Homeಮುಖಪುಟಸುಶಾಂತ್ ಪ್ರಕರಣ: ರಿಪಬ್ಲಿಕ್ ಟಿವಿಯನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್!

ಸುಶಾಂತ್ ಪ್ರಕರಣ: ರಿಪಬ್ಲಿಕ್ ಟಿವಿಯನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್!

"ಪ್ರಕರಣವು ಹತ್ಯೆಯೇ ಅಥವಾ ಆತ್ಮಹತ್ಯೆ ಎಂಬ ತನಿಖೆಯಲ್ಲಿದ್ದಾಗ, ಒಂದು ಚಾನೆಲ್ ಇದು ಕೊಲೆ ಎಂದು ಹೇಳುತ್ತಿರುವುದು ತನಿಖಾ ಪತ್ರಿಕೋದ್ಯಮವೇ?" ಎಂದು ನ್ಯಾಯಪೀಠ ಕೇಳಿದೆ.

- Advertisement -
- Advertisement -

ಪ್ರಕರಣವೊಂದರಲ್ಲಿ ಯಾರನ್ನು ಬಂಧಿಸಬೇಕು ಎಂದು ಸಾರ್ವಜನಿಕರನ್ನು ಕೇಳುವುದು ತನಿಖಾ ಪತ್ರಿಕೋದ್ಯಮದ ಭಾಗವೇ ಎಂದು ಬಾಂಬೆ ಹೈಕೋರ್ಟ್ ರಿಪಬ್ಲಿಕ್ ಟಿವಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ ಟ್ವಿಟ್ಟರ್‌ನಲ್ಲಿ ರಿಪಬ್ಲಿಕ್ ಚಾನೆಲ್ ನಡೆಸುತ್ತಿರುವ ‘#ಅರೆಸ್ಟ್ ರಿಯಾ’ ಎಂಬ ಹ್ಯಾಶ್‌ಟ್ಯಾಗ್ ಅಭಿಯಾನವನ್ನು ಉಲ್ಲೇಖಿಸಿ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರನ್ನೊಳಗೊಂಡ ನ್ಯಾಯಪೀಠ ಈ ಪ್ರಶ್ನೆಯನ್ನು ಮುಂದಿಟ್ಟಿದೆ.

“ಇದು ತನಿಖಾ ಪತ್ರಿಕೋದ್ಯಮದ ಭಾಗವೇ? ಯಾರನ್ನು ಬಂಧಿಸಬೇಕು ಎಂಬ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಕೇಳುತ್ತೀರಾ?” ಎಂದು ನ್ಯಾಯಪೀಠವು ಚಾನೆಲ್‌ನ ವಕೀಲ ಅಡ್ವೊಕೇಟ್ ಮಾಳ್ವಿಕಾ ತ್ರಿವೇದಿ ಅವರನ್ನು ಪ್ರಶ್ನಿಸಿದೆ.

ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಸಂಗತಿಗಳನ್ನು ಬಹಿರಂಗಪಡಿಸಲು ಚಾನೆಲ್ ತನಿಖಾ ಪತ್ರಿಕೋದ್ಯಮವನ್ನು ನಡೆಸುತ್ತಿದೆ ಎಂದು ಈ ಹಿಂದೆ ವಕೀಲರು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಅರ್ನಾಬ್ ರಿಪಬ್ಲಿಕ್ ಚಾನೆಲ್ ವಿರುದ್ಧ PIL: ವಿಚಾರಣೆಗೆ ಒಪ್ಪಿದ ದೆಹಲಿ ಹೈಕೋರ್ಟ್

“ಒಂದು ಪ್ರಕರಣವು ಹತ್ಯೆಯೇ ಅಥವಾ ಆತ್ಮಹತ್ಯೆ ಎಂಬ ತನಿಖೆಯಲ್ಲಿದ್ದಾಗ, ಒಂದು ಚಾನೆಲ್ ಇದು ಕೊಲೆ ಎಂದು ಹೇಳುತ್ತಿರುವುದು ತನಿಖಾ ಪತ್ರಿಕೋದ್ಯಮವೇ? ತನಿಖಾ ಅಧಿಕಾರವನ್ನು ಸಿಆರ್‌ಪಿಸಿ ಅಡಿಯಲ್ಲಿ ಪೊಲೀಸರಿಗೆ ನೀಡಲಾಗುತ್ತದೆ” ಎಂದು ನ್ಯಾಯಪೀಠ ಚಾನೆಲ್‌ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದೆ.

“ಮುಂಬೈ ಪೊಲೀಸ್ ತನಿಖೆಯಲ್ಲಿ ಏನೋ ತಪ್ಪಾಗಿದೆ ಹಾಗಾಗಿ ತನಿಖೆಯನ್ನು ಸುಪ್ರೀಂ ಕೋರ್ಟ್ ಕೇಂದ್ರೀಯ ತನಿಖಾ ದಳಕ್ಕೆ ಒಪ್ಪಿಸಿದೆ. ಸುಶಾಂತ್ ಅವರ ಕುಟುಂಬ ಕೂಡ ನ್ಯಾಯ ಕೋರಿದೆ” ಎಂದು ವಕೀಲರು ತಿಳಿಸಿದರು. ಮೃತ ವ್ಯಕ್ತಿ ಸೆಲಬ್ರಿಟಿ ಆಗಿದ್ದ ಕಾರಣ ಸಾರ್ವಜನಿಕರಿಗೆ ನೈಜ ಸಂಗತಿಗಳನ್ನು ತಿಳಿಯುವ ಕುತೂಹಲವಿದೆ ಎಂದು ನ್ಯಾಯಪೀಠಕ್ಕೆ ಹೇಳಿದರು.

ರಿಪಬ್ಲಿಕ್ ಟಿವಿಯ ತನಿಖಾ ವರದಿಗಳೇ ಶೀನಾ ಬೋರಾ ಕೊಲೆ ಪ್ರಕರಣ ಮತ್ತು ಸುನಂದ ಪುಷ್ಕರ್ ಪ್ರಕರಣದ ನೈಜ ಸಂಗತಿಗಳನ್ನು ಬೆಳಕಿಗೆ ತಂದಿದೆ. ರಿಪಬ್ಲಿಕ್ ಟಿವಿ ತನ್ನದೆ ಚೌಕಟ್ಟಿನೊಳಗೆ ವರದಿಗಳನ್ನು ಮಾಡುತ್ತಿದೆ ಎಂದು ತ್ರಿವೇದಿ ಹೇಳಿದ್ದಾರೆ.

ಆದರೆ, ಸುಶಾಂತ್ ಸಾವು ವರದಿಯಾದ ರೀತಿಗೆ ನ್ಯಾಯಪೀಠ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿತು. “ಕೆಲವು ಆತ್ಮಹತ್ಯೆ ವರದಿಗಳನ್ನು ಮಾಡುವ ಮಾರ್ಗಸೂಚಿಗಳಿವೆ. ಮೃತಪಟ್ಟವರ ಬಗ್ಗೆ ನಿಮಗೆ ಗೌರವವಿಲ್ಲವೇ? ಇಂತಹ ವರದಿಗಳು ತುಂಬಾ ದುರದೃಷ್ಟಕರ” ಎಂದು ನ್ಯಾಯಪೀಠ ಟೀಕಿಸಿತು.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ವರದಿಯ ಹಿನ್ನೆಲೆಯಲ್ಲಿ ಮಾಧ್ಯಮ ವಿಚಾರಣೆಯ ಬಗ್ಗೆ ನಿಯಮಗಳನ್ನು ಕೋರಿದ್ದ ಪಿಐಎಲ್‌ಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಮತ್ತು ಅವರ ಚಾನೆಲ್ “ವಿಕೃತ ಮತ್ತು ದಾರಿತಪ್ಪಿಸುವ ಸಂಗತಿಗಳನ್ನು” ವರದಿ ಮಾಡುತ್ತಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್‌ನಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.


ಇದನ್ನೂ ಓದಿ:  ರಿಪಬ್ಲಿಕ್ ಟಿವಿಯಲ್ಲಿ TRP ಹಗರಣದ ಸುದ್ದಿ ಪ್ರಸಾರವನ್ನು ತಡೆಯುವಂತೆ ಕೋರ್ಟ್‌ಗೆ‌‌ ಅರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...