ಉಪಚುನಾವಣೆಯ ರಂಗು ಏರುತ್ತಿದ್ದಂತೆಯೇ ರಾಜಕಾರಾಣಿಗಳ ನಡುವಿನ ಆರೋಪ ಪ್ರತ್ಯಾರೋಪಗಳು ಗರಿಗೆದರಿವೆ. ಟ್ವಿಟ್ಟರ್ ಅದಕ್ಕೊಂದು ವೇದಿಕೆಯಾಗಿ ಬಳಕೆಯಾಗುತ್ತಿದ್ದು ಪರಸ್ಪರ ಕೆಸೆರೆರಚಾಟಕ್ಕೆ ಸಾಕ್ಷಿಯಾಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಡಿ.ವಿ ಸದಾನಂದಗೌಡರ ನಡುವೆ ಇಂದು ಆರಂಭವಾದ ಟ್ವೀಟ್ ಸಮರಕ್ಕೆ ಸಚಿವ ಬಿ.ಶ್ರೀರಾಮುಲು ಸಾಥ್ ನೀಡಿದ್ದಾರೆ. ಹಾಗಾದರೆ ಯಾರು ಏನು ಹೇಳಿದರೂ ಬನ್ನಿ ನೋಡೋಣ.
ಇದನ್ನೂ ಓದಿ: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ: ಶಿವಸೇನೆ ಶಾಸಕರ ಒಕ್ಕೊರಲ ಒತ್ತಾಯ
ರಾಜ್ಯದ ಬಿಜೆಪಿ ನಾಯಕರೆಲ್ಲರೂ ನನ್ನ ಮೇಲೆಯೇ ಮುಗಿಬೀಳುತ್ತಿರುವುದು ನೋಡಿದರೆ, ನನ್ನನ್ನು ಅತಿಹೆಚ್ಚು ಟೀಕಿಸಿದವರಿಗೆ ಏನೋ ಬಹುಮಾನ ಕೊಡ್ತೇವೆ ಎಂದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಭರವಸೆ ನೀಡಿದ ಹಾಗಿದೆ. ನಾನು ಏಕಾಂಗಿಯಾಗಿದ್ದರೆ ಇವರಿಗ್ಯಾಕೆ ನನ್ನ ಬಗ್ಗೆ ಭಯ? ಎಂದು ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಕಣಕ್ಕೆ ಆಹ್ವಾನ ನೀಡಿದ್ದಾರೆ.
ನನ್ನ ಮಾನಸಿಕ ಸ್ಥಿತಿ ಬಗ್ಗೆ ಬಡಬಡಿಸುತ್ತಿರುವ ಡಿ.ವಿ ಸದಾನಂದಗೌಡರ ಬಗ್ಗೆ ಅನುಕಂಪ ಇದೆ. ಮೊದಲು ಮುಖ್ಯಮಂತ್ರಿ ಸ್ಥಾನದಿಂದ ನಂತರ ರೈಲ್ವೆ, ಕಾನೂನು, ಅಂಕಿ ಅಂಶ ಹೀಗೆ ಎಲ್ಲ ಕಡೆಗಳಲ್ಲಿಯೂ ತಿರಸ್ಕೃತಗೊಂಡ ಗೌಡರು ಈಗ ಪಕ್ಷದಲ್ಲಿ ‘ಗೊಬ್ಬರ’ವಾಗಿ ಹೋಗಿದ್ದಾರೆ. ಈ ಹತಾಶೆ ಅವರಿಂದ ಇಂತಹ ಹೇಳಿಕೆಗಳನ್ನು ಹೊರಡಿಸುತ್ತಿದೆ ಎಂದು ಸಹ ಡಿವಿಎಸ್‌ಗೆ ಟಾಂಗ್ ಕೊಟ್ಟಿದ್ದಾರೆ.
ವೃಕ್ಷಕೆಲ್ಲಿಯದು ಹೂವಿನ ಹಬ್ಬ? ಗೊಬ್ಬರದ ಜೀವವನೆ ಹೀರಿ ಕೊಬ್ಬಿಹ ಹೂವೆ, ಕಬ್ಬಕ್ಕೆ ನೀಂ ಮಾತ್ರ ವಸ್ತುವೇಂ? ನಿನ್ನಂತೆ ಗೊಬ್ಬರಂ ಕಬ್ಬಕ್ಕೆ ಸಾಮಗ್ರಿಯಾಗಬಾರದೆ ಹೇಳು?
ಹಳಿಯದಿರೊ; ಇಂದೊ ನಾಳೆಯೊ ನೀನು ಕೆಳಗುರುಳಿ ಗೊಬ್ಬರದೊಳೊಂದಾಗುವಾ ಮುಂದೆ ಕಾದಿಹುದು ಕುವೆಂಪು ನಾನು ಗೊಬ್ಬರ ಹೌದು ಸ್ವಪಕ್ಷೀಯರ ರಕ್ತ ಹೀರಿದ PFI ನ ಸಮರ್ಥಕ ನೀವಲ್ಲವೇ? ಎಂದು ಡಿ.ವಿ ಸದಾನಂದಗೌಡರು ತಿರುಗೇಟು ನೀಡಿದ್ದಾರೆ.
ವೃಕ್ಷಕೆಲ್ಲಿಯದು ಹೂವಿನ ಹಬ್ಬ? ಗೊಬ್ಬರದ
ಜೀವವನೆ ಹೀರಿ ಕೊಬ್ಬಿಹ ಹೂವೆ, ಕಬ್ಬಕ್ಕೆ
ನೀಂ ಮಾತ್ರ ವಸ್ತುವೇಂ? ನಿನ್ನಂತೆ ಗೊಬ್ಬರಂ
ಕಬ್ಬಕ್ಕೆ ಸಾಮಗ್ರಿಯಾಗಬಾರದೆ ಹೇಳು? (1/2) https://t.co/SHK191TCtI— Sadananda Gowda (@DVSadanandGowda) November 22, 2019
ವೃಕ್ಷಕೆಲ್ಲಿಯದು ಹೂವಿನ ಹಬ್ಬ? ಗೊಬ್ಬರದ ಜೀವವನೆ ಹೀರಿ ಕೊಬ್ಬಿಹ ಹೂವೆ, ಕಬ್ಬಕ್ಕೆ ನೀಂ ಮಾತ್ರ ವಸ್ತುವೇಂ? ನಿನ್ನಂತೆ ಗೊಬ್ಬರಂ ಕಬ್ಬಕ್ಕೆ ಸಾಮಗ್ರಿಯಾಗಬಾರದೆ ಹೇಳು? ಹಳಿಯದಿರೊ; ಇಂದೊ ನಾಳೆಯೊ ನೀನು ಕೆಳಗುರುಳಿ ಗೊಬ್ಬರದೊಳೊಂದಾಗುವಾ ಮುಂದೆ ಕಾದಿಹುದು – ಕುವೆಂಪು ಎಂಬ ಪದ್ಯವನ್ನೇ ಅವರು ಓದಿಬಿಟ್ಟಿದ್ದಾರೆ.
ನಾವು ತಿನ್ನುವ ಅನ್ನ ಗೊಬ್ಬರದಿಂದಲೇ.. ಗೊಬ್ಬರವನ್ನು ಹೀಯಾಳಿಸುವ ಮೂಲಕ ರೈತರನ್ನು ಕೇವಲವಾಗಿ ಕಂಡಿದ್ದೀರಿ. ಪ್ರಚಾರಕ್ಕಾಗಿ ದಿನಕ್ಕೊಂದು ಹೇಳಿಕೆ ನೀಡುವುದು ಸಮತೋಲನವಿಲ್ಲದ ತಮ್ಮ ಮನಸ್ಥಿತಿಯನ್ನು ತೋರಿಸುತ್ತದೆ ಎಂದೂ ಡಿವಿಎಸ್ ದೂರಿದ್ದಾರೆ.
ಏಕಾಂಗಿಯಾಗಿ ಹೋಗಿರುವ ಡಿ.ವಿ ಸದಾನಂದಗೌಡರವರನ್ನು ಬಿಜೆಪಿಯಲ್ಲಿ ಯಾರೂ ಗಂಭೀರವಾಗಿ ಸ್ವೀಕರಿಸುತ್ತಿಲ್ಲ. ಇದಕ್ಕಾಗಿ ಅವರು ತಮ್ಮ ಜೋಕುಗಳಿಗೆ ತಾವೇ ನಕ್ಕು ರಾಜ್ಯದ ಜನರಿಗೆ ಮನರಂಜನೆ ನೀಡುತ್ತಾ ಇರುತ್ತಾರೆ ಎಂದು ಸಿದ್ದರಾಮಯ್ಯ ಪ್ರತಿ ಉತ್ತರ ನೀಡಿದ್ದಾರೆ.
ಏಕಾಂಗಿಯಾಗಿ ಹೋಗಿರುವ @DVSadanandGowda ಅವರನ್ನು @BJP4Karnatakaದಲ್ಲಿ ಯಾರೂ ಗಂಭೀರವಾಗಿ ಸ್ವೀಕರಿಸುತ್ತಿಲ್ಲ.
ಇದಕ್ಕಾಗಿ ಅವರು ತಮ್ಮ ಜೋಕುಗಳಿಗೆ ತಾವೇ ನಕ್ಕು ರಾಜ್ಯದ ಜನರಿಗೆ ಮನರಂಜನೆ ನೀಡುತ್ತಾ ಇರುತ್ತಾರೆ.@INCKarnataka— Siddaramaiah (@siddaramaiah) November 22, 2019
ಮಾನ್ಯ ಸಿದ್ದರಾಮಯ್ಯನವರೇ, ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುವುದರಲ್ಲಿ, ನಂಬಿಸಿ ಕತ್ತು ಕೊಯ್ಯುವುದರಲ್ಲಿ, ತಾನು ಬೆಳೆಯಲು ಇನ್ನೊಬ್ಬನನ್ನು ನಾಶ ಮಾಡುವುದರಲ್ಲಿ ನಿಮ್ಮಂತೆ ನಾನು ಬುದ್ಧಿವಂತನಲ್ಲ. ಇನ್ನೊಬ್ಬರಿಗೆ ಅನ್ಯಾಯ ಮಾಡುವುದೇ ಬುದ್ಧಿವಂತಿಕೆ ಎನ್ನುವ ನಿಮಗೆ ನಾನು ಪೆದ್ದನಂತೆ ಕಾಣುವುದು ಸಹಜ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಮುಂದುವರಿದು ಸಿದ್ದರಾಮಯ್ಯನವರೇ, ಮೋದಿ ಮತ್ತು ಅಮಿತ್ ಶಾ ಹೆಸರು ಎಳೆತಂದು ದೊಡ್ಡವರಾಗುವ ಯೋಚನೆ ಬೇಡ. ಹಸೀ ಸುಳ್ಳು ಬಿಟ್ಟು ಸತ್ಯ ಹೇಳಿ. ಆಗದಿದ್ದರೆ ಸತ್ಯಕ್ಕೆ ಸಮೀಪವಾದರೂ ಮಾತನಾಡಿ. ಆಗ ಯಾರೂ ನಿಮ್ಮ ಮೇಲೆ ಮುಗಿಬೀಳುವುದಿಲ್ಲ. ಮುಗಿಬೀಳುತ್ತಾರೆ ಎಂಬ ಭಯವನ್ನು ನೀವು ಬಿಡಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರೇ, @narendramodi @AmitShah ಹೆಸರು ಎಳೆತಂದು ದೊಡ್ಡವರಾಗುವ ಯೋಚನೆ ಬೇಡ. ಹಸೀ ಸುಳ್ಳು ಬಿಟ್ಟು ಸತ್ಯ ಹೇಳಿ. ಆಗದಿದ್ದರೆ ಸತ್ಯಕ್ಕೆ ಸಮೀಪವಾದರೂ ಮಾತನಾಡಿ. ಆಗ ಯಾರೂ ನಿಮ್ಮ ಮೇಲೆ ಮುಗಿಬೀಳುವುದಿಲ್ಲ. ಮುಗಿಬೀಳುತ್ತಾರೆ ಎಂಬ ಭಯವನ್ನು ನೀವು ಬಿಡಿ. https://t.co/y5jWpPIXeB
— B Sriramulu (@sriramulubjp) November 22, 2019


