Homeಮುಖಪುಟಹಿಂದೂ ಸಂತ್ರಸ್ತರ ಮನೆಗೆ ಭೇಟಿಕೊಟ್ಟು ಮುಸ್ಲಿಂ ಸಂತ್ರಸ್ತರ ಮನೆಗೆ ಹೋಗದ ಯಪಿ ಸಚಿವ. ಭಾರೀ ಟೀಕೆ...

ಹಿಂದೂ ಸಂತ್ರಸ್ತರ ಮನೆಗೆ ಭೇಟಿಕೊಟ್ಟು ಮುಸ್ಲಿಂ ಸಂತ್ರಸ್ತರ ಮನೆಗೆ ಹೋಗದ ಯಪಿ ಸಚಿವ. ಭಾರೀ ಟೀಕೆ…

- Advertisement -
- Advertisement -

ಕಳೆದ ಶುಕ್ರವಾರ ನಡೆದ ಹಿಂಸಾಚಾರದಲ್ಲಿ ಗಾಯಾಳುಗಳಾದ ಪೀಡಿತರನ್ನು ಭೇಟಿಯಾಗಲು ಬಿಜ್ನೋರ್ ಜಿಲ್ಲೆಗೆ ಭೇಟಿ ನೀಡಿದ್ದ ಉತ್ತರ ಪ್ರದೇಶದ ಮಂತ್ರಿಯೊಬ್ಬರು ಪೌರತ್ವ ಕಾನೂನಿನ ವಿರುದ್ಧದ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ಮೃತಪಟ್ಟ ಇಬ್ಬರು ಮುಸ್ಲಿಂ ಪುರುಷರ ಕುಟುಂಬಗಳೊಂದಿಗೆ ಭೇಟಿಯಾಗಲು ನಿರಾಕರಿಸಿದ್ದರಿಂದ ವಿವಾದಕ್ಕೆ ಕಾರಣವಾಗಿದೆ.

ಸಚಿವ ಕಪಿಲ್ ದೇವ್ ಅಗರ್ವಾಲ್ ಅವರು ಜಿಲ್ಲೆಯ ನೆಹತೌರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡ ಓಂ ರಾಜ್ ಸೈನಿ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಲು ಹೋಗಿದ್ದರು. ಇದೇ ಪ್ರದೇಶದಲ್ಲಿ ಈ ಎರಡು ಸಾವುಗಳು ಸಂಭವಿಸಿವೆ.

ಸೈನಿ ಮತ್ತು ಅವರ ಕುಟುಂಬದೊಂದಿಗೆ ಭೇಟಿಯಾದ ನಂತರ ಬಿಜ್ನೋರ್‌ರ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ, ಅಗರ್ವಾಲ್ ಅವರನ್ನು ಇಬ್ಬರು ಮುಸ್ಲಿಂ ಪುರುಷರ ಕುಟುಂಬಗಳಿಗೆ ಏಕೆ ಭೇಟಿಕೊಡಲಿಲ್ಲ ಎಂದು ಕೇಳಲಾಯಿತು.

“ಸರ್ಕಾರ ಸಬ್ಕಾ ಸಾಥ್, ಸಬ್ಕಾ ವಿಕಾಸ್ (ಒಟ್ಟಾಗಿ, ಎಲ್ಲರಿಗೂ ಅಭಿವೃದ್ಧಿ)’ ಎಂದು ಹೇಳುತ್ತದೆ. ನೆಹತೌರ್‌ನಲ್ಲಿ ನೀವು ಓಂ ರಾಜ್ ಸೈನಿ ಅವರ ಮನೆಗೆ ಹೋಗಿದ್ದೀರಿ. ಪ್ರಿಯಾಂಕಾ ಗಾಂಧಿ ಸಹ ಅವರ ಕುಟುಂಬವನ್ನೂ ಭೇಟಿ ಮಾಡಿದರು, ಆದರೆ ನಂತರ ಅವರು ಸಾವನಪ್ಪಿದ ಇತರ ಎರಡು ಕುಟುಂಬಗಳಿಗೂ ಹೋದರು. ಆದರೆ ನೀವು ಆ ಕುಟುಂಬಗಳಿಗ ಹೋಗಲಿಲ್ಲ. ಇದು ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಈ ರೀತಿ ಹೇಗೆ ಆಗುತ್ತದೆ?” ಎಂದು ವರದಿಗಾರರೊಬ್ಬರು ಸಚಿವರನ್ನು ಪ್ರಶ್ನಿಸಿದರು.

ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ಬಿಜ್ನೋರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿಯಾದರು.

ಇದರಲ್ಲಿನ ಧರ್ಮದ ತಾರತಮ್ಯದ ಆರೋಪಗಳನ್ನು ಸ್ವೀಕರಿಸಲು ಸಚಿವರು ನಿರಾಕರಿಸಿದರು, “ನಾನು ಯಾಕೆ ಗಲಭೆಕೋರರ ಮನೆಗಳಿಗೆ ಹೋಗಬೇಕು. ನನ್ನ ಮಾತುಗಳನ್ನು ಕೇಳಿ. ಗಲಭೆ ಮತ್ತು ಭಾವೋದ್ರೇಕಗಳನ್ನು ಉಂಟುಮಾಡುವವರು ಹೇಗೆ ಸಮಾಜದ ಭಾಗವಾಗುತ್ತಾರೆ. ನಾನು ಯಾಕೆ ಅಲ್ಲಿಗೆ ಹೋಗಬೇಕು “ಇದು ಹಿಂದೂ-ಮುಸ್ಲಿಂ ಬಗ್ಗೆ ಅಲ್ಲ. ನಾನು ಯಾಕೆ ದಂಗೆಕೋರರ ಮನೆಗೆ ಏಕೆ ಹೋಗಬೇಕು?” ಎಂದಿದ್ದಾರೆ.

ಓಂ ರಾಜ್ ಅವರ ಕುಟುಂಬವು ಅವರು ಯಾವುದೇ ಗಲಾಟೆಗಳಲ್ಲಿ ಭಾಗಿಯಾಗಿರಲಿಲ್ಲ ಮತ್ತು ಅವರು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಗುಂಡು ಹಾರಿಸಿದಾಗ ಅವರು ಹೊಲಗಳಿಂದ ಹಿಂದಿರುಗುತ್ತಿದ್ದರು ಎಂದು ಸಚಿವರು ಹೇಳಿದ್ದಾರೆ.

ಧರ್ಮವನ್ನು ಪೌರತ್ವಕ್ಕೆ ಮಾನದಂಡವನ್ನಾಗಿ ಮಾಡುವ ಪೌರತ್ವ ಕಾಯ್ದೆಯ ವಿರುದ್ಧ ದೇಶದ ಹಲವಾರು ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆಯ ಸಮಯದಲ್ಲಾದ ಹಿಂಸಾಚಾರದಲ್ಲಿ ಉತ್ತರಪ್ರದೇಶದಾದ್ಯಂತ ಇಪ್ಪತ್ತೊಂದು ಜನರು ಸಾವನ್ನಪ್ಪಿದ್ದಾರೆ. ಸಚಿವರ ಈ ವರ್ತನೆಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರದ ಹಿಂಸಾಚಾರದ ಸಂದರ್ಭದಲ್ಲಿ ಬಿಜ್ನೋರ್‌ನಲ್ಲಿ ಐಎಎಸ್ ಆಕಾಂಕ್ಷಿಯಾದ 20 ವರ್ಷದ ಸುಲೇಮಾನ್ ಮತ್ತು 25 ವರ್ಷದ ಅನಸ್ ಮೃತಪಟ್ಟಿದ್ದಾರೆ. ಆರಂಭಿಕ ನಿರಾಕರಣೆಯ ನಂತರ, ಸ್ಥಳೀಯ ಪೊಲೀಸರ ಗುಂಡಿನಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ. ಆತ್ಮರಕ್ಷಣೆಗಾಗಿ ಅವರ ಮೇಲೆ ಗುಂಡು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸುಲೇಮಾನ್ ಅವರ ಕುಟುಂಬ ಇದನ್ನು ನಿರಾಕರಿಸಿದೆ ಮತ್ತು ಪ್ರತಿಭಟನೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...