Homeಮುಖಪುಟನೆನಪಿನಿಂದ ಮಾಸದ ಡಿಸೆಂಬರ್-6

ನೆನಪಿನಿಂದ ಮಾಸದ ಡಿಸೆಂಬರ್-6

- Advertisement -
- Advertisement -

ಡಿಸೆಂಬರ್ 6 ಭಾರತದ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ. ಬಹು ವೈವಿದ್ಯತೆಯ ಈ ದೇಶಕ್ಕೆ ಜೀವಪರ, ಸಾಮಾಜಿಕ ನ್ಯಾಯ ಮತ್ತು ಸಮ ಸಮಾಜದ ಆಶಯಗಳನ್ನು ಒಳಗೊಂಡ ಉದಾತ್ತ ಸಂವಿಧಾನ ಕೊಟ್ಟ ಮಹಾನ್ ಚೇತನ ಡಾ. ಬಿ.ಆರ್ ಅಂಬೇಡ್ಕರ್ ಅವರ ‘ಮಹಾ ಪರಿನಿರ್ವಾಣ’ ಮತ್ತು ಬಾಬರಿ ಮಸೀದಿಯ ಧ್ವಂಸ ಘಟನೆ ನಡೆದ ದಿನವಾಗಿದೆ ಇದು.

ಡಿಸೆಂಬರ್‌ 6,1956 ರಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಮರಣ ಹೊಂದಿದರು. ಇದೇ ಡಿಸೆಂಬರ್ 6, 1992ರಂದು ಬಾಬರಿ ಧ್ವಂಸ ನಡೆಯಿತು. ಈ ಎರಡು ಘಟನೆಗಳು ಮತ್ತು ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗಳು ಪರಸ್ಪರ ಒಂದಕ್ಕೊಂದು ಸಂಬಂಧ ಹೊಂದಿವೆ.

ಅಂಬೇಡ್ಕರ್ ರಚಿಸಿದ ಸಂವಿಧಾನ ದೇಶವನ್ನು ಜಾತ್ಯಾತೀತ, ಪ್ರಜಾಪ್ರಭುತ್ವದ ನಾಡಾಗಿ ರೂಪಿಸಿದೆ. ದೇಶದ ಪ್ರತಿಯೊಬ್ಬರನ್ನೂ ಸಮಾನತೆಯಿಂದ ಕಾಣಬೇಕು ಎಂದು ಹೇಳಿದೆ. ಸಂವಿಧಾನ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ರಕ್ಷಿಸಿದೆ.

ಆದರೆ, 1992ರ ಬಾಬರಿ ಮಸೀದಿ ಧ್ವಂಸ ಮತ್ತು ಬಳಿಕ ನಡೆದ ಬೆಳವಣಿಗೆಗಳು ಸಂವಿಧಾನ ಆಶಯಗಳನ್ನು ಸಮಾಧಿ ಮಾಡಿತು. ಬಾಬಾ ಸಾಹೇಬರ ಪರಿನಿರ್ವಾಣ ದಿನವೇ ನಡೆದ ಬಾಬರಿ ಮಸೀದಿ ಧ್ವಂಸದಿಂದ ಸಂವಿಧಾನದ ಆಶಯಗಳೂ ನಿಬ್ಬಾನವಾಯಿತು.

ಸಂವಿಧಾನದ ಮೂಲ ಪ್ರತಿಯಲ್ಲಿ ಈಗಲೂ ಧಾರ್ಮಿಕ ಸ್ವಾತಂತ್ರ್ಯ, ಸಮಾನತೆ, ಧಾರ್ಮಿಕ ಆಚರಣೆ ಇತ್ಯಾದಿ ಹಕ್ಕುಗಳಿವೆ. ಆದರೆ, ಅವುಗಳು ಆಚರಣೆಯಲ್ಲಿ ಉಳಿದಿಲ್ಲ. ಪ್ರಸ್ತುತ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಗಳು ಅದಕ್ಕೆ ಪುಷ್ಠಿ ನೀಡುತ್ತಿವೆ.

ಬಾಬರಿ ಮಸೀದಿ ಧ್ವಂಸ ಸಂಬಂಧಿತ ಸಮಸ್ಯೆಗಳು ಸೃಷ್ಟಿಯಾದ ಬಳಿಕ ಪಿ.ವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್‌ ಸರ್ಕಾರ 1991ರಲ್ಲಿ ಆರಾಧನಾ ಸ್ಥಳಗಳ ಕಾಯ್ದೆ ಜಾರಿಗೆ ತಂದಿತು. ಅದರ ಪ್ರಕಾರ, ದೇಶಕ್ಕೆ ಸ್ವಾತಂತ್ರ್ಯ ಬರುವಾಗ ಧಾರ್ಮಿಕ ಸ್ಥಳಗಳ ಸ್ವರೂಪ ಹೇಗಿತ್ತೋ ಹಾಗೆಯೇ ಉಳಿಸಿಕೊಳ್ಳಬೇಕು, ಬದಲಾವಣೆ ಮಾಡಬಾರದು.

ಸಂವಿಧಾನ ಆಶಯಗಳನ್ನು ರಕ್ಷಿಸಲು ಜಾರಿಗೆ ಬಂದ ಈ ಕಾಯ್ದೆಯನ್ನು ನ್ಯಾಯಾಂಗವೇ ಮೂಲೆಗೆ ತಳ್ಳುವ ಮೂಲಕ ಅಧಿಕೃತವಾಗಿ ಸಂವಿಧಾನ ವಿರೋಧಿ ಅಭಿಯಾನಕ್ಕೆ ಅಡಿಗಲ್ಲು ಹಾಕಿ ಕೊಡುತ್ತಿದೆ.

ಬಾಬರಿ ಮಸೀದಿ ತೀರ್ಪು ಬಂದ ಬಳಿಕ, ಆ ರೀತಿಯ ಬೆಳವಣಿಗೆ ಮುಂದೆ ನಡೆಯಬಾರದು ಎಂಬ ಒತ್ತಾಯ ಕೇಳಿ ಬಂದಿತ್ತು. ಬಾಬರಿ ಮಸೀದಿ-ರಾಮ ಜನ್ಮಭೂಮಿ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ಪೀಠ ಕೂಡ 1991ರ ಆರಾಧನಾ ಕಾಯ್ದೆ ಸಂವಿಧಾನ ಆಶಯಗಳಿಗೆ ಪೂರಕವಾಗಿದೆ ಎಂದಿತ್ತು.

ಬಾಬರಿ ಮಸೀದಿ ತೀರ್ಪಿತ್ತಿದ ನ್ಯಾಯ ಪೀಠದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಕೂಡ ಇದ್ದರು. ಇದೇ ಚಂದ್ರಚೂಡ್ ಅವರು ಜ್ಞಾನವ್ಯಾಪಿ ಪ್ರಕರಣದಲ್ಲಿ ಆರಾಧನಾ ಸ್ಥಳಗಳ ಕಾಯ್ದೆಗೆ ಹೊಸ ವ್ಯಾಖ್ಯಾನವನ್ನು ಕೊಟ್ಟರು. ಆ ವ್ಯಾಖ್ಯಾನ ಈಗ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತಿದೆ.

“1991ರ ಆರಾಧನಾ ಸ್ಥಳಗಳ ಕಾಯ್ದೆಯು ಧಾರ್ಮಿಕ ಸ್ಥಳದ ಸ್ವರೂಪ ಬದಲಾವಣೆಯನ್ನು ನಿಷೇಧಿಸಿದ್ದರೂ, ಕೇವಲ ಸ್ಥಳವೊಂದರ ಧಾರ್ಮಿಕ ಲಕ್ಷಣವನ್ನು ಖಚಿತಪಡಿಸಿಕೊಳ್ಳುವುದು ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ” ಎಂದು ಚಂದ್ರಚೂಡ್ ಅವರು 2022ರಲ್ಲಿ ಜ್ಞಾನವ್ಯಾಪಿ ಪ್ರಕರಣದಲ್ಲಿ ಮೌಖಿವಾಗಿ ಹೇಳಿದ್ದರು.

“ನ್ಯಾಯಮೂರ್ತಿ ಚಂದ್ರಚೂಡ್ ಅವರು ತಾವೇ ಭಾಗವಾಗಿದ್ದ ಅಯೋಧ್ಯೆ ತೀರ್ಪನ್ನು ಈ ಮೂಲಕ ಉಲ್ಲಂಘಿಸಿದ್ದಾರೆ. ನ್ಯಾಯಾಂಗ ಕಾನೂನಿಗೆ ಬದ್ದವಾಗಿರಬೇಕು. ಆದರೆ, ಜ್ಞಾನವ್ಯಾಪಿ ಪ್ರಕರಣದಲ್ಲಿ ಅವರ ತೀರ್ಪು ಆಘಾತಕಾರಿ. ಚಂದ್ರಚೂಡ್ ಅವರು ಜಾತ್ಯಾತೀತತೆ ಮತ್ತು ಕಾನೂನಿನ ನಿಯಮಗಳ ಕುರಿತು ವಿಶ್ವದಾದ್ಯಂತ ಉಪನ್ಯಾಸಗಳನ್ನು ನೀಡುತ್ತಾರೆ. ಆದರೆ, ಅವರ ಜ್ಞಾನವ್ಯಾಪಿ ಕುರಿತ ತೀರ್ಪು ಇದೆಲ್ಲದಕ್ಕೂ ನೇರ ವಿರುದ್ದವಾಗಿದೆ” ಎಂದು ಇತ್ತೀಚೆಗೆ ಹಿರಿಯ ವಕೀಲ ದುಷ್ಯಂತ್ ದವೆ ಹೇಳಿದ್ದರು.

“ಚಂದ್ರಚೂಡ್ ಅವರು ಆರಾಧನಾ ಸ್ಥಳಗಳ ಕಾಯ್ದೆಗೆ ಹೊಸ ವ್ಯಾಖ್ಯಾನ ನೀಡಿ ಮಸೀದಿಗಳ ಸಮೀಕ್ಷೆಗೆ ಅನುಮತಿ ನೀಡುವ ಮೂಲಕ ಅವರು ಸಂವಿಧಾನ ಮತ್ತು ದೇಶಕ್ಕೆ ದೊಡ್ಡ ಅಪಚಾರ ಮಾಡಿದ್ದಾರೆ” ಎಂದು ದುಷ್ಯಂತ್ ದವೆ ದಿ ವೈರ್ ಸಂದರ್ಶನದಲ್ಲಿ ಕಣ್ಣೀರು ಹಾಕಿದ್ದಾರೆ.

ಚಂದ್ರಚೂಡ್ ಅವರು ಆರಾಧನಾ ಸ್ಥಳಗಳ ಕಾಯ್ದೆಗೆ ನೀಡಿರುವ ವ್ಯಾಖ್ಯಾನವೇ ಈಗ ದೇಶದಲ್ಲಿ ಮಸೀದಿ ಅಡಿ ಮಂದಿರ ಹುಡುಕುವ ಸಮಸ್ಯೆಗಳಿಗೆ ಮೂಲಕ ಕಾರಣ ಎಂದು ಕಾಂಗ್ರೆಸ್ ಕೂಡ ಆರೋಪಿಸಿದೆ.

ಬಾಬರಿ ಮಸೀದಿ ತೀರ್ಪಿನ ಬಳಿಕ, ಇನ್ನೊಂದು ಆ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂದು ದೇಶದ ಸಂವಿಧಾನ ಪರ ಮನಸ್ಸುಗಳು ಅಂದುಕೊಂಡಿತ್ತು. ಆರಾಧನಾ ಸ್ಥಳಗಳ ಕಾಯ್ದೆ ಅದಕ್ಕೆ ಒಂದು ಗೋಡೆಯಾಗಿ ಕಂಡಿತ್ತು.

ಆದರೆ, ವಾರಣಾಸಿಯ ಜ್ಞಾನವ್ಯಾಪಿ, ಮಥುರಾದ ಶಾಹಿ ಈದ್ಗಾ, ಸಂಭಾಲ್ ಶಾಹಿ ಜಾಮಾ ಮಸೀದಿ, ಅಜ್ಮೀರ್ ದರ್ಗಾ ಪ್ರಕರಣಗಳು ಮತ್ತೆ ಆತಂಕವನ್ನು ಸೃಷ್ಟಿಸಿದೆ. ಈ ಪ್ರಕರಣಗಳಲ್ಲಿ ಆರಂಭದಲ್ಲೇ ಅರ್ಜಿಗಳನ್ನು ತಿರಸ್ಕರಿಸುವ ಮೂಲಕ ಆರಾಧನಾ ಸ್ಥಳಗಳ ಕಾಯ್ದೆಯನ್ನು ಎತ್ತಿ ಹಿಡಿಯಬೇಕಿದ್ದ ನ್ಯಾಯಾಂಗ, ಅರ್ಜಿಗಳನ್ನು ಪುರಸ್ಕರಿಸಿ, ಸಮೀಕ್ಷೆಗೆ ಆದೇಶಿಸುವ ಮೂಲಕ ಆತಂಕವನ್ನು ಹೆಚ್ಚಿಸಿದೆ. ಈ ಮೂಲಕ ನ್ಯಾಯಾಂಗವೇ ಸಂವಿಧಾನ ವಿರೋಧಿ ಅಭಿಯಾನಕ್ಕೆ ಅಡಿಗಲ್ಲು ಹಾಕಿ ಕೊಡುತ್ತಿದೆ.

ಮಸೀದಿಗಳ ಸ್ವರೂಪ ಬದಲಾವಣೆಯಲ್ಲ ಸಮೀಕ್ಷೆ ಮಾತ್ರ ಎಂದು ಸಮರ್ಥಿಸಲಾಗುತ್ತಿದೆ. ಸ್ವರೂಪ ಬದಲಾವಣೆಗೆ ಅವಕಾಶ ಇಲ್ಲದಿರುವಾಗ ಸಮೀಕ್ಷೆಯ ಅಗತ್ಯವೇನಿದೆ? ಎಂದು ವಕೀಲ ದುಷ್ಯಂತ್ ದವೆ ದಿ ವೈರ್ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ದೇಶದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ದವಾದ ಆಡಳಿತ ವ್ಯವಸ್ಥೆ ಇರುವಾಗ, ಸಂವಿಧಾನ ಆಶಯಗಳನ್ನು ಎತ್ತಿ ಹಿಡಿಯಬೇಕಾದ ನ್ಯಾಯಾಂಗ ಕೂಡ, ನಿರ್ಧಿಷ್ಟ ಸಮುದಾಯಗಳು ಆತಂಕಪಡುವಂತಹ ಆದೇಶಗಳನ್ನು ಕೊಡುತ್ತಿರುವುದು ದೇಶ ಎಂತಹ ಶೋಚನೀಯ ಪರಸ್ಥಿತಿಯೆಡೆಗೆ ಸಾಗುತ್ತಿದೆ ಎಂಬುವುದನ್ನು ತೋರಿಸುತ್ತದೆ.

ಸರ್ವರ ಹಕ್ಕುಗಳನ್ನು ಎತ್ತಿ ಹಿಡಿದ ಸಂವಿಧಾನದ ರೂವಾರಿ ಬಾಬಾ ಸಾಹೇಬರ ಪರಿ ನಿರ್ವಾಣ ಮತ್ತು ಬಾಬರಿಯ ನಿರ್ಣಾಮದ ಈ ದಿನ ಸಂವಿಧಾನದ ಆಶಯಗಳನ್ನು ಆಶಯಗಳನ್ನು ರಕ್ಷಿಸುವ ಕಾರ್ಯಕ್ಕೆ ಧುಮುಕಬೇಕಿದೆ. ಇತಿಹಾಸವನ್ನು ಮೆಲುಕು ಹಾಕುವ ಮೂಲಕ ಭವಿಷ್ಯವನ್ನು ರೂಪಿಸಬೇಕಿದೆ.

ಇದನ್ನೂ ಓದಿ : “ಮಸೀದಿಗಳ ಸಮೀಕ್ಷೆಗೆ ಅನುಮತಿಸುವ ಮೂಲಕ ‘ಸಂವಿಧಾನಕ್ಕೆ ಅಪಚಾರ’ವೆಸಗಿದ ನ್ಯಾ. ಚಂದ್ರಚೂಡ್‌” : ದುಷ್ಯಂತ್ ದವೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...