ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದಾಗ ಹೋಟೆಲ್ ಕೋಣೆಗಳಲ್ಲಿ ಇಬ್ಬರು ಲೈಂಗಿಕ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಆರೋಪ ಹೊತ್ತಿರುವ ಭಾರತದ ಇಬ್ಬರು ಪುರುಷರಿಗೆ ಶುಕ್ರವಾರ ತಲಾ ಐದು ವರ್ಷ ಜೈಲು ಶಿಕ್ಷೆಯ ಜೊತೆಗೆ 12 ಬೆತ್ತದ ಹೊಡೆತದ ಶಿಕ್ಷೆ ವಿಧಿಸಲಾಯಿತು.
23 ವರ್ಷದ ಅರೋಕ್ಯಸಾಮಿ ಡೈಸನ್ ಮತ್ತು 27 ವರ್ಷದ ರಾಜೇಂದ್ರನ್ ಮಯಿಲರಸನ್ ಎಂಬುವವರು ಬಲಿಪಶುಗಳ ದರೋಡೆ ಮಾಡಿ, ನೋವುಂಟು ಮಾಡಿದ್ದಕ್ಕಾಗಿ ಸ್ವಯಂಪ್ರೇರಣೆಯಿಂದ ತಪ್ಪೊಪ್ಪಿಕೊಂಡರು ಎಂದು ‘ದಿ ಸ್ಟ್ರೈಟ್ಸ್ ಟೈಮ್ಸ್’ ವರದಿ ಮಾಡಿದೆ.
ಅರೋಕ್ಯಸಾಮಿ ಮತ್ತು ರಾಜೇಂದ್ರನ್ ಏಪ್ರಿಲ್ 24 ರಂದು ರಜೆಗಾಗಿ ಭಾರತದಿಂದ ಸಿಂಗಾಪುರಕ್ಕೆ ಆಗಮಿಸಿದ್ದಾರೆ. ಎರಡು ದಿನಗಳ ನಂತರ, ಲಿಟಲ್ ಇಂಡಿಯಾ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಅವರನ್ನು ಸಂಪರ್ಕಿಸಿ ಲೈಂಗಿಕ ಸೇವೆಗಳಿಗಾಗಿ ಕಾರ್ಯಕರ್ತೆಯರನ್ನು ನೇಮಿಸಿಕೊಳ್ಳಲು ಆಸಕ್ತಿ ಹೊಂದಿದ್ದೀರಾ ಎಂದು ಕೇಳಿದರು. ನಂತರ, ಆ ವ್ಯಕ್ತಿ ಹೊರಡುವ ಮೊದಲು ಇಬ್ಬರು ಮಹಿಳೆಯರ ಸಂಪರ್ಕ ಮಾಹಿತಿಯನ್ನು ಅವರಿಗೆ ಒದಗಿಸಿದರು.
ಅರೋಕ್ಯಸಾಮಿಯು ರಾಜೇಂದ್ರನ್ ಅವರಿಗೆ ಹಣದ ಅಗತ್ಯವಿದೆ ಎಂದು ಹೇಳಿದರು. ಮಹಿಳೆಯರನ್ನು ಸಂಪರ್ಕಿಸಿ ಹೋಟೆಲ್ ಕೋಣೆಯಲ್ಲಿ ದರೋಡೆ ಮಾಡಲು ಸೂಚಿಸಿದರು, ರಾಜೇಂದ್ರನ್ ಅದಕ್ಕೆ ಒಪ್ಪಿದರು. ಆ ದಿನ ಸಂಜೆ 6 ಗಂಟೆಯ ಸುಮಾರಿಗೆ ಹೋಟೆಲ್ ಕೋಣೆಯಲ್ಲಿ ಒಬ್ಬ ಮಹಿಳೆಯನ್ನು ಭೇಟಿಯಾಗಲು ಅವರು ವ್ಯವಸ್ಥೆ ಮಾಡಿಕೊಂಡರು.
ಕೋಣೆಯೊಳಗೆ ಪ್ರವೇಶಿಸಿದ ಅವರು, ಬಲಿಪಶುವಿನ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿ, ಆಕೆಗೆ ಕಪಾಳಮೋಕ್ಷ ಮಾಡಿದರು. ಆಕೆಯ ಆಭರಣಗಳು, 2,000 ಸಿಂಗಾಪುರ ಡಾಲರ್ ನಗದು, ಪಾಸ್‌ಪೋರ್ಟ್ ಮತ್ತು ಬ್ಯಾಂಕ್ ಕಾರ್ಡ್‌ಗಳನ್ನು ದೋಚಿದರು.
ಆ ರಾತ್ರಿ, ರಾತ್ರಿ 11 ಗಂಟೆ ಸುಮಾರಿಗೆ, ಅವರು ಮತ್ತೊಂದು ಹೋಟೆಲ್‌ನಲ್ಲಿ ಎರಡನೇ ಮಹಿಳೆಯ ಭೇಟಿಗೆ ಸಮಯ ನಿಗದಿ ಮಾಡಿದರು. ಆಕೆ ಬಂದಾಗ ದರೋಡೆ ಮಾಡಿದರು. ರಾಜೇಂದ್ರನ್ ಆಕೆಯ ಕಿರುಚಾಟವನ್ನು ತಡೆಯಲು ಆಕೆಯ ಬಾಯಿಯನ್ನು ಮುಚ್ಚಿದ್ದಾನೆ.
ಅವರು 800 ಸಿಂಗಾಪುರ ಡಾಲರ್ ನಗದು, ಎರಡು ಮೊಬೈಲ್ ಫೋನ್‌ಗಳು ಮತ್ತು ಪಾಸ್‌ಪೋರ್ಟ್ ಅನ್ನು ಕದ್ದರು, ಅವರು ಹಿಂತಿರುಗುವವರೆಗೆ ಕೋಣೆಯಿಂದ ಹೊರಹೋಗದಂತೆ ಬೆದರಿಕೆ ಹಾಕಿದರು ಎಂದು ವರದಿಯಾಗಿದೆ.
ಮರುದಿನ, ಬಲಿಪಶು ವ್ಯಕ್ತಿಯೊಂದಿಗೆ ಈ ಬಗ್ಗೆ ಮಾತನಾಡಿದ್ದಾರೆ. ಬಳಿಕ, ಅರೋಕ್ಯಸಾಮಿ ಮತ್ತು ರಾಜೇಂದ್ರನ್ ಅವರ ಕೃತ್ಯಗಳು ಬಹಿರಂಗಗೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರೂ ಪುರುಷರು ನ್ಯಾಯಾಧೀಶರಲ್ಲಿ ಕಡಿಮೆ ಶಿಕ್ಷೆಗೆಮನವಿ ಮಾಡಿದರು.
“ನನ್ನ ತಂದೆ ಕಳೆದ ವರ್ಷ ನಿಧನರಾದರು. ನನಗೆ ಮೂವರು ಸಹೋದರಿಯರಿದ್ದಾರೆ, ಅವರಲ್ಲಿ ಒಬ್ಬರಿಗೆ ಮದುವೆಯಾಗಿದೆ, ನಮ್ಮ ಬಳಿ ಹಣವಿಲ್ಲ. ಅದಕ್ಕಾಗಿಯೇ ನಾವು ಇದನ್ನು ಮಾಡಿದ್ದೇವೆ” ಎಂದು ದುಭಾಷಿಯೊಬ್ಬರ ಮೂಲಕ ಮಾತನಾಡಿದ ಅರೋಕ್ಯಸಾಮಿ, “ನನ್ನ ಹೆಂಡತಿ ಮತ್ತು ಮಗು ಭಾರತದಲ್ಲಿ ಒಂಟಿಯಾಗಿದ್ದಾರೆ, ಅವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ” ಎಂದು ಹೇಳಿದರು.
ದರೋಡೆಯ ಸಮಯದಲ್ಲಿ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವವರಿಗೆ ಐದರಿಂದ 20 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 12 ಬೆತ್ತದ ಹೊಡೆತಗಳನ್ನು ಎದುರಿಸಬೇಕಾಗುತ್ತದೆ ಎಂದು ಸಿಂಗಾಪುರ್ ಡೈಲಿ ವರದಿ ಮಾಡಿದೆ.
ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಕಟ್ಟಾ ಸಂಪ್ರದಾಯವಾದಿ ‘ಸನೇ ತಕೈಚಿ’


