Homeಕರ್ನಾಟಕಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

- Advertisement -
- Advertisement -

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ ಮಣ್ಣಿನ ಸೊಗಡು ಇದ್ದು, ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣಬೇಕಾದದ್ದು ನಾಗರೀಕತೆಯ ಕರ್ತವ್ಯ. ಆದರೆ, ದೇಶವನ್ನು ತಮ್ಮದೇ ಜಾತಿ- ಧರ್ಮ ಶ್ರೇಷ್ಠ ಎಂಬ ಶ್ರೇಷ್ಠತೆಯ ವ್ಯಸನ ಕಾಡುತ್ತಿರುವಂತೆಯೇ ಇದೀಗ ಭಾಷಾ ಶ್ರೇಷ್ಠತೆಯ ವ್ಯಸನವೂ ದೇಶಕ್ಕೆ ಮಾರಕವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

ಭಾರತದಲ್ಲಿ ನೂರೆಂಟು ಭಾಷೆಗಳಿವೆ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಆದರೆ, ಕನ್ನಡ ಅಭಿವೃದ್ಧಿಗೆ ಬಿಡಿಗಾಸು ನೀಡದ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ಹೇರಿದಂತೆ ಇದೀಗ ಸಂಸ್ಕೃತವನ್ನೂ ಹೇರಲು ಮುಂದಾಗಿದೆ. ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆಗೆ ನೂರಾರು ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಲು ಹೊರಟಿದೆ. ಇದಕ್ಕೆ ವಿರೋಧಗಳು ವ್ಯಕ್ತವಾಗುತ್ತಿದ್ದಂತೆ, ಹಲವು ಬಲಪಂಥೀಯರು ಸಂಸ್ಕೃತ ಭಾರತದ ಆದಿಭಾಷೆ, ಮೂಲ ಭಾಷೆ, ಭಾರತದ ಮಾತೃಭಾಷೆ ಎಂದೆಲ್ಲಾ ಹೊಸ ಹೊಸ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಸಂಸ್ಕೃತ ಭಾಷೆಯ ಅಬ್ಬರ ಜೋರಾಗಿಯೇ ಇದೆ.

ಈ ಹಿನ್ನೆಲೆಯಲ್ಲಿ ಭಾರತದ ಮೂಲ ಭಾಷೆ ಯಾವುದು? ಸಂಸ್ಕೃತಕ್ಕೂ ಭಾರತಕ್ಕೂ ಇರುವ ಸಂಬಂಧವೇನು? ಸಂಸ್ಕೃತ ನಿಜಕ್ಕೂ ಭಾರತದ ಮೂಲ ಭಾಷೆಯ-ದೇವ ಭಾಷೆಯಾ? ಇಷ್ಟಕ್ಕೂ ಸಂಸ್ಕೃತ ಇದೀಗ ಸತ್ತ ಭಾಷೆಯಾಗಿರುವುದು ಏಕೆ? ಎಂಬ ಅಸಲಿ ವಿಚಾರಗಳ ಕಡೆಗೆ ಗಮನ ಹರಿಸಬೇಕಾದ ತುರ್ತು ಎದುರಾಗಿದೆ.

ಸಂಸ್ಕೃತದ ಮೂಲ ಯಾವುದು?

ಜಗತ್ತಿನಲ್ಲಿ ಅತಿದೊಡ್ಡ ನುಡಿ ಕುಟುಂಬ ಇಂಡೋ ಯುರೋಪಿಯನ್ ಕುಟುಂಬ. ಲಿತುವೇನಿಯಾದ ಪುರಾತತ್ವ ತಜ್ಞೆ ಮಾರಿಜಾ ಗಿಂಬುಟಾಸ್ ಎನ್ನುವವರು ಪ್ರತಿಪಾದಿಸಿದ್ದ ಕುರ್ಗಾನ್ ಹಯ್ಪಾತಿಸಿಸ್ (Kurgan hypothesis) ಪ್ರಕಾರ ಇಂಡೋ ಯೂರೋಪಿಯನ್ನರ ತಾಯ್ನೆಲ ಇರುವುದು ಪಾಂಟಿಕ್ ಸ್ಟೆಪ್ (Pontic Steppe) ಜಾಗದಲ್ಲಿ. ಇದು ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ನಡುವಿನ ಜಾಗ. ಈಗ್ಗೆ 5000 ವರ್ಷಗಳ ಹಿಂದೆ ಅಲ್ಲಿದ್ದ ಆದಿ ಇಂಡೊ ಯೂರೋಪಿಯನ್ ನುಡಿಗರು ಯೂರೋಪ್ ಮತ್ತು ದಕ್ಶಿಣ ಏಶಿಯಾ ಕಡೆಗೆ ಎರಡು ಕವಲುಗಳಾಗಿ ವಲಸೆ ಹೋದರು. ಈ ಮೂನಲಕ ಜಗತ್ತಿನ ಎಲ್ಲಾ ಕಡೆ ಇಂಡೋ ಯೂರೋಪಿಯನ್ ಕುಟುಂಬದ ನುಡಿಗಳನ್ನು ಹಬ್ಬಿಸಿದರು. ಈ ಕುರ್ಗPನ್ ಹಯ್ಪಾತಿಸೀಸ್ ನ್ನು ಇತ್ತೀಚಿನ DNA ಸಂಶೋದನೆಗಳು ಸಹ ಗಟ್ಟಿಗೊಳಿಸಿವೆ.

ಈ ಇಂಡೋ ಯೂರೋಪಿಯನ್ ನುಡಿ ಕುಟುಂಬದ ಎರಡು ಕವಲುಗಳು ಇಂಡೋ ಆರ್ಯನ್ ಕವಲು ಮತ್ತು ಇರಾನಿಯನ್ ಕವಲು. ಸಂಸ್ಕೃತ ನುಡಿಯು ಇಂಡೋ ಕುಟುಂಬ ಕವಲಿನ ನುಡಿಯಾದರೆ ಅವೆಸ್ತ ಮತ್ತು ಪರ್ಸಿಯನ್ ಇರಾನಿಯನ್ ಕವಲಿನ ನುಡಿಗಳು. ಬಹಳ ಹಳೆಯದಾದ ಋಗ್ವೇದ ಸಂಸ್ಕೃತದಲ್ಲಿ ಇದ್ದರೆ ಜೊರಾಸ್ಟ್ರಿಯನ್ನರ ಜಂಡ್ ಅವೆಸ್ತಾ ಗ್ರಂಥವು ಅವೆಸ್ತಾ ನುಡಿಯಲ್ಲಿದೆ. ಈ ಎರಡೂ ಪ್ರಾಚೀನ ಗ್ರಂಥಗಳ ನಡುವೆ ಬಹಳ ಸಾಮ್ಯತೆ ಇರುವುದು ಸಹ ಕಂಡುಬಂದಿದೆ.

ಸಂಸ್ಕೃತ ನುಡಿಯ ಮೂಲಕ ಇಂಡೋ ಯೂರೋಪಿಯನ್ ಕುಟುಂಬದ ನುಡಿ ಬಾರತಕ್ಕೆ ಬಂದದ್ದು ಇಂದಿಗೆ 3,500 ವರ್ಷಗಳ ಹಿಂದೆ. ಈ ಹೊತ್ತಿಗೆ ಭಾರತದಲ್ಲಿ ದ್ರಾವಿಡ ನುಡಿ ಬಹಳ ಕುಟುಂಬ ದೊಡ್ಡ ನುಡಿ ಕುಟುಂಬವಾಗಿ ಬಾರತದ ಜನರಲ್ಲಿ ಚಾಲ್ತಿಯಲ್ಲಿತ್ತು. ಸಿಂದೂ ಬಯಲಿನ ನಾಗರೀಕತೆಯೂ ದ್ರಾವಿಡ ನುಡಿಗಳ ಮೂಲಕವೇ ಕಟ್ಟಲ್ಪಟ್ಟಿತ್ತು.

ಜೊತೆಗೇ ಮತ್ತೊಂದು ನುಡಿ ಕುಟುಂಬದ ಕೋಲಾ ಮುಂಡಾ ನುಡಿಯೂ ಭಾರತದಲ್ಲಿ ಬೇರು ಬಿಟ್ಟು ಬೆಳೆದಿತ್ತು. ಈ ಭಾಷೆಗಳಲ್ಲಿ ಭಾರತದ ಮಣ್ಣಿನ ಸೊಗಡಿತ್ತು. ಅಷ್ಟರಲ್ಲಾಗಲೇ ದ್ರಾವಿಡ ಬಾಷೆಗಳಲ್ಲಿ ಸಾಹಿತ್ಯಗಳನ್ನೇ ರಚಿಸಲಾಗಿತ್ತು. ಆದರೆ, ತದನಂತರದ ಕಾಲದಲ್ಲಿ ಭಾರತಕ್ಕೆ ವಲಸೆ ಬಂದ ಸಂಸ್ಕೃತ ಹೇಗೆ ಭಾರತದ ಮೂಲ ಮಾತೃ ಭಾಷೆಯಾಯಿತು? ಎಂದು ಪ್ರಶ್ನೆ ಮಾಡುತ್ತಾರೆ ಸಾಮಾಜಿಕ ಹೋರಾಟಗಾರ, ಎಲ್ಲರ ಕನ್ನಡ ಚಳವಳಿಯ ಪ್ರಮುಖರಲ್ಲೊಬ್ಬರಾದ ಹರ್ಷಕುಮಾರ ಕುಗ್ವೆ.

ಪ್ರಖ್ಯಾತ ಸಂಶೋಧಕರಾದ ಷಾ ಶೆಟ್ಟರ್, ಸಂಗಮೇಶ್ ಬದರಿಮಠ್ ರಂತಹ ಸಂಶೋಧಕರೂ ಸಹ ದ್ರಾವಿಡ ಭಾಷೆಯ ಭಾರತದ ಮೂಲ ಭಾಷೆ ಎಂಬುದನ್ನು ಈಗಾಗಲೇ ತಮ್ಮ ಸಂಶೋಧನೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದು ಹಲವರು ಸಂಸ್ಕೃತವೇ ಭಾರತದ ಮಾತೃ ಭಾಷೆ ಎಂದು ಆಧಾರವಿಲ್ಲದೆ ವಾದಿಸುತ್ತಿರುವುದು ವಿಪರ್ಯಾಸ.

(ಮಾಹಿತಿ – ಹರ್ಷಕುಮಾರ್ ಕುಗ್ವೆ)


ಇದನ್ನೂ ಓದಿರಿ: ’ಸಂಸ್ಕೃತ’ ಪುನರುತ್ಥಾನ ಮತ್ತು ನೆಲದ ’ನುಡಿ’ಗಳ ಕೂಗು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಾರಾಷ್ಟ್ರ ಸರ್ಕಾರ

50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಬಹುಮತ ಸಾಬೀತುಪಡಿಸುತ್ತೇನೆ: ಬಂಡಾಯ ನಾಯಕ ಏಕನಾಥ್ ಶಿಂಧೆ

0
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್‌ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ ಬೆನ್ನಲ್ಲೇ, ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು ತಮ್ಮದೇ ಪಕ್ಷದ 50 ಶಾಸಕರು...