ಕೇರಳ ರಾಜ್ಯಕ್ಕೆ ಈಗ ಹೆಚ್ಚು ಆಕ್ಸಿಜನ್ ಅವಶ್ಯಕತೆ ಇದ್ದು, ಈಗಾಗಲೇ ಹೆಚ್ಚುವರಿಯಿದ್ದ ಸ್ಟಾಕ್ ಅನ್ನು ಬೇರೆ ರಾಜ್ಯಗಳಿಗೆ ನೀಡಲಾಗಿದೆ. ಇನ್ನು ಮುಂದೆ ಬೇರೆ ರಾಜ್ಯಗಳಿಗೆ ಆಕ್ಸಿಜನ್ ಪೂರೈಸಲಾಗದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಈಗಾಗಲೇ ತಮ್ಮ ರಾಜ್ಯದಲ್ಲಿ ಅವಶ್ಯಕತೆಗಿಂತ ಹೆಚ್ಚಿದ್ದ ಆಕ್ಸಿಜನ್ ಸ್ಟಾಕ್ ಅನ್ನು ನೆರೆಯ ರಾಜ್ಯಗಳಿಗೆ ಪೂರೈಸಿದ್ದೇವೆ. ಇನ್ನು ಕೇವಲ 86 ಮೆಟ್ರಿಕ್ ಟನ್ ಸ್ಟಾಕ್ ಉಳಿದಿದ್ದು, ಕೇರಳಕ್ಕೆ ಬೇಕಾಗಿದೆ. ಹೀಗಾಗಿ ಬೇರೆ ರಾಜ್ಯಗಳಿಗೆ ಪೂರೈಸಲು ಸಾಧ್ಯವಿಲ್ಲ ಎಂದಿದ್ದಾರೆ.
ಆಕ್ಸಿಜನ್ ಹಂಚಿಕೆಯ ಕೇಂದ್ರ ಸಮಿತಿಯ ಮೇ 6 ರ ತೀರ್ಪಿನ ಪ್ರಕಾರ ರಾಜ್ಯವು ಮೇ 10 ರವರೆಗೆ 40 ಮೆಟ್ರಿಕ್ ಟನ್ ಆಮ್ಲಜನಕವನ್ನು ತಮಿಳುನಾಡಿಗೆ ಪೂರೈಸುತ್ತದೆ. ಇದರ ನಂತರ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಆಮ್ಲಜನಕವನ್ನು ರಾಜ್ಯದಿಂದ ಹೊರತೆಗೆಯಲು ಪ್ರಾಯೋಗಿಕವಾಗಿ ಅಸಾಧ್ಯ ಎಂದು ಪತ್ರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬರೆದಿದ್ದಾರೆ.
ಇದನ್ನೂ ಓದಿ: ಹರಿಯಾಣ: ಮೇ 17 ರವರೆಗೆ ಲಾಕ್‌ಡೌನ್, ಬಿಪಿಎಲ್ ಕುಟುಂಗಳಿಗೆ 5 ಸಾವಿರ ರೂ. ಪ್ಯಾಕೇಜ್
ಕೇರಳದಲ್ಲಿ ಪ್ರಸ್ತುತ 4,02,640 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಮೇ 15 ರ ವೇಳೆಗೆ ಈ ಸಂಖ್ಯೆ 6,00,000 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ವೇಗವಾಗಿ ಏರುತ್ತಿರುವ ಕೊರೊನಾ ಪ್ರಕರಣಗಳ ದೃಷ್ಟಿಯಿಂದ, ಮೇ 15 ರ ವೇಳೆಗೆ ರಾಜ್ಯಕ್ಕೆ 450 ಮೆಟ್ರಿಕ್ ಟನ್ ಆಮ್ಲಜನಕ ಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ರಾಜ್ಯದ ಪ್ರಮುಖ ಆಮ್ಲಜನಕ ಉತ್ಪಾದನಾ ಘಟಕವೆಂದರೆ ಐನಾಕ್ಸ್, ಇದು ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿದೆ. ಇದರ ಒಟ್ಟು ಉತ್ಪಾದನಾ ಸಾಮರ್ಥ್ಯ 150 ಮೆಟ್ರಿಕ್ ಟನ್ ಮತ್ತು ಇತರ ಸಣ್ಣ ಘಟಕಗಳೊಂದಿಗೆ ಕೇರಳ ರಾಜ್ಯವು ಪ್ರತಿದಿನ 219 ಮೆಟ್ರಿಕ್ ಟನ್ ಆಮ್ಲಜನಕವನ್ನು ಉತ್ಪಾದಿಸುತ್ತಿದೆ ಎಂದು ಪಿಣರಾಯಿ ವಿಜಯನ್ ಬರೆದಿದ್ದಾರೆ.
ರಾಜ್ಯವು ಭೌಗೋಳಿಕವಾಗಿ ಮುಖ್ಯ ಉಕ್ಕಿನ ಸ್ಥಾವರಗಳಿಂದ ದೂರವಿರುವುದರಿಂದ, ಆಮ್ಲಜನಕದ ವರ್ಗಾವಣೆಯನ್ನು ಕಷ್ಟಕರವಾಗಿಸುತ್ತದೆ. ರಾಜ್ಯದಲ್ಲಿ ಉತ್ಪತ್ತಿಯಾಗುವ ಸಂಪೂರ್ಣ ಆಮ್ಲಜನಕವನ್ನು ಅಂದರೆ 219 ಮೆಟ್ರಿಕ್ ಟನ್ ಅನ್ನು ಕೇರಳ ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ನಾನು ವಿನಂತಿಸುತ್ತೇನೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ಸ್ಟಾಲಿನ್ ಸಂಪುಟದಲ್ಲಿ ಪುರುಷರದೇ ದರ್ಬಾರು – ಮಹಿಳೆಯರಿಗೆ ಕನಿಷ್ಠ ಪ್ರಾತಿನಿಧ್ಯ!
He can give only Chinese and antiindian country not to India