Homeಮುಖಪುಟಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ ಉಡುಪಿ ವಿದ್ಯಾರ್ಥಿನಿಯರು: ಫೋಟೊ, ವಿಡಿಯೋ...

ಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ ಉಡುಪಿ ವಿದ್ಯಾರ್ಥಿನಿಯರು: ಫೋಟೊ, ವಿಡಿಯೋ ವೈರಲ್

ಈ ಫೋಟೊವನ್ನು ಸಾವಿರಾರು ಜನರು 'ಇದು ನನ್ನ ಭಾರತ' ಎಂಬ ಹೆಸರಿನೊಂದಿಗೆ ತಮ್ಮ ಪ್ರೊಫೈಲ್, ಕವರ್ ಫೋಟೊವನ್ನಾಗಿ ಹಂಚಿಕೊಂಡಿದ್ದಾರೆ.

- Advertisement -
- Advertisement -

ಯಾವ ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಕಾರಣಕ್ಕೆ ವಿದ್ಯಾರ್ಥಿಗಳನ್ನು ಕಾಲೇಜಿಗೆ ಪ್ರವೇಶ ನಿರಾಕರಿಸಿ ವಿವಾದ ಸೃಷ್ಟಿಸಲಾಯಿಯೊ ಅದೇ ಉಡುಪಿಯಲ್ಲಿ ವಿಭಿನ್ನ ಧರ್ಮದ ವಿದ್ಯಾರ್ಥಿನಿಯರು ಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ್ದಾರೆ. ಈ ಹೃದಯಸ್ಪರ್ಶಿ ಸಂದರ್ಭದ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಮೂಡಿಸಿವೆ.

ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು ಎಂಬ ವಿಷಯ ಹೈಕೋರ್ಟ್ ಪ್ರವೇಶಿಸಿತು. ತದನಂತರ ಮಧ್ಯಂತರ ಆದೇಶವನ್ನು ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡ ಕಾರಣ ಹಲವೆಡೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅಲ್ಲದೆ ರಾಜ್ಯ ಸರ್ಕಾರ 5 ದಿನಗಳ ರಜೆ ಘೋಷಿಸಿತ್ತು. ಅದಾದ ನಂತರ ಬುಧವಾರದಿಂದ ಶಾಲಾ-ಕಾಲೇಜುಗಳ ಮತ್ತೆ ಆರಂಭವಾಗಿವೆ. ಅಂದು ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಹಲವಾರು ವಿದ್ಯಾರ್ಥಿನಿಯರು ಕೈ ಕೈ ಹಿಡಿದು ಬಂದು ಸೌಹಾರ್ದ ಸಂದೇಶ ಸಾರಿದ್ದಾರೆ.

ಡೆಕ್ಕನ್ ಹೆರಾಲ್ಡ್‌ ಪತ್ರಿಕೆಯಲ್ಲಿ ಈ ಫೋಟೊ “ವಿಭಿನ್ನತೆಯಲ್ಲಿ ಏಕತೆ” ಹೆಸರಿನಲ್ಲಿ ಪ್ರಕಟಗೊಂಡಿತ್ತು. ಆ ಚಿತ್ರವನ್ನು ಹಂಚಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ “ನಾವು ಒಟ್ಟಾಗಿ ನಿಂತಿದ್ದೇವೆ. ನನ್ನ ಭಾರತ” ಎಂದು ಬರೆದುಕೊಂಡಿದ್ದಾರೆ.

“ಕೋಮುವಾದಿಗಳ ಆಟ ಬಹಳ ದಿನ ನಡೆಯದು. ನಮಗೆ ನಾಳೆಯ ಬಗ್ಗೆ ಭರವಸೆ ನೀಡುವುದು ಇಂತಹ ದೃಶ್ಯಗಳೇ” ಎಂದು ಹಿರಿಯ ಚಿಂತಕರಾದ ಶ್ರೀನಿವಾಸ ಕಾರ್ಕಳರವರು ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಮಗುವನ್ನು ತೋಳದಂತೆ ಹಿಂಬಾಲಿಸಿದ ಪತ್ರಕರ್ತನೆಲ್ಲಿ? ಕೆಳಗಿರುವ ಕವಿತೆಯಂಥಾ ಫೋಟೋ ತೆಗೆದ ಇರ್ಶಾದ್‌ ಎಲ್ಲಿ? ಎಂದು ಕನ್ನಡದ ಹಿರಿಯ ಚಿಂತಕರಾದ ಪುರುಷೋತ್ತಮ ಬಿಳಿಮಲೆಯವರು ಈ ಫೋಟೊವನ್ನು ಹಂಚಿಕೊಂಡಿದ್ದಾರೆ.

ಈ ನೆಲದ ಸಹಬಾಳ್ವೆಯ ತತ್ವ, ಪ್ರಭುತ್ವವನ್ನೂ ತಲೆಬಾಗಿಸಿದೆ…. ಎಂದು ದಯಾನಂದಗೌಡರವರು ಹಂಚಿಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ಹಿಜಾಬ್‌ಗೆ ವಿರೋಧವಾಗಿ ಕೇಸರಿ ಶಾಲು ಹಾಕಿಕೊಂಡು ಬಂದಿದ್ದು, ಕಾಲೇಜಿಗೆ ಕಲ್ಲು ತೂರಿದ್ದು, ಧ್ವಜಸ್ಥಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದು, ಮಂಡ್ಯದ ಮುಸ್ಕಾನ್ ಖಾನ್ ಎಂಬ ಹೆಣ್ಣು ಮಗಳ ಸುತ್ತುವರಿದು ಜೈಶ್ರೀರಾಮ್ ಕೂಗಿದ್ದು, ಮಾಧ್ಯಮಗಳು ವಿದ್ಯಾರ್ಥಿನಿಯರನ್ನು ಅಟ್ಟಾಡಿಸಿದ್ದು ಸಾಮಾಜಿಕ ವಾತವಾರಣವನ್ನು ಕಲುಷಿತಗೊಳಿಸಿದ್ದವು. ಈಗ ಉಡುಪಿಯ ವಿದ್ಯಾರ್ಥಿನಿಯರು ಒಟ್ಟಿಗೆ ಹೆಜ್ಜೆ ಹಾಕುವ ಮೂಲಕ ಬಾಂಧವ್ಯ ಮೆರೆದಿದ್ದಾರೆ. ಹಾಗಾಗಿ ಈ ಫೋಟೊವನ್ನು ಸಾವಿರಾರು ಜನ ತಮ್ಮ ಪ್ರೊಫೈಲ್, ಕವರ್ ಫೋಟೊವನ್ನಾಗಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ; Hijab Live | ಹಿಜಾಬ್ ಲೈವ್‌ | ವಿಚಾರಣೆ ಪ್ರಾರಂಭಿಸಿದ ನ್ಯಾಯಾಲಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

10 COMMENTS

  1. ಹಿಂದೆ ನಮಗೆ ಶಾಲೆಯಲ್ಲಿದ್ದ ಒಂದು ಕವನದಲ್ಲಿ ನೆನಪಿರುವ ಸಾಲುಗಳು.(ಕವನ ಬರೆದ ಕವಿವರ್ಯರ ಹೆಸರು ನೆನಪಿಲ್ಲ.)

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿಗೊಂದೆ
    ಭಾರತ ಮಂದಿರ
    ಶಾಂತಿ ದಾತನು ಗಾಂಧಿ ತಾತನು
    ಎದೆಯ ಬಾನಿನ ಚಂದಿರ

    ಜಾತಿ ರೋಗದ ಭೀತಿ ತೊಡೆಯುತ
    ನೀತಿ ಮಾರ್ಗದಿ ನಡೆವೆವು
    ಒಂದೆ ಮಾನವ ಕುಲವು ಎನ್ನುತ
    ವಿಶ್ವ ಧರ್ಮವ ಪಡೆವೆವು

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    (ಮುಂದಿನ ಸಾಲುಗಳು ನೆನಪಾಗುತ್ತಿಲ್ಲ. ಬಹುಶ ಕವನ ಇಷ್ಟೇ ಇತ್ತು ಅನ್ನಿಸುತ್ತೆ.)

  2. ಹಿಂದೆ ನಮಗೆ ಶಾಲೆಯಲ್ಲಿದ್ದ ಒಂದು ಕವನದಲ್ಲಿ ನೆನಪಿರುವ ಸಾಲುಗಳು.(ಕವನ ಬರೆದ ಕವಿವರ್ಯರ ಹೆಸರು ನೆನಪಿಲ್ಲ.)

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿಗೊಂದೆ
    ಭಾರತ ಮಂದಿರ
    ಶಾಂತಿ ದಾತನು ಗಾಂಧಿ ತಾತನು
    ಎದೆಯ ಬಾನಿನ ಚಂದಿರ

    ಜಾತಿ ರೋಗದ ಭೀತಿ ತೊಡೆಯುತ
    ನೀತಿ ಮಾರ್ಗದಿ ನಡೆವೆವು
    ಒಂದೆ ಮಾನವ ಕುಲವು ಎನ್ನುತ
    ವಿಶ್ವ ಧರ್ಮವ ಪಡೆವೆವು

    ನಾವು ಎಳೆಯರು ನಾವು ಗೆಳೆಯರು
    ಹೃದಯ ಹೂವಿನ ಹಂದರ
    ನಾಳೆ ನಾವೇ ನಾಡ ಹಿರಿಯರು
    ನಮ್ಮ ಕನಸದೊ ಸುಂದರ.

    (ಮುಂದಿನ ಸಾಲುಗಳು ನೆನಪಾಗುತ್ತಿಲ್ಲ.)

  3. ‘ ನಾವು ಎಳೆಯರು ನಾವು ಗೆಳೆಯರು ‘
    ಕವನ ರಚಿಸಿದ ಕವಿ
    ಶಂ . ಗು . ಬಿರಾದಾರ
    ಇವರು ನನ್ನ ತಂದೆ ಶಂಕರಗೌಡ ಗುರುಗೌಡ ಬಿರಾದಾರ ಇವರ ಪೂರ್ಣ ಹೆಸರು
    ನೆನಪಿಸಿದ ನಿಮಗೆ ಧನ್ಯವಾದಗಳು
    ಪೂರ್ಣ ಕವನ ಕಳಿಸುವೆ

    • ನಿಮಗೂ ಧನ್ಯವಾದಗಳು ಸರ್. ಸಾರ್ವಕಾಲಿಕ ಕವನ ಅದು. ಅದು ಆಡಿಯೋ ಇದ್ದರೆ ಕೊಡಿ.. ಮಕ್ಕಳಿಂದ ನೃತ್ಯ ಮಾಡಿಸಬೇಕು ಎಂದು ಕೆಲವರು ಕೇಳುತ್ತಿದ್ದಾರೆ.

  4. ಈ ಕವನ ರಚಿಸಿದವರು ಶಂ ಗು ಬಿರಾದಾರ
    ಪೂರ್ಣ ಹೆಸರು ಶಂಕರಗೌಡ ಗುರುಗೌಡ ಬಿರಾದಾರ
    ಇವರು ನನ್ನ ತಂದೆ ಪೂರ್ಣ ಕವನ ಕಳಿಸುವೆ

  5. ಸಿರಿಮನೆ ನಾಗರಾಜ್ ಸರ್
    ನನ್ನ ಹತ್ತಿರ ಆಡಿಯೋ ಇದೆ
    ದಯಮಾಡಿ ನನ್ನನ್ನು ಸಂಪರ್ಕಿಸಿ

  6. ಸಿರಿಮನೆ ನಾಗರಾಜ್ ಸರ್
    ನನ್ನ ಹತ್ತಿರ ಆಡಿಯೋ ಇದೆ
    ದಯಮಾಡಿ ನನ್ನನ್ನು ಸಂಪರ್ಕಿಸಿ
    9448776817 ಈ ನಂಬರನ್ನು ಸಂಪರ್ಕಿಸಿ

  7. Vijay sir ನನಗೂ ಒಂದು ವಿಡಿಯೋ ಕಳಿಸಿ. ಶಮ್. ಗು. ಬಿರಾದಾರ್ ಸರ್ ಆತ್ಮಕ್ಕೆ ಚಿರ ಋಣಿ.

  8. ಶಂ. ಗು. ಬಿರಾದಾರ ಸರ್ ಆತ್ಮಕ್ಕೆ ನಾನು ಚಿರಋಣಿ. ವಿಜಯ್ ಸರ್,ನನಗೂ ಒಂದು ವಿಡಿಯೊ ಬೇಕು.ನಮ್ಮ ಶಾಲೆಯ ಮಕ್ಕಳಿಗೆ ಕಾರ್ಯಕ್ರಮಕ್ಕೆ ಬೇಕು. ದಯವಿಟ್ಟು ‌‌‌ಸಂಪರ್ಕಿಸಬಹುದೆ!

LEAVE A REPLY

Please enter your comment!
Please enter your name here

- Advertisment -

ತೆಲಂಗಾಣದಲ್ಲಿ ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸುತ್ತೇವೆ: ಭಟ್ಟಿ ವಿಕ್ರಮಾರ್ಕ ಮಲ್ಲು

ರಾಜ್ಯದಲ್ಲಿ ರೋಹಿತ್ ವೇಮುಲಾ ಕಾಯ್ದೆಯನ್ನು ಆದಷ್ಟು ಬೇಗ ಜಾರಿಗೆ ತರಲಾಗುವುದು ಎಂದು ತೆಲಂಗಾಣ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು ಶನಿವಾರ ಹೇಳಿದ್ದಾರೆ. ಪ್ರಜಾ ಭವನದಲ್ಲಿ ಜಸ್ಟೀಸ್ ಫಾರ್ ರೋಹಿತ್ ವೇಮುಲಾ ಅಭಿಯಾನ ಸಮಿತಿಯ...

88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲು ; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ : ಸಿಎಂ ಸಿದ್ದರಾಮಯ್ಯ

ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶನಿವಾರ (ಜ.17) ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿದ ನಂತರ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಪೋಲೀಸ್ ಇಲಾಖೆ ಕೆಲವು...

ಇಂದೋರ್ ಕಲುಷಿತ ನೀರು ದುರಂತ : ಸಂತ್ರಸ್ತ ಕುಟುಂಬಗಳನ್ನು ಭೇಟಿಯಾದ ರಾಹುಲ್ ಗಾಂಧಿ

ಶನಿವಾರ (ಜ.17) ಮಧ್ಯಪ್ರದೇಶದ ಇಂದೋರ್‌ಗೆ ಭೇಟಿ ನೀಡಿದ ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಇತ್ತೀಚೆಗೆ ಸಂಭವಿಸಿದ ಕಲುಷಿತ ನೀರು ದುರಂತದ ಸಂತ್ರಸ್ತರನ್ನು ಭೇಟಿಯಾದರು. ಕಲುಷಿತ ನೀರು ಕುಡಿದು ವಾಂತಿ ಮತ್ತು...

ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್‌ಡಿಎ ಜೊತೆ ಯಾವುದೇ ಮೈತ್ರಿ ಇಲ್ಲ: ಓವೈಸಿ

ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಥವಾ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಜೊತೆ ಯಾವುದೇ ಮೈತ್ರಿ ಇರುವುದಿಲ್ಲ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ರಾಜ್ಯವಾದ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ...

ರೋಹಿತ್ ವೇಮುಲ ಕಾಯ್ದೆ ಘೋಷಣೆಯಲ್ಲ, ಅಗತ್ಯ : ರಾಹುಲ್ ಗಾಂಧಿ

ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲ ಜಾತಿ ತಾರತಮ್ಯಕ್ಕೆ ಬಲಿಯಾಗಿ ಇಂದಿಗೆ (17 ಜನವರಿ 2026) 10 ವರ್ಷಗಳಾಗಿದ್ದು, ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ರೋಹಿತ್ ಅವರನ್ನು ಸ್ಮರಿಸಿ ಸಾಮಾಜಿಕ...

ದೇವರು-ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ; ಬಿಜೆಪಿ ಕೌನ್ಸಿಲರ್‌ಗಳಿಗೆ ಕೇರಳ ಹೈಕೋರ್ಟ್ ನೋಟಿಸ್

ತಿರುವನಂತಪುರಂ ನಗರಸಭೆಯ ಬಿಜೆಪಿ ಕೌನ್ಸಿಲರ್‌ಗಳು ವಿವಿಧ ದೇವರು, ಹುತಾತ್ಮರು ಮತ್ತು ರಾಜಕೀಯ ಚಳುವಳಿಗಳ ಹೆಸರಿನಲ್ಲಿ ಮಾಡಿದ ಪ್ರಮಾಣವಚನಗಳ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯ ಕುರಿತು ಕೇರಳ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ...

ಮಧ್ಯಪ್ರದೇಶ: ಬುಡಕಟ್ಟು ವಿಶ್ವವಿದ್ಯಾಲಯ ಹಾಸ್ಟೆಲ್ ಒಳಗೆ ಅಸ್ಸಾಮಿ ವಿದ್ಯಾರ್ಥಿ ಮೇಲೆ ಗುಂಪು ಹಲ್ಲೆ

ಮಧ್ಯಪ್ರದೇಶದ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಯೊಳಗೆ ಐದು ಜನ ವಿದ್ಯಾರ್ಥಿಗಳ ತಂಡವು ಅಸ್ಸಾಮಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಗುಂಪು ಆತನಿಗೆ ಇಲ್ಲಿಯೇ ಸಾಯಬೇಕು ಎಂದು...

ಮಹಿಳೆಯರ ಜೊತೆ ಪುರುಷರಿಗೂ ಉಚಿತ ಬಸ್‌ ಪ್ರಯಾಣ, ಗ್ರಾಮೀಣರಿಗೆ 150 ಕೂಲಿ ದಿನ : ಎಐಎಡಿಎಂಕೆ ಚುನಾವಣಾ ಭರವಸೆ

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಶನಿವಾರ (ಜ.17) ಪಕ್ಷದ ಮೊದಲ ಹಂತದ ಪ್ರಣಾಳಿಕೆ (ಚುನಾವಣಾ ಭರವಸೆ) ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಂತೆ ಎಲ್ಲಾ ಪಡಿತರ...

ಛತ್ತೀಸ್‌ಗಢ| ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಸಾವು

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಕನಿಷ್ಠ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ವಾಯುವ್ಯ ಪ್ರದೇಶದ ಅರಣ್ಯ ಬೆಟ್ಟಗಳಲ್ಲಿ ಶನಿವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆಯಿತು. ಹಿರಿಯ...

ಮಮತಾ ಬ್ಯಾನರ್ಜಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಶುಕ್ರವಾರ (ಜ.16) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ 100 ಕೋಟಿ ರೂ.ಗಳ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಮತಾ...