ರಸ್ತೆಯ ಅವ್ಯವಸ್ಥೆಯತ್ತ ಜನಪ್ರತಿನಿಧಿಗಳ ಗಮನ ಸೆಳೆಯಲು ಉಡುಪಿಯ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಸೆ.13ರಂದು ಉಡುಪಿ ನಗರದ ಇಂದ್ರಾಳಿ ಸೇತುವೆಯ ಗುಂಡಿಗಳಿಗೆ ಆರತಿ ಸಲ್ಲಿಸಿ ರಸ್ತೆಯಲ್ಲಿ ಉರುಳು ಸೇವೆ ಮಾಡಿದ್ದಾರೆ.
‘ಉರುಳು ಸೇವೆ’ ಎಂಬುದು ಹರಕೆಯ ಈಡೇರಿಕೆಗಾಗಿ ದೇವಾಲಯಗಳ ಸುತ್ತ ನೆಲದ ಮೇಲೆ ಉರುಳುವ ಆಚರಣೆಯಾಗಿದೆ.
ತಮ್ಮ ಪ್ರತಿಭಟನೆಯ ಕುರಿತು ಒಳಕಾಡು ಅವರು ಪ್ರತಿಕ್ರಿಯಿಸಿ, “ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ ದಯನೀಯ ಸ್ಥಿತಿಯಲ್ಲಿದೆ. ಮೂರು ವರ್ಷಗಳ ಹಿಂದೆಯೇ ಟೆಂಡರ್ ಮಂಜೂರು ಮಾಡಲಾಗಿದ್ದರೂ ಯಾವುದೇ ಅಭಿವೃದ್ಧಿಯಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Nityananda Olakadu staged a protest against the deplorable condition of the road near Indrali bridge. As a mark of protest, he rolled over the pothole-filled roads in #Udupi. https://t.co/pYGENBMXVt
— Shivani Kava (@kavashivani) September 13, 2022
“ಯಾರೂ ಚಕಾರ ಎತ್ತುತ್ತಿಲ್ಲ, ಪ್ರತಿನಿತ್ಯ ಸಾವಿರಾರು ಜನ ಈ ರಸ್ತೆಯಲ್ಲಿ ಸಂಚರಿಸುತ್ತಾರೆ, ಮುಖ್ಯಮಂತ್ರಿಯವರೂ ಈ ರಸ್ತೆಯಲ್ಲಿ ಹಾದು ಹೋಗಿದ್ದಾರೆ. ರಸ್ತೆ ದುರಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಮಾರ್ಗದಲ್ಲಿ ಹಾದುಹೋಗಬೇಕಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಉಡುಪಿಯ ಜನರು ಮುಗ್ಧರು” ಎಂದಿರುವ ಅವರು, “ರಸ್ತೆಯಲ್ಲಿ ಬೀದಿ ದೀಪಗಳಿಲ್ಲದ ಕಾರಣ ಪ್ರತಿನಿತ್ಯ ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಇದೇ ಕಾರಣಕ್ಕೆ ಹಲವು ಹಸು, ಕರುಗಳು ಸಾವನ್ನಪ್ಪಿವೆ. ಹಸು, ಕರುಗಳ ಹೆಸರಿನಲ್ಲಿ ಮತ ಕೇಳುವವರಿಗೆ ರಸ್ತೆಯ ಶೋಚನೀಯ ಸ್ಥಿತಿ ಏಕೆ ಕಾಣುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.
ರಸ್ತೆಯ ಗುಂಡಿಗಳಿಗೆ ತೆಂಗಿನಕಾಯಿ ಒಡೆದು ಆರತಿ ಸಲ್ಲಿಸುವ ಮೂಲಕ ಪ್ರತಿಭಟನೆ ಆರಂಭಿಸಿದ್ದರು.
ರಸ್ತೆಗಳ ದುಃಸ್ಥಿತಿಯನ್ನು ಎತ್ತಿ ತೋರಿಸಲು ಈ ಹಿಂದೆಯೂ ವಿನೂತನ ರೀತಿಯಲ್ಲಿ ಕರ್ನಾಟಕದ ಜನರು ಪ್ರತಿಭಟನೆ ದಾಖಲಿಸಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ‘ಗಗನಯಾತ್ರಿ’ ಮೂನ್‌ವಾಕ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಹಿಂದಿನಿಂದಲೂ ರಸ್ತೆಯ ಗುಂಡಿಗಳಲ್ಲಿ ಕಲಾಕೃತಿಗಳನ್ನು ಬರೆಯುವ ಮೂಲಕ ಸರ್ಕಾರವನ್ನು ಎಚ್ಚರಿಸುತ್ತಾ ಬಂದಿದ್ದಾರೆ. 2019ರ ಸೆಪ್ಟೆಂಬರ್‌ನಲ್ಲಿ ಗಗನರಾತ್ರಿಯೊಬ್ಬರು ರಸ್ತೆಯಲ್ಲಿ ಚಲಿಸುತ್ತಿರುವಂತೆ ವಿಡಿಯೊ ಮಾಡಿ ಹರಿಬಿಟ್ಟಿದ್ದರು. ಬಾದಲ್ ಅವರ ಈ ಪ್ರಯೋಗಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
Hello bbmp👋 @BBMPCOMM @BBMP_MAYOR @bbm #thelatest #streetart #nammabengaluru #herohalli pic.twitter.com/hsizngTpRH
— baadal nanjundaswamy (@baadalvirus) September 2, 2019
ಅಕ್ಟೋಬರ್ 2019ರಲ್ಲಿ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟಿಸಿದ್ದರು. ರಸ್ತೆ ದುಸ್ಥಿತಿಯ ಸಮಸ್ಯೆ ಎಷ್ಟು ‘ಆಳ’ವಾಗಿದೆ ಎಂಬುದನ್ನು ಎತ್ತಿ ತೋರಿಸಲು ರಸ್ತೆ ಗುಂಡಿಯಲ್ಲಿ ‘ಮೀನುಗಾರಿಕೆ’ ಮಾಡಿದ್ದರು. ಜಿಲ್ಲೆಯ ದುರ್ಗಿಗುಡಿ, ತಿಲಕ್‌ನಗರ, ಗಾಂಧಿನಗರದಲ್ಲಿ ರಸ್ತೆ ಹದಗೆಟ್ಟಿರುವ ಬಗ್ಗೆ ವಿದ್ಯಾರ್ಥಿ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದ್ದರು.
What should I say?
I'm happy I'm not the only one with potholes in my city #Bengaluru.
Friends from #Shivamogga also face the same everyday.#potholes pic.twitter.com/KglbJMBUvw— Anushka Pandit (@anushkapandit12) October 25, 2019


