“ನಮ್ಮ ಕಡೆ ಉಗಾದಿ ವರ್‍ಸತೊಡಕೆಂದರೆ ಫೇಮಸ್ಸು. ನಮ್ಮ ದಲಿತ ಕೇರಿಯ ತುಂಬೆಲ್ಲಾ ಬಾಡಿನ ಗಮಲು. ಸಾಬರು ಮಾರುವ ದನದ ಬಾಡನ್ನು ತಂದು ಹಬ್ಬ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹಲಾಲ್ ಕಟ್ಟೋ, ಜಟ್ಕಾ ಕಟ್ಟೋ ಎಂದು ಯಾವತ್ತೂ ಕೇಳಿಲ್ಲ. ಕೆಲವು ದಿನಗಳಿಂದ ಈ ವಿವಾದ ಉಂಟಾಗಿದೆ. ಮುಸ್ಲಿಮರ ಬಳಿ ಮಾಂಸ ತಗೊಳ್ಳಬೇಡಿ, ಅವರು ಹಲಾಲ್ ಮಾಡ್ತಾರೆ ಎಂದು ಹಬ್ಬಿಸುತ್ತಿದ್ದಾರೆ. ಇವರ ಮಾತಿನಂತೆಯೇ ಜಟ್ಕಾ ಮಾಂಸವನ್ನೇ ತಗೊಳ್ಳೋಣ. ಆದರೆ ನಮಗೆ ಬೇಕಾದ ಪ್ರಾಣಿಯ ಮಾಂಸ ಇವರ ಬಳಿ ಸುಗುತ್ತಾ?”
– ಹೀಗೆ ಕೇಳುತ್ತಾರೆ ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ನಿವಾಸಿ ಮಹೇಶ್. ದಲಿತ ಸಮುದಾಯಕ್ಕೆ ಸೇರಿದ ಮಹೇಶ್ ಕೇಳುತ್ತಿರುವ ಪ್ರಶ್ನೆ ಕೇವಲ ಅವರೊಬ್ಬರದ್ದಲ್ಲ. ಅಲಕ್ಷಿತ ಸಮುದಾಯಗಳ ಹಲವಾರು ಪ್ರಜ್ಞಾವಂತರು ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಮುಸ್ಲಿಂ ದ್ವೇಷಕ್ಕಾಗಿಯೇ ಯುಗಾದಿ ಹಬ್ಬದ ಸನ್ನಿವೇಶವನ್ನು ಬಳಸಿಕೊಂಡು ‘ಜಟ್ಕಾ ಕಟ್’ ಎಂಬ ವಿಧಾನವನ್ನು ಮತೀಯ ಸಂಘಟನೆಗಳು ಪ್ರಸ್ತಾಪಿಸುತ್ತಿವೆ. ಮುಸ್ಲಿಮರು ಮಾಡುವ ‘ಹಲಾಲ್ ಕಟ್’ಗೆ ವಿರುದ್ಧವಾಗಿ ಹಿಂದೂಗಳು ‘ಜಟ್ಕಾ ಕಟ್’ ಮಾಡಬೇಕು ಎಂಬ ವಾದವನ್ನು ಮಾಡಲಾಗುತ್ತಿದೆ.
“ಶಾಲಾ ಮಕ್ಕಳ ಮೊಟ್ಟೆಗೂ ವಿರೋಧಿಸುತ್ತಿದ್ದವರು ಈಗ ಪ್ರಾಣಿವಧೆಯ ವಿಧಾನದ ಬಗ್ಗೆ ಪುಂಕಾನುಪುಂಕವಾಗಿ ಭಾಷಣ ಮಾಡುತ್ತಿದ್ದಾರೆ. ಇದು ಬೂಟಾಟಿಕೆಯ ಪರಮಾವಧಿ. ಮುಸ್ಲಿಂ ದ್ವೇಷ ಇವರಿಗೆ ಮುಖ್ಯವೇ ಹೊರತು ಬೇರೇನೂ ಅಲ್ಲ” ಎನ್ನುತ್ತಾರೆ ಚಾಮರಾಜನಗರ ಜಿಲ್ಲೆಯ ಮಧುಸೂದನ್.
ಇದನ್ನೂ ಓದಿರಿ: ಕೋಮುದ್ವೇಷದ ವಿರುದ್ಧ ಪಾದಯಾತ್ರೆ ಮಾಡುವೆ: ಎಚ್.ಡಿ.ಕುಮಾರಸ್ವಾಮಿ
ಯುಗಾದಿ ಹಬ್ಬದ ಈ ಸಂದರ್ಭದಲ್ಲಿ ‘ಜಟ್ಕಾ ಕಟ್’ ಎಂಬುದು ಮುನ್ನೆಲೆಗೆ ಬಂದಿರುವುದು ಏತಕ್ಕೆಂದು ಕೇಳುತ್ತಿದ್ದಾರೆ. ಹಿಂದೂ, ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕುತ್ತಿರುವಾಗ, ಮತೀಯ ಸಂಘಟನೆಗಳು ರಾಜಕಾರಣದ ಕಾರಣಕ್ಕಾಗಿ ಸಮುದಾಯಗಳ ನಡುವೆ ಗೋಡೆಯನ್ನು ಕಟ್ಟುತ್ತಿವೆ.
“ಹಿಂದೂಗಳು ಮುಸ್ಲಿಮರೊಂದಿಗೆ ವ್ಯಾಪಾರ ಮಾಡಬಾರದು. ಹಲಾಲ್ ಕಟ್ ಬದಲು, ಜಟ್ಕಾ ಕಟ್ ಮಾಂಸ ಖರೀದಿಸಬೇಕು. ಹಿಂದೂಗಳ ಹಬ್ಬವಾದ ಯುಗಾದಿಯಲ್ಲಿ ಮುಸ್ಲಿಮರ ಹಲಾಲ್ ಕಟ್ ಮಾಂಸ ಖರೀದಿಸಬಾರದು” ಎಂದು ವಾಟ್ಸ್‌ಅಪ್‌ಗಳಲ್ಲಿ ಸಂದೇಶಗಳನ್ನು ಕಳುಹಿಸುತ್ತಿರುವವರ ಉದ್ದೇಶವೇನು? ದಲಿತರು ಮಾಂಸ ಮಾರಾಟ ಮಾಡಿದರೆ ಬೇರೆ ಜಾತಿಯವರು ಖರೀದಿಸುತ್ತಾರೆಯೇ? ಮುಸ್ಲಿಮರಂತೆಯೇ ದನದ ಮಾಂಸ ತಿನ್ನುವ ದಲಿತ ಸಮುದಾಯಕ್ಕೆ ‘ಜಟ್ಕಾ’ ಮಾಂಸ ಎಲ್ಲಿ ಸಿಗುತ್ತದೆ? – ಎಂಬ ಪ್ರಶ್ನೆಗಳು ಕೇಳಿಬಂದಿವೆ. ‘ನಾನುಗೌರಿ.ಕಾಂ’ ಜೊತೆ ಮಾತನಾಡಿರುವ ಹಲವು ದಲಿತ ಯುವಕರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಗುಬ್ಬಿಯ ಮಹೇಶ್ ಮಾತು ಮುಂದುವರಿಸಿ, “ನಮ್ಮೂರಿನ ಸುತ್ತಮುತ್ತ ನಾಲ್ಕೈದು ಮಾಂಸದ ಅಂಗಡಿಗಳಿದ್ದವು. ಅವುಗಳನ್ನು ಹಿಂದೂ ಸಮುದಾಯದವರೇ ನಡೆಸುತ್ತಿದ್ದರು. ಮಾಂಸ ಮಾರಾಟ ಮಾಡುವ ವಿಚಾರದಲ್ಲಿ ಮುಸ್ಲಿಂ ವರ್ತಕರಿಗಿದ್ದ ನೈಪುಣ್ಯತೆ ಈ ಹಿಂದೂ ವರ್ತಕರಿಗೆ ಬರಲಿಲ್ಲ. ಕೊನೆಗೆ ಅಂಗಡಿಯನ್ನು ಮುಸ್ಲಿಮರಿಗೆ ವಹಿಸಿದರು. ಒಂದು ವೇಳೆ ಮಾಂಸದಂಗಡಿ ಮಾಲೀಕ ಹಿಂದೂವಾಗಿದ್ದರೂ ಅಲ್ಲಿ ಮಾಂಸ ಕಟ್ ಮಾಡುವವರು ಮುಸ್ಲಿಮರೇ ಆಗಿರುತ್ತಾರೆ. ಈ ರೀತಿಯ ಅನ್ಯೋನ್ಯವಾಗಿರುವ ಸಮಾಜವನ್ನು ಯಾರೂ ಒಡೆದುಹಾಕಬಾರದು” ಎಂದರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಹಳ್ಳಿಯೊಂದರ ದಲಿತ ಕುಟುಂಬದ ರೇವಣ್ಣ, “ಜಟ್ಕಾ ಕಟ್ ಯಾವಾಗ ಹುಟ್ಟಿಕೊಂಡಿತು? ಕಾಳಿ ಸ್ವಾಮೀಜಿಯೇ ಇದಕ್ಕೆ ಉತ್ತರ ಹೇಳಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿರಿ: ಗದಗ: ತನ್ನ ಮನೆಯಲ್ಲೆ ಬಾಡಿಗೆಗೆ ವಾಸವಿರುವ ಸವರ್ಣೀಯ ವ್ಯಕ್ತಿಯಿಂದ ದಲಿತ ವಿಧವೆಯ ಮೇಲೆ ಹಲ್ಲೆ
“ನಮ್ಮ ಊರಿನ ಕಡೆ ಎಲ್ಲಾ ಜಾತಿಯವರು ಕುರಿ, ಕೋಳಿ ಅಂಗಡಿ ತೆರೆದಿದ್ದಾರೆ. ಆದರೆ ದಲಿತರಿಗೆ ಇದು ಸಾಧ್ಯವಾಗಿಲ್ಲ. ಯಾಕೆಂದರೆ ದಲಿತರು ಅಂಗಡಿ ತೆರೆದರೆ ಯಾರೂ ಮಾಂಸ ಖರೀದಿಸುವುದಿಲ್ಲ. ದಲಿತರ ಮಾಂಸದಂಗಡಿಯಲ್ಲಿ ಜಟ್ಕಾ ಮಾಂಸ ಸಿಗುತ್ತೆ ಎಂದು ಬೋರ್ಡ್ ಹಾಕಿದರೂ ದಲಿತೇತರರು ಬಂದು ಖರೀದಿಸುವುದಿಲ್ಲ. ಹಬ್ಬದ ಸಂದರ್ಭದಲ್ಲಿ ದಲಿತ ಕೇರಿಗಳಲ್ಲೇ ತಮಗೆ ಬೇಕಾದ ಪ್ರಾಣಿಯನ್ನು ಕಡಿದು ಹಂಚಿಕೊಳ್ಳಲಾಗುತ್ತದೆ. ಮುಸ್ಲಿಮರ ಹತ್ತಿರವೂ ಖರೀದಿಸುತ್ತಾರೆ. ಮಾಂಸ ಚೆನ್ನಾಗಿದ್ದರೆ, ಹಲಾಲೋ, ಜಟ್ಕಾನೋ ಯಾವುದನ್ನೂ ಲೆಕ್ಕಹಾಕಲ್ಲ” ಎಂದು ಅಭಿಪ್ರಾಯಪಟ್ಟರು ರೇವಣ್ಣ.
ಚಾಮರಾಜನಗರದ ಮಧುಸೂದನ್ ಮಾತನಾಡಿ, “ಹಬ್ಬದ ಸಂದರ್ಭದಲ್ಲಿ ದನದ ಮಾಂಸ ಬೇಕಾದಾಗ ಕೆಲವೊಮ್ಮೆ ದಲಿತ ಕೇರಿಯಲ್ಲೇ ಕಟ್ ಮಾಡಲಾಗುತ್ತಿತ್ತು. ಗುಡ್ಡೆ ಮಾಂಸ ಹಂಚಲಾಗುತ್ತಿತ್ತು. ಇನ್ನೂ ವರ್ಷಪೂರ್ತಿ ಮುಸ್ಲಿಮರ ಬಳಿಯೇ ಖರೀದಿಸಲಾಗುತ್ತದೆ. ಜಟ್ಕಾ ಅಥವಾ ಹಲಾಲ್ ನಡುವಿನ ವ್ಯತ್ಯಾಸ ನನಗೆ ಗೊತ್ತಿಲ್ಲ. ಆದರೆ ಸ್ಕೂಲ್‌ನಲ್ಲಿ ಮೊಟ್ಟೆ ಬೇಡ ಅನ್ನೋರು, ಕುರಿಯ ರಕ್ತದ ಫ್ರೈ ವಿರೋಧಿಸಿದವರು ಈಗ ನಮ್ಮ ಆಹಾರ ಕ್ರಮದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ” ಎಂದು ಕುಟುಕಿದರು.
ಇದನ್ನೂ ಓದಿರಿ: Explainer: ಹಲಾಲ್ ಹಾಗೆಂದರೇನು?
“ನಿಜವಾದ ಸಮಸ್ಯೆಗಳನ್ನು ಮರೆಮಾಚಲು ಇಂತಹ ವಿಷಯಗಳನ್ನು ಮಾತನಾಡುತ್ತಾರೆ. ಸುತ್ತಿ ಬಳಸಿ ಸಾಬರನ್ನು ವಿರೋಧಿಸುತ್ತಾರೆ. ಮನುಷ್ಯನಿಗೆ ಬೇಕಾಗಿರುವುದು ಆಹಾರ. ಅದು ಎಲ್ಲಿಂದ ಬಂದರೇನು? ಇವರ ಯೋಗ್ಯತೆಗೆ ಕನಿಷ್ಠ ಹಿಂದೂಗಳಿಗಾದರೂ ಉದ್ಯೋಗ ಸೃಷ್ಟಿ ಮಾಡಲಿಲ್ಲ. ನಾವು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಲ್ಲಿ ಇವರು ಹೇಳಿದ ಅಂಗಡಿಯಲ್ಲೇ ಮಾಂಸ ಖರೀದಿಸಬೇಕಾ? ಕೊಟ್ಟ ಮಾತಿನಂತೆ ಇವರೇನಾದರೂ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಮಾಡಿಬಿಟ್ಟಿದ್ದರೆ, ನಾವೇನಾದರೂ ಆ ಉದ್ಯೋಗವನ್ನು ಪಡೆದುಬಿಟ್ಟಿದ್ದರೆ ಮತ್ತೊಂದು ರೀತಿ ವಾದ ಮಾಡುತ್ತಿದ್ದರೇನೋ? ‘ನಾವು ನಿಮಗೆ ಕೆಲಸ ಕೊಟ್ಟಿದ್ದೀವಿ, ನಾವು ಹೇಳಿದಲ್ಲಿಯೇ ನೀವು ತಿನ್ನಬೇಕು’ ಎಂದು ನಿಯಮ ಮಾಡುತ್ತಿದ್ದರೇನೋ” ಎಂದರು ಮಧುಸೂದನ್.
ಹೆಸರು ಹೇಳಲಿಚ್ಛಿಸಿದ ಮೈಸೂರಿನ ದಲಿತ ವ್ಯಕ್ತಿಯೊಬ್ಬರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿ, “ನಮ್ಮ ಯುವಕರ ಮುಂದೆ ಜಟ್ಕಾ ಎಂದರೆ ನಗುತ್ತಾರೆ. ಜಟ್ಕಾ ಎಂಬುದಕ್ಕೆ ಲೈಂಗಿಕ ಸಂಬಂಧಿ ಅರ್ಥವಿದೆ. ಜಟ್ಕಾ ಮಾಂಸ ಎಂದರೆ ಜನರ ಮನಸ್ಸಿನಲ್ಲಿ ಯಾವ ಅರ್ಥಗಳು ಹುಟ್ಟಬಹುದು? ಅಂತಹ ಮಾಂಸವನ್ನು ತಿನ್ನಲು ಸಾಧ್ಯವೇ” ಎಂದು ಪ್ರಶ್ನಿಸಿದರು.
ಮುಂದುವರಿದು, “ಯುಗಾದಿ ಹಬ್ಬದ ಸಂದರ್ಭದಲ್ಲಿ ದಲಿತ ಕೇರಿಗಳಲ್ಲಿ ದನದ ಮಾಂಸ ಸಾಮಾನ್ಯ. ಕೆಲವು ಕಡೆ ದಲಿತರೇ ಮಾಂಸವನ್ನು ಕಟ್ ಮಾಡಿದರೆ, ಕೆಲವು ಕಡೆ ಮುಸ್ಲಿಮರಿಂದ ಖರೀದಿಸುತ್ತಾರೆ” ಎಂದರು.
ಇತ್ತೀಚೆಗೆ ನಡೆದ ಘಟನೆಯೊಂದನ್ನು ಹಂಚಿಕೊಂಡ ಬೆಂಗಳೂರಿನ ನಿವಾಸಿಯೊಬ್ಬರು, “ನಾನು ನಿನ್ನೆ ಚಿಕನ್ ತರಲು ಹೋಗಿದ್ದೆ. ಶ್ರೀ ವೆಂಕಟೇಶ್ವರ ಚಿಕನ್ ಸ್ಟಾಲ್ ಎಂದಿತ್ತು. ಒಂದು ಕೋಳಿಯನ್ನು ತೂಕಕ್ಕೆ ಹಾಕಿಸಿದ ಬಳಿಕ, ‘ಹೇಗಿದೆ ವ್ಯಾಪಾರ?’- ಎಂದೆ. ‘ವ್ಯಾಪಾರ ಡಲ್ ಆಗಿದೆ ಸರ್’ ಎಂದ ಅಂಗಡಿಯ ಯುವಕ. ‘ಇನ್ನೇನು ಯುಗಾದಿ ಬಂತು ಬಿಡಿ’ ಎಂದೆ. ಕೋಳಿ ಕತ್ತರಿಸುವ ಮುನ್ನ, ‘ನೀವು ಜಟ್ಕಾ ಕಟ್ ಮಾಡ್ತೀರೋ, ಹಲಾಲ್ ಕಟ್ ಮಾಡ್ತೀರೋ’ ಎಂದು ಪ್ರಶ್ನಿಸಿದೆ. ಆ ಹುಡುಗ ನನ್ನನ್ನು ಶ್ರೀರಾಮಸೇನೆಯ ಸದಸ್ಯನೆಂದು ಭಾವಿಸಿದನೇನೋ. ‘ಜಟ್ಕಾ ಕಟ್ ಮಾಡ್ತೀವಿ ಸರ್’ ಎಂದ. ಹಾಗಾದರೆ ನನಗೆ ಚಿಕನ್ ಬೇಡ, ನನಗೆ ಹಲಾಲ್ ಕಟ್ ಬೇಕು ಎಂದೆ. ‘ಸರ್ ಹಲಾಲ್ ಕಟ್ ಕೂಡ ಮಾಡ್ತೀವಿ’ ಎಂದ. ವ್ಯಾಪಾರಿಗಳೆಂದರೆ ಹೀಗೆ. ಅವರಿಗೆ ವ್ಯಾಪಾರ ಮಾತ್ರ ಮುಖ್ಯ. ಹಲಾಲ್ ಕಟ್ಟೋ, ಜಟ್ಕಾ ಕಟ್ಟೋ, ಮಾಂಸ ಚೆನ್ನಾಗಿರಬೇಕಷ್ಟೇ” ಎಂದು ನಕ್ಕರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿರಿ: ಭಾರತದ ಭಾವೈಕ್ಯತೆಯ ’ತಕ್ಕಡಿ’ಯಲ್ಲಿ ಭಿನ್ನ-ಭೇದವ ಮಾಡಬೇಡಿರೋ….



Maximum daliths are converted to Christianity from sm decades.
They hv been already divided by Hindus up to approximately good percentage.
They hv forgotten their culture ,hence food habits like Christianity and Muslims..
His statement can’t be considered since he is allways been trapped by communal lobbies.
Bcoz he was innocent.
For him hallal ,white ,black,brown,jatkaha,etc every thing he loves a lot..
Lots of false agendas we were following these years ..even in education books..
Better hv general knowledge wisely..or else false media and false leaders will guide u wrong way for targeting their enemies.
Dalith Christians sd be given Christianity hood certificates and cancel dalith facilities.
Kindly u fight or go for a pla against this.
Can u do this..being a truth honest media..
Or u r also like converted Indian