Homeಕರ್ನಾಟಕ'ನಾನೇಕೆ ಗಾಂಧಿಯನ್ನು ಕೊಂದೆ' ಸಿನಿಮಾ ಬಿಡುಗಡೆ ಬೇಡ: ಸೇವಾದಳ ಯಂಗ್ ಬ್ರಿಗೇಡ್ ಆಗ್ರಹ

‘ನಾನೇಕೆ ಗಾಂಧಿಯನ್ನು ಕೊಂದೆ’ ಸಿನಿಮಾ ಬಿಡುಗಡೆ ಬೇಡ: ಸೇವಾದಳ ಯಂಗ್ ಬ್ರಿಗೇಡ್ ಆಗ್ರಹ

- Advertisement -
- Advertisement -

ಮಹಾತ್ಮ ಗಾಂಧೀಜಿ ಅವರನ್ನು ಅವಹೇಳನ ಮಾಡುವ ʼನಾನೇಕೆ ಗಾಂಧಿಯನ್ನು ಕೊಂದೆʼ ಎಂಬ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಯಂಗ್ ಬ್ರಿಗೇಡ್ ಆಗ್ರಹಿಸಿದೆ.

ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿದ ಮಹಾತ್ಮನ ಕುರಿತು ನಿರಂತರ ಅಪಪ್ರಚಾರ ಮಾಡಲಾಗುತ್ತಿದೆ. ಅವರು ಕುರಿತು ಸುಳ್ಳು ಸುದ್ದಿಗಳನ್ನು ಬಿತ್ತಲಾಗುತ್ತಿದೆ. ಆ ಮೂಲಕ ಮಹಾತ್ಮರ ಅನನ್ಯ ಸಾಧನೆಗಳನ್ನು ಮರೆಮಾಚಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ ನಡೆಯುತ್ತಿದೆ. ಅದರ ಭಾಗವಾಗಿಯೇ ಮಹಾತ್ಮರ ವಿರುದ್ಧ ಸಿನಿಮಾಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಪ್ರಮುಖವಾಗಿ ಜ.30 ರಂದು ಚಿತ್ರಮಂದಿರ ಹಾಗೂ ಓಟಿಟಿ ವೇದಿಕೆಗಳಲ್ಲಿ ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಒಂದೆಡೆ ಅಹಿಂಸೆ, ಶಾಂತಿಗಾಗಿ ಗಾಂಧೀಜಿ ಅವರ ಪುಣ್ಯತಿಥಿ ಆಚರಿಸಿದರೆ, ಮತ್ತೊಂದೆಡೆ ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾ ಬಿಡುಗಡೆ ಮಾಡುವ ಮೂಲಕ ಭಯೋತ್ಪಾದನೆ, ಹಿಂಸಾಚಾರವನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ ಎಂದು ಸೇವಾದಳ ಯಂಗ್ ಬ್ರಿಗೇಡ್ ಅಧ್ಯಕ್ಷರಾದ ಜುನೈದ್‌ರವರು ಕಿಡಿಕಾರಿದ್ದಾರೆ.

ಮಹಾತ್ಮ ಗಾಂಧಿಯವರನ್ನು ಕೊಂದ ನಾಥೂರಾಮ್ ಗೂಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕನಾಗಿದ್ದಾನೆ. ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಗಾಂಧೀಜಿಯವರ ಈ ದೇಶದ ಮೇಲೆ ನಡೆದ ದಾಳಿ ಎಂದೇ ಪರಿಗಣಿಸಲ್ಪಟ್ಟಿದೆ. ಆದರೆ ಗೂಡ್ಸೆಯಂತ ಭಯೋತ್ಪಾದಕರನ್ನು ಆರಾಧಿಸುವ ಸಂತತಿ ಭಾರತದಲ್ಲಿ ಬೆಳೆಯುತ್ತಿದ್ದು, ಅವರೆ ಈ ರೀತಿಯ ಸಿನಿಮಾ ನಿರ್ಮಾಣ ಮಾಡಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾತ್ಮ ಗಾಂಧೀಜಿಯವರ ಅನುಯಾಯಿಗಳಾದ ನಾವು ಮಹಾತ್ಮನನ್ನು ಗುಂಡಿಟ್ಟು ಕೊಂದ ಹೇಡಿಯನ್ನು ವಿರೋಧಿಸುತ್ತೇವೆ. ಹದಗೆಡುತ್ತಿರುವ ಸೌಹಾರ್ದತೆಯನ್ನು ಹಾಗೂ ಸಾಮಾಜಿಕ ಸಾಮರಸ್ಯ ಪುನಃ ಪ್ರತಿಷ್ಠಾಪಿಸಲು ಶ್ರಮಿಸುತ್ತಿದ್ದೇನೆ. ಮಹಾತ್ಮನ ವಿಚಾರಗಳನ್ನು ದೇಶದ ಮೂಲೆ ಮೂಲೆಗಳಲ್ಲೂ ತಲುಪಿಸಬೇಕಾಗಿದೆ ಹೊರತು ಹೇಡಿಯಾದ ಕೊಲೆಗಡುಕ ಗೋಡ್ಸೆಯ ದೃಷ್ಟಿಕೋನಗಳನ್ನಲ್ಲ ಎಂದು ನಂಬಿದ್ದೇವೆ. ಹಾಗಾಗಿ ಸಿನಿಮಾ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಲಾಗಿದೆ.


ಇದನ್ನೂ ಓದಿ: ಕರ್ನಾಟಕ ಕೊರೊನಾ: 24 ಗಂಟೆಯಲ್ಲಿ 67 ಸಾವಿರ ಡಿಸ್ಚಾರ್ಜ್, 38 ಸಾವಿರ ಹೊಸ ಪ್ರಕರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕೊಲೆಗೆ ಯಾವ ಸಮರ್ಥನೆಯನ್ನು ಕೊಟ್ಟರೂ ಅದು ಕೊಲೆಯೇ. ಅದರಲ್ಲೂ ಮಹಾತ್ಮ ಗಾಂಧಿಯವರ ಕೊಲೆಯನ್ನು ಸಮರ್ಥಿಸಿಕೊಳ್ಳುವುದು ಅಪರಾಧ.

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...