ಸ್ವಾತಂತ್ರ್ಯ ಭಾರತದ ಮೊದಲ ಭಯೋತ್ಪಾದಕ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಂತಕ ‘ನಾಥೂರಾಮ್ ಗೋಡ್ಸೆ’ಯನ್ನು ವೈಭವೀಕರಿಸಲು ಉದ್ದೇಶಿಸಿರುವ ‘ವೈ ಐ ಕಿಲ್ಲಲ್ಡ್ ಗಾಂಧಿ’ (ನಾನೇಕೆ ಗಾಂಧಿಯನು ಕೊಂದೆ) ಸಿನಿಮಾ ಬಿಡುಗಡೆ ಮಾಡದಂತೆ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ನಾಥೂರಾಮ್ ಗೋಡ್ಸೆ ಕುರಿತ ಸಿನಿಮಾವನ್ನು ಒಟಿಟಿಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದು, ಅದಕ್ಕೆ ತಡೆ ನೀಡಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಅಶೋಕ್ ತ್ಯಾಗಿ ನಿರ್ದೇಶನದ, ಕಲ್ಯಾಣಿ ಸಿಂಗ್ ಅವರು 2017ರಲ್ಲಿ ನಿರ್ಮಿಸಿದ ಈ ಚಿತ್ರವನ್ನು ಸೆನ್ಸಾರ್ ಮಂಡಳಿಯು ತೆರವುಗೊಳಿಸದ ಕಾರಣ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿಲ್ಲ. ಈಗ ಅದನ್ನು OTT ವೇದಿಕೆಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಜನವರಿ 30ರಂದು (ಗಾಂಧೀಜಿಯನ್ನು ಹತ್ಯೆ ಮಾಡಿದ ದಿನ) ಸಿನಿಮಾ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ.
ಎನ್‌ಸಿಪಿ ನಾಯಕ ಮತ್ತು ಶಿರೂರು ಲೋಕಸಭಾ ಕ್ಷೇತ್ರದ ಸಂಸದ ಅಮೋಲ್ ಕೋಲ್ಹೆ ಚಿತ್ರದಲ್ಲಿ ಗೋಡ್ಸೆ ಪಾತ್ರವನ್ನು ಮಾಡಿದ್ದಾರೆ. ತಾವು ಗಾಂಧಿ ಚಿಂತನೆಗಳಲ್ಲಿ ದೃಢ ನಂಬಿಕೆ ಹೊಂದಿದ್ದು, ನಟನಾಗಿ ಸವಾಲು ಹಾಕುವ ಸಲುವಾಗಿಯೇ ವಿವಾದಾತ್ಮಕ ಪಾತ್ರವನ್ನು ಕೈಗೆತ್ತಿಕೊಂಡಿರುವುದಾಗಿ ಅವರು ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿರಿ: ‘ನಾನೇಕೆ ಗಾಂಧಿಯನ್ನು ಕೊಂದೆ’ ಸಿನಿಮಾ ಬಿಡುಗಡೆ ಬೇಡ: ಸೇವಾದಳ ಯಂಗ್ ಬ್ರಿಗೇಡ್ ಆಗ್ರಹ
ಚಿತ್ರವು ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸಿದೆ, ಮಹಾತ್ಮ ಗಾಂಧಿಯನ್ನು ಕೊಂದ ಕೃತ್ಯವನ್ನು ಸಂಭ್ರಮಿಸಲಾಗಿದೆ ಎಂದು ಅರ್ಜಿದಾರ ಸಿಕಂದರ್ ಬೆಹ್ಲ್ ಆರೋಪಿಸಿದ್ದಾರೆ. ಈ ಚಿತ್ರವು ರಾಷ್ಟ್ರಪಿತ ಗಾಂಧೀಜಿಯವರ ವ್ಯಕ್ತಿತ್ವಕ್ಕೆ ಕಳಂಕ ತರುವ ಉದ್ದೇಶವನ್ನು ಹೊಂದಿದೆ. ಕೋಮು ಸೌಹಾರ್ದತೆ, ದ್ವೇಷವನ್ನು ಹರಡುವುದು ಮತ್ತು ಶಾಂತಿ ಕದಡುವುದು ಈ ಸಿನಿಮಾದ ಗುರಿಯಾಗಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಸೆನ್ಸಾರ್ ಮಂಡಳಿಯ ಅಧಿಕಾರ ವ್ಯಾಪ್ತಿಯನ್ನು ಮೀರಿದ OTT ಪ್ಲಾಟ್‌ಫಾರ್ಮ್‌ಗಳ ನಿಯಂತ್ರಣಕ್ಕಾಗಿ ಉನ್ನತ ನ್ಯಾಯಾಲಯವು ನಿರ್ದೇಶನಗಳನ್ನು ನೀಡಬೇಕೆಂದು ಬೆಹ್ಲ್ ಆಶಿಸಿದ್ದಾರೆ. ಒಟಿಟಿಗಳಿಗೆ ಸರಿಯಾದ ನಿರ್ಬಂಧ ಇರದ ಕಾರಣ ಸೆನ್ಸಾರ್ ಮಾಡದ ವಿಷಯವನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ವಕೀಲ ಅನುಜ್ ಭಂಡಾರಿ ಅವರ ಮೂಲಕ ಸಿಕಂದರ್ ಬೆಹ್ಲ್ ಅವರು ಅರ್ಜಿ ಸಲ್ಲಿಸಿದ್ದು, ಎಲ್ಲಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ವಿವಾದಾತ್ಮಕ ಚಿತ್ರದ ಎಲ್ಲಾ ವಿಷಯಗಳನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಚಿತ್ರದ ಎರಡು ನಿಮಿಷಗಳ ಇಪ್ಪತ್ತು ಸೆಕೆಂಡುಗಳ ಟ್ರೇಲರ್‌ನಲ್ಲಿ, ಭಾರತದ ವಿಭಜನೆ ಮತ್ತು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಮಹಾತ್ಮ ಗಾಂಧಿಯನ್ನು ದೂರುವ ಪ್ರಯತ್ನವನ್ನು ಮಾಡಲಾಗಿದೆ. ಆ ಮೂಲಕ ಮಹಾತ್ಮ ಗಾಂಧೀಜಿಯವರ ಹತ್ಯೆಯನ್ನು ಸಮರ್ಥಿಸಲಾಗಿದೆ ಎಂದು ಆಕ್ಷೇಪ ಎತ್ತಿದ್ದಾರೆ.
ಈ ಚಿತ್ರ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘವು (AICWA) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸಲು ಉದ್ದೇಶಿಸಿರುವ ಚಿತ್ರವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಆಗ್ರಹಿಸಿದೆ.
ಈ ಚಿತ್ರದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸದ ಅಮೋಲ್ ಕೋಲ್ಹೆ ಗೋಡ್ಸೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಳೆದ ಕೆಲವು ದಿನಗಳಿಂದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮಿತ್ರಪಕ್ಷಗಳಾದ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವೆ ಘರ್ಷಣೆಯನ್ನು ಹುಟ್ಟುಹಾಕಿದೆ.
ಗಾಂಧೀಜಿ ಹತ್ಯೆ ಮಾಡಲು ಗೋಡ್ಸೆ ಹೇಗೆ ಪ್ರೇರೇಪಿತನಾದ, ಆರ್‌ಎಸ್‌ಎಸ್ ಸಿದ್ಧಾಂತಗಳಿಂದ, ಆರ್‌ಎಸ್‌ಎಸ್ ನಾಯಕರಿಂದ ಗೋಡ್ಸೆ ಹೇಗೆ ಪ್ರಭಾವಿತನಾದ ಎಂಬುದನ್ನು ಇತ್ತೀಚೆಗೆ ಬಿಡುಗಡೆಯಾಗಿರುವ ‘ಗಾಂಧೀಸ್ ಅಸಾಸಿನ್’ (ಲೇಖಕರು: ಧೀರೇಂದ್ರ ಝಾ) ಅವರ ಕೃತಿ ಅತ್ಯಂತ ಪರಿಣಾಮಕಾರಿಯಾಗಿ ಚರ್ಚೆಸಿದೆ.
ಇನ್ನೊಂದೆಡೆ ಗಾಂಧೀಜಿಯವರನ್ನು ಅವ್ಯಾಚ ಪದಗಳಿಂದ ನಿಂದಿಸಿ ಗೋಡ್ಸೆಯನ್ನು ವೈಭವೀಕರಿಸಿದ ಹಿನ್ನೆಲೆಯಲ್ಲಿ ಕಾಳಿ ಚರಣ್ ಎಂಬ ಹಿಂದುತ್ವ ಸ್ವಾಮೀಜಿ ಹಾಗೂ ಮುಸ್ಲಿಮರ ನರಹತ್ಯೆಗೆ ಕರೆ ನೀಡಿದ ಯತಿ ನರಸಿಂಗಾನಂದ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೋಮು ಕೇಂದ್ರಿತ ರಾಜಕಾರಣಕ್ಕೆ ಬಲಪಂಥೀಯ ರಾಜಕಾರಣಿಗಳು ಯತ್ನಿಸುತ್ತಿರುವ ಬೆಳವಣಿಗೆಗಳ ನಡುವೆ ಭಯೋತ್ಪಾದಕ ಗೋಡ್ಸೆ ಕುರಿತ ಸಿನಿಮಾ ಬಿಡುಗಡೆಯ ಚರ್ಚೆ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿರಿ: ಪ್ರಧಾನಿ, ಯೋಗಿ ಆದಿತ್ಯನಾಥ್ ಪರ ಘೋಷಣೆ ಕೂಗುವಂತೆ ಮಕ್ಕಳಿಗೆ ಸೂಚನೆ : ತನಿಖೆಗೆ ಆದೇಶ
ಗೋಡ್ಸೆ ಬಗ್ಗೆ ಸಂಪೂರ್ಣ ತಿಳಿಯದ ಅಯೋಗ್ಯ ಕಮ್ಯೂನಿಸ್ಟ್ ,ನಗರ ನಕ್ಸಲ್ ರು ಈ ದೇಶಕ್ಕೆ ಮಾರಕ
ಗೋಡ್ಸೆ ಓರ್ವ ವಿಕೃತ ಮನಸ್ಸಿನ ಮತಾಂಧ ಭಯೋತ್ಪಾದಕ. ಪ್ರಪಂಚದ ಅತಿ ದೊಡ್ಡ ಭಯೋತ್ಪಾದಕ ಸಂಘಟನೆ ಆರೆಸ್ಸೆಸಿನ ಸದಸ್ಯ. ಆರೆಸ್ಸೆಸ್ ಈ ದೇಶಕ್ಕೆ ಅಪಾಯಕಾರಿ ಕ್ಯಾನ್ಸರ್. ಹಿಂಸೆ ಹೊರತುಪಡಿಸಿದರೆ ನಕ್ಸಲ್
ಚಳವಳಿ ಜನಪರವಾದದ್ದೇ. ಹಿಟ್ಲರ್, ಮುಸೋಲಿನಿ ಆರಾಧಕರಾದ ಸಂಘಿಗಳು ಸ್ವಾತಂತ್ರ್ಯಕ್ಕಾಗಿ ನಯಾಪೈಸೆ ಹೋರಾಟ ಮಾಡಿಲ್ಲದ ಕಾರಣ ಈಗ ಧರ್ಮ ದ್ವೇಷ ಹಚ್ಚಿ ದೇಶ ವಿಭಜನೆಗೆ ಹೊರಟಿದ್ದಾರೆ