ಬೆಂಗಳೂರಿನಲ್ಲಿ ಎಂದು ಮುಗಿಯದ ಸಮಸ್ಯೆ ರಸ್ತೆಗುಂಡಿಗಳದ್ದು. ಪ್ರತಿ ವರ್ಷವೂ ದುರಸ್ಥಿ ಕಾರ್ಯ ನಡೆಯುತ್ತಲೇ ಇದೆ ಎಙಂದು ಬಿಬಿಎಫಿ ಹೇಳಿಕೊಂಡರೂ, ಜನರಿಗೆ ಮಾತ್ರ ಕಷ್ಟ ತಪ್ಪಿದ್ದಲ್ಲ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಕಿಡಿ ಕಾರಿದೆ.
”ಬಿಬಿಎಂಪಿ ಸಲ್ಲಿಸಿರುವ ಸ್ಥಿತಿಗತಿ ವರದಿ ನಮಗೆ ತೃಪ್ತಿ ತಂದಿಲ್ಲ. ರಸ್ತೆಗಳ ದುರಸ್ತಿಗೆ ಅವರು ಯಾವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ..? ಅವರು ರಸ್ತೆಗಳ ನಿರ್ಮಾಣ ಮತ್ತು ದುರಸ್ತಿಯಲ್ಲಿ ಯಾವುದೇ ತಜ್ಞರು ಅಥವಾ ಹೊರಗಿನ ಏಜೆನ್ಸಿಗಳನ್ನು ತೊಡಗಿಸಿಕೊಂಡಿದ್ದಾರೆಯೇ ಎಂಬುದನ್ನು ಪಾಲಿಕೆಯು ತಿಳಿಸಬೇಕು’ ಎಂದು ಹೈಕೋರ್ಟ್ ವಿಭಾಗೀಯ ಪೀಠ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ವಿಭಾಗೀಯ ಪೀಠ, ಕೋರಮಂಗಲದ ವಿಜಯನ್ ಮೆನನ್ ಮತ್ತು ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿದೆ.
ರಸ್ತೆ ಗುಂಡಿಗಳನ್ನು ಮುಚ್ಚಲು ವಿಫಲವಾಗಿರುವ ಪಾಲಿಕೆ ಎಂಜಿನಿಯರ್‌ಗಳನ್ನು ಜೈಲಿಗೆ ಕಳುಹಿಸಬೇಕು ಎಂದು ಕಿಡಿಕಾರಿರುವ ಹೈಕೋರ್ಟ್, ಮುಂದಿನ ವಿಚಾರಣೆಯ ದಿನಾಂಕವಾದ ಫೆಬ್ರವರಿ 7 ರಂದು ಮುಖ್ಯ ಇಂಜಿನಿಯರ್, ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ನಿರ್ದೇಶಿಸಿದೆ.
ಇದನ್ನೂ ಓದಿ: ತೇಜಸ್ವಿ ಸೂರ್ಯ ಓದಿದ ಮುಸ್ಲಿಮರ ಪಟ್ಟಿ: ಬಿಬಿಎಂಪಿ ಇಂತಹ ಲಿಸ್ಟ್ ತಯಾರಿಸಿಲ್ಲ! ಮತ್ತೆ ಯಾರು?
ಬಿಬಿಎಂಪಿ ವಕೀಲರು ನಗರದ ರಸ್ತೆಗಳ ಸ್ಥಿತಿಗತಿ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ರಸ್ತೆಗಳು ಗುಂಡಿಗಳಿಂದ ತುಂಬಿದ್ದು, 30 ಕಿಮೀಗಿಂತ ಹೆಚ್ಚಿನ ಪ್ರಮುಖ ರಸ್ತೆಗಳು ಮತ್ತು 482 ಕಿಮೀ ಉಪ ರಸ್ತೆಗಳಲ್ಲಿ ಗುಂಡಿ ದುರಸ್ತಿ ಕಾರ್ಯ ನಡೆದಿಲ್ಲ. BWSSB, BESCOM ಮತ್ತು GAIL ನಂತಹ ಏಜೆನ್ಸಿಗಳು ರಸ್ತೆ ಅಗೆಯುವುದು, ಪೈಪ್‌ಲೈನ್‌ಗಳನ್ನು ಹಾಕುವುದರ ಪರಿಣಾಮವಾಗಿ ಹೊಂಡಗಳು ಮತ್ತು ರಸ್ತೆಯು ಹದಗೆಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಏಜೆನ್ಸಿಗಳಿಂದಲೇ ದುರಸ್ತಿ ಕಾರ್ಯ ನಡೆಯಬೇಕಿದ್ದು, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿಲ್ಲ ಎಂದು ಬಿಬಿಎಂಪಿ ವಕೀಲರು ತಿಳಿಸಿದರು. ಈ ಏಜೆನ್ಸಿಗಳು ಅನುಮತಿ ಪಡೆದು ರಸ್ತೆ ಅಗೆಯುವುದನ್ನು ಆರಂಭಿಸಿದರೂ ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ ಎಂದು ದೂರಿದ್ದಾರೆ.
ಇದಕ್ಕೆ ಉತ್ತರಿಸಿರುವ ನ್ಯಾಯಾಲಯ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಏಜೆನ್ಸಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಗುಂಡಿ ದುರಸ್ತಿಗೆ ಅಳವಡಿಸಿದ ವಿಧಾನ ಮತ್ತು ತಂತ್ರಜ್ಞಾನಗಳಾವುವು. ರಸ್ತೆಗಳಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡು ಜನರಿಗೆ ತೊಂದರೆ ಉಂಟುಮಾಡುವ ಬಿಬಿಎಂಪಿ ಮತ್ತು ಇತರ ಏಜೆನ್ಸಿಗಳ ನಡುವೆ ಯಾವುದೇ ನೀತಿ ಮತ್ತು ಸಮನ್ವಯವಿದೆಯೇ ಎಂಬುದನ್ನು ಬಿಬಿಎಂಪಿ ವಕೀಲರು ಸೂಚಿಸಿಲ್ಲ ಎಂದಿದೆ.
ಈ ಸಂಸ್ಥೆಗಳು ಮತ್ತು ಬಿಬಿಎಂಪಿ ನಡುವೆ ಒಂದಷ್ಟು ಸಮನ್ವಯತೆ ಇರಬೇಕು. ಇದಲ್ಲದೆ, ರಸ್ತೆಗಳು ಮತ್ತು ಹೊಂಡಗಳ ದುರಸ್ತಿಗೆ ಬಿಬಿಎಂಪಿ ಬಳಸುತ್ತಿರುವ ತಂತ್ರಜ್ಞಾನವು ಸರಿಯಾಗಿ ಕಾಣುತ್ತಿಲ್ಲ ಎಂದು ನ್ಯಾಯಾಲಯ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿ ನಿರ್ವಹಣೆಯ 204 ಕೆರೆಗಳಲ್ಲಿ 20 ಮಾತ್ರ ಒತ್ತುವರಿಯಿಂದ ಮುಕ್ತ
ಇದ್ದುದರಲ್ಲಿ ಬೆಂಗಳೂರು ದಾರಿಗಳು ಚೆನ್ನಾಗಿವೆ.
ಹಳ್ಳಿಗಳು, ಹೊರ ಊರಿನ ದಾರಿಗಳು ತುಂಬಾ ಹದಗೆಟ್ಟಿವೆ. Bwssb,bescom,kptcl, ofc ಯವರೂ ದಾರಿ ಅಗೆಯುತ್ತಾರೆ essential service ಹೆಸರಲ್ಲಿ. ಯಾರನ್ನು ಬೊಟ್ಟು ಮಾಡುವುದು.
ಎಶ್ಟೋ ಮಂದಿ ಅಲೆಮಾರಿಗಳಿಗೆ ಮನೆಇಲ್ಲ.
ಇದಕ್ಕೆ ಸರ್ಕಾರವನ್ನು ಹೊಣೆ ಮಾಡಬೇಕೆ ಹೊರತು ಇಂಜಿನಿಯರುಗಳನಲ್ಲ.
ಗುತ್ತಿಗೆದಾರರು ಡಾಂಬರು, ಜೆಲ್ಲಿ,ರೋಲರ್,ಕೆಲಸಗಾರರು ಅವರಿಗೆ ತಕ್ಕ ಹಣದ ಪೂರಯ್ಕೆಯನ್ನು ಸರ್ಕಾರ ಮಾಡಬೇಕಿರುತ್ತದೆ. ಇವುಗಳ ಪೂರಯ್ಕೆ ಇಲ್ಲದೆ ತಮ್ಮ ಜೊತೆಗಾರರಿಗಿಂತ ಓದಿನಲ್ಲಿ ಮುಂದೆ ಇದ್ದು ಇಂಜಿನಿಯರಿಂಗ್ ಓದಿದವರನ್ನು ಕೋರ್ಟ್ ಈಕೆಳ ಮಟ್ಟದಲ್ಲಿ ನೋಡುವುದು ತರವಲ್ಲ.
ಇಂಜಿನಿಯರ್ ಎಂದರೆ, ಎಇ/,ಜೆಇ, aee,ee,se,ce,EIC ಮುಂತಾದ ಹಲವಾರು ಕೇಡರುಗಳಿವೆ.
ಯಾರನ್ನು ಸೆರೆಮನೆಗೆ ದೂಡುವುದು?
ತಾಳುಬುಡ ತಿಳಿಯದವರ ಪೇಚಾಟ ಇದಶ್ಟೆ.