Homeಮುಖಪುಟನಿಮ್ಮ ದೌರ್ಬಲ್ಯದಿಂದಾಗಿ ನಮ್ಮ ಜನ ಸಾಯುತ್ತಿದ್ದಾರೆ: ನೋ-ಫ್ಲೈ ಝೋನ್ ಹೇರದ NATO ವಿರುದ್ಧ ಕಿಡಿಕಾರಿದ ಉಕ್ರೇನ್...

ನಿಮ್ಮ ದೌರ್ಬಲ್ಯದಿಂದಾಗಿ ನಮ್ಮ ಜನ ಸಾಯುತ್ತಿದ್ದಾರೆ: ನೋ-ಫ್ಲೈ ಝೋನ್ ಹೇರದ NATO ವಿರುದ್ಧ ಕಿಡಿಕಾರಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ನೋ-ಫ್ಲೈ ಝೋನ್ ಎಂದರೇನು? NATO ನಿರಾಕರಿಸಿದ್ದೇಕೆ? ಈ ಹಿಂದೆ ಎಲ್ಲೆಲ್ಲಿ ಬಳಸಲಾಗಿದ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.

- Advertisement -
- Advertisement -

ಉಕ್ರೇನ್‌ ಹಲವು ಪ್ರದೇಶಗಳಲ್ಲಿ ನೋ-ಫ್ಲೈ ಝೋನ್ (no-fly zone) ಹೇರಬೇಕೆಂಬ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಮನವಿಯನ್ನು NATO ನಿರಾಕರಿಸಿದೆ. ಇದರಿಂದ ಕ್ರೋಧಗೊಂಡಿರುವ ಝೆಲೆನ್ಸ್ಕಿ “ನಿಮ್ಮ ಈ ನಿರ್ಧಾರವು ಉಕ್ರೇನಿಯನ್ ನಗರಗಳು ಮತ್ತು ಹಳ್ಳಿಗಳ ಮೇಲೆ ಮತ್ತಷ್ಟು ಬಾಂಬ್ ದಾಳಿಗೆ ಹಸಿರು ನಿಶಾನೆ ನೀಡುತ್ತದೆ” ಎಂದು ಕಿಡಿಕಾರಿದ್ದಾರೆ.

“ಈ ದಿನದಿಂದ ಸಾಯುವ ಎಲ್ಲಾ ಜನರು ನಿಮ್ಮ (NATO) ಕಾರಣದಿಂದಾಗಿ ಸಾಯುತ್ತಾರೆ, ನಿಮ್ಮ ದೌರ್ಬಲ್ಯದಿಂದಾಗಿ, ನಿಮ್ಮ ಒಗ್ಗಟ್ಟಿನ ಕೊರತೆಯಿಂದಾಗಿ ಸಾಯುತ್ತಾರೆ” ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿಅವರು ಉಕ್ರೇನಿಯನ್ ಜನತೆಯ ಪ್ರತಿರೋಧದ ಶೌರ್ಯವನ್ನು ಶ್ಲಾಘಿಸಿದ್ದಾರೆ.

ಶುಕ್ರವಾರದ ದೂರದರ್ಶನದ ಭಾಷಣದಲ್ಲಿ ಮಾತನಾಡಿದ ಝೆಲೆನ್ಸ್ಕಿ “ಇಂದು ನ್ಯಾಟೋ ಶೃಂಗಸಭೆ ನಡೆಯುತ್ತಿದೆ. ಅದು ದುರ್ಬಲ ಮತ್ತು ಗೊಂದಲಮಯ ಶೃಂಗಸಭೆಯಾಗಿದೆ. ಯುರೋಪಿನ ಸ್ವಾತಂತ್ರ್ಯಕ್ಕಾಗಿ ಯುದ್ಧವನ್ನು ನಂಬರ್ ಒನ್ ಗುರಿ ಎಂದು ಶೃಂಗಸಭೆಯ ಎಲ್ಲರೂ ಪರಿಗಣಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಏನಿದು ನೋ-ಫ್ಲೈ ಝೋನ್?

ನಿರ್ದಿಷ್ಟ ವಾಯು ಪ್ರದೇಶದಲ್ಲಿ ನೋ-ಫ್ಲೈ ಝೋನ್ ಹೇರಿದಾಗ ಅದು ಹಾರಾಟ ನಿಷೇಧ ವಲಯವಾಗಿದ್ದು, ಅಲ್ಲಿ ಕೆಲವು ವಿಮಾನಗಳನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.
ಘರ್ಷಣೆಗಳು ಮತ್ತು ಯುದ್ಧಗಳ ಸಂದರ್ಭದಲ್ಲಿ ಸೈನಿಕ ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಮತ್ತು ಕಣ್ಗಾವಲು ನಡೆಸಲು ನಿಷೇಧಿತ ವಿಮಾನಗಳನ್ನು ವಾಯುಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಸಾಮಾನ್ಯವಾಗಿ ನೋ-ಫ್ಲೈ ಝೋನ್ ಹೇರಲಾಗುತ್ತದೆ.
ನೋ-ಫ್ಲೈ ಝೋನ್‌ಗಳನ್ನು ಮಿಲಿಟರಿ ಬಲ ಬಳಸಿಯೇ ಜಾರಿಗೊಳಿಸಬೇಕು. ಆ ಸಂದರ್ಭದಲ್ಲಿ ನಿಷೇಧಿತ ವಿಮಾನಗಳು ಪ್ರವೇಶಿಸಿದ್ದಲ್ಲಿ ಹೊಡೆದುರುಳಿಸಬಹುದು. ಇದರರ್ಥ ನಾಟೊ ತನ್ನ ಫೈಟರ್ ಜೆಟ್‌ಗಳನ್ನು ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ ಕಳಿಸಿಕೊಡಬೇಕು ಎಂಬುದೇ ಆಗಿದೆ.

ಉಕ್ರೇನ್ ಬಯಕೆಯೇನು?

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ದೇಶದ “ಮಹತ್ವದ ಭಾಗಗಳ” ಮೇಲೆ ನೋ-ಫ್ಲೈ ಝೋನ್ ಹೇರಬೇಕೆಂದು NATO, ಅಮೆರಿಕ ಮತ್ತು ಹಲವು ಯೂರೋಪ್ ದೇಶಗಳಲ್ಲಿ ಮನವಿ ಮಾಡಿದ್ದರು. ಇದರಿಂದ ರಷ್ಯಾ ದಾಳಿ ಮಾಡಲು ಆಗುವುದಿಲ್ಲ ಮತ್ತು ರಷ್ಯಾ ದಾಳಿಯನ್ನು ಹಿಮ್ಮೆಟ್ಟಿಸಬಹುದು ಎಂದು ಅವರು ನಂಬಿದ್ದರು. ಅದಕ್ಕಾಗಿ ಅಮೆರಿಕ ಮತ್ತು NATO ಬಳಿ ಹಲವಾರು ಬಾರಿ ಮನವಿ ಮಾಡಿದ್ದ ಅವರು ಯುದ್ಧವಿಮಾನಗಳನ್ನು ಒದಗಿಸಬೇಕು, ಆದ್ದರಿಂದ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು” ಎಂದು ವಾದಿಸಿದ್ದರು.

ನೋ-ಫ್ಲೈ ಝೋನ್ ಹೇರದಿರಲು ಕಾರಣವೇನು?

NATO, ಅಮೆರಿಕ ಅಥವಾ ಯೂರೋಪ್‌ನ ಯಾವುದೇ ದೇಶ ನೋ-ಫ್ಲೈ ಝೋನ್ ಹೇರಿದರೆ, ಅದನ್ನು ಜಾರಿಗೊಳಿಸಲು ಅವರೇ ಜವಾಬ್ದಾರರಾಗಿರುತ್ತಾರೆ. ಅಂದರೆ ನಿಷೇಧಿತ ರಷ್ಯಾದ ಮಿಲಿಟರಿ ವಿಮಾನಗಳ ವಿರುದ್ಧ ಹೋರಾಡಬೇಕಿರುತ್ತದೆ. “ನ್ಯಾಟೋ ಅದನ್ನು ಹೇರಿದರೆ ಮತ್ತು ನಾವು ರಷ್ಯಾದ ಒಂದು ವಿಮಾನವನ್ನು ಹೊಡೆದುರುಳಿಸಿದರೆ, ನಾವು ರಷ್ಯಾದೊಂದಿಗೆ ಯುದ್ಧದಲ್ಲಿದ್ದೇವೆ ಎಂದರ್ಥ. ಹಾಗಾಗಿ NATO ಅದನ್ನು ಬಯಸುವುದಿಲ್ಲ” ಎಂದು ನ್ಯೂ ಹೆವನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಹೊವಾರ್ಡ್ ಸ್ಟಾಫರ್ ಹೇಳುತ್ತಾರೆ.

NFZ ಗಳನ್ನು ಜಾರಿಗೊಳಿಸಿದ ಹಿಂದಿನ ಸಂಘರ್ಷಗಳಿಗಿಂತ ಭಿನ್ನವಾಗಿ ಈ ಬಾರಿ ರಷ್ಯಾವು ದೃಢವಾದ ಮತ್ತು ಹೆಚ್ಚು ಅತ್ಯಾಧುನಿಕ ಮಿಲಿಟರಿಯನ್ನು ಹೊಂದಿದೆ ಮತ್ತು ಪರಮಾಣು ಶಕ್ತಿಯಾಗಿದೆ, ಹಾಗಾಗಿ ಅದರ ವಿರುದ್ಧ ನಾಟೋ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ನಾಟೋ ವಾದವೇನು?

“ನಾವು ಉಕ್ರೇನ್‌ನ ಹತಾಶೆಯನ್ನು ಅರ್ಥಮಾಡಿಕೊಂಡಿದ್ದೇವೆ. ನ್ಯಾಟೋ ಫೈಟರ್ ವಿಮಾನಗಳನ್ನು ಉಕ್ರೇನ್‌ನ ವಾಯುಪ್ರದೇಶಕ್ಕೆ ಕಳುಹಿಸುವುದು ಮತ್ತು ರಷ್ಯಾದ ವಿಮಾನಗಳನ್ನು ಹೊಡೆದುರುಳಿಸುವ ಮೂಲಕ ಮಾತ್ರವೇ ನೋ ಫ್ಲೈ ಝೋನ್ ಅನ್ನು ಕಾರ್ಯಗತಗೊಳಿಸಲು ಸಾಧ್ಯ. ನಾವು ಅದನ್ನು ಮಾಡಿದರೆ, ಯುರೋಪ್‌ ಪೂರ್ಣ ಪ್ರಮಾಣದ ಯುದ್ಧದಲ್ಲಿ ಕೊನೆಗೊಳ್ಳುತ್ತದೆ. ಅಲ್ಲದೆ ಯುದ್ದವೂ ಇನ್ನೂ ಅನೇಕ ದೇಶಗಳನ್ನು ಒಳಗೊಂಡಿರುತ್ತದೆ ಮತ್ತು ಹೆಚ್ಚು ಜೀವಹಾನಿಯನ್ನು ಉಂಟುಮಾಡುತ್ತದೆ. ನಾವು ಈ ಸಂಘರ್ಷದ ಭಾಗವಾಗಿಲ್ಲ, ಮತ್ತು ಅದು ಉಲ್ಬಣಗೊಳ್ಳದಂತೆ ಮತ್ತು ಉಕ್ರೇನ್‌ನ ಆಚೆಗೆ ಹರಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ” ಎಂದು ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ.

ಅಮೆರಿಕ ಏನು ಹೇಳುತ್ತದೆ?

ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಶ್ವೇತಭವನವು NFZ ಅನ್ನು ಜಾರಿಗೊಳಿಸುವುದು ಸೇರಿದಂತೆ ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ಹೋರಾಡಲು ತಮ್ಮ ಪಡೆಗಳನ್ನು ಕಳುಹಿಸುವುದಿಲ್ಲ ಎಂದು ಪದೇ ಪದೇ ಹೇಳಿದ್ದಾರೆ. “ಇದು ಮೂಲಭೂತವಾಗಿ ಯುಎಸ್ ಮಿಲಿಟರಿ ರಷ್ಯಾದ ವಿಮಾನಗಳನ್ನು ಹೊಡೆದುರುಳಿಸುವ ಮತ್ತು ರಷ್ಯಾದೊಂದಿಗೆ ಸಂಭಾವ್ಯ ನೇರ ಯುದ್ಧವನ್ನು ಉಂಟುಮಾಡುವುದನ್ನು ನಾವು ತಪ್ಪಿಸಲು ಬಯಸುತ್ತೇವೆ” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಗುರುವಾರ ಹೇಳಿದ್ದರು.

ಇದುವರೆಗೂ NFZ ಗಳನ್ನು ಎಲ್ಲಿ ಹೇರಲಾಗಿದೆ

ಲಿಬಿಯಾ: ದೇಶದಲ್ಲಿ ದಾಳಿಯ ಬೆದರಿಕೆಯಲ್ಲಿರುವ ನಾಗರಿಕರನ್ನು ರಕ್ಷಿಸುವ ಕಾರಣ ನೀಡಿ ಯುಎನ್ ಸೆಕ್ಯುರಿಟಿ ಕೌನ್ಸಿಲ್ 2011 ರಲ್ಲಿ ಲಿಬಿಯಾದ ಮೇಲೆ ನ್ಯಾಟೋ ಮೂಲಕ ನೋ-ಫ್ಲೈ ಝೋನ್ ಅನ್ನು ಹೇರಿತ್ತು.

ಬೋಸ್ನಿಯಾ: NATO ಏಪ್ರಿಲ್ 1993 ರಿಂದ ಡಿಸೆಂಬರ್ 1995 ರವರೆಗೆ ಬೋಸ್ನಿಯಾದ ಮೇಲೆ ನೋ-ಫ್ಲೈ ಝೋನ್ ಅನ್ನು ಹೇರಿತ್ತು.

ಇರಾಕ್: 1991ರ ಕೊಲ್ಲಿ ಯುದ್ಧದ ನಂತರ U.S. ಮತ್ತು ಸಮ್ಮಿಶ್ರ ರಾಷ್ಟ್ರಗಳು ಇರಾಕ್‌ನಲ್ಲಿ ಎರಡು ನೋ-ಫ್ಲೈ ಝೋನ್ ಅನ್ನು ಹೇರಿದ್ದವು.

ಅಮೆರಿಕ ದೇಶವು ಹಲವೆಡೆ ನೋ-ಫ್ಲೈ ಝೋನ್ ಅನ್ನು ಹೇರಿದೆ.


ಇದನ್ನೂ ಓದಿ: ಬಹುಜನ ಭಾರತ; ಸೋತು ಗೆಲ್ಲುವುದೇ ಯುಕ್ರೇನ್?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...

‘ಮಜಾ ನಾ ಕರಾಯಾ ತೋ..ಪೈಸೆ ವಾಪಸ್’: ಭಾರತಕ್ಕೆ ನೇರ ಬೆದರಿಕೆ ಹಾಕಿದ ಪಾಕಿಸ್ತಾನ ಸೇನಾಧಿಕಾರಿ ಅಹ್ಮದ್ ಷರೀಫ್ ಚೌಧರಿ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಕಾಬೂಲ್ ಜೊತೆಗಿನ ಇಸ್ಲಾಮಾಬಾದ್‌ನ ನಡೆಯುತ್ತಿರುವ ಸಂಘರ್ಷದೊಂದಿಗೆ ಭಾರತವನ್ನು ಜೋಡಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ...