Homeಮುಖಪುಟಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮುಬಣ್ಣ: ಪತ್ರಕರ್ತರ ಮುಖ್ಯ ಪ್ರಶ್ನೆಗಳಿಗೆ ಸಂಸದ ತೇಜಸ್ವಿ ಸೂರ್ಯ ನಿರುತ್ತರ!

ಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮುಬಣ್ಣ: ಪತ್ರಕರ್ತರ ಮುಖ್ಯ ಪ್ರಶ್ನೆಗಳಿಗೆ ಸಂಸದ ತೇಜಸ್ವಿ ಸೂರ್ಯ ನಿರುತ್ತರ!

ನಿಮ್ಮ ಪಕ್ಷದ ಶಾಸಕರು, ನಿಮ್ಮೆದುರೆ ಆ ಕೋಮುವಾದಿ ಹೇಳಿಕೆಗಳನ್ನು ನೀಡುವುದಕ್ಕೆ ನೀವು ಹೇಗೆ ಅವಕಾಶ ಕೊಟ್ಟಿರಿ? ನೀವು ಅದಕ್ಕೆ ಜವಾಬ್ದಾರರಲ್ಲವೇ?

- Advertisement -
- Advertisement -

ಕಳೆದ ವಾರ ಬಿಬಿಎಂಪಿ ಕೋವಿಡ್ ವಾರ್‌ ರೂಂನಲ್ಲಿ ಕೆಲಸ ಮಾಡುವ 205 ಜನರಲ್ಲಿ ಕೇವಲ 17 ಜನ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಅವರ ಹೆಸರನ್ನು ಓದುವ ಮೂಲಕ ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಸದ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಶಾಸಕರು ಕೋಮು ಆಯಾಮ ನೀಡಿ ವಿವಾದಕ್ಕೆ ಒಳಗಾಗಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ನೇರ ಪ್ರಶ್ನೆಗಳಿಗೆ ಸಂಸದ ತೇಜಸ್ವಿ ಸೂರ್ಯ ನಿರುತ್ತರರಾದ ಘಟನೆ ಸಂಭವಿಸಿದೆ.

ಕಳೆದ ವಾರ ಸಂಸದ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಶಾಸಕರು ಬಿಬಿಎಂಪಿ ಕೋವಿಡ್ ವಾರ್‌ ರೂಂ ಮೇಲೆ ದಾಳಿ ನಡೆಸಿದ್ದರು. 205 ಜನರಲ್ಲಿ ಕೇವಲ 17 ಜನ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಅವರ ಹೆಸರನ್ನು ಓದಿದ ಸಂಸದ “ಇವರೆಲ್ಲಾ ಯಾರು? ಮೂರು ಶಿಪ್ಟ್‌ಗಳಲ್ಲಿ ಈ 17 ಜನರ ಹೆಸರಿದೆ, ಇವರನ್ನು ಹೇಗೆ ಕೆಲಸಕ್ಕೆ ತೆಗೆದುಕೊಳ್ಳಲಾಯಿತು? ಈ ಜನರು ಯಾರು” ಎಂದು ಪ್ರಶ್ನಿಸಿದ್ದರು. ತೇಜಸ್ವಿ ಸೂರ್ಯರವರ ಚಿಕ್ಕಪ್ಪ ಮತ್ತು ಬಸವನಗುಡಿ ಬಿಜೆಪಿ ಶಾಸಕ ಎಲ್. ಎ. ರವಿಸುಬ್ರಮಣ್ಯ “ನೀವೇನು ಮದರಾಸಗೆ ನೇಮಕಾತಿ ಮಾಡುತ್ತಿದ್ದೀರೊ ಇಲ್ಲ, ಕಾರ್ಪೋರೇಷನ್‌ಗೋ?” ಎಂದು ಪ್ರಶ್ನಿಸಿದ್ದರು. ಮತ್ತೊಬ್ಬ ಬಿಜೆಪಿ ಶಾಸಕ ಸತೀಶ್ ರೆಡ್ಡಿ “ಇವರ್ಯಾರು ಮೇಡಂ, ಇವರನ್ನು ಹೇಗೆ ನೇಮಕ ಮಾಡಲಾಯಿತು? ಹಜ್ ಸಮಿತಿಗೆ ನೇಮಕ ಮಾಡುವ ಹಾಗೆ ಈ 17 ಜನರನ್ನು ನೇಮಕ ಮಾಡಿದ್ದೀರಾ ಹೇಗೆ?” ಎಂದು ಕೂಗಾಡಿದ್ದರು.

ತದನಂತರ ಆ 17 ಜನ ಮುಸ್ಲಿಂ ಯುವಕರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು ಮತ್ತು ಅವರನ್ನು ಎರಡು ಬಾರಿ ಜಯನಗರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು.

“ಅವರ ಮೇಲೆ ಯಾವುದೇ ಕ್ರಿಮಿಲಾಟಿಯನ್ನು ನಾನು ಹೂಡಿಲ್ಲ. ಅವರು ತಪ್ಪಿತಸ್ಥರೆಂದು ಅಧಿಕಾರಿಗಳು ಕೂಡ ಹೇಳಿಲ್ಲ. ಏಜೆನ್ಸಿ ಜೊತೆಗೆ ಕೆಲಸ ಮಾಡುವ ಗುತ್ತಿಗೆ ನೌಕರರು ಅವರು. ಅವರನ್ನು ಕೆಲಸಕ್ಕೆ ನೇಮಕ ಮಾಡುವುದಾಗಿ, ತೆಗೆದುಹಾಕುವುದಾಗಲಿ ತೇಜಸ್ವಿ ಸೂರ್ಯ ಆಗಲಿ, ಶಾಸಕರಾಗಲಿ ಮಾಡುವ ಕೆಲಸ ಅಲ್ಲ. ಬಿಬಿಎಂಪಿ ಮಾಡುವ ಕೆಲಸ ಅದು. ಅವರನ್ನು ಏಕೆ ತೆಗೆದುಹಾಕಿದರು ಎಂಬುದನ್ನು ಬಿಬಿಎಂಪಿಯವರಲ್ಲಿ ಕೇಳಿ” ಎಂದು ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹಾಗಾದರೆ ನೀವು 206 ಜನರ ಲಿಸ್ಟ್‌ನಲ್ಲಿ ಆ 17 ಮುಸ್ಲಿಮರ ಹೆಸರನ್ನು ಮಾತ್ರ ಓದಿದ್ದು ಏಕೆ ಎಂಬ ಪ್ರಶ್ನೆಗೆ “ಆ ಲಿಸ್ಟ್‌ನಲ್ಲಿ ಯಾರ ಹೆಸರಿದ್ದರೂ ನಾನು ಓದುತ್ತಿದ್ದೆ. ಇವರನ್ನು ಹೇಗೆ ಕೆಲಸಕ್ಕೆ ತೆಗೆದುಕೊಂಡಿರಿ ಎಂದು ಕೇಳಿದೆ. ನನಗೆ ಕೊಟ್ಟ ಲಿಸ್ಟ್‌ನಲ್ಲಿ ಅವರ ಹೆಸರು ಮಾತ್ರ ಇದ್ದವು. ನಂಬುವವರು ನಂಬಬಹುದು, ಬಿಡುವವರು ಬಿಡಬಹುದು” ಎಂದು ಹಾರಿಕೆಯ ಉತ್ತರ ನೀಡಿದರು.

ಹಾಗಾದರೆ ಅವರನ್ನು ಕೆಲಸದಿಂದ ಏಕೆ ತೆಗೆಯಲಾಯಿತು ಎಂಬ ಪ್ರಶ್ನೆಗೆ “ನಾನು ಅದನ್ನೇ ಕೇಳುತ್ತಿದ್ದೇನೆ. ನನಗೆ ಕೊಟ್ಟ ಪಟ್ಟಿ ಓದಿದೆ ಅಷ್ಟೇ. ಅವರನ್ನು ಏಕೆ, ಹೇಗೆ ನೇಮಕ ಮಾಡಿಕೊಳ್ಳಲಾಯಿತು? ಯಾವ ವಿಧಾನ ಅನುಸರಿಸಲಾಯಿತು ಎಂದು ಕೇಳಿದ್ದೇನೆ. ವಿಡಿಯೋ ಇದೆ ನೋಡಿ. ಏಕೆ 17 ಜನರನ್ನು ಪಟ್ಟಿ ಮಾಡಲಾಯಿತು ಎಂಬುದನ್ನು ನೀವು ಅಧಿಕಾರಿಗಳನ್ನು ಕೇಳಬೇಕು” ಎಂದರು.

ಆ ಸಂದರ್ಭದಲ್ಲಿ ಮದರಸ ಮತ್ತು ಹಜ್ ಎಂಬ ಪದಗಳನ್ನು ಏಕೆ ಬಳಕೆ ಮಾಡಲಾಯಿತು ಎಂಬ ಪತ್ರಕರ್ತರ ಪ್ರಶ್ನೆಗೆ “ನಾನು ಯಾವ ಪದಗಳನ್ನು ಬಳಸಿಲ್ಲ. ನಾನು ಏನು ಮಾತನಾಡಿದ್ದೇನೊ, ಯಾವ ವಿಚಾರ ಬಳಸಿದ್ದೆನೋ ಅದಕ್ಕೆ ಮಾತ್ರ ನಾನು ಜವಾಬ್ದಾರನಾಗಿದ್ದೇನೆ” ಎಂದು ತೇಜಸ್ವಿ ಸೂರ್ಯ ಹೇಳಿದರು.

ಆಗ ಪತ್ರಕರ್ತರು ಅಂದು ನಿಮ್ಮ ಜೊತೆಗಿದ್ದ ನಿಮ್ಮ ಪಕ್ಷದ ಶಾಸಕರು, ನಿಮ್ಮೆದುರೆ ಆ ಪದಗಳನ್ನು ಬಳಸಿದ್ದಾರೆ. ಆ ಕೋಮುವಾದಿ ಹೇಳಿಕೆಗಳನ್ನು ನೀಡುವುದಕ್ಕೆ ನೀವು ಹೇಗೆ ಅವಕಾಶ ಕೊಟ್ಟಿರಿ? ನೀವು ಅದಕ್ಕೆ ಜವಾಬ್ದಾರರಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ತೇಜಸ್ವಿ ಸೂರ್ಯ ಯಾವುದೇ ಉತ್ತರ ಕೊಡದೇ ನಿರುತ್ತರರಾದರು.

ನಂತರ ನಿಮಗೆ ನಿಮ್ಮದೇ ಅಜೆಂಡಾ ಇದೆ. ನನಗೆ ನನ್ನದೇ ಅಜೆಂಡಾ ಇದೆ. ನನ್ನ ಅಜೆಂಡ ಜನರಿಗೆ ಸತ್ಯ ಹೇಳುವುದು. ಜನರ ಜೀವ ರಕ್ಷಿಸುವುದು. ಈ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ಸಂಸದರು ಹೇಳಿದರು.

ಇದರಲ್ಲಿ ನಿಮ್ಮ ತಪ್ಪಿಲ್ಲ ಎಂದಾದರೆ ನೀವು ಓದಿದ ಆ 17 ಜನರನ್ನು ಜಯನಗರ ಪೊಲೀಸರು ವಿಚಾರಣೆ ನಡೆಸಿದ್ದೇಕೆ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ತಬ್ಬಿಬ್ಬಾಗಿ ಉತ್ತರಿಸದ ತೇಜಸ್ವಿ ಸೂರ್ಯ, ಬೇರೆ ಯಾವುದಾದರೂ ಪ್ರಶ್ನೆಗಳಿವೆಯೇ ಎಂದರು.

ಪ್ರಕರಣ ಬೆಳಕಿಗೆ ನಂತರ ನೀವು ಹೆಸರಿಸಿದವರಿಗೂ, ಬೆಡ್ ಬ್ಲಾಕ್‌ಗೂ ಯಾವುದೇ ಸಂಬಂಧವಿರಲಿಲ್ಲ. ಹಾಗಾದರೂ ನೀವು ಉನ್ನತ ಅಧಿಕಾರಿಗಳು ಕೊಟ್ಟ ಲಿಸ್ಟ್ ಅನ್ನು ಏಕೆ ಓದಿದಿರಿ? ಎಂದು ಪತ್ರಕರ್ತರ ಪ್ರಶ್ನಿಸಿದರು. ಅದಕ್ಕೂ ತಡಬಡಾಯಿಸಿದ ಸಂಸದರು “ನಾನು ಸತ್ಯವನ್ನು ಉತ್ತರಿಸಿದ್ದೇನೆ” ಎಂದು ಹೇಳುವ ಮೂಲಕ ಪ್ರಶ್ನೆಗೆ ಉತ್ತರಿಸಲಿಲ್ಲ.. ಮತ್ತು ಮತ್ತೆ ಯಾವುದೇ ಪ್ರಶ್ನೆ ಬಾರದಂತೆ ತಡೆದರು.

ಒಟ್ಟಿನಲ್ಲಿ ಪತ್ರಕರ್ತರ ಕಷ್ಟಕರವಾದ ಬಹುಮುಖ್ಯ ಪ್ರಶ್ನೆಗಳಿಗೆ ತೇಜಸ್ವಿ ಸೂರ್ಯ ಉತ್ತರಿಸಲೇ ಇಲ್ಲ. ಈ ಪತ್ರಿಕಾಗೋಷ್ಠಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪತ್ರಕರ್ತರ ಈ ಪ್ರಶ್ನೆಗಳಿಗಾಗಿ ಅವರನ್ನು ಅಭಿನಂದಿಸಲಾಗಿದೆ.

ಇನ್ನು ವಾರ್‌ ರೂಂ ಮೇಲೆ ದಾಳಿ ಮಾಡಿದಾಗ ಸಂಸದ ತೇಜಸ್ವಿ ಸೂರ್ಯ ಜೊತೆಗಿದ್ದ ಬಿಜೆಪಿ ಶಾಸಕ ಸತೀಶ್‌ ರೆಡ್ಡಿಯವರೆ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಶಾಮೀಲಾಗಿದ್ದರೆಂದು ವಿಜಯ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳು ವರದಿ ಮಾಡಿದ್ದವು. ಶಾಸಕರ ಪಿಎಯನ್ನು ಬಂಧಿಸುವಂತೆ ಒತ್ತಡ ಹೇರಲಾಗಿತ್ತು.

ತೇಜಸ್ವಿ ಸೂರ್ಯರವರ ಈ ನಡೆ ವಿರುದ್ಧ ಹಲವೆಡೆ ದೂರು ದಾಖಲಾಗಿವೆ. ಕೆಲಸದಿಂದ ಅಮಾನತ್ತಾಗಿದ್ದ 17 ಜನ ಅಮಾಯಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ.


ಇದನ್ನೂ ಓದಿ: ಅನ್ಯಾಯಕ್ಕೆ ಒಳಗಾದವರು ಇಲ್ಲದಿದ್ದಾಗ ತೆರಳಿ ಕ್ಷಮೆ ಯಾಚಿಸಿದ ತೇಜಸ್ವಿ ಸೂರ್ಯ: ಸಾರ್ವಜನಿಕ ಕ್ಷಮೆ ಯಾಚನೆಗೆ ಒತ್ತಾಯ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಸತ್ಯವನ್ನೇ ನುಡಿದು,ನಿಜಾಂಶಗಳನ್ನೇ..ಬಯಲು ಮಾಡಲಾಗಿದೆ.ಜನರು ಇದನ್ನು ಖಂಡಿತವಾಗಿ ನಿರೀಕ್ಷೆ ಮಾಡಿದ್ದರು.ಲಪಟಾಯಿಸುವವರಿಗೆ ಏನೂ ಸಿಗದಿದ್ದಾಗ ಇಂತಹ ಘನ ಕಾರ್ಯಗಳನ್ನು ತಾವೇ ಬಯಲುಗೊಳಿಸಿಕೊಂಡು ಬಿಡುತ್ತಾರೆಂಬುದಕ್ಕೆ *ಬೆಡ್ ಬ್ಲಾಕಿಂಗ್ ದಂಧೆ* ತಾಜಾ ಉದಾಹರಣೆ..
    ನೀವೇನಂತೀರೀ..!?

  2. ಮಾಧ್ಯಮದವರಿಗೆ ಜನಹಿತ ಚಿಂತನೆಯ ಬದಲು ರಾಜಕೀಯ ವೇ ಮುಖ್ಯವಾಗಿತ್ತು. ಸೂರ್ಯ ರವರು ಸರಿಯಾಗಿ ಉತ್ತರಿಸಿದರು.

  3. Mr Surya was correct in what he said. He said media is trying to divert the issue from finding a solution to the Covid bed blocking scam to a political and communal issue. Some members of the media were not happy. You seem to be one of them. As long as media is dishonest, they have no right to make comments like this.

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...