Homeಮುಖಪುಟಕೆಂಪು ಕೋಟೆಯಲ್ಲಿ ಅಹಿತಕರ ಘಟನೆ: ದೀಪ್ ಸಿಧು ವಾರ ಮೊದಲೇ ತಯಾರಿ ನಡೆಸಿದ್ದನೆ?

ಕೆಂಪು ಕೋಟೆಯಲ್ಲಿ ಅಹಿತಕರ ಘಟನೆ: ದೀಪ್ ಸಿಧು ವಾರ ಮೊದಲೇ ತಯಾರಿ ನಡೆಸಿದ್ದನೆ?

‘ಪಿಕ್ಷರ್ ಅಭಿ ಬಾಕಿ ಹೈ : 26ಕ್ಕೆ ಏನಾಗುತ್ತೋ ನಮ್ಮ ಕೈಲಿಲ್ಲ, ಅದು ದೇವರಾಟ’ ಎಂದು ಕೆಂಪುಕೋಟೆಯಲ್ಲಿ ಧಾರ್ಮಿಕ ಧ್ವಜ ಹಾರಿಸಿದ ದೀಪ್ ಸಿಧು ವಾರ ಮೊದಲೇ ಹೇಳಿದ್ದ.

- Advertisement -
- Advertisement -

ಜನವರಿ 20 ರಂದು, ಗಣರಾಜ್ಯೋತ್ಸವಕ್ಕೆ ಒಂದು ವಾರ ಮೊದಲು, ದೆಹಲಿ ಪೊಲೀಸರು ಮತ್ತು ಕೃಷಿ ಸಂಘಗಳು ಟ್ರ‍್ಯಾಕ್ಟರ್ ಪೆರೇಡ್‌ನ ಭದ್ರತಾ ನಿಯಮಗಳ ಕುರಿತು ಮಾತುಕತೆ ನಡೆಸುತ್ತಿದ್ದ ಸಂದರ್ಭ. ಆಗ ದೀಪ್ ಸಿಧು, ಫೇಸ್‌ಬುಕ್‌ನಲ್ಲಿ ಲೈವ್‌ಸ್ಟ್ರೀಮ್‌ಗೆ ಹೋಗಿ, ದೆಹಲಿಯತ್ತ ಹೊರಟಿದ್ದ ಪಂಜಾಬ್ ರೈತರನ್ನು ಉದ್ದೇಶಿಸಿ ಹೇಳಿದ್ದ: “ಪಿಕ್ಷರ್ ತೋ ಅಭಿ ಬಾಕಿ ಹೈ ದೋಸ್ತ್” ಎಂದು.

ಜನವರಿ 23 ರಂದು, ಪಂಜಾಬಿ ಭಾಷೆಯಲ್ಲಿದ್ದ ವೆಬ್ ಚಾನೆಲ್ ಸಂದರ್ಶನವನ್ನು ಹಂಚಿಕೊಂಡ. ಅದರಲ್ಲಿ “ಜನವರಿ 26 ರಂದು ಏನಾಗಬಹುದು ಎಂಬುದನ್ನು ನಾವು ಯೋಜಿಸಲು ಸಾಧ್ಯವಿಲ್ಲ. ಇದು ನಮ್ಮ ಲೆಕ್ಕಾಚಾರವನ್ನು ಮೀರಿದ್ದು. ಇದು ಅನಿರೀಕ್ಷಿತವಾದುದು. ಇದು ಸರ್ವಶಕ್ತನಿಗೆ ಬಿಟ್ಟಿದ್ದು. ಜನವರಿ 26 ರಂದು ಏನಾಗುತ್ತದೆ ಎಂದು ನಾವು ಮನುಷ್ಯರು ಏನನ್ನೂ ಹೇಳಲಾರೆವು” ಎಂದಿದ್ದ.

ಪ್ರತಿಭಟನೆಯೊಳಕ್ಕೆ ನುಸುಳಿದಾಗಿನಿಂದ ಈತ ಇಂತಹ ಪ್ರಚೋದನಾಕಾರಿ ಕೆಲಸಗಳನ್ನೇ ಮಾಡುತ್ತ ಬಂದಿದ್ದಾನೆ. ಇದೀಗ ಆತನ ಹಳೆಯ ಪೋಸ್ಟ್‌ಗಳು, ಸಂದಶಗಳಲ್ಲಿ ಗೊತ್ತಾಗುತ್ತಿದೆ,  ಈತ ಸದಾ ಯುವಕರ ಗುಂಪುಗಳನ್ನು ಪ್ರಚೊದಿಸುತ್ತ ಬಂದಿದ್ದಾನೆ ಎಂದು.

ಜನವರಿ 19 ರಂದು, ಸಿಧು ಬಿಕೆಯು (ಹರಿಯಾಣ) ಅಧ್ಯಕ್ಷ ಗುರ್ನಮ್ ಸಿಂಗ್ ಚದುನಿ ಮತ್ತು ತನ್ನನ್ನು ಸಮರ್ಥಿಸಿಕೊಂಡಿದ್ದ. ಎಸ್‌ಕೆಎಂ ಸದಸ್ಯರಾದ ಬಿಕೆಯುನ ಚದುನಿ ಅವರು ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ರೈತ ಸಂಘಗಳು ಆರೋಪಿಸಿದ್ದವು. ಆಗ ಚದುನಿ ಪರ ಮಾತನಾಡಿದ್ದ ದೀಪ್ ಸಿಧು, ರಾಜಕೀಯ ಪಕ್ಷಗಳ ಜೊತೆ ಮಾತಾಡಿದರೇನು ತಪ್ಪು ಎಂದು ಸಮರ್ಥೀಸಿಕೊಂಡು ಸಂದೇಶಗಳನ್ನು ಹಾಕಿದ್ದ.

ಜ.25ರಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯನ್ನು ಬೆಂಬಲಿಸಿ, ನಿಗದಿಯಾಗದ ಬೇರೆ ಮಾರ್ಗದಲ್ಲಿ ರ‍್ಯಾಲಿ ಮಾಡಲು ಬಯಸುವವರು, ಕಿಸಾನ್ ಮಜ್ದೂರ್ ಸಮಿತಿಯ ರ‍್ಯಾಲಿಯ ಜೊತೆ ಬನ್ನಿ ಎಂದು ರೈತರನ್ನು ನೇರವಾಗಿ ಪ್ರಚೋದಿಸುತ್ತಿದ್ದ.

ಹಲವು ಸಲ ಹಲವಾರು ರೈತ ನಾಯಕರು ಮತ್ತು ಸಾಮಾನ್ಯ ರೈತರು ಈತನ ಪ್ರಚೋದನಕಾರಿ ಮಾತುಗಳಿಗೆ ಆಕ್ಷೇಪ ಎತ್ತಿದ್ದರು. ಹಾಗಾಗಿ ಆತನನ್ನು ಹೋರಾಟದಿಂದ ಊರ ಇಟ್ಟಿದ್ದರು. ಪಂಜಾಬ್‌ನಲ್ಲಿ ಬ್ಯಾರಿಕೇಡ್ ಮುರಿದು ಮುನ್ನುಗ್ಗಿದಾಗ ಆತನಿಗೆ ಚೀಮಾರಿ ಹಾಕಿದ್ದರು. ಆತ ಸಿಂಘುವಿನಿಂದ ಸ್ವಲ್ಪ ದೂರದಲ್ಲಿ ಹೋರಾಟ ಹಮ್ಮಿಕೊಂಡಿದ್ದ.


ಇದನ್ನೂ ಓದಿ; ಯಾವುದೇ ಆತಂಕವಿಲ್ಲ, ಶಾಂತಿಯುತ ದಿಟ್ಟ ಹೋರಾಟ ಮುಂದುವರೆದಿದೆ: ರೈತ ಮುಖಂಡರ ಸ್ಪಷ್ಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಾವು ಯಾರನ್ನು ಶಿಕ್ಷಿಸುತ್ತಿದ್ದೇವೆ?’: ಕೆಕೆಆರ್ ತಂಡದಿಂದ ಬಾಂಗ್ಲಾ ಕ್ರಿಕೆಟಿಗನನ್ನು ಕೈಬಿಡುವ ನಿರ್ಧಾರಕ್ಕೆ ಶಶಿ ತರೂರ್ ಪ್ರತಿಕ್ರಿಯೆ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಕ್ರಿಕೆಟ್ ಅನ್ನು "ಬುದ್ಧಿಹೀನವಾಗಿ ರಾಜಕೀಯಗೊಳಿಸಬಾರದು" ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಶನಿವಾರ ಹೇಳಿದ್ದಾರೆ.  ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ, ಬಿಸಿಸಿಐ...

ಕಪ್ಪು ಶರ್ಟ್ ಧರಿಸಿದ್ದಕ್ಕೆ ‘ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಪುರಸ್ಕೃತ ಯುವ ಲೇಖಕನನ್ನೇ ತಡೆದ ಪೊಲೀಸರು

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಉಪಸ್ಥಿತಿಗೆ ಸಂಬಂಧಿಸಿದ ಭದ್ರತಾ ಶಿಷ್ಟಾಚಾರವನ್ನು ಉಲ್ಲೇಖಿಸಿ ಪೊಲೀಸರು, 99 ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಕಪ್ಪು ಶರ್ಟ್ ಧರಿಸಿದ್ದಕ್ಕಾಗಿ ನನ್ನನ್ನು ತಡೆದರು ಎಂದು...

ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ; ಕೋಟೆ ನಿರ್ಮಿಸಿಕೊಂಡವರನ್ನು ಯಾರಾದಾರೂ ಕೊಲ್ಲಲು ಹೋಗುತ್ತಾರೆಯೇ: ಡಿಕೆ ಶಿವಕುಮಾರ್

"ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡೋವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ. ಸಣ್ಣ ಅಹಿತಕರ ಘಟನೆ ಆಗಿರಲಿಲ್ಲ. ಸಣ್ಣ ಎಫ್ಐಆರ್ ಇರಲಿಲ್ಲ. ಅವರು ಬಂದಮೇಲೆ ಗಲಭೆ ಆಗಿದೆ. ಹೀಗಾಗಿ ಅವರಿಗೆ ಮಾತನಾಡುವ ಹಕ್ಕಿಲ್ಲ. ಶಾಸಕ...

ಅಗರ್ತಲಾದಲ್ಲಿ ಹಿಂದುತ್ವವಾದಿಗಳಿಂದ ಮುಸ್ಲಿಂ ರಿಕ್ಷಾ ಚಾಲಕನ ಮೇಲೆ ಹಲ್ಲೆ, ಬೆಂಕಿ ಹಚ್ಚಲು ಯತ್ನ

ಗುರುವಾರ ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಮುಸ್ಲಿಂ ರಿಕ್ಷಾ ಚಾಲಕನೊಬ್ಬನನ್ನು ಕೊಲ್ಲುವ ಕ್ರೂರ ಪ್ರಯತ್ನದಲ್ಲಿ, ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿ, ಮರಳಿನಲ್ಲಿ ಅರ್ಧದಾರಿಯಲ್ಲೇ ಹೂತುಹಾಕಿ, ಬೆಂಕಿ ಹಚ್ಚಲು ಪ್ರಯತ್ನಿಸಿದೆ ಎಂದು...

ತಮಿಳುನಾಡು| ದೇವಸ್ಥಾನದಲ್ಲಿ ಸಾವರ್ಕರ್ ಪರ ಘೋಷಣೆ ಕೂಗಿದ ಗುಂಪಿನ ವಿರುದ್ಧ ಕೆರಳಿದ ಧಾರ್ಮಿಕ ದತ್ತಿ ಸಚಿವ

ಕನ್ಯಾಕುಮಾರಿಯಲ್ಲಿ ನಡೆದ ದೇವಸ್ಥಾನದ ಉತ್ಸವದಲ್ಲಿ ಗುಂಪೊಂದು ವಿನಾಯಕ ದಾಮೋದರ್ ಸಾವರ್ಕರ್ ಅವರ ಪರ ಘೋಷಣೆ ಕೂಗಿದ್ದು, ಅವರ ಮೇಲೆ ತಮಿಳುನಾಡು ಹಿಂದೂ ಧಾರ್ಮಿಕ ದತ್ತಿ ಸಚಿವ ಶೇಖರ್ ಬಾಬು ಅವರು ಕೆರಳಿದ್ದಾರೆ. ಡಿಸೆಂಬರ್ 25...

ಅಮಾನತುಗೊಂಡ ಮಹೇಶ್ ಜೋಶಿ ನೇತೃತ್ವದಲ್ಲಿ ಅಖಿಲ ಭಾರತ ಚುಟುಕು ಸಾಹಿತ್ಯ ಸಮ್ಮೇಳನ: ನಿಯಮ ಉಲ್ಲಂಘನೆ ಆರೋಪ

ಶೃಂಗೇರಿಯಲ್ಲಿ 2025 ಜನವರಿ 4ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಸ್ವಹಿತಾಸಕ್ತಿ ಗುಂಪು ಆಯೋಜಿಸುತ್ತಿದ್ದು,...

ಕೇಂದ್ರದ ‘ಜಿ-ರಾಮ್‌ಜಿ’ ಕಾಯ್ದೆಯ ವಿರುದ್ಧ ಕಾಂಗ್ರೆಸ್‌ನಿಂದ ದೇಶಾದ್ಯಂತ ಪ್ರತಿಭಟನೆ ಘೋಷಣೆ

ಮನರೇಗಾ ಕಾಯ್ದೆಗೆ ತಿದ್ದುಪಡಿ ಮೂಲಕ ಜಾರಿಗೆ ತಂದಿರುವ ಜಿ-ರಾಮ್‌ಜಿ ಕಾಯ್ದೆಯ ವಿರುದ್ಧ ಜನವರಿ 8 ರಿಂದ ದೇಶಾದ್ಯಂತ ಆಂದೋಲನ ನಡೆಸಲು ಕಾಂಗ್ರೆಸ್ ಶನಿವಾರ ನಿರ್ಧರಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಬಾಂಗ್ಲಾದೇಶ| ಗುಂಪು ದಾಳಿಗೆ ಒಳಗಾಗಿದ್ದ ಹಿಂದೂ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ಹೊಸ ವರ್ಷದ ಮುನ್ನಾದಿನದಂದು ಗುಂಪೊಂದು ಇರಿದು ಬೆಂಕಿ ಹಚ್ಚಿದ ಹಿಂದೂ ಉದ್ಯಮಿ ಖೋಕೋನ್ ಚಂದ್ರ ದಾಸ್ ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಢಾಕಾದ ರಾಷ್ಟ್ರೀಯ ಬರ್ನ್ ಇನ್ಸ್ಟಿಟ್ಯೂಟ್‌ನಲ್ಲಿ ಸುಟ್ಟ ಗಾಯಗಳ ವಿಭಾಗದಲ್ಲಿ ಅವರು...

ಅಮೆರಿಕದ ಎಚ್ಚರಿಕೆ ಬೆನ್ನಲ್ಲೇ ವೆನೆಜುವೆಲಾ ರಾಜಧಾನಿಯಲ್ಲಿ ವಿಮಾನಗಳ ಅಬ್ಬರ; ಸರಣಿ ಸ್ಫೋಟ

ಶನಿವಾರ ಮುಂಜಾನೆ ಸಮೀಪದಲ್ಲೇ ವಿಮಾನಗಳು ಘರ್ಜಿಸಿದವು, ಬೀದಿಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಹೊಗೆ ಬುಗ್ಗೆ ಆವರಿಸಿತು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವರದಿಗಳ ಪ್ರೆಸ್ ಪ್ರಕಾರ,...

ಉಡುಪಿ: ಹಿಮ್ಮುಕವಾಗಿ ಚಲಿಸಿದ ಕಾರು: ಬೈಕ್ ಸವಾರರು ಮತ್ತು ಆಟೋಗೆ ಡಿಕ್ಕಿ: ಸಿಸಿಟಿವಿ ವಿಡಿಯೋ ವೈರಲ್

ಉಡುಪಿಯಲ್ಲಿ ನಿಲ್ಲಿಸಿದ್ದ ಕಾರೊಂದು ಹಠಾತ್ತನೆ ಹಿಂದಕ್ಕೆ ಸರಿದು ಅಪಘಾತಕ್ಕೆ ಕಾರಣವಾಗುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೀಡಿಯೊ ರಸ್ತೆಬದಿಯಲ್ಲಿ ನಿಂತಿದ್ದ ಕಾರನ್ನು ತೋರಿಸುತ್ತದೆ. ಕೆಲವು ಸೆಕೆಂಡುಗಳ ನಂತರ, ಒಬ್ಬ ವ್ಯಕ್ತಿ...