Homeಕರೋನಾ ತಲ್ಲಣಅನ್‌‌ಲಾಕ್‌-3.0: ಏನೇನಿರಲಿದೆ? ಇಲ್ಲಿದೆ ಮಾಹಿತಿ!

ಅನ್‌‌ಲಾಕ್‌-3.0: ಏನೇನಿರಲಿದೆ? ಇಲ್ಲಿದೆ ಮಾಹಿತಿ!

- Advertisement -

ಕೊರೊನಾ ಸಂಬಂಧಿತ ನಿರ್ಬಂಧಗಳಿಗೆ ರಾಜ್ಯ ಸರ್ಕಾರ ಶನಿವಾರ ಮತ್ತಷ್ಟು ಸಡಿಲಿಕೆ ಘೋಷಿಸಿದೆ. ಸಾರ್ವಜನಿಕ ಸಾರಿಗೆಯನ್ನು ಅದರ ಆಸನ ಸಾಮರ್ಥ್ಯದವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದ್ದು, ಶಿಕ್ಷಣ ಸಂಸ್ಥೆಗಳ ಮೇಲಿನ ನಿರ್ಬಂಧಗಳು ಹಾಗೆ ಉಳಿದಿವೆ.

ಮುಂದಿನ 15 ದಿನಗಳವರೆಗೆ ಈ ಕೆಳಗಿನ ಸಡಿಲಿಕೆ ಮತ್ತು ನಿರ್ಬಂಧಗಳು ಜಾರಿಯಲ್ಲಿರುತ್ತವೆ.

 • ಚಿತ್ರಮಂದಿರಗಳು / ಸಿನೆಮಾ ಹಾಲ್‌ಗಳು ಮತ್ತು ಪಬ್‌ಗಳ ಮೇಲಿನ ನಿರ್ಬಂಧಗಳು ಹಾಗೆ ಮುಂದುವರೆಯುತ್ತದೆ.
 • ಸ್ಪರ್ಧಾತ್ಮಕ ತರಬೇತಿ ಉದ್ದೇಶಕ್ಕಾಗಿ ಮಾತ್ರ ಈಜುಕೊಳಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
 • ಅಭ್ಯಾಸದ ಉದ್ದೇಶಕ್ಕಾಗಿ ಮಾತ್ರ ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳನ್ನು ತೆರೆಯಲಾಗುತ್ತದೆ.
 • ಎಲ್ಲಾ ಸಾಮಾಜಿಕ / ರಾಜಕೀಯ / ಕ್ರೀಡೆ / ಮನರಂಜನೆ / ಶೈಕ್ಷಣಿಕ / ಸಾಂಸ್ಕೃತಿಕ / ಧಾರ್ಮಿಕ ಕಾರ್ಯಗಳು / ಇತರ ಕೂಟಗಳು ಮತ್ತು ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ.
 • 100 ಕ್ಕಿಂತ ಹೆಚ್ಚು ಜನರನ್ನು ಒಳಗೊಳ್ಳದ ಮದುವೆ ಹಾಗೂ ಕೌಟುಂಬಿಕ ಕಾರ್ಯಗಳನ್ನು ನಡೆಸಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ: ಗೌರಿ ಲಂಕೇಶ್‌ ಹತ್ಯೆ ಪ್ರಕರಣ – ಪ್ರಭಾವಕ್ಕೆ ಒಳಗಾಗದೆ ಜಾಮೀನು ಅರ್ಜಿ ಇತ್ಯರ್ಥ ಮಾಡಿ: ಸುಪ್ರೀಂಕೋರ್ಟ್ 

 • ಶವಸಂಸ್ಕಾರ ಹಾಗೂ ಅಂತ್ಯಕ್ರಿಯೆಗಳನ್ನು ಗರಿಷ್ಠ 20 ಜನರೊಂದಿಗೆ ನಡೆಸಲು ಅನುಮತಿಸಲಾಗಿದೆ.
 • ದರ್ಶನಕ್ಕೆ ಮಾತ್ರ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಯಾವುದೇ ಸೇವೆಗಳನ್ನು ಮಾಡುವಂತಿಲ್ಲ.
 • ಸಾರ್ವಜನಿಕ ಸಾರಿಗೆಯನ್ನು ಅದರ ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
 • ಎಲ್ಲಾ ಅಂಗಡಿಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು, ಖಾಸಗಿ ಕಚೇರಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
 • ಮುಂದಿನ ಆದೇಶದವರೆಗೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು / ಟ್ಯುಟೋರಿಯಲ್ / ಕಾಲೇಜುಗಳು ಮುಚ್ಚಿಯೆ ಇರುತ್ತವೆ.
 • ರಾತ್ರಿ 9.00 ರಿಂದ ಬೆಳಿಗ್ಗೆ 5.00 ರವರೆಗೆ “ರಾತ್ರಿ ಕರ್ಫ್ಯೂ”ವನ್ನು ಮುಂದುವರೆಸಲಾಗಿದೆ, ಆದರೆ ವೀಕೆಂಡ್ ಕರ್ಫ್ಯೂ ಇರುವುದಿಲ್ಲ.

ಇದರ ಮೇಲೆ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರಿಸ್ಥಿತಿಯ ಆಧಾರದ ಮೇಲೆ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿದ ನಂತರ, ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ವಿಧಿಸಬಹುದಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ v/s ಡಿಕೆ ಶಿವಕುಮಾರ್‌‌: ರಾಜ್ಯ ಕಾಂಗ್ರೆಸ್‌‌ನಲ್ಲಿ ಎಲ್ಲವೂ ಸರಿಯಿಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial