ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಚುನಾಯಿತರಾದ 77 ಬಿಜೆಪಿ ಶಾಸಕರಿಗೆ ಕೇಂದ್ರೀಯ ಭದ್ರತಾ ಪಡೆಗಳ ರಕ್ಷಣೆಯನ್ನು ಒದಗಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಹೊಸದಾಗಿ ಚುನಾಯಿತರಾದ 77 ಬಿಜೆಪಿ ಶಾಸಕರಿಗೆ CISF ಮತ್ತು CRPF ಸಶಸ್ತ್ರ ಕಮಾಂಡೋಗಳು ಭದ್ರತೆ ನೀಡುತ್ತಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರೀಯ ಭದ್ರತಾ ಸಂಸ್ಥೆಗಳು ಸಿದ್ಧಪಡಿಸಿದ ವರದಿ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಚುನಾವಣೆ ನಂತರದ ಹಿಂಸಾಚಾರದ ಹಿನ್ನೆಲೆಯಲ್ಲಿ ಕೇಂದ್ರ ಸಚಿವಾಲಯವು ರಾಜ್ಯಕ್ಕೆ ಕಳುಹಿಸಿದ ಉನ್ನತ ಮಟ್ಟದ ಅಧಿಕಾರಿಗಳ ವರದಿ ನಂತರ ಕೇಂದ್ರ ಗೃಹ ಸಚಿವಾಲಯ ಈ ಶಾಸಕರಿಗೆ ರಕ್ಷಣೆ ನೀಡಲು ಅನುಮೋದನೆ ನೀಡಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಕೇರಳಕ್ಕೆ ಆಕ್ಸಿಜನ್ ಅವಶ್ಯಕತೆ ಇದೆ, ಬೇರೆ ರಾಜ್ಯಗಳಿಗೆ ನೀಡಲಾಗದು- ಪಿಣರಾಯಿ ವಿಜಯನ್
ಸಚಿವಾಲಯದ ಹೊಸ ಆದೇಶದ ಪ್ರಕಾರ ಅರವತ್ತೊಂದು ಶಾಸಕರಿಗೆ ಅತ್ಯಂತ ಕಡಿಮೆಯ ‘X’ ಕೆಟಗರಿಯ ಭದ್ರತೆ ನೀಡಲಾಗುವುದು. ಕಮಾಂಡೋಗಳ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯ ಭದ್ರತೆಗೆ ಒಳಪಡಿಸಲಾಗುವುದು ಎಂದು ವರದಿ ಹೇಳಿದೆ.
ಉಳಿದವರಿಗೆ ಕೇಂದ್ರ ಭದ್ರತಾ ವ್ಯಾಪ್ತಿ ಅಥವಾ ಮುಂದಿನ ಉನ್ನತ ವರ್ಗ ‘Y’ ಕೆಟಗರಿ ಅಡಿಯಲ್ಲಿ ಭದ್ರತೆ ಒದಗಿಸಲಾಗುತ್ತದೆ. ಈಗಾಗಲೇ ಪ್ರತಿಪಕ್ಷದ ನಾಯಕ ಸುವೆಂಧು ಅಧಿಕಾರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಯ ‘Z’ ವಿಭಾಗದಲ್ಲಿ ಭದ್ರತೆ ನೀಡಲಾಗಿದೆ.
ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಸ್ಥಾನಗಳಲ್ಲಿ ಬಹುಮತ ಪಡೆದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ರಚಿಸಿದೆ. 77 ಸ್ಥಾನಗಳನ್ನು ಗೆದ್ದ ಬಿಜೆಪಿ ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: ಬಿಹಾರದ ಗಂಗಾ ನದಿ ತೀರದಲ್ಲಿ ತೇಲಿ ಬಂದ ಮೃತ ದೇಹಗಳು; ಸ್ಥಳೀಯರಲ್ಲಿ ಹೆಚ್ಚಿದ ಆತಂಕ