Homeಅಂತರಾಷ್ಟ್ರೀಯಭಾರತ-ಚೀನಾ ಗಡಿವಿವಾದ ಮಧ್ಯಸ್ಥಿಕೆ ವಹಿಸಲು ಸಿದ್ದ: ಡೊನಾಲ್ಡ್‌ ಟ್ರಂಪ್‌

ಭಾರತ-ಚೀನಾ ಗಡಿವಿವಾದ ಮಧ್ಯಸ್ಥಿಕೆ ವಹಿಸಲು ಸಿದ್ದ: ಡೊನಾಲ್ಡ್‌ ಟ್ರಂಪ್‌

- Advertisement -
- Advertisement -

ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಸಮರ್ಥವಾಗಿ ಮಧ್ಯಸ್ಥಿಕೆ ವಹಿಸಲು ಅಮೆರಿಕವು ಸಿದ್ಧ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಈ ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅವರು ಪದೇ ಪದೇ ಪ್ರಸ್ತಾಪಿಸಿದ್ದರು. ಆದರೆ ಭಾರತ ಟ್ರಂಪ್‌ ಮಧ್ಯಪ್ರವೇಶವನ್ನು ನಿರಾಕರಿಸಿತ್ತು.

ಈಗ ಮತ್ತು ಅವರು “ಈಗ ಉಲ್ಬಣಗೊಂಡಿರುವ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧ ಎಂದು ಭಾರತ ಮತ್ತು ಚೀನಾ ಎರಡೂ ದೇಶಗಳಲ್ಲಿ ತಿಳಿಸಿದ್ದೇವೆ. ಧನ್ಯವಾದಗಳು!” ಎಂದು ಟ್ವೀಟ್ ಮಾಡಿದ್ದಾರೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಆಕ್ರಮಣಕಾರಿ ನೀತಿಯನ್ನು ಎದುರಿಸಲು ಭಾರತವು ಪೂರ್ವ ಲಡಾಖ್ ಗೆ ಹೆಚ್ಚಿನ ಯುದ್ಧ ಪಡೆಗಳನ್ನು ನಿಯೋಜಿಸಿದೆ. ಚೀನಾ ಸೇನೆಯ ನಿಯೋಜನೆಯ ಪ್ರಮಾಣ ಕೂಡಾ, ಈ ಕ್ರಮವು ಸ್ಥಳೀಯ ಮಿಲಿಟರಿ ಕಮಾಂಡರ್‌ಗಳಿಗೆ ಸೀಮಿತವಾಗಿಲ್ಲ ಬೀಜಿಂಗ್‌ನ ಅನುಮತಿಯನ್ನು ಹೊಂದಿದೆ ಎಂದು ಸೂಚಿಸುತ್ತದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿಯವರು ಕರೆದ ಸಭೆಯ ನಂತರ ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು “ಆಸ್ಟ್ರೇಲಿಯಾದಿಂದ, ಹಾಂಕಾಂಗ್ ನಿಂದ, ತೈವಾನ್ ನಿಂದ, ದಕ್ಷಿಣ ಚೀನಾ ಸಮುದ್ರದಿಂದ ಭಾರತಕ್ಕೆ ಮತ್ತು ಅಮೆರಿಕವರೆಗೆ, ಜಗಳಗಂಟ ಚೀನಾವು ಎಲ್ಲಾ ರೀತಿಯಲ್ಲೂ ಪ್ರಾಬಲ್ಯಕ್ಕಾಗಿ ಜಗತ್ತನ್ನು ದಿಟ್ಟಿಸುತ್ತಿದೆ” ಹೇಳಿದ್ದಾರೆ. ಪ್ರಧಾನ ಮಂತ್ರಿ ಮೋದಿಯವರು ಮಂಗಳವಾರ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.


ಇದನ್ನೂ ಓದಿ: ಲಡಾಕ್ ಬಳಿ ವಾಯುನೆಲೆ ವಿಸ್ತರಿಸಿ ಯುದ್ದ ವಿಮಾನಗಳನ್ನು ಸಜ್ಜುಗೊಳಿಸಿರುವ ಚೀನಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...