ಐದು ರಾಜ್ಯಗಳ ಚುನಾವಣೆಯ ನಂತರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ನಿರಂತರವಾಗಿ ಇಂಧನ ಬೆಲೆಗಳನ್ನು ಹೆಚ್ಚಿಸುತ್ತಿವೆ. ಕಳೆದ 12 ದಿನಗಳ ಹಿಂದೆ ಪ್ರಾರಂಭವಾಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವು ಶನಿವಾರ ಕೂಡಾ ಮುಂದುವರೆದಿದೆ. ಇಂದು ಲೀಟರ್‌ಗೆ ತಲಾ 80 ಪೈಸೆಗಳಷ್ಟು ಹೆಚ್ಚಿಸಲಾಗಿದ್ದು, ಕಳೆದ 12 ದಿನಗಳಲ್ಲಿ ಒಟ್ಟು 7.20 ರೂ. ಏರಿಕೆಯಾಗಿದೆ.
ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್ ದರವು ಈ ಹಿಂದೆ 101.81 ರೂ. ಇದ್ದು, ಇಂದಿನ ಬೆಲೆ ಏರಿಕೆಯ ನಂತರ 102.61 ತಲುಪಲಿದೆ. ಡೀಸೆಲ್ ದರ ಈ ಹಿಂದೆ 93.07 ರೂ. ಇದ್ದು, ಇಂದು 93.87 ರೂ.ಗೆ ಏರಿಕೆಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಈ ಏರಿಕೆಯಿಂದಾಗಿ ರಾಜ್ಯದಲ್ಲೂ ದರ ಹೆಚ್ಚಳವಾಗಿದ್ದು, ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 99 ಪೈಸೆ ಮತ್ತು 93 ಪೈಸೆ ಹೆಚ್ಚಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಸರಾಸರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 108.81 ರೂ. ಮತ್ತು 92.68 ರೂ. ಗೆ ಏರಿಕೆಯಾಗಿದೆ.
ಇದನ್ನೂ ಓದಿ: ಬಜರಂಗದಳ, VHPಯವರು ಸಮಾಜಘಾತುಕರು: ಎಚ್.ಡಿ ಕುಮಾರಸ್ವಾಮಿ
ಇಂದಿನ ಬೆಲೆ ಏರಿಕೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಇಂಧನ ದರ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 1.72 ರೂ. ಏರಿಕೆಯಾಗಿದ್ದು, ಡೀಸೆಲ್ ಬೆಲೆ 1.57 ರೂ. ಏರಿಕೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಕ್ರಮವಾಗಿ 109.82 ರೂ. ಮತ್ತು 93.47 ರೂ.ಗೆ ತಲುಪಿದೆ.
ಬೆಳಗಾವಿಯಲ್ಲಿ ಪೆಟ್ರೋಲ್ ಬೆಲೆ 1.40 ರೂ. ಏರಿಕೆಯಾಗಿದ್ದು, ಚಿತ್ರದುರ್ಗದಲ್ಲಿ 1.03 ರೂ., ದಾವಣಗೆರೆ 1.06 ರೂ, ಗದಗ 1.11 ರೂ. ಏರಿಕೆಯಾಗಿದೆ. ರಾಜ್ಯದ ಹಲವು ಜಿಲ್ಲೆಯಲ್ಲಿ ಸುಮಾರು ಒಂದು ರೂ.ಗಿಂತಲೂ ಹೆಚ್ಚು ಬೆಲೆ ಏರಿಕೆಯಾಗಿದೆ. ಅವುಗಳ ಕೆಳಗಿನಂತಿವೆ.
ಐದು ರಾಜ್ಯಗಳಲ್ಲಿ ಚುನಾವಣೆ ಇದ್ದುದರಿಂದ ಕಚ್ಚಾ ತೈಲ ಬೆಲೆ ಏರಿಕೆಯ ಹೊರತಾಗಿಯೂ ನಾಲ್ಕು ತಿಂಗಳ ಕಾಲ ಇಂಧನ ದರಗಳನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏರಿಸಿರಲಿಲ್ಲ. ಇದರ ಬಂತರ ದರ ಪರಿಷ್ಕರಣೆ ಮಾರ್ಚ್ 22 ರ ನಂತರ ಮತ್ತೆ ಪ್ರಾರಂಭವಾಗಿತ್ತು.
ಶುಕ್ರವಾರದಂದು ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸಿರಲಿಲ್ಲ. ಅದರ ಬದಲಿಗೆ ವಾಣಿಜ್ಯ ಉದ್ದೇಶಕ್ಕೆ ಬಳಸುವ 19 KG ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಏಕಾಏಕಿ 250ರೂ.ಗೆ ಏರಿಸಿ, ಗ್ರಾಹಕರ ಕಿಸೆಗೆ ಕನ್ನ ಹಾಕಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ಕರ್ನಾಟಕ ರಾಜಕೀಯ ಕ್ಷೇತ್ರಗಳ ಸಮೀಕ್ಷೆ; ಕುಮಟಾ-ಹೊನ್ನಾವರ: ’ಸಂಘ’ಕ್ಕೆ ಶಾಸಕ ಶೆಟ್ಟಿ ಸಹವಾಸ ಸಾಕಾಯಿತೇ?



Why u r not posting fuel or milk prices in Pakistan or srilanka today..
Milk price is more than petrol in these nabouring countries..
Caronna had made them flat..
But India is developing more than expected.
Why can’t u appreciate or tell the truth.
This news media is working like opposition party.
Never tells facts…allways finding faults to praise sm gangs is not journalism.
People are educated enough.
U will loose self-respect gradually..by publics.
Hope u r rich hobby media.
Sm income might hv been hit or blocked ur agenda..so u r now aggressive…
Eshwar alah tere nam
Not only Alah Jesus tere nam