Homeಮುಖಪುಟಭಾರತದ ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ಅಗ್ರ ಸ್ಥಾನ

ಭಾರತದ ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ಅಗ್ರ ಸ್ಥಾನ

- Advertisement -
- Advertisement -

ಭಾರತೀಯ ಚಲನಚಿತ್ರ ಸಂಸ್ಥೆ ನಡೆಸುವ ಟಾಪ್ 10 ಸಿನಿಮಾ ಸಮೀಕ್ಷೆಯಲ್ಲಿ ಮಲಯಾಳಂ ಸಿನಿಮಾಗಳು ಇತಿಹಾಸ ಸೃಷ್ಟಿಸಿವೆ. 2021 ರಲ್ಲಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ 6 ಮಲಯಾಳಂ ಚಿತ್ರಗಳು ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಮಲಯಾಳಂ ಸಿನಿಮಾಗಳಾದ “ಮಿನ್ನಲ್ ಮುರುಳಿ”, ”ಜೊಜಿ”, ”ನಯಟ್ಟು”, “ದಿ ಗ್ರೇಟ್ ಇಂಡಿಯನ್ ಕಿಚನ್”, ”ಕಲಾ”, ”ತಿಂಕಲಾಹಾನಝಾ ನಿಶ್ಚಯಂ” ಸಿನಿಮಾಗಳು ಟಾಪ್ ವಿರ್ಮಶಕರ ಮೆಚ್ಚುಗೆಗೆ ಪಾತ್ರವಾಗಿವೆ. ಇದರ ಜೊತೆಗೆ ಮರಾಠಿಯ “ದಿ ಡಿಸಿಪಲ್” ಚಿತ್ರವೂ ಟಾಪ್ 10 ಪಟ್ಟಿಗೆ ಸೇರಿದೆ.

“ಮಾಲಿಕ್” ಚಿತ್ರದಲ್ಲಿ ಅಭಿನಯಿಸಿದ್ದ ಫಾಹದ್ ಫಾಸಿಲ್‌ರ ಅದ್ಭುತ ನಟನೆಗೆ ಅತ್ಯುತ್ತಮ ಪ್ರಶಸ್ತಿ ಸಂದಿದೆ. “ಸರದಾರ್ ಉದ್ದಮ್” ಚಿತ್ರದ ನಟನೆಗೆ ಬಾಲಿವುಡ್‌ನ ನಟ ವೀಕಿ ಕೌಶಲ್ ಮತ್ತು ”ಮಿನ್ನಲ್ ಮುರುಳಿ” ಸಿನಿಮಾದ ಅಮೋಘ ನಟನೆಗೆ ನಟ ಟುವಿನೋ ಥಾಮಸ್‌ ದ್ವಿತೀಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ’ಸಂತ್ರಸ್ತೆಯಾಗಿ ಬದುಕುವುದು ಸುಲಭವಲ್ಲ’ 5 ವರ್ಷಗಳ ಪ್ರಯಾಣ ನೆನಪಿಸಿಕೊಂಡ ನಟಿ ಭಾವನಾ

“ಭಾರತೀಯ ಚಲನಚಿತ್ರ ಸಂಸ್ಥೆಯ 2021ರ ಸಮೀಕ್ಷೆ ನಡೆಸಿದ ವಿರ್ಮಶಕರಿಗೆ ಸಿನಿಮಾ ಮೇಲಿನ ಕಾಳಜಿ ತುಂಬ ವಿಶೇಷವಾದದ್ದು, ನನಗೆ ಪ್ರಶಸ್ತಿ ದೊರೆಯಲು ಕಾರಣರಾದ ಎಲ್ಲರಿಗೂ ಧನ್ಯವಾದ” ಎಂದು ನಟ ಥಾಮಸ್ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇದು “ಮಿನ್ನಲ್ ಮುರುಳಿ” ಚಿತ್ರದ ಪಾತ್ರಕ್ಕೆ ಸಂದ ಗೌರವ ಎಂದು ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟಿ ಕೊಂಕಣಾ ಸೆನ್ ಶರ್ಮಾ ಅವರು “ಗಿಲ್ಲಿ ಪುಂಚಿ” ಸಿನಿಮಾ ಮತ್ತು ನಟಿ ನಿಮಿಷ ಸಂಜಯ್‌ ಅವರು “ದಿ ಗ್ರೇಟ್ ಇಂಡಿಯನ್ ಕಿಚನ್“ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

“ಹಸೀನಾ ದಿಲ್ ರುಬಾ” ಚಿತ್ರಕ್ಕೆ ಅಭಿನಯಕ್ಕೆ ನಟಿ ತಾಪ್ಸಿ ಪನ್ನು ಸಹ ದ್ವಿತೀಯ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಇದನ್ನೂ ಓದಿ: ಆಸ್ಕರ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ’ಜೈ ಭೀಮ್’ ದೃಶ್ಯಗಳು: ಅತ್ಯುನ್ನತ ಗೌರವ ಎಂದ ತಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹಿಂದು-ಮುಸ್ಲಿಂ ರೈತ ಮೈತ್ರಿಯ ಚಹರೆ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲ

0
ಭಾರತೀಯ ಕಿಸಾನ್ ಯೂನಿಯನ್‌ನ ಸಂಸ್ಥಾಪಕ ಸದಸ್ಯ ಮತ್ತು ಹಿಂದೂ-ಮುಸ್ಲಿಂ ಏಕತೆಯ ಪ್ರತೀಕವಾಗಿದ್ದ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲವಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಜೌಲಾ ನಿಧನದಿಂದಾಗಿ ಮಹೇಂದ್ರಸಿಂಗ್ ಟಿಕೇತ್ ಸ್ಥಾಪಿಸಿದ್ದ ಭಾರತೀಯ ಕಿಸಾನ್ ಯೂನಿಯನ್...