Homeಮುಖಪುಟರಿಪಬ್ಲಿಕ್ ಟಿವಿ ಪತ್ರಕರ್ತರನ್ನು ಬಲಿಪಶು ಮಾಡಬೇಡಿ: ಎಡಿಟರ್ಸ್ ಗಿಲ್ಡ್

ರಿಪಬ್ಲಿಕ್ ಟಿವಿ ಪತ್ರಕರ್ತರನ್ನು ಬಲಿಪಶು ಮಾಡಬೇಡಿ: ಎಡಿಟರ್ಸ್ ಗಿಲ್ಡ್

"ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು ಎಂದರೆ ದ್ವೇಷ ಭಾಷಣವನ್ನು ಉತ್ತೇಜಿಸುವ ಪರವಾನಗಿ ಎಂದರ್ಥವಲ್ಲ" ಎಂದು ಸಂಪಾದಕರ ಸಂಘ ತಿಳಿಸಿದೆ.

- Advertisement -
- Advertisement -

ರಿಪಬ್ಲಿಕ್ ಟಿವಿ ಪತ್ರಕರ್ತರ ವಿರುದ್ಧ ನೂರಾರು ಎಫ್‌ಐಆರ್ ದಾಖಲಾಗಿರುವುದು “ನೋವಿನ ಸಂಗತಿ” ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಟಿಆರ್‌ಪಿ ತಿರುಚಿರುವ ಪ್ರಕರಣ ಮತ್ತು ಮುಂಬೈ ಪೊಲೀಸರ ವಿರುದ್ಧ ಅಸಮಾಧಾನ ಉಂಟು ಮಾಡುವ ವಿಚಾರಗಳನ್ನು ಹರಡಿರುವ ಆರೋಪದಲ್ಲಿ ನೂರಾರು ಪತ್ರಕರ್ತರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ “ರಿಪಬ್ಲಿಕ್ ಟಿವಿಯ ಪತ್ರಕರ್ತರ ವಿರುದ್ಧ ನೂರಾರು ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿರುವುದನ್ನು ನೋಡಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ನೋವಿನಿಂದ ಕೂಡಿದೆ” ಎಂದು ತಿಳಿಸಿದೆ.

“ನಾವು ತನಿಖೆಯ ಮೇಲೆ ಪ್ರಭಾವ ಬೀರಲು ಬಯಸುವುದಿಲ್ಲ, ತನಿಖೆಯಿಂದ ಟಿಆರ್‌ಪಿಗಳಲ್ಲಿ ಅಗತ್ಯವಾದ ಪಾರದರ್ಶಕತೆಯನ್ನು ತರುವ ಸಾಮರ್ಥ್ಯವಿದೆ ಎಂದು ನಾವು ನಂಬಿದ್ದೇವೆ. ಆದರೆ ಪತ್ರಕರ್ತರನ್ನು ಬಲಿಪಶು ಮಾಡುವುದು ತಕ್ಷಣವೇ ನಿಲ್ಲಬೇಕು. ಏಕೆಂದರೆ ಅನಿಯಂತ್ರಿತ ರಾಜ್ಯಾಧಿಕಾರ ಕೂಡ ಕೆಲಸ ಮಾಡುವ ಪತ್ರಕರ್ತರ ಹಿತಾಸಕ್ತಿಯ ಪರವಾಗಿಲ್ಲ” ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ಎರಡು ದಿನಗಳಿಂದ ಮುಂಬೈ ಪೊಲೀಸ್ ಮತ್ತು ರಿಪಬ್ಲಿಕ್ ಟಿವಿ ನಡುವೆ ತೀವ್ರ ವಿವಾದ ಉಂಟಾಗಿದೆ. ರಿಪಬ್ಲಿಕ್ ಟಿವಿ ಮೇಲೆ ಟಿಆರ್‌ಪಿಗಳನ್ನು ತಿರುಚಿರುವ ಆರೋಪ ಮತ್ತು ಮುಂಬೈ ಪೊಲೀಸ್ ಆಯುಕ್ತ ಪರಮ್ ವೀರ್‌ ಸಿಂಗ್ ವಿರುದ್ಧ ಪ್ರಚೋದನಾತ್ಮಕ ಸುದ್ದಿ ಪ್ರಸಾರ ಮಾಡಿದೆ ಎಂಬ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ರಿಪಬ್ಲಿಕ್ ಟಿವಿಯಲ್ಲಿ TRP ಹಗರಣದ ಸುದ್ದಿ ಪ್ರಸಾರವನ್ನು ತಡೆಯುವಂತೆ ಕೋರ್ಟ್‌ಗೆ‌‌ ಅರ್ಜಿ

ಮುಂಬೈ ಪೊಲೀಸ್ ಆಯುಕ್ತರ ವಿರುದ್ಧ “ಅಸಮಾಧಾನ” ಪ್ರಚೋದಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು, ರಿಪಬ್ಲಿಕ್ ಟಿವಿಯ ಪತ್ರಕರ್ತರ ವಿರುದ್ಧ ಹಲವಾರು ಎಫ್‌ಐಆರ್ ದಾಖಲಿಸಿದ್ದಾರೆ, ಅದರ ಕಾರ್ಯನಿರ್ವಾಹಕ ಸಂಪಾದಕ, ನಿರೂಪಕ, ಇಬ್ಬರು ವರದಿಗಾರರು ಮತ್ತು ಇತರ ಸಂಪಾದಕೀಯ ಸಿಬ್ಬಂದಿ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.

“ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು ಎಂದರೆ ದ್ವೇಷ ಭಾಷಣವನ್ನು ಉತ್ತೇಜಿಸುವ ಪರವಾನಗಿ ಎಂದರ್ಥವಲ್ಲ” ಎಂದು ಸಂಪಾದಕರ ಸಂಘ ತಿಳಿಸಿದೆ. ಜೊತೆಗೆ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಸಹಜ ಸಾವನ್ನು ಮಾಧ್ಯಮಗಳು ವರದಿ ಮಾಡಿದ ರೀತಿಯನ್ನು ಗಿಲ್ಡ್ ಗಮನಿಸಿದೆ ಎಂದು ತಿಳಿಸಿದೆ.

ಇಂತಹ ವರದಿಗಳು “ಮಾಧ್ಯಮ ವಿಶ್ವಾಸಾರ್ಹತೆ ಮತ್ತು ವರದಿ ಮಾಡುವ ಮಿತಿಗಳ ಬಗ್ಗೆ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ” ಎಂದು ಗಿಲ್ಡ್ ತಿಳಿಸಿದೆ.

ಇಂತಹ ಸಮಸ್ಯೆಗಳು ಬಹಳ ಹಿಂದೆಯೇ ಪರಿಹರಿಸಬೇಕಾದ ಪ್ರಮುಖ ಸಮಸ್ಯೆಗಳಾಗಿವೆ. ಆದರೆ ಇಂದು ಉಲ್ಬಣಗೊಳಿಸಲಾಗುತ್ತಿದೆ. ಇದು ಚಾನಲ್‌ಗಳು ಜವಾಬ್ದಾರಿಯುತವಾಗಿ ವರ್ತಿಸುವ ಸಮಯ ಮತ್ತು ಅದರಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರ ಸುರಕ್ಷತೆಗೆ ಆದ್ಯತೆ ನೀಡುವ ಜೊತೆಗೆ ಮಾಧ್ಯಮಗಳ ಸಾಮೂಹಿಕ ವಿಶ್ವಾಸಾರ್ಹತೆಗೆ ಧಕ್ಕೆ ತರಬಾರದು ”ಎಂದು ಗಿಲ್ಡ್ ಹೇಳಿದೆ.

“ತನಿಖೆ ನಡೆಸುವ ಪೊಲೀಸರು ಚಾನಲ್‌ನ ಪತ್ರಕರ್ತರಿಗೆ ನೋವುಂಟು ಮಾಡುವುದು ಅಥವಾ ಯಾರನ್ನು  ಬಂಧಿಸುವುದಾಗಲಿ ಮಾಡಬಾರದು. ತನಿಖೆಯು ಮಾಧ್ಯಮ ಹಕ್ಕುಗಳನ್ನು ನಿಗ್ರಹಿಸುವ ಸಾಧನವಾಗಿ ಪರಿಣಮಿಸಬಾರದು ”ಎಂದು ಗಿಲ್ಡ್ ಹೇಳಿದೆ.


ಇದನ್ನೂ ಓದಿ: ಸುಶಾಂತ್ ಪ್ರಕರಣ: ರಿಪಬ್ಲಿಕ್ ಟಿವಿಯನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನೀವು ನಮ್ಮ ಬೆನ್ನೆಲುಬು; ಪಕ್ಷದ ಡಿಎನ್‌ಎ..’; ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸಂದೇಶ

0
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪಕ್ಷದ ಕಾರ್ಯಕರ್ತರಿಗೆ ಹೃದಯಸ್ಪರ್ಶಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್‌ನಿಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ,...