದೆ ಈ ಟ್ವೀಟ್ ನ್ಯಾಯಾಂಗ ಪ್ರಕ್ರಿಯೆ ಮತ್ತು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ಪ್ರಶಾಂತ್ ಭೂಷನ್ ವಿರುದ್ದ ನೀಡಿರುವ ಮನವಿಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ಬುಡ ಅಲ್ಲಾಡಿಸುತ್ತಿರುವ ಭೂಷಣ್ ಟ್ವೀಟ್ಸ್ – ದೇವನೂರ ಮಹಾದೇವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ತಪ್ಪು ದಾರಿಗೆಳೆಯುವ ಜಾಹೀರಾತು: ಸಾರ್ವಜನಿಕ ಕ್ಷಮೆಯಾಚನೆಗೆ ಸಿದ್ದ ಎಂದ ಬಾಬಾ ರಾಮ್‌ದೇವ್, ಬಾಲಕೃಷ್ಣ

0
ಇಂದು (ಏ.16) ಸುಪ್ರೀಂ ಕೋರ್ಟ್‌ಗೆ ಖುದ್ದಾಗಿ ಹಾಜರಾದ ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಸಹ-ಸಂಸ್ಥಾಪಕ ಬಾಬಾ ರಾಮ್‌ದೇವ್, ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಅಲೋಪತಿ ಔಷಧಿಗಳ ವಿರುದ್ಧ...