Homeಕರೋನಾ ತಲ್ಲಣತೇಜಸ್ವಿ ಸೂರ್ಯ ಓದಿದ ಮುಸ್ಲಿಮರ ಪಟ್ಟಿ: ಬಿಬಿಎಂಪಿ ಇಂತಹ ಲಿಸ್ಟ್ ತಯಾರಿಸಿಲ್ಲ! ಮತ್ತೆ ಯಾರು?

ತೇಜಸ್ವಿ ಸೂರ್ಯ ಓದಿದ ಮುಸ್ಲಿಮರ ಪಟ್ಟಿ: ಬಿಬಿಎಂಪಿ ಇಂತಹ ಲಿಸ್ಟ್ ತಯಾರಿಸಿಲ್ಲ! ಮತ್ತೆ ಯಾರು?

ಈ ಪಟ್ಟಿ "ಅಧಿಕೃತ ಮೂಲಗಳಿಂದ" ಬಂದಿಲ್ಲ ಎಂದು ಬಿಬಿಎಂಪಿಯ ಮೂವರು ಅಧಿಕಾರಿಗಳು ದಿ ಕ್ವಿಂಟ್‌ಗೆ ದೃಢಪಡಿಸಿದ್ದಾರೆ

- Advertisement -
- Advertisement -

ಮೇ 4 ರಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಂಗಳೂರು ದಕ್ಷಿಣ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಕೋವಿಡ್ ವಾರ್‌ರೂಮಿಗೆ ಎಂಟ್ರಿ ನೀಡಿದರು. (ಮಾಧ್ಯಮಗಳ ಪ್ರಕಾರ ಇದು ದಾಳಿ). ನಂತರ ಅವರು 16 ಮುಸ್ಲಿಂ ಹೆಸರುಗಳನ್ನು ಓದಿದರು, “ಇವರೆಲ್ಲಾ ಯಾರು? ಇವರನ್ನು ಹೇಗೆ ಕೆಲಸಕ್ಕೆ ತೆಗೆದುಕೊಳ್ಳಲಾಯಿತು?” ಎಂದು ಪ್ರಶ್ನಿಸಿದ್ದರು ತೇಜಸ್ವಿ ಸೂರ್ಯರವರ ಚಿಕ್ಕಪ್ಪ ಮತ್ತು ಬಸವನಗುಡಿ ಬಿಜೆಪಿ ಶಾಸಕ ಎಲ್. ಎ. ರವಿಸುಬ್ರಮಣ್ಯ “ನೀವೇನು ಮದರಾಸಗೆ ನೇಮಕಾತಿ ಮಾಡುತ್ತಿದ್ದೀರೊ ಇಲ್ಲ, ಕಾರ್ಪೋರೇಷನ್‌ಗೋ?” ಎಂದು ಪ್ರಶ್ನಿಸಿದ್ದರು. ಮತ್ತೊಬ್ಬ ಬಿಜೆಪಿ ಶಾಸಕ ಸತೀಶ್ ರೆಡ್ಡಿ “ಇವರ್ಯಾರು ಮೇಡಂ, ಇವರನ್ನು ಹೇಗೆ ನೇಮಕ ಮಾಡಲಾಯಿತು? ಹಜ್ ಸಮಿತಿಗೆ ನೇಮಕ ಮಾಡುವ ಹಾಗೆ ಈ 16 ಜನರನ್ನು ನೇಮಕ ಮಾಡಿದ್ದೀರಾ ಹೇಗೆ?” ಎಂದು ಕೂಗಾಡಿದ್ದರು.

ತೇಜಸ್ವಿ ಸೂರ್ಯ ನಂತರ ಪತ್ರಿಕಾಗೋಷ್ಠಿ ಕರೆದು , ಬಿಬಿಎಂಪಿಯಲ್ಲಿ ಹಾಸಿಗೆ ಹಂಚಿಕೆ ಹಗರಣವನ್ನು ಬಹಿರಂಗಪಡಿಸಿದರು, ಹೆಚ್ಚಿನ ದರವನ್ನು ಪಾವತಿಸುವವರಿಗೆ ಹಾಸಿಗೆಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಸ್ವಲ್ಪ ಸಮಯದ ನಂತರ, 16 ಮುಸ್ಲಿಂ ಗುತ್ತಿಗೆ ನೌಕರರನ್ನು ಬಿಬಿಎಂಪಿ ವಾರ್‌ ರೂಂನಿಂದ ಯಾವುದೇ ಕಾರಣವಿಲ್ಲದೆ ತೆಗೆದುಹಾಕಲಾಯಿತು. ಆದರೆ ನಂತರ ಅವರೆಲ್ಲರೂ ಅಮಾಯಕರೆಂದು ಬೆಡ್ ಬ್ಲಾಕಿಂಕ್ ದಂಧೆಯಲ್ಲಿ ಬಿಜೆಪಿ ಶಾಸಕರೇ ಭಾಗಿಯಾಗಿರುವುದು ಮಾಧ್ಯಮಗಳಿಂದ ಬಹಿರಂಗವಾಯಿತು. ಆಗಿನಿಂದ ತೇಜಸ್ವಿ ಸೂರ್ಯ ನನಗೆ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಲಿಸ್ಟ್ ಕೊಟ್ಟರು. ನಾನು ಓದಿದೆ ಅಷ್ಟೇ ಎಂದು ಹೇಳುತ್ತಿದ್ದಾರೆ.

ಆದರೆ ಬಿಬಿಎಂಪಿ ಅಂತಹ ಪಟ್ಟಿ ನೀಡಿಯೇ ಇಲ್ಲ ಎಂದು ಆಂಗ್ಲ ವೆಬ್ ಪೋರ್ಟಲ್ ದಿ ಕ್ವಿಂಟ್ ಕಂಡುಕೊಂಡಿದೆ. ಆ ತರಹದ ಕೋಮುವಾದಿ ಮನಸ್ಸಿನ ಪಟ್ಟಿ ತಯಾರಿಸಿದ್ದು ಯಾರು? ಹಾಗಿದ್ದರೆ, ಯಾರ ಮೂಲಕ ಸಂಸದರಿಗೆ ಅದು ತಲುಪಿತು?

ಬೆಂಗಳೂರು ಮಹಾನಗರ ಪಾಲಿಕೆ ಈ ಪಟ್ಟಿಯನ್ನು ತಯಾರಿಸಿಲ್ಲ ಅಥವಾ ತೇಜಸ್ವಿ ಸೂರ್ಯರಿಗೆ ತನ್ನ ಗುತ್ತಿಗೆ ನೌಕರರ ಹೆಸರನ್ನು ತಿಳಿಸಿಲ್ಲ ಎಂದು ಮೂವರು ಬಿಬಿಎಂಪಿ ಅಧಿಕಾರಿಗಳು ದಿ ಕ್ವಿಂಟ್‌ಗೆ ಖಚಿತಪಡಿಸಿದ್ದಾರೆ.

ಮೇ 10 ರಂದು, ಬಿಬಿಎಂಪಿಯು ಎಲ್ಲಾ 16 ಜನರನ್ನು ಪುನಃ ಕೆಲಸಕ್ಕೆ ನೇಮಿಸಿತು. ಬೆಂಗಳೂರು ಪೊಲೀಸರ ಪ್ರಕಾರ, ಆಪಾದಿತ ‘ಬೆಡ್-ಹಗರಣ’ದೊಂದಿಗೆ ಅವರಿಗೆ ಯಾವುದೇ ಯಾವುದೇ ಸಂಬಂಧವಿಲ್ಲ,

ಸೂರ್ಯ ಹೆಸರಿಸಿದ ಪಟ್ಟಿ ಅಧಿಕೃತವಲ್ಲ!

ಮೇ 10 ರಂದು ತೇಜಸ್ವಿ ಸೂರ್ಯ ಬೆಂಗಳೂರು ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಿದರು. ಹಾಗೆ ಹೆಸರುಗಳನ್ನು ಏಕೆ ಓದಿರಿ? ಯಾರೋ ಕೊಟ್ಟ ಹೆಸರುಗಳನ್ನು ಪರಿಶೀಲನೆ ಮಾಡದೇ ಒಂದು ಕೋಮಿನ ಯುವ ಉದ್ಯೋಗಿಗಳನ್ನು ಏಕೆ ಬಲಿಪಶು ಮಾಡಲು, ಆ ಮೂಲಕ ಕೋಮು ಸೌಹಾರ್ದ ಕದಡಲು ಯತ್ನಿಸಿದಿರಲ್ಲವೇ? ಎಂದು ಪತ್ರಕರ್ತರು ಕೇಳಿದರು. ಆದರೆ ಆಗಲೂ ಸಂಸದ ಸೂರ್ಯ ಅವರು ತಮ್ಮ ಹಿಂದಿನ ಉತ್ತರವನ್ನು ಪುನರಾವರ್ತಿಸಿದರು, ಅಂದರೆ “ನನಗೆ ಅಧಿಕಾರಿಗಳು ನೀಡಲಾದ” ಪಟ್ಟಿಯಿಂದ ಓದಿದ್ದೇನೆ ಎಂಬ ಉತ್ತರ!

ರಾಜಕೀಯ ಒತ್ತಡದ ಕಾರಣಕ್ಕೆ ತಮ್ಮ ಹೆಸರು ಗುರುತಿಸಿಕೊಳ್ಳಲು ಇಷ್ಟಪಡದ ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು, ದಿ ಕ್ವಿಂಟ್ ಪತ್ರಿಕೆಗೆ ಹೀಗೆ ಹೇಳಿದ್ದಾರೆ, “ಬಿಬಿಎಂಪಿಯು ವಾರ್‌ರೂಮಿನಲ್ಲಿ ಉದ್ಯೋಗದಲ್ಲಿದ್ದ ಎಲ್ಲಾ 214 ಜನರ ಪಟ್ಟಿಯನ್ನು ಹೊಂದಿದೆ. ನಿರ್ದಿಷ್ಟ ನಂಬಿಕೆಗೆ, ಧರ್ಮಕ್ಕೆ ಸೇರಿದವರ ಪ್ರತ್ಯೇಕ ಪಟ್ಟಿಯನ್ನು ನಾವು ಮಾಡಿಲ್ಲ. ಈ ಪಟ್ಟಿಯನ್ನು ನಮ್ಮ ಅಧಿಕಾರಿಗಳು ತಯಾರಿಸಿಲ್ಲ. ಅದರ ಅಗತ್ಯವೂ ಇಲ್ಲ….”

ಬಿಬಿಎಂಪಿ ವಿಷಯಗಳ ಬಗ್ಗೆ ತಿಳಿದಿರುವ ಇನ್ನೊಬ್ಬ ಅಧಿಕಾರಿ, “ಇದು ಕೋಮುವಾದಿ ನೆಲೆಯಲ್ಲಿ ನೌಕರರನ್ನು ವರ್ಗಿಕರಿಸಿದ ಪಟ್ಟಿ. ಅಂತಹ ಪಟ್ಟಿಯನ್ನು ಬಿಬಿಎಂಪಿ ಎಂದೂ ತಯಾರು ಮಾಡಿಲ್ಲ” ಎಂದಿದ್ದಾರೆ.

ಒಮ್ಮೆ ಪಟ್ಟಿಯಲ್ಲಿರುವ ಹೆಸರುಗಳನ್ನು ಸೂರ್ಯ ಓದಿದ ನಂತರ, ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಯಿತು. ಇದರಿಂದಾಗಿ ಹಲವಾರು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಬಿಬಿಎಂಪಿ ಅಧಿಕಾರಿಗಳನ್ನು “ಹಿಂದೂ ಜೀವಗಳನ್ನು” ತೆಗೆದುಕೊಂಡ “ಭಯೋತ್ಪಾದಕರು” ಎಂದು ಗುರಿಯಾಗಿಸಲಾಯಿತು.

ಸೂರ್ಯ ಭೇಟಿ ನೀಡಿದಾಗ ವಾರ್‌ರೂಮಿನಲ್ಲಿದ್ದ ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು, “ಸಂಸದರು ವಾರ್‌ರೂಮಿಗೆ ಕಾಲಿಟ್ಟಾಗ ಕಾಗದದ ತುಂಡೊಂದನ್ನು ತಂದಿದ್ದರು. ಅವರು ಯಾವುದೇ ಬಿಬಿಎಂಪಿ ಅಧಿಕಾರಿಯೊಂದಿಗೆ ಪಟ್ಟಿ ಅಧಿಕೃತವಾಗಿದೆಯೇ ಅಥವಾ ಯಾವುದೇ ಉದ್ದೇಶಕ್ಕಾಗಿ ಅದನ್ನು ತಯಾರಿಸಿದ್ದಾರೆ ಎಂದು ಪರಿಶೀಲಿಸಲಿಲ್ಲ” ಎಂದು ಬಿಬಿಎಂಪಿ ಅಧಿಕಾರಿಗಳು ಕ್ವಿಂಟ್‌ಗೆ ತಿಳಿಸಿದ್ದಾರೆ.  ಘಟನೆ ಕುರಿತು ಬಿಬಿಎಂಪಿ ಅಧಿಕೃತ ಹೇಳಿಕೆ ನೀಡಿಲ್ಲ.

ಪಟ್ಟಿ ಎಲ್ಲಿಂದ ಬಂತು?

ಕ್ವಿಂಟ್ ಪೋರ್ಟಲ್ ಕ್ರಿಸ್ಟಲ್ ಇನ್ಫೋಸಿಸ್ಟಮ್ಸ್ ಅನ್ನು ಸಂಪರ್ಕಿಸಿದೆ. ಕ್ರಿಸ್ಟಲ್ ಇನ್ಫೋಸಿಸ್ಟಮ್ಸ್ ಬಿಬಿಎಂಪಿ ವಾರ್‌ರೂಮಿಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಕಾರ್ಯವಿಧಾನದ ಪ್ರಕಾರ ಅವರು ತಮ್ಮ ನೌಕರರ ಹೆಸರನ್ನು ಬಿಬಿಎಂಪಿಗೆ ನೀಡಿದ್ದಾರೆ ಎಂದು ಸಂಸ್ಥೆ ದೃಢ ಪಡಿಸಿದೆ. “ನಮ್ಮ ಪಟ್ಟಿಯಲ್ಲಿ ಹೆಚ್ಚಿನ ಹೆಸರುಗಳಿವೆ. ಕಳೆದ 10-15 ದಿನಗಳಲ್ಲಿ ನೇಮಕಗೊಂಡವರ ಹೆಸರನ್ನು ಮಾತ್ರ ಸಂಸದರು ಓದಿದ್ದಾರೆ”ಎಂದು ಕ್ರಿಸ್ಟಲ್ ಇನ್ಫೋಸಿಸ್ಟಮ್‌ನಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಂಪನಿಯು ಪಟ್ಟಿಯನ್ನು ಸಂಸದರಿಗೆ ಒದಗಿಸಿದೆಯೇ? ಎಂಬ ಪ್ರಶ್ನೆಗೆ, “ಸಂಸದರು ಈ ಹೆಸರುಗಳನ್ನು ಹೇಗೆ ಗುರುತಿಸಿದ್ದಾರೆಂದು ನಮಗೆ ತಿಳಿದಿಲ್ಲ. ಇದು ನಮ್ಮಿಂದ ಪಡೆದ ಪಟ್ಟಿಯಲ್ಲ” ಎಂದು ಕ್ರಿಸ್ಟಲ್ ಉದ್ಯೋಗಿ ಹೇಳಿದರು.

ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು, “ಸಂಸದರು ವಾರ್‌ರೂಮ್ ಮೇಲೆ ನಿಯಂತ್ರಣವನ್ನು ಬಯಸಿದ್ದರು ಮತ್ತು ನೇಮಕಾತಿ ಮತ್ತು ನಿರ್ವಹಣೆಯಲ್ಲಿ ನಿಯಂತ್ರಣ ಬಯಸಿದ್ದರು. ಅವರು ಇಲ್ಲಿಗೆ ಕಾಲಿಟ್ಟಾಗ ಅವರು ನೌಕರರನ್ನು ಭಯಭೀತರಾಗಿಸಲು ಕೋಮು ಉದ್ವೇಗವನ್ನು ಸೃಷ್ಟಿಸಲು ಪ್ರಯತ್ನಿಸಿದರು. ಇದು ಅವರ ರಾಜಕೀಯ ಶೈಲಿಗೆ ಹೊಂದುವಂತೆಯೇ ಇತ್ತು. ಈ ಪಟ್ಟಿಯನ್ನು ಸಂಸದರ ತಂಡವೇ ತಯಾರಿಸಿದಂತೆ ಕಾಣುತ್ತದೆ’ ಎಂದು ಅಧಿಕಾರಿ ಆರೋಪಿಸಿದ್ದಾರೆ. “ಸಂಸದರ ತಂಡದ ಹಲವಾರು ಸದಸ್ಯರು ಇತ್ತೀಚಿನ ದಿನಗಳಲ್ಲಿ ವಾರ್‌ರೂಮಿಗೆ ಭೇಟಿ ನೀಡಿದ್ದರು. ಅವರಲ್ಲಿ ಯಾರಾದರೂ ಪಟ್ಟಿಯನ್ನು ತಯರಿಸಬಹುದಿತ್ತು. ಈ ಪಟ್ಟಿಯು ಅಧಿಕೃತವಲ್ಲ… ಕೋಮು ವಿಭಜನೆಗಾಗಿ ರಚಿಸಲಾದ ಉದ್ದೇಶವನ್ನು ಮಾತ್ರ ಪೂರೈಸುತ್ತದೆ” ಎಂದು ಅಧಿಕಾರಿ ಹೇಳಿದರು.

ಬಸವನಗುಡಿ ಶಾಸಕ ರವಿ ಸುಬ್ರಮಣ್ಯ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಮತ್ತು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸೇರಿದಂತೆ ಮೂವರು ಬಿಜೆಪಿ ಶಾಸಕರೊಂದಿಗೆ ಸಂಸದರು ಬಿಬಿಎಂಪಿ ಬಾರ್‌ರೂಮಿಗೆ ಭೇಟಿ ನೀಡಿದ್ದರು.

ಪಟ್ಟಿಯನ್ನು ಏಕೆ ತಯಾರಿಸಲಾಯಿತು?

ತೇಜಸ್ವಿ ಸೂರ್ಯ ಪ್ರವೇಶಿಸುವ ಮೊದಲು, ಅವರ ದಕ್ಷಿಣ ಬೆಂಗಳೂರು ಕಚೇರಿಯ ಮೂವರು ಸದಸ್ಯರು ವಾರ್‌ರೂಮಿಗೆ ಭೇಟಿ ನೀಡಿದ್ದರು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಸಂಸದರ ತಂಡವು, ಹಾಸಿಗೆಗಳನ್ನು ಹೇಗೆ ಹಂಚಲಾಗುತ್ತದೆ ಮತ್ತು ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದೆಲ್ಲ ಪ್ರಶ್ನೆ ಮಾಡಿತು. ತಾವು ಕೊರೊನಾ ವಾರ್‌ರೂಮಿನ ಭಾಗವಾಗಬಹುದೇ ಎಂಬ ಪ್ರಶ್ನೆಗಳನ್ನು ಅವರು ಎತ್ತಿದ್ದರು. ಸರಿಯಾದ ಪ್ರಕ್ರಿಯೆಯ ಪ್ರಕಾರ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅವರಿಗೆ ತಿಳಿಸಲಾಯಿತು. ಅದರ ಮರುದಿನವೇ, ಸಂಸದರು ಕಚೇರಿಗೆ ಭೇಟಿ (ದಾಳಿ) ನೀಡಿದರು” ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಎಂ.ಪಿ ತಂಡವು ವಿನಾಶಕಾರಿ ಉದ್ದೇಶ ಹೊಂದಿದ್ದರಿಂದ ಈ ಪಟ್ಟಿಯನ್ನು ಸಂಗ್ರಹಿಸಲಾಗಿದೆ. “ಬಿಬಿಎಂಪಿ ಸಂಸದರ ಹಸ್ತಕ್ಷೇಪವನ್ನು ಬಯಸಲಿಲ್ಲ ಮತ್ತು ಇದು ಉದ್ವಿಗ್ನತೆಗೆ ಕಾರಣವಾಯಿತು. ಬಿಬಿಎಂಪಿ ಕೇವಲ ಮುಸ್ಲಿಂ ಸದಸ್ಯರನ್ನು ಮಾತ್ರ ನೇಮಕ ಮಾಡಿಕೊಳ್ಳುತ್ತಿದೆ ಎಂಬ ಅಭಿಪ್ರಾಯವನ್ನು ಸೃಷ್ಟಿಸಲು ಸಂಸದರು ಬಯಸಿದ್ದರು” ಎಂದು ಅಧಿಕಾರಿಯೊಬ್ಬರು ಕ್ವಿಂಟ್‌ಗೆ ಹೇಳಿದ್ದಾರೆ.

ತೇಜಸ್ವಿ ಸೂರ್ಯ ಅವರ ಕಚೇರಿ ದಿ ಕ್ವಿಂಟ್‌ನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. “ಸಂಸದರು ಈಗಾಗಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೇ ಮುಗೀತು. ಮತ್ತೆ ಇನ್ನೇನನ್ನೂ ಹೇಳುವ ಅಗತ್ಯವಿಲ್ಲ” ಎಂದು ತೇಜಸ್ವಿ ಸೂರ್ಯ ಅವರ ಕಚೇರಿ ಪ್ರತಿಕ್ರಿಯೆ ನೀಡಿದೆ..

ಕೃಪೆ: ದಿ ಕ್ವಿಂಟ್


ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮುಬಣ್ಣ: ಪತ್ರಕರ್ತರ ಮುಖ್ಯ ಪ್ರಶ್ನೆಗಳಿಗೆ ಸಂಸದ ತೇಜಸ್ವಿ ಸೂರ್ಯ ನಿರುತ್ತರ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...