HomeUncategorizedಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

ಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

- Advertisement -
- Advertisement -

ಜನರಿಂದ ಆರಿಸಿ ಹೋಗಿ ಜನವಿರೋಧಿ ಕೆಲಸವನ್ನು ಕಾಯಿದೇ ಶೀರ ಮಾಡುವವರಿಗೆ ನಮ್ಮ ದೇಶದೊಳಗ ಜನಪ್ರತಿನಿಧಿ ಅಂತ ಹೆಸರು.

ಅಂಥವರು ಒಲ್ಲೆ ಒಲ್ಲೆ ಅನಕೋತ ಮಾಡಿದ ಅನೇಕ ಕಾನೂನುಗಳಲ್ಲಿ ಒಂದು ಅಂದರ ಚುನಾವಣೆ ಆಯೋಗದ ಮಾದರಿ ನೀತಿಸಂಹಿತೆ (ಮಾನಿಸಂ). ಖರೇ ಹೇಳಬೇಕಂದರ ಅದು ಸಂಸತ್ತು ಮಾಡಿದಲ್ಲ. ಆಯೋಗ ಮಾಡಿದ್ದು ಅಧೀನ ಶಾಸಕಾಂಗದ ಅಧಿಕಾರದೊಳಗ.

ಕೇಂದ್ರ ಚುನಾವಣಾ ಆಯೋಗ ಮಾದರಿ ನೀತಿಸಂಹಿತೆಯನ್ನ ಪ್ರತಿ ಚುನಾವಣೆಗೆ ಮುಂಚೆ ಬದಲಿಸಿಗೋತ, ಗಟ್ಟಿ ಮಾಡಿಕೋತ, ತಪ್ಪುಗಳನ್ನು ತಿದ್ದಿಕೋತ, ಹಿಂದಿನ ಚುನಾವಣೆ ಪಾಠಗಳನ್ನು ಕಲಕೋತ ಖರೇ ಅರ್ಥದೊಳಗ ಅದನ್ನ ಮಾದರಿ ಮಾಡಬೇಕು ಅನ್ನೊ ಕೆಲಸ ಮಾಡಿಕೋತ ಬಂದದ.

ಅದರ ಕೆಲವು ಅಂಶಗಳನ್ನು ನೋಡೋಣ.
 ಹೊಸ ಯೋಜನೆ ಘೋಷಿಸಬಾರದು, ಹೊಸ ಕಾರ್ಯಕ್ರಮ ಶುರುಮಾಡಬಾರದು
 ಸರಕಾರಿ ವಸತಿಗೃಹ, ಕಚೇರಿಗಳನ್ನ ರಾಜಕೀಯ ಕಾರಣಗಳಿಗೆ ಬಳಸಬಾರದು, ಮೀಟಿಂಗು ಮಾಡಬಾರದು
 ಸರಕಾರಿ ಸ್ಥಳಗಳನ್ನ ಅಂದಗೆಡಿಸಬಾರದು.
 ವಿರೋಧಿಗಳ ಮನೀ ಮುಂದ, ಅವರಿಗೆ ಕಿರಿಕಿರಿ ಆಗೋ ಹಂಗ ಪ್ರಭಾತಫೇರಿ ತೆಗೀಬಾರದು, ಹೊಯ್ಕೋ- ಬಡಕೋ ಮಾಡಬಾರದು
 ಸರಕಾರಿ ಮಾಧ್ಯಮದೊಳಗ ಎಲ್ಲಾ ಪಕ್ಷಗಳಿಗೂ ಸಮಾನ ಅವಕಾಶ ಸಿಗಬೇಕು
 ಮೈಕಾಸುರನನ್ನ ರಾತ್ರಿ ಒದರಸಬಾರದು.
 ಆಡಳಿತ ಪಕ್ಷ ತನ್ನ ಶಕ್ತಿಯ ದುರುಪಯೋಗ ಮಾಡಬಾರದು
 ಮಂತ್ರಿಗಳು ಗಾಡಿ, ಘೋಡಾ, ಪೀಏ, ಪೀಪಿ, ಗನ್ ಮ್ಯಾನು, ಉಪಯೋಗಿಸಬಾರದು.
 ಮತದಾನದ ದಿವಸ ಮತದಾರ ಮಹಾಪ್ರಭುಗಳನ್ನ ಹುದ್ದರಿಗಳು ತಮ್ಮ ಗಾಡಿಯೊಳಗ ಕರಕೊಂಡು ಹೋಗಬಾರದು.
 (ಅಧಿಕಾರಿಗಳಿಗೆ ಗೊತ್ತಾಗೋ ಹಂಗ) ಹಣ- ಹೆಂಡ ಹಂಚಬಾರದು, ಇತ್ಯಾದಿ, ಇತ್ಯಾದಿ.

ಒಟ್ಟಿನೊಳಗ, ನಾಯಕರು ಜನಪ್ರೀತಿಯಿಂದ ಚುನಾವಣೆ ಗೆಲ್ಲಬೇಕೇ ಹೊರತು ಜನರನ್ನು ಪ್ರಲೋಭಿಸಿ ಅಥವಾ ಹೆದರಿಸಿ ಗೆಲ್ಲಬಾರದು ಅನ್ನೋದು ಮಾನೀಸಂ ಉದ್ದೇಶ.

ಇದು ಚುನಾವಣೆ ಘೋಷಣೆ ಆದತಕ್ಷಣ ಜಾರಿಗೆ ಬರತದ. ಚುನಾವಣೆ ಪ್ರಕ್ರಿಯೆ ಮುಗಿಯೋ ತನಕಾ ಇರತದ.

ಬಹುಮಟ್ಟಿಗೆ ಯಾವುದಾದರೂ ಕ್ಷೇತ್ರದೊಳಗ ಚುನಾವಣೆ ಬಂದರ ಆ ಇಡೀ ರಾಜ್ಯ ಅಥವಾ ಜಿಲ್ಲೆಗೆ ಇದು ಲಾಗೂ ಆಗತದ.

ಇದನ್ನು ಉಲ್ಲಂಘಿಸಿದರ ಜೈಲಿಗೆ ಹಾಕೋದರಿಂದ ಹಿಡದು ಮುಂದಿನ ಚುನಾವಣೆಗೆ ಅಯೋಗ್ಯರನ್ನಾಗಿ ಮಾಡೋ ತನಕಾ ಆಯೋಗಕ್ಕ ಅಧಿಕಾರ ಐತಿ.

ಹಿಂದೆಲ್ಲಾ ಚುನಾವಣೆ ಅಧಿಕಾರಿಗಳಿಗೆ ಹೆಚ್ಚಿನ ಡ್ಯೂಟಿ ಹಾಕಿ ಮಾನೀಸಂ ಮೇಲುಸ್ತುವಾರಿ ಕೊಡತಿದ್ದರು. ಈಗ ಮಾನೀಸಂ ಜಾರಿಗೆ ಅಂತನೇ ಬ್ಯಾರೆ ಅಧಿಕಾರಿ ಇರತಾರ.
ಆದರೂ ಚುನಾವಣೆಗೆ ಬಡಿದ ಮುಸುಕು ಸರದಿಲ್ಲ. ಅವು ಪಾರದರ್ಶಕ ಆಗಿಲ್ಲ ಅನ್ನೋ ಮಾತು ಕಡಿಮಿ ಆಗಿಲ್ಲ.

ಇವೆಲ್ಲವನ್ನೂ ನಾವು ಸರಿಯಾಗಿ ಪಾಲಿಸಲಿಕ್ಕೆ ಹತ್ತೇವೇನು? ಇದಕ್ಕ `ಇಲ್ಲ’ ಅನ್ನೋ ಯಾಷಿ ಮಾತಿನಗಿಂತಾ `ಕಮ್ಮಿ ಖರೇ’ ಅನ್ನೋ ಸಿಹಿಮಾತಿನ ಉತ್ತರನ ಸರಿ ಆದೀತು.
ಈ ಹಿನ್ನೆಲೆಯೊಳಗ ಒಂದು ವಿಷಯ ನೆನಪು ಆಗತದ.

`ಅವರು ಭಾಳ ಪ್ರತಿಭಾವಂತರು, ಒಳ್ಳೆಯವರು, ಇತರರಿಗೆ ಮಾದರಿಯಾಗಬಲ್ಲವರು ಆದರೆ ಅವರಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ” ಅನ್ನೋದು ಏನದಲಾ, ಅದು ನಂ ಹಿಂದೂಸ್ತಾನದಾಗ ಕೇಳಿ ಬರಕೋತನ ಇರೋ ಸಿಕ್ಕಾಪಟ್ಟೆ ಕೂಗುಗಳೊಳಗ ಒಂದು. ಈ ಮಾತಿಗೆ ತಕ್ಕಂತೆ ಇದ್ದ ಒಬ್ಬ ದೊಡ್ಡ ಮನಿಷ ಅಂದರ ಮಾಜಿ ಉಪಪ್ರಧಾನಿ, ಪ್ರಕಾಂಡಪಂಡಿತ ಬಾಬು ಜಗಜೀವನರಾಂ. ಅವರ ಧರ್ಮಪತ್ನಿ ಇಂದ್ರಾಣಿ ದೇವಿ. ಕಾನಪುರದ ಸಾಮಾಜಿಕ ಕಾರ್ಯಕರ್ತರ ಮಗಳಾದ ಇಂದ್ರಾಣಿ ದೇವಿ ಅವರು ಒಂದು ಪುಸ್ತಕ ಬರೆದರು ಅದರ ಹೆಸರು `ದೇಖಿ, ಸುನಿ, ಬೀತಿ ಬಾತೆಂ’ (ನೋಡಿದ, ಕೇಳಿದ, ಆಗಿ ಹೋದ ಮಾತುಗಳು).

ಅದರೊಳಗ ಒಂದು ಭಾರಿ ಮಜಾ ವಿಷಯ ಐತಿ. “ಅಮೆರಿಕಯಲ್ಲಿ ಬಿಳಿಯರು ಕರಿಯರಿಗೆ ಹಿಂಸೆ ಕೊಡಬಾರದು ಅಂತ ಅಬ್ರಹಾಂ ಲಿಂಕನ್ ಹಾಗೂ ಇತರ ನಾಯಕರು ಪ್ರಯತ್ನಿಸಿದಾಗ ಅಲ್ಲಿ ಭಯಂಕರ ಪ್ರತಿರೋಧ ಬಂತು. ಆದರೆ ಭಾರತದಲ್ಲಿ ಗುಲಾಮಗಿರಿ ಹಾಗೂ ಅಸ್ಪೃಶ್ಯತೆ ಯನ್ನು ಪ್ರತಿಬಂಧಿಸಿದಾಗ ಹಾಗಾಗಲಿಲ್ಲ” ಅನ್ನೋದು.

ಅದಕ್ಕೆ ಇಂದ್ರಾಣಿ ಅವರು ಕೊಡುವ ಕಾರಣ ಇನ್ನೂ ಮಜಾ. “ಯಾಕೆ ಗೊತ್ತೇ? ಈ ಕಾನೂನುಗಳನ್ನು ಈ ದೇಶದಲ್ಲಿ ಯಾರೂ ಸರಿಯಾಗಿ ಜಾರಿ ಮಾಡೋದಿಲ್ಲ. ಇಂತಹ ಎಷ್ಟು ಕಾನೂನು ಬಂದರೂ ಇಲ್ಲಿ ನಿಮ್ನ ವರ್ಗದ ಜನರ ಬದುಕು ಬದಲಾಗೋದಿಲ್ಲ” ಅಂತ ಅವರು ಷರಾ ಎಳೀತಾರ. ಆ ಪುಸ್ತಕ ಓದಿ ಕೆಳಗ ಇಡಬೇಕಾದರ ‘ಐವತ್ತು ವರ್ಷದ ಹಿಂದೆ ಹೇಳಿದ ಈ ಮಾತುಗಳು ಎಷ್ಟು ಪ್ರಸ್ತುತ’ ಅಂತ ಮತ್ತ ಕ್ಲೀಷೆಯೊಳಗ ಮಾತಾಡಬೇಕಾಗತದ.

ಹೆಚ್ಚಿನ ಮಾಹಿತಿಗೆ – ಇಲ್ಲಿ ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...