ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ನರಹತ್ಯೆಯನ್ನು ಖಂಡಿಸಿ ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಹೊರಗೆ ಅಮೆರಿಕದ ವಾಯು ಪಡೆಯ ಅಧಿಕಾರಿಯೋರ್ವರು ಬೆಂಕಿ ಹಚ್ಚಿಕೊಂಡ ಬಗ್ಗೆ ವರದಿಯಾಗಿದೆ.
ಯುಎಸ್ ಅಧಿಕಾರಿಗಳು ವಾಯುವ್ಯ ವಾಷಿಂಗ್ಟನ್‌ನಲ್ಲಿರುವ ರಾಯಭಾರ ಕಚೇರಿಯ ಹೊರಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಕಿಯನ್ನು ನಂದಿಸಿದ್ದಾರೆ ಎಂದು ನಗರದ ಅಗ್ನಿಶಾಮಕ ಇಲಾಖೆಯ ವಕ್ತಾರ ವಿಟೊ ಮ್ಯಾಗಿಯೊಲೊ ಹೇಳಿದ್ದಾರೆ. ಗಂಭೀರ ಗಾಯಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಪ್ರತಿಭನಾಕಾರನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಮತ್ತು ಬೆಂಕಿ ಹಂಚಿಕೊಂಡ ಅಧಿಕಾರಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಅಮೆರಿಕದ ಮಾದ್ಯಮ ವರದಿ ಪ್ರಕಾರ, ಜನಾಂಗೀಯ ಹತ್ಯೆಯಲ್ಲಿ ಭಾಗಿಯಾಗುವುದಿಲ್ಲ, ಪ್ಯಾಲೆಸ್ತೀನ್‌ನ್ನು ಸ್ವತಂತ್ರಗೊಳಿಸಿ ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾಕಾರ ಬೆಂಕಿಯನ್ನು ಹಚ್ಚಿಕೊಂಡಿದ್ದಾರೆ. ಆತ್ಮಾಹುತಿಗೆ ಯತ್ನಿಸಿದ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ, ಅವರು ಟೆಕ್ಸಾಸ್ ಮೂಲದ ವಾಯುಪಡೆ ಅಧಿಕಾರಿ ಎಂದು ತಿಳಿದು ಬಂದಿದೆ.
ಪೊಲೀಸರು ಘಟನೆ ಹಿನ್ನೆಲೆ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಅನುಮಾನಾಸ್ಪದ ವಾಹನವನ್ನು ತನಿಖೆ ಮಾಡಿದ್ದಾರೆ. 4 ಗಂಟೆಗೆ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಪೂರ್ಣಗೊಳಿಸಲಾಗಿದೆ ಎಂದು ಪೊಲೀಸ್ ವಕ್ತಾರ ಸೀನ್ ಹಿಕ್ಮನ್ ಹೇಳಿದ್ದಾರೆ. ವಾಷಿಂಗ್ಟನ್‌ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರರಾದ ತಾಲ್ ನೈಮ್ ಪ್ರಕಾರ, ರಾಯಭಾರ ಕಚೇರಿಯ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಗಾಝಾದ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿಯನ್ನು ನಡೆಸುತ್ತಿದೆ. ಈವೆರೆಗೆ ಇಸ್ರೇಲ್ ದಾಳಿಗೆ ಗಾಝಾದಲ್ಲಿ 30,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದ್ದಾರೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯವನ್ನು ಇಡೀ ವಿಶ್ವವೇ ಖಂಡಿಸುತ್ತಿದೆ. ಗಾಝಾದಲ್ಲಿ ಕದನ ವಿರಾಮವನ್ನು ಒತ್ತಾಯಿಸುವ ಯುಎನ್‌ಎಸ್‌ಸಿ ಮಂಡಿಸಿದ ಮೂರನೇ ನಿರ್ಣಯವನ್ನು ಕೂಡ ಅಮೆರಿಕ ವಿಟೋ ಅಧಿಕಾರವನ್ನು ಬಳಸಿ ಇತ್ತೀಚೆಗೆ ತಡೆದಿದೆ. ಇದು ಅಮೆರಿಕಾದ ಅಮಾನವೀಯ ಕೃತ್ಯ, ಇಸ್ರೇಲ್ ನಡೆಸುತ್ತಿರುವ ನರಮೇಧಕ್ಕೆ ಅಮೆರಿಕ ಪಾಲುದಾರವಾಗಿದೆ ಎಂದು ವಿಶ್ವದ ಬಹುತೇಖ ರಾಷ್ಟ್ರಗಳು ಖಂಡನೆಯನ್ನು ವ್ಯಕ್ತಪಡಿಸಿತ್ತು. ಗಾಝಾದಲ್ಲಿ ನಾಗರಿಕರ ಸಾವಿನ ಸಂಖ್ಯೆ ಏರುತ್ತಲೇ ಇರುವುದರಿಂದ ವಾಷಿಂಗ್ಟನ್‌ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಮುಂದೆ ನಿರಂತವಾಗಿ ಪ್ರತಿಭಟನೆಗಳು ನಡೆಯುತ್ತಿದೆ.
ಇದನ್ನು ಓದಿ: ಕದನ ವಿರಾಮ ನಿರ್ಣಯ: ಉಲ್ಟಾ ಹೊಡೆದ ಯುಎಸ್: ಅಮೆರಿಕದ ಯುದ್ಧ ದಾಹಕ್ಕೆ ಜಗತ್ತಿನ ಹಲವು ರಾಷ್ಟ್ರಗಳು ಖಂಡನೆ


