Homeಮುಖಪುಟಮೌನಕ್ಕೆ ಶರಣಾದ ಯುಪಿ ಮತದಾರರು, ಆತಂಕದಲ್ಲಿ ಅಭ್ಯರ್ಥಿಗಳು

ಮೌನಕ್ಕೆ ಶರಣಾದ ಯುಪಿ ಮತದಾರರು, ಆತಂಕದಲ್ಲಿ ಅಭ್ಯರ್ಥಿಗಳು

- Advertisement -
- Advertisement -

2019ರವರೆಗೆ ಹೋಟೆಲ್‌ ಅಥವಾ ಗಲ್ಲಿ ಬದಿಯ ಚಾ ಮಾರುವ ಅಂಗಡಿಯಲ್ಲಿ ಮೌನವಾಗಿ ಕುಳಿತು ಸುತ್ತಮುತ್ತಲ ಜನರ ಸಂಭಾಷಣೆ ಆಲಿಸಿದರೆ ಚುನಾವಣೆ ಫಲಿತಾಂಶವನ್ನು ಅಂದಾಜಿಸಬಹುದಾಗಿತ್ತು. ಆದರೆ ಪ್ರಸಕ್ತ ಉತ್ತರಪ್ರದೇಶ ಚುನಾವಣೆಯ ಪರಿಸ್ಥಿತಿಯನ್ನು ಊಹಿಸುವುದು ಅಷ್ಟು ಸರಳವಲ್ಲ.

ಸಾಮಾನ್ಯವಾಗಿ ಜನರ ಮನಸ್ಥಿತಿ, ಅಭ್ಯರ್ಥಿಗಳ ವ್ಯಕ್ತಿತ್ವ, ಆಯಾ ಕ್ಷೇತ್ರದ ಜನರ ನಿರೀಕ್ಷೆಗಳು ಮತ್ತು ಜಾತಿ ಅಂಶ ಈ ಎಲ್ಲ ಆಯಾಮಗಳಲ್ಲಿ ಮೌಲ್ಯಮಾಪನ ಮಾಡಿದಲ್ಲಿ ಚುನಾವಣಾ ಫಲಿತಾಂಶದ ಚಿತ್ರಣ ಗ್ರಹಿಸಬಹುದಾಗಿತ್ತು. ಮನೆಗಳು ಮತ್ತು ಅಂಗಡಿಗಳ ಮೇಲೆ ಹಾರಾಡುವ ಬಾವುಟಗಳ ಸಂಖ್ಯೆ ನೋಡಿಯೇ ಆ ಪ್ರದೇಶದಲ್ಲಿ ಜನಪ್ರಿಯರಾದವರು ಯಾರು, ಯಾವ ಪಕ್ಷ ಪ್ರಾಬಲ್ಯ ಹೊಂದಿದೆ ಎಂಬ ಸ್ಪಷ್ಟ ಚಿತ್ರಣ ಲಭ್ಯವಾಗುತ್ತಿತ್ತು. ಯಾರು ಹೆಚ್ಚು ಪ್ರಚುರದಲ್ಲಿ ಇಲ್ಲವೆಂಬ ಮಾಹಿತಿಯನ್ನು ಅಂದಾಜಿಸಬಹುದಾಗಿತ್ತು. ಆದರೆ ಇಂದು ಕೋವಿಡ್ ಸನ್ನಿವೇಶದ ಬದಲಾದ ಕಾಲಘಟ್ಟದಲ್ಲಿ ಜನರು ಸಹ ಬದಲಾಗಿದ್ದಾರೆ.

ಚಹಾ ಮಳಿಗೆ ಮತ್ತು ತಿನಿಸು ಅಂಗಡಿಗಳ ಮುಂದೆ ಜನಸಂದಣಿ ಇದೆಯಾದರೂ, ಹವಾಮಾನ ಮತ್ತಿತರ ಸಂಭಾಷಣೆ ನಡೆಯುತ್ತಿದೆ. ಜನರು ರಾಜಕೀಯ ವಿಚಾರಗಳನ್ನು ತಮ್ಮ ಚರ್ಚೆಗಳಿಂದ ಹೊರಗಿಟ್ಟಿದ್ದಾರೆ. “ಪ್ರಸ್ತುತ ಜನರು ಬುದ್ಧಿವಂತರಾಗಿದ್ದಾರೆ. ತಮ್ಮ ರಾಜಕೀಯ ಆದ್ಯತೆಗಳನ್ನು ವ್ಯಕ್ತಪಡಿಸಿದರೆ ತಾವು ಒಂದು ಪಕ್ಷ/ಪಂಗಡದ ಉದ್ದೇಶಗಳಿಗೆ ಗುರಿಯಾಗುತ್ತೇವೆ ಎಂಬ ಅರಿವಾಗಿದೆ. ಹೀಗಾಗಿ ಅವರು ಅಪರಿಚಿತರೊಂದಿಗೆ ಮಾತನಾಡಲು ಬಯಸುವುದಿಲ್ಲ. ಟಿವಿ ಚಾನೆಲ್‌ಗಳ ಸಿಬ್ಬಂದಿಯನ್ನು ನೋಡಿದಾಗ ಜನರು, ಆಡಳಿತ ಪಕ್ಷದ ಪರವಾಗಿ ಜಾಣ್ಮೆಯಿಂದ ಮಾತನಾಡುತ್ತಾರೆ. ಏಕೆಂದರೆ ಅದು ಪ್ರಸಾರವಾಗುತ್ತದೆಂಬುದು ಅವರಿಗೆ ತಿಳಿದಿದೆ” ಎಂದು ರಾಜಕೀಯ ಕಾರ್ಯಕರ್ತರೊಬ್ಬರು ಹೊಸ ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: ಆದಿತ್ಯನಾಥ್‌ ವಿರುದ್ಧ ರಾವಣ್ ಸ್ಪರ್ಧೆಯ ಲೆಕ್ಕಾಚಾರಗಳೇನು?

ಸ್ಮಾರ್ಟ್ ಮತದಾರರು

ಲಕ್ನೋದ ಹೊರವಲಯದ ಬಕ್ಷಿ ಕಾ ತಲಾಬ್‌ನ ‘ಸ್ಮಾರ್ಟ್’ ಮತದಾರರಲ್ಲಿ ಒಬ್ಬರಾದ ವೃತ್ತಿಯಲ್ಲಿ ಚಾಲಕರಾಗಿರುವ ಠಾಕೂರ್ ಸಿಂಗ್, ತಮ್ಮ ಠಾಕೂರ್ ಗುರುತನ್ನು ಬಹಳ ದೃಢವಾಗಿ ಪ್ರತಿಪಾದಿಸುತ್ತಾರೆ. ಇನ್ನೊಬ್ಬ ಚಾಲಕ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಾ ವಿಷಾದ ವ್ಯಕ್ತಪಡಿಸುತ್ತಲೇ, “ಗೆಲ್ಲುವುದು ಯೋಗಿ ಆದಿತ್ಯನಾಥ್‌ರೇ. ಆದರೆ ಸರ್ಕಾರ ಬದಲಾದರೆ ಪರಿಸ್ಥಿತಿ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅಭಿಪ್ರಾಯಪಟ್ಟರು. ಆದರೆ ಟಿವಿ ವಾಹಿನಿಗಳ ಸಿಬ್ಬಂದಿ ಬಂದ ತಕ್ಷಣ ವಿಷಯ ಬದಲಿಸಿ, ಬೀಡಾಡಿ ದನಗಳ ಅಪಾಯದಿಂದ ಎರಡು ಬೆಳೆಗಳನ್ನು ಕಳೆದುಕೊಂಡ ವಿವರ ತಿಳಿಸಿದರು. ಇದಕ್ಕಿದ್ದಂತೆ ಅಭಿಪ್ರಾಯ ಬದಲಾವಣೆ ಮಾಡಿರುವುದೇಕೆ ಎಂದು ಪ್ರಶ್ನಿಸಿದರೆ, ಅವರು ಮುಗುಳ್ನಕ್ಕು “ಇದೇ ಅಲ್ಲವೇ ರಾಜಕೀಯ” ಎಂದು ಉತ್ತರಿಸಿದರು.

ಬಾರಾಬಂಕಿಯಲ್ಲಿ, ಯೋಗಿ ಅವರ ಕಟ್ಟಾ ಅಭಿಮಾನಿಗಳೆನ್ನಿಸಿಕೊಂಡ ಹಲವರಿದ್ದು, ಅವರಾರೂ ವಾಸ್ತವದಲ್ಲಿ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಸಭೆಗಳನ್ನು ನೋಡಲು ಆಸಕ್ತಿ ತೋರಿಸುತ್ತಿಲ್ಲ. ಬದಲಾಗಿ ವೆಬ್‌ಸರಣಿಗಳನ್ನು ನೋಡುತ್ತಾರೆ. ಇತ್ತೀಚೆಗೆ ಸ್ಮಾರ್ಟ್‌ಫೋನ್ ಕೊಂಡಿರುವ ಅಂಗಡಿ ನಡೆಸುತ್ತಿರುವ ಅಕ್ಷಯ್ ರಾವತ್ ಎಂಬ ಯುವಕನಿಗಂತೂ ರಾಜಕೀಯ ರ್‍ಯಾಲಿಗಳ ಬಗ್ಗೆ ಗಮನವೇ ಇಲ್ಲ. ರಾಜಕೀಯ ಕುರಿತ ವಾಟ್ಸಪ್ ಗುಂಪಿನಲ್ಲಿ ಭಾಗಿಯಾಗುವುದಿಲ್ಲ ಹಾಗೂ ಚರ್ಚೆಯನ್ನೂ ನಡೆಸುವುದಿಲ್ಲ. ಮೊಬೈಲ್ ಫೋನ್‌ಗೆ ಹಾಕಿರುವ ದೈನಂದಿನ ಡೇಟಾ ರೀಚಾರ್ಜ್ನಲ್ಲಿ ವೆಬ್ ಸರಣಿ ನೋಡುತ್ತಿರುವುದಾಗಿ ಅವರು ಹೇಳುತ್ತಾರೆ.

ವಿವಿಧ ರಾಜಕಾರಣಿಗಳು ಎತ್ತಿರುವ ಸಮಸ್ಯೆಗಳು ಮತ್ತು ಅವುಗಳ ಪರಿಣಾಮದ ಹಿನ್ನೆಲೆಯಲ್ಲಿ ಆಯ್ಕೆ ಬಗ್ಗೆ ಕೇಳಿದರೆ, “ಯಾರಿಗೆ ಓಟು ಹಾಕುತ್ತೇವೋ ಎನ್ನುವುದು ನಮಗೆ ತಿಳಿದಿದೆ. ಭಾಷಣದಿಂದ ಏನಾಗಲಿದೆ?” ಎಂದು ಉತ್ತರಿಸುತ್ತಾರೆ.

ಕೆಲ ಕ್ಷೇತ್ರಗಳಲ್ಲಿ ಮತದಾರರ ಮೌನದಿಂದಾಗಿ ಅಭ್ಯರ್ಥಿಗಳಲ್ಲಿ ನಡುಕ ಕಂಡುಬಂದಿದೆ. ಅಯೋಧ್ಯೆಯ ಮತದಾರರು, ಮುಂದಿನ ಸರ್ಕಾರ ರಚನೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ರಾಮಮಂದಿರದ ಬಗ್ಗೆ ಮೆಚ್ಚುಗೆ ಅಥವಾ ವಿರೋಧವನ್ನೂ ಸೂಚಿಸುವುದಿಲ್ಲ. ಅಲ್ಲದೆ ನಗರದ ಸೌಂದರ್ಯೀಕರಣಕ್ಕಾಗಿ ನೂರಾರು ಮನೆ ಮತ್ತು ಅಂಗಡಿಗಳನ್ನು ನೆಲಸಮಗೊಳಿಸಿದ್ದರ ಬಗ್ಗೆಯೂ ಮಾತನಾಡುವುದಿಲ್ಲ.

ಅಂಗಡಿ ನೆಲಸಮಗೊಂಡವರ ಪಟ್ಟಿಯಲ್ಲಿರುವ ಜಗತ್ ನರೈನ್ ತಿವಾರಿ ಎಂಬುವವರು, ಚುನಾವಣೆ ಬಗ್ಗೆ ಮೌನವಹಿಸಿದ್ದಾರೆ. 25 ವರ್ಷಗಳಿಂದ ರಾಮ ಮಂದಿರಕ್ಕೆ ಪ್ರತಿ ದಿನ ಭೇಟಿ ನೀಡುವ ಅವರು, ಚುನಾವಣೆ ಬಗ್ಗೆ ಮಾತನಾಡಲು ನಿರಾಕರಿಸುತ್ತಾರೆ. ಏನಾಗುತ್ತೋ ನೋಡೋಣ” ಎಂದಷ್ಟೇ ಹೇಳಿದರು.

ಮತದಾರರ ಈ ಧೋರಣೆಯೇ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದ್ದು, ಕಾನ್ಪುರದ ಬಿಜೆಪಿ ಅಭ್ಯರ್ಥಿಯೊಬ್ಬರು, “ಮತದಾರರ ಮನಸ್ಥಿತಿಯನ್ನು ಊಹಿಸುವುದು ನಮಗೆ ತುಂಬಾ ಕಷ್ಟವಾಗಿದೆ. ನಾನು ಮನೆ-ಮನೆ ಪ್ರಚಾರ ಮಾಡಲು ಹೋದಾಗ, ಮತದಾರರು ಸ್ವಾಗತಿಸಲೂ ಇಲ್ಲ ಅಥವಾ ಪ್ರತಿಕೂಲವಾಗಿಯೂ ಇರಲಿಲ್ಲ. ಹೀಗಾಗಿ ಅವರ ಮನಸ್ಥಿತಿಯನ್ನು ನಿರ್ಣಯಿಸಲು ಸಾಧ್ಯವಿಲ್ಲ. ಈ ಮೊದಲು, ಬಹಿರಂಗ ಪ್ರಚಾರ ಜನಸಂದಣಿಯ ಮನಸ್ಥಿತಿಯನ್ನು ಊಹಿಸಬಹುದಾಗಿತ್ತು. ಈಗ ಅದೂ ಸಾಧ್ಯವಿಲ್ಲ” ಎಂದರು.

ಕೃಪೆ: ಉಮೀದ್‌.ಕಾಮ್‌
ಅನುವಾದ: ಸೋಮಶೇಖರ್‌ ಚಲ್ಯ


ಇದನ್ನೂ ಓದಿರಿ: ವಿಶ್ಲೇಷಣೆ: 100 ವರ್ಷಗಳಷ್ಟು ಹಳೆಯದಾದ ‘ಚಿಂತಾಮಣಿ’ ನಾಟಕವನ್ನು ಆಂಧ್ರ ಸರ್ಕಾರ ನಿಷೇಧಿಸಿದ್ದೇಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...