Homeಮುಖಪುಟಯುಪಿ-2022: ಅಖಿಲೇಶ್‌ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಾಂಗ್ರೆಸ್!

ಯುಪಿ-2022: ಅಖಿಲೇಶ್‌ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಾಂಗ್ರೆಸ್!

- Advertisement -
- Advertisement -

ರಾಜಕೀಯ ಸೌಜನ್ಯವನ್ನು ಉಲ್ಲೇಖಿಸಿ ಕಾಂಗ್ರೆಸ್‌ ಪಕ್ಷವು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಪ್ರಗತಿಶೀಲ ಸಮಾಜವಾದಿ ಪಕ್ಷದ ಅಧ್ಯಕ್ಷ ಶಿವಪಾಲ್ ಯಾದವ್ ಸ್ಪರ್ಧಿಸುತ್ತಿರುವ ಯುಪಿಯ ಕರ್ಹಾಲ್ (ಮೈನ್‌ಪುರಿ) ಮತ್ತು ಜಸ್ವಂತ್ ನಗರ (ಇಟಾವಾ) ಕ್ಷೇತ್ರಗಳಿಂದ ಯಾವುದೆ ನಾಮಪತ್ರವನ್ನು ಸಲ್ಲಿಸಲಿಲ್ಲ.

ಈ ಎರಡು ಕ್ಷೇತ್ರಗಳಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯಲಿದ್ದು, ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿತ್ತು. ಮೂರನೇ ಹಂತದ ಮತದಾನ ಫೆಬ್ರವರಿ 20 ರಂದು ನಡೆಯಲಿದೆ.

ಇದನ್ನೂ ಓದಿ: ಯುಪಿ ಚುನಾವಣೆ: BJP ಜೊತೆ ಮೈತ್ರಿ ವಿಫಲ; JDUನಲ್ಲಿ ಹೆಚ್ಚುತ್ತಿರುವ ಆಂತರಿಕ ಬಿರುಕು!

ಯುಪಿಯಲ್ಲಿ ಕಳೆದ ಕೆಲವು ಚುನಾವಣೆಗಳಲ್ಲಿ ಎರಡು ಪಕ್ಷಗಳು ಇತರ ಪಕ್ಷದ ರಾಷ್ಟ್ರೀಯ ನಾಯಕರ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. 2019 ರ ಲೋಕಸಭಾ ಚುನಾವಣೆಯಲ್ಲಿ, ರಾಹುಲ್ ಗಾಂಧಿ ಮತ್ತು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಸ್ಪರ್ಧಿಸಿದ್ದ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳಿಂದ ಎಸ್‌ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ.

ಕರ್ಹಾಲ್ ಕ್ಷೇತ್ರದಿಂದ ಜ್ಞಾನವತಿ ಯಾದವ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸುವುದಾಗಿ ಪಕ್ಷವು ಈ ಹಿಂದೆ ಘೋಷಿಸಿತ್ತು. ಆದರೆ ಅಖಿಲೇಶ್‌ ಅವರು ಅಲ್ಲಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷವು ಘೋಷಿಸಿದ ನಂತರ ಕಾಂಗ್ರೆಸ್‌ ತನ್ನ ಸ್ಪರ್ಧಿಯನ್ನು ಹಿಂದೆ ಸರಿಸಿದೆ. ಕಾಂಗ್ರೆಸ್ ಜಸ್ವಂತ್ ನಗರದಿಂದ ಯಾವುದೇ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ, ಈ ಕ್ಷೇತ್ರದಲ್ಲಿ ಅಲ್ಲಿ ಶಿವಪಾಲ್ ಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಯುಪಿ ಚುನಾವಣೆ: ಬಿಜೆಪಿ ಮೈತ್ರಿ ಆಹ್ವಾನ ತಿರಸ್ಕರಿಸಿದ RLD ಮುಖ್ಯಸ್ಥ ಜಯಂತ್ ಚೌಧರಿ

ಮೈನ್‌ಪುರಿಯ ಕಾಂಗ್ರೆಸ್‌ ಸಂಯೋಜಕ ಮನೀಷ್ ಶಾ, ಇತರ ಪಕ್ಷಕ್ಕೆ ಗೌರವ ನೀಡುವ ಸಲುವಾಗಿ ಕಾಂಗ್ರೆಸ್ ಪಕ್ಷವು ಈ ಕ್ಷೇತ್ರಗಳನ್ನು ತೊರೆಯಲಿದೆ ಎಂದು ಖಚಿತಪಡಿಸಿದ್ದಾರೆ. “ನಾವು ಇಲ್ಲಿಂದ ನಾಮಪತ್ರ ಸಲ್ಲಿಸಬಾರದು ಎಂದು ನಮಗೆ ಹೈಕಮಾಂಡ್‌ನಿಂದ ಸೂಚನೆ ಬಂದಿದೆ. ಹೀಗಾಗಿ ನಾವು ಹಾಗೆ ಮಾಡಿದ್ದೇವೆ. ಇದು ರಾಜಕೀಯ ಸೌಜನ್ಯದ ಭಾಗವಾಗಿದೆ” ಮನೀಷ್‌ ಶಾ ಹೇಳಿದ್ದಾರೆ.

ಎಸ್‌ಪಿ ರಾಷ್ಟ್ರೀಯ ವಕ್ತಾರ ರಾಜೇಂದ್ರ ಚೌಧರಿ ಕೂಡ ಇದನ್ನು “ರಾಜಕೀಯ ಸೌಜನ್ಯ” ಎಂದು ಕರೆದಿದ್ದಾರೆ. “ಈ ಹಿಂದೆಯೂ ಇದು ಸಂಭವಿಸಿದೆ. ಎರಡೂ ಪಕ್ಷಗಳು ಜಾತ್ಯಾತೀತ ಶಕ್ತಿಯಾಗಿದ್ದು, ಬಿಜೆಪಿಯ ವಿರೋಧಿಗಳಾಗಿದ್ದೇವೆ. ಹಾಗಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವುದು ರಾಜಕೀಯ ಸೌಜನ್ಯದ ಭಾಗವಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮೌನಕ್ಕೆ ಶರಣಾದ ಯುಪಿ ಮತದಾರರು, ಆತಂಕದಲ್ಲಿ ಅಭ್ಯರ್ಥಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...