Homeಕರ್ನಾಟಕದೇಶದಲ್ಲಿ ಹಿಜಾಬ್‌ ನಿಷೇಧಿಸಬೇಕು: ಕಾಳಿ ಸ್ವಾಮೀಜಿ ಮತ್ತೆ ವಿವಾದಾತ್ಮಕ ಹೇಳಿಕೆ

ದೇಶದಲ್ಲಿ ಹಿಜಾಬ್‌ ನಿಷೇಧಿಸಬೇಕು: ಕಾಳಿ ಸ್ವಾಮೀಜಿ ಮತ್ತೆ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿಯನ್ನು ಬಾಬ್ರಿ ಮಸೀದಿ ಮಾದರಿಯಲ್ಲೇ ಧ್ವಂಸ ಮಾಡಬೇಕು ಎಂದು ಹೇಳುವ ಮೂಲಕ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದ ರಿಷಿಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಮತ್ತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿವಳಿ ತಲಾಖ್ ರದ್ದುಪಡಿಸಿದಂತೆ ದೇಶದಲ್ಲೇ ಹಿಜಾಬ್ (ಬುರ್ಖಾ) ಧರಿಸುವುದನ್ನು ನಿಷೇಧಿಸಬೇಕು ಎಂದಿದ್ದಾರೆ.

ಉಡುಪಿಯ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿದ ಹೆಣ್ಣು ಮಕ್ಕಳಿಗೆ ತರಗತಿ ನಿಷೇಧಿಸಿದ್ದ ವಿದ್ಯಮಾನ ಚರ್ಚೆಯಲ್ಲಿದೆ. ಹಿಂದೂ ಧರ್ಮದ ಇತರ ಆಚರಣೆಗಳಂತೆ ಮುಸ್ಲಿಂ ಧರ್ಮಿಯರು ಹಿಜಾಬ್‌ ಧರಿಸುತ್ತಾರೆ. ಹೀಗಿರುವಾಗ ಹಿಜಾಬ್‌ಗೆ ರಾಜಕೀಯ ಪ್ರೇರಿತ ವಿರೋಧ ಸಲ್ಲದು ಎಂಬ ಅಭಿಪ್ರಾಯಗಳು ಮೂಡಿ ಬರುತ್ತಿರುವ ಹೊತ್ತಿನಲ್ಲಿ ಮತ್ತೊಂದು ಗುಂಪು ಈ ಬೆಳವಣಿಗೆಯನ್ನು ಮುಸ್ಲಿಂ ವಿರೋಧಿ ಅಭಿಪ್ರಾಯ ಮೂಡಿಸಲು ಯತ್ನಿಸಿದೆ. ಇತ್ತ ತಮ್ಮ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕೆಂದು ಪ್ರತಿಭಟನಾನಿರತ ಹೆಣ್ಣು ಮಕ್ಕಳು ಆಗ್ರಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಳಿ ಸ್ವಾಮೀಜಿಯ ಹೇಳಿಕೆ ಹೊರಬಿದ್ದಿದೆ.

ಶಾಲೆಗಳಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಳಿ ಸ್ವಾಮೀಜಿ, “ರಾಜ್ಯ, ದೇಶದಲ್ಲಿ ಬುರ್ಖಾವನ್ನು ನಿಷೇಧಿಸಬೇಕು. ಶಾಲೆಗೆ ಬುರ್ಖಾ ಧರಿಸಿ ಬಂದರೆ ಗುರುತು ಪತ್ತೆಯಾಗುವುದಿಲ್ಲ. ವಿದ್ಯಾರ್ಥಿನಿಯೇ ಬರುತ್ತಾರೋ ಅವರ ಅಕ್ಕ -ತಂಗಿ- ಅಮ್ಮ ಬರುತ್ತಾರೋ ಹೇಗೆ ಗೊತ್ತಾಗುತ್ತದೆ? ಪರೀಕ್ಷೆ ಯಾರು ಬರೆಯುತ್ತಾರೆ ಅನ್ನೋದು ಹೇಗೆ ಗೊತ್ತಾಗುತ್ತದೆ? ಮನೆಯಲ್ಲಿ ತಂದೆ- ತಾಯಿ ಇದ್ದಂತೆ ಶಾಲೆಯಲ್ಲಿ ಶಿಕ್ಷಕರು ಇರುತ್ತಾರೆ. ಸಹಪಾಠಿಗಳು ಸಹೋದರರಂತೆ ಅವರನ್ನು ಅನುಮಾನಿಸಿದರೆ ಹೇಗೆ?” ಎಂದು ಕೇಳಿದ್ದಾರೆ.

ಬಿಸಿಲಿನಲ್ಲಿ ಹೆಣ್ಣುಮಕ್ಕಳಿಗೆ ಬುರ್ಖಾ ಧರಿಸಿ ಹೋಡಾಡುವುದು ಕಷ್ಟವಾಗುತ್ತಿದೆ. ಬುರ್ಖಾ ಧರಿಸುವುದರಿಂದ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ. ಬುರ್ಖಾ ಎನ್ನುವುದೇ ಒಂದು ಬಂಧೀಖಾನೆ. ನಿಮ್ಮ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಇಲ್ಲದಿರುವುದಾಗ ಇದು ಅಗತ್ಯವೆನಿಸಿದೆಯೇ? ಒಂದು ವೇಳೆ ಅವರಿಗೆ ಇಸ್ಲಾಂ ನಲ್ಲಿ ರಕ್ಷಣೆಯಿಲ್ಲ ಎನ್ನುವುದಾದರೆ, ನಮ್ಮ ಧರ್ಮಕ್ಕೆ ಬನ್ನಿ ನಾವು ರಕ್ಷಣೆ ಕೊಡುತ್ತೇವೆ ಎಂದಿದ್ದಾರೆ.

ಆಜಾನ್ ಕೂಗುವ ಲೌಡ್ ಸ್ಪೀಕರ್‌ಗಳನ್ನು ತೆಗೆದು ಹಾಕಬೇಕು. ಈ ಸಂಬಂಧ ಈಗಾಗಲೇ ಹೋರಾಟ ಆರಂಭಿಸಿದ್ದೇನೆ. ದೇವಸ್ಥಾನ ಒಡೆದು ಮಸೀದಿ ಕಟ್ಟಿರುವುದನ್ನು ರಾಜ್ಯ ಸರ್ಕಾರ ಪತ್ತೆ ಹಚ್ಚಬೇಕು. ನಾವು ಈ ರೀತಿಯ ದೇಗುಲಗಳನ್ನು ಪತ್ತೆ ಹಚ್ಚುತ್ತೇವೆ. ಅದಕ್ಕಾಗಿ ಸಮಿತಿ ರಚಿಸಿ ರಾಜ್ಯ ಸರ್ಕಾರ ನಮಗೆ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಹನುಮ ದೇವಸ್ಥಾನ ಕಟ್ಟಲೇಬೇಕು: ‘ಶ್ರೀರಂಗಪಟ್ಟಣದ ಮಸೀದಿ ತೆರವು ಮಾಡಿ, ಹನುಮ ದೇವಸ್ಥಾನ ಕಟ್ಟಬೇಕು’ ಎಂಬ ಹೇಳಿಕೆಗೆ ಈಗಲೂ ನಾನು ಬದ್ದ. ಇದಾದ ನಂತರ ಸುಮಾರು 40 ಮಂದಿ ನನಗೆ ಕರೆ ಮಾಡಿ, ನಮ್ಮಲ್ಲೂ ಈ ರೀತಿ ಅನ್ಯಾಯ ಆಗಿದೆ ಎಂಬುದನ್ನು ತಿಳಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಅಲ್ಲಿ ನನ್ನ ಹನುಮನ ದೇವಸ್ಥಾನ ಕಟ್ಟಲೇಬೇಕು ಎಂದಿರುವುದಾಗಿ ಪ್ರತಿಪಾದಿಸಿದ್ದಾರೆ.

ಅದೊಂದು ಪ್ರಾಚೀನ ದೇವಸ್ಥಾನ. ಅಯೋಧ್ಯೆಯ ರಾಮಮಂದಿರದಂತೆ, ಅಲ್ಲಿಯೂ ಹುನಮನ ದೇವಸ್ಥಾನವಿದೆ. ಮೂಲ ವಿಗ್ರಹವೂ ಇದೆ. ಇದಕ್ಕಾಗಿ ನಾನು ಹಿಂದೂಪರ ಸಂಘಟನೆಗಳು ಹಾಗೂ ಎಲ್ಲ ಸ್ವಾಮೀಜಿಗಳ ಮಾರ್ಗದರ್ಶನದೊಂದಿಗೆ ಕೇವಲ ಶ್ರೀರಂಗಪಟ್ಟಣ ಮಾತ್ರವಲ್ಲ, ರಾಜ್ಯದ ಪ್ರತಿ ಹಳ್ಳಿಗೂ ಹೋಗುತ್ತೇನೆ. ನಾನು ಒಬ್ಬನೇ ಹೋಗುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿರಿ: ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇವನ್ಯಾವ ಮೂರು ಕಾಸಿನ ಹಲ್ಕಟ್ ಸ್ವಾಮಿ? ನರಹಂತಕನ ಸರ್ಕಾರ ಇರುವಾಗ ಇವರದ್ದೇ ಅತಿಮಾತು. ಲೋಹಿಯಾ, ರಾಯ್ ಗಳ ಶಿಷ್ಯನ ಮಗ ಮುಖ್ಯಮಂತ್ರಿಯಾಗಿ ಚಡ್ಡಿಗಳ ಗುಲಾಮಿತನದಲ್ಲಿ ವ್ಯಸ್ಥಗೊಂಡಿರುವುದು ಇಂತಹ ಕೊಳಚೆ ಹುಳುಗಳ ಹಾವಳಿ ಹೆಚ್ಚಲು ಕಾರಣ.

LEAVE A REPLY

Please enter your comment!
Please enter your name here

- Advertisment -

Must Read

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ. ಅರ್ಧ...