Homeಕರ್ನಾಟಕ‘ಹಲಾಲ್‌ ವಿಚಾರದಲ್ಲಿ ನಾವು ಸಂಘಟನೆಗಳ ಪರವಾಗಿದ್ದೇವೆ’: ಕಿಡಿಗೇಡಿ ಕೃತ್ಯಗಳನ್ನು ಸಮರ್ಥಿಸಿಕೊಂಡ ಸಚಿವೆ ಜೊಲ್ಲೆ

‘ಹಲಾಲ್‌ ವಿಚಾರದಲ್ಲಿ ನಾವು ಸಂಘಟನೆಗಳ ಪರವಾಗಿದ್ದೇವೆ’: ಕಿಡಿಗೇಡಿ ಕೃತ್ಯಗಳನ್ನು ಸಮರ್ಥಿಸಿಕೊಂಡ ಸಚಿವೆ ಜೊಲ್ಲೆ

- Advertisement -
- Advertisement -

ಬಿಜೆಪಿ ಬೆಂಬಲಿತ ಸಂಘಟನೆಗಳು ರಾಜ್ಯದಲ್ಲಿ ಮುಸ್ಲಿಂ ದ್ವೇಷ ಹರಡುತ್ತಿರುವ ದುಷ್ಕಕೃತ್ಯವನ್ನು ರಾಜ್ಯ ಸರ್ಕಾರ ಮತ್ತೆ ಸಮರ್ಥಿಸಿಕೊಂಡಿದೆ. ರಾಜ್ಯ ಮುಜರಾಯಿ, ಹಜ್ ಮತ್ತು ವಕ್ಫ್‌ ಸಚಿವರಾಗಿರುವ ಶಶಿಕಲಾ ಜೊಲ್ಲೆ ಅವರು, ‘ಸಂಘಟನೆಗಳ ಪರವಾಗಿ ನಾವು ಇದ್ದೇವೆ’ ಎಂದು ಶನಿವಾರ ಹೇಳಿದ್ದಾರೆ.

ಹಲಾಲ್ ಮತ್ತು ಜಟ್ಕಾ ವಿವಾದದ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಬಿಜೆಪಿ ಬೆಂಬಲಿತ ಸಂಗಟನೆಗಳನ್ನು ಹಿಂದೂಪರ ಸಂಘಟನೆಗಳು ಎಂದು ಉಲ್ಲೇಖಿಸುತ್ತಾ, “ಸಂಘಟನೆಗಳು ಮಾಡುತ್ತಿರುವುದು ಸರಿಯನಿಸುತ್ತಿದೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

“ಈ ಸಂಘಟನೆಗಳು ಮಾಡುತ್ತಿರುವ ರೀತಿಯಲ್ಲಿ ಜಟ್ಕಾ ಕಟ್‌ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವ ಅಗತ್ಯವಿದೆ. ಯಾಕೆಂದರೆ ಬೇರೆ ದೇವರಿಗೆ ಅರ್ಪಿಸುವುದರಿಂದ ಸಮಸ್ಯೆ ಉದ್ಭವಿಸುತ್ತದೆ. ಈ ಸಂಘಟನೆಗಳ ಪರವಾಗಿ ನಾವು ಇದ್ದೇವೆ” ಎಂದು ಜೊಲ್ಲೆ ಹೇಳಿದ್ದಾರೆ.

ಇದನ್ನೂ ಓದಿ: ಹಲಾಲ್‌‌ ಮಾಂಸ ಮಾರಾಟ ಮಾಡಿದ ಅಂಗಡಿ ಮಾಲಿಕನಿಗೆ ಹಲ್ಲೆ: ಐವರು ಬಜರಂಗದಳದ ದುಷ್ಕರ್ಮಿಗಳು ಅರೆಸ್ಟ್‌

ಈ ನಡುವೆ ಶಿವಮೊಗ್ಗದಲ್ಲಿ ಮಾಂಸದ ಅಂಗಡಿಗೆ ನುಗ್ಗಿ ಅಂಗಡಿಯ ಮಾಲಿಕನಿಗೆ ಹಲ್ಲೆ ನಡೆಸಿ ಐವರು ಬಜರಂಗದಳದ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ದುಷ್ಕರ್ಮಿಗಳು ಅಂಗಡಿಯ ಮಾಲಕನಿಗೆ ಹಲಾಲ್ ಮಾಂಸ ಮಾರಾಟ ಮಾಡಬಾರದು ಎಂದು ತಾಕೀತು ಮಾಡಿದ್ದರು. ಈ ವೇಳೆ ಅಂಗಡಿ ಮಾಲಿಕ ಹಲಾಲ್ ಮಾಂಸ ಬೇಡವೆಂದರೆ ಬೇರೆ ಅಂಗಡಿಯಲ್ಲಿ ಖರೀದಿ ಮಾಡಿ ಎಂದು ಹೇಳಿದ್ದಕ್ಕೆ, ಅರೋಪಿಗಳು ಅವರಿಗೆ ಅವಾಚ್ಯ ಪದಗಳಲ್ಲಿ ಬೈದು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಐವರು ದುಷ್ಕರ್ಮಿಗಳು ಮಾಂಸದ ಅಂಗಡಿಯೊಳಗೆ ನುಗ್ಗಿ ಹಿಂದೂಗಳೇ ಇರುವ ಪ್ರದೇಶದಲ್ಲಿ ಮಾಂಸವನ್ನು ಮಾರಾಟ ಮಾಡುತ್ತಿದ್ದೀರಿ. ಹಲಾಲ್ ಮಾಂಸವನ್ನು ಮಾರಾಟ ಮಾಡದಂತೆ ತಾಕೀತು ಮಾಡಿದ್ದರು.

ಇದೇ ದುಷ್ಕರ್ಮಿಗಳು ಅಲ್ಲಿನ ಜನತಾ ಹೋಟೆಲ್‌‌ಗೆ ಕೂಡಾ ನುಗ್ಗಿ ಹಲಾಲ್ ಮಾಡಿರುವ ಮಾಂಸವನ್ನು ಮಾರಾಟ ಮಾಡದಂತೆ ಕೇಳಿಕೊಂಡಿದ್ದಾರೆ. ಈ ವೇಳೆ ವಾಗ್ವಾದಕ್ಕೆ ಇಳಿದಿದ್ದ ಸಿಬ್ಬಂದಿಯ ಮೇಲೆ ದಾಳಿ ಮಾಡಿದ್ದಾರೆ ಎಂದು ಕೂಡಾ ವರದಿಯಾಗಿದೆ. ಈ ಘಟನೆಯ ಬಗ್ಗೆ ಕೂಡಾ ಎಫ್‌ಐಆರ್‌ ದಾಖಲಾಗಿದೆ ಎಂದು ಜಿಲ್ಲಾ ಎಸ್‌ಪಿ ಲಕ್ಷ್ಮಿ ಪ್ರಸಾದ್‌ ಹೇಳಿದ್ದಾರೆ. ಎರಡೂ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಇದನ್ನೂ ಓದಿ: ಬಜರಂಗದಳ, VHPಯವರು ಸಮಾಜಘಾತುಕರು: ಎಚ್.ಡಿ ಕುಮಾರಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...