Homeನ್ಯಾಯ ಪಥನೂರರ ನೋಟ: ಇತ್ತೀಚಿನ ಚುನಾವಣಾ ಫಲಿತಾಂಶಗಳು ಮೋದಿ ಆಡಳಿತದ ವೈಫಲ್ಯಗಳನ್ನು ದೇಶಕ್ಕೆ ತೋರಿಸಿವೆ

ನೂರರ ನೋಟ: ಇತ್ತೀಚಿನ ಚುನಾವಣಾ ಫಲಿತಾಂಶಗಳು ಮೋದಿ ಆಡಳಿತದ ವೈಫಲ್ಯಗಳನ್ನು ದೇಶಕ್ಕೆ ತೋರಿಸಿವೆ

- Advertisement -
- Advertisement -

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮತದಾರರು ನಾನಾ ಕಾರಣಗಳಿಗಾಗಿ ಬಿಜೆಪಿಯನ್ನು ಮಣಿಸಿದ್ದಾರೆ.

ಅನೇಕ ವರ್ಷಗಳಿಂದ ತಮಿಳುನಾಡಿನ ಸ್ವಾಭಿಮಾನಿ ಮತದಾರರು ಹೊರಗಿನ ರಾಜಕೀಯ ಪಕ್ಷಗಳು ರಾಜ್ಯವನ್ನು ಕಬ್ಜಾ ಮಾಡದಂತೆ ಎಚ್ಚರಿಕೆ ವಹಿಸಿದ್ದರು. ಅಧಿಕಾರ ಬದಲಾದರೂ ಅದು ತಮಿಳರ ಕೈಯಲ್ಲೇ ಇರಬೇಕು ಎಂಬ ಛಲವಿತ್ತು. ಹೀಗಾಗಿ ಅಧಿಕಾರ ಎಐಡಿಎಂಕೆ ಅಥವಾ ಡಿಎಂಕೆ ಕೈಯಲ್ಲಿ ಇರುತ್ತಿತ್ತು. ಈ ಸ್ವಾಭಿಮಾನಕ್ಕೆ ಈ ಸಾರಿಯ ಚುನಾವಣೆಯ ವೇಳೆಯಲ್ಲಿ ಕುತ್ತು ಬಂತು. ಎಐಡಿಎಂಕೆ ತಾನು ಅಧಿಕಾರದಲ್ಲಿ ಉಳಿಯಬೇಕೆಂಬ ಏಕೈಕ ದುರುದ್ದೇಶದಿಂದ ಹೊರಗಿನ ಬಿಜೆಪಿ ಜೊತೆಗೆ ಕೈಜೋಡಿಸಿತು. ತನ್ನ ಸ್ವಾರ್ಥಕ್ಕೆ ತಮಿಳರ ಸ್ವಾಭಿಮಾನವನ್ನೇ ಒತ್ತೆ ಇಟ್ಟಿತು. ಮೋದಿ ಷಾ ಅವರ ಪಾದ ಹಿಡಿಯಿತು. ಎಐಡಿಎಂಕೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅದಕ್ಕಿಂತ ಹೆಚ್ಚಾಗಿ ತಮಿಳುನಾಡಿನ ಆಡಳಿತದ ಚುಕ್ಕಾಣಿ ಹಿಡಿಯುವ ಏಕೈಕ ಲಾಲಸೆಯಿಂದ ಬಹುದೊಡ್ಡ ತಪ್ಪೆಸಗಿತು. ಅನೇಕ ಕಾಲದಿಂದ ಒಂದು ಸೀಟಿಗೆ ತೃಪ್ತಿಪಟ್ಟುಕೊಂಡಿದ್ದ ಮತ್ತು ತಮಿಳುನಾಡಿನಲ್ಲಿ ಹೇಳ ಹೆಸರಿಲ್ಲದೆ ಇದ್ದ ಬಿಜೆಪಿಗೆ ಸ್ಪರ್ಧಿಸಲು ಎಐಡಿಎಂಕೆ ಹತ್ತಾರು ಸೀಟು ಬಿಟ್ಟುಕೊಟ್ಟು ತನ್ನ ಆತ್ಮ ಗೌರವವನ್ನೇ ಬಿಜೆಪಿಗೆ ಹರಾಜು ಹಾಕಿಕೊಂಡಿತು.

ಈ ಸಾರಿಯ ಚುನಾವಣೆಯಲ್ಲಿ ತಮಿಳುನಾಡಿನ ಮತದಾರರು ತಮ್ಮ ತಮಿಳು ನಿಷ್ಠೆಯನ್ನು ಎತ್ತಿ ಹಿಡಿದು ಡಿಎಂಕೆಗೆ ಬಹುಮತ ದೊರೆಯುವಂತೆ ಮಾಡಿದ್ದಾರೆ. ಎಐಡಿಎಂಕೆಗೆ ಛೀಮಾರಿ ಹಾಕಿ ಅವರನ್ನು ತಮಿಳು(ನಾಡಿನ) ದ್ರೋಹಿಗಳು ಎಂದು ಸಾರಿ ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿಯಾಗಿ ಎಂ.ಕೆ. ಸ್ಟಾಲಿನ್ ಪ್ರಮಾಣ ವಚನ | Naanu gauri

ಮೋದಿ ಮತ್ತು ಷಾ ಇಡೀ ಭಾರತವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂದು ಸಂಕಲ್ಪ ಮಾಡಿದ್ದಾರೆ. ಕೇರಳ, ತಮಿಳುನಾಡು ಎರಡನ್ನು ವಶಪಡಿಸಿಕೊಳ್ಳುವುದು ಪ್ರಯಾಸದ ಕೆಲಸ, ಆಗದ ಕೆಲಸ ಎಂಬುದನ್ನು ತಿಳಿದಿದ್ದರೂ ಆ ರಾಜ್ಯಗಳಿಗೆ ಹೇಗಾದರೂ ಮಾಡಿ ನುಸುಳಬೇಕೆಂಬ ಆಕಾಂಕ್ಷೆ ಅವರದ್ದು. ಆ ಎರಡು ರಾಜ್ಯಗಳಿಗೆ ಶತಾಯಗತಾಯು ನುಗ್ಗಿ ತಮಿಳುನಾಡಿನಲ್ಲಿ ಒಂದು ಸೀಟಿಗೆ ಬದಲು ಹತ್ತಾರು ಸೀಟುಗಳನ್ನಾದರೂ ವಶಪಡಿಸಿಕೊಳ್ಳಲು ಸಂಕಲ್ಪ ಮಾಡಿದ್ದರು. ತಮಿಳುನಾಡಿನಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಪಡೆದಿದ್ದರೂ, ಅವರಿಗ ತಳ ಊರಲು ತಮಿಳು ಮತದಾರರು ಅವಕಾಶ ಕೊಟ್ಟಿಲ್ಲ. ಕೇರಳದಲ್ಲಿ ಇದ್ದ ಒಂದು ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಅವರಿಗೆಲ್ಲ ಅಭಿನಂದನೆಗಳು. ಕನ್ನಡ ನಾಡಿನ ಕನ್ನಡಿಗ ಮತದಾರರು ತಮಿಳುರು ಬಿಜೆಪಿಗೆ ಕಲಿಸಿದ ಪಾಠವನ್ನು ಗಂಭೀರವಾಗಿ ಪರಿಗಣಿಸಬೇಕು. ಕನ್ನಡ ನಾಡಿನ ಜನ ತಮಿಳರಿಂದ ಆ ಪಾಠ ಕಲಿಯಬೇಕು.

ಕನ್ನಡ ನಾಡಿನ ಜನ ತನ್ನತನವನ್ನು ಮರೆತು ಎಷ್ಟೋ ವರ್ಷಗಳಾಗಿವೆ. ಎಲ್ಲರಿಗೂ ಮಣೆ ಹಾಕಿ ಬರಮಾಡಿಕೊಳ್ಳುವ ಬುದ್ಧಿಯನ್ನು ಕನ್ನಡಿಗರು ಬೆಳೆಸಿಕೊಳಡಿದ್ದಾರೆ. ತಮಿಳರಿಗಿರುವ ನಾಡಿನ ಪ್ರೇಮ, ಭಾಷೆಯ ಪ್ರೇಮವನ್ನು ಕನ್ನಡಿಗರು ರಾಜ್ಯೋತ್ಸವ ದಿನ ಮಾತ್ರ ನೆನಪಿಸಿಕೊಳ್ಳುತ್ತಾರೆ. ಕನ್ನಡ ನಾಡಿನ ಪ್ರತಿಷ್ಠೆ, ಗೌರವಗಳನ್ನು ತಮ್ಮ ಜೀವ ಒತ್ತೆ ಇಟ್ಟಾದರೂ ಕಾಪಾಡಿಕೊಳ್ಳಬೇಕೆಂಬ ಸಂಕಲ್ಪ ಶಕ್ತಿಯನ್ನು ಕಳೆದುಕೊಂಡುಬಿಟ್ಟಿದ್ದಾರೆ. ’ಅಂದರಿಕೀ ಜೈ’ ಅವರ ಸಮರ ಘೋಷಣೆ. ತಮಿಳು ರಾಜಕೀಯ ವ್ಯಕ್ತಿಗಳ ತಮಿಳು ಭಾಷಣದ ಶೈಲಿ ತಮಿಳರನ್ನು ಬಡಿದ್ದೆಬ್ಬಿಸುತ್ತದೆ. ತಮಿಳರಲ್ಲಿ ಆತ್ಮಗೌರವ, ತಮಿಳುನಾಡಿನ ಗೌರವ ಉಳಿಸಿಕೊಳ್ಳುವ ಸಂಕಲ್ಪ ಶಕ್ತಿಯನ್ನು ಈ ಸಾರಿಯ ಚುನಾವಣೆ ವೃದ್ಧಿಗೊಳಿಸಿದೆ. ಪುಟ್ಟಪ್ಪನವರು ಹೇಳುವ ಹಾಗೆ ’ಸತ್ತಂತಿಹರನ್ನು ಬಡಿದೆಬ್ಬಿಸುವ’ ಕಾರ್ಯ ಕನ್ನಡ ನಾಡಿನಲ್ಲಿ ಆರಂಭವಾಗಬೇಕಾಗಿದೆ. ಕನ್ನಡ ಕೆಲಸಕ್ಕೆ ಕಂಕಣ ತೊಟ್ಟಿರುವುದಾಗಿ ಹೇಳುವ ನಾಯಕರನ್ನೂ ಮೊದಲು ಬಡಿದೆಬ್ಬಿಸಬೇಕಾಗಿದೆ. ಪ್ರಾದೇಶಿಕ ಪಕ್ಷ ಕಟ್ಟುವುದರಲ್ಲಿ ವಿಫಲರಾಗಿರುವ ಕನ್ನಡ ನಾಯಕರು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇದನ್ನು ಇಲ್ಲಿಗೆ ಬಿಡೋಣ.

ಪ್ರಾಂತೀಯ ಪಕ್ಷವಾದ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಹೇಗೆ ಚುನಾವಣಾ ಸಮರ ಎದುರಿಸಿದರು ಎಂಬುದು ಪ್ರಾದೇಶಿಕ ಪಕ್ಷ ಕಟ್ಟಬಯಸುವವರಿಗೆ ಮಾದರಿಯಾಗಿದೆ. ಆಕೆ ನಿಜವಾದ ಬಂಗಾಳದ ಹುಲಿ. ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳೂ ಮೋದಿಷಾಗಳ ಆಕಾಂಕ್ಷೆಯನ್ನು ನೆರೆವೇರಿಸುವರಂತೆಯೇ ವರ್ತಿಸಿದರು. ತೃಣಮೂಲ ಕಾಂಗ್ರೆಸ್ಸನ್ನು ಮೂಲೆಗುಂಪು ಮಾಡುವುದೇ ಈ ಮೂರು ಪಕ್ಷಗಳ ಏಕೈಕ ಗುರಿಯಾಗಿತ್ತು. ಬಿಜೆಪಿ ನಮ್ಮ ವಿರೋಧಿ. ಅದನ್ನು ಗುಡಿಸಿ ಹಾಕಲು ತಾವು ಶ್ರಮಿಸಬೇಕೆಂದು ಅವೆರಡಕ್ಕೂ ಅನಿಸಲೇ ಇಲ್ಲ. ಭಾಜಪ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷವನ್ನು ಮೊದಲು ನಾಶ ಮಾಡಬೇಕೆಂದು ಸಂಕಲ್ಪ ಮಾಡಿರುವುದು ಆ ಎರಡೂ ಪಕ್ಷಗಳ ನಾಯಕರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಹಾಗೆ ಪಿತೂರಿ ಮಾಡುತ್ತಿರುವ ಏಕೈಕ ಪಕ್ಷವಾದ ಬಿಜೆಪಿಯನ್ನು ಮೊದಲು ನಾಮಾವಶೇಷ ಮಾಡಬೇಕು ಎಂಬ ಆಲೋಚನೆ ಅವರಿಗೆ ಬರಲಿಲ್ಲ. ಈ ತಪ್ಪಿಗೆ ಬಂಗಾಳ ಮತದಾರರೂ ಸೂಕ್ತ ರೀತಿಯ ಸೇಡನ್ನು ಈ ಎರಡೂ ಪಕ್ಷಗಳ ಮೇಲೆ ತೀರಿಸಿಕೊಳ್ಳಬೇಕೆಂದು ಸಂಕಲ್ಪ ಮಾಡಿದರು. ಅವೆರಡು ಪಕ್ಷಗಳಿಗೂ ಒಂದೊಂದು ಸೀಟು ಕೂಡ ಸಿಗದಂತೆ ಮಾಡಿಬಿಟ್ಟರು.

ಬಂಗಾಳದಲ್ಲಿ 8 ಹಂತದ ಚುನಾವಣೆ: ಮೋದಿ, ಶಾ ತಂತ್ರ ಎಂದು ಮಮತಾ ಬ್ಯಾನರ್ಜಿ ಆಕ್ರೋಶ
PC: NH

ದೀದಿಯ ನೆರವಿಗೆ ಬಂಗಾಳೇತರರು ಯಾರೂ ಬರಲಿಲ್ಲ. ಸಾಲದ್ದಕ್ಕೆ ತೃಣಮೂಲ ಕಾಂಗ್ರೆಸ್ಸಿನ ಶಾಸಕರೇ ಒಬ್ಬೊಬ್ಬರಾಗಿ ಅಧಿಕಾರ ಲಾಲಸೆಯಿಂದ ಮೋದಿಷಾಗಳ ತೆಕ್ಕೆಗೆ ಬೀಳಲಾರಂಭಿಸಿದರು. ಇವರೆಲ್ಲರ ಹಗೆತನವನ್ನು ದೀದಿ ಏಕಾಂಗಿಯಾಗಿ ಎದುರಿಸಬೇಕಾಯಿತು.

ಈ ಎಲ್ಲರ ವಿರೋಧದ ಮಧ್ಯೆಯೂ ದೀದಿ ಧೈರ್ಯವಾಗಿ ನಿಂತು ಹೋರಾಡಿದರು. ರಾಜ್ಯದ ಚುಕ್ಕಾಣಿಯನ್ನು ಮೂರನೆ ಬಾರಿಗೆ ಹಿಡಿಯುವುದರಲ್ಲಿ ವಿಜಯಶಾಲಿಯಾದರು. ಆಕೆಯ ಧೈರ್ಯ, ಸಾಹಸ, ಸಂಘಟನಾ ಚಾತುರ್ಯ ಎಲ್ಲವೂ ಮೆಚ್ಚತಕ್ಕದ್ದೇ.

ನಂದಿಗ್ರಾಮದಿಂದ ಸ್ಪರ್ಧಿಸಿದ್ದ ದೀದಿ ಅಲ್ಪ ಮತಗಳಿಂದ ಸೋತರು ಎಂಬ ಸುದ್ದಿ ಮೊದಲು ಬಂತು. ಆನಂತರ ಬಂದ ಸುದ್ದಿಯಂತೆ ಅವರಿಗೆ ಜಯ ಲಭಿಸಿದೆ ಎಂದು ಬಿತ್ತರಿಸಲಾಯಿತು. ಈಗ ದೀದಿ ಸೋತಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಈ ತೀರ್ಪಿನ ವಿರುದ್ಧವಾಗಿ ದೀದಿ ನ್ಯಾಯಾಲಯದ ಬಾಗಿಲು ತಟ್ಟಲಿದ್ದಾರೆ.

ಇನ್ನು ಕೇರಳವನ್ನು ಕಬಳಿಸುವ ವ್ಯವಸ್ಥಿತ ಸಂಚನ್ನೇ ಮೋದಿಷಾಗಳು ಮಾಡಿದರು. ಸಭೆ ಸಮ್ಮೇಳನ, ರ್‍ಯಾಲಿಗಳನ್ನು ಎರಡು ವರ್ಷಗಳ ಹಿಂದೆಯೇ ಆರಂಭಿಸಿದರು. ಕಮ್ಯುನಿಸ್ಟ್ ಶಾಸನಸಭೆ ಸದಸ್ಯರನ್ನು ಒಡೆದು ಆಳುವ ಯಾವ ಪ್ರಯತ್ನಕ್ಕೂ ಯಶಸ್ಸು ಸಿಗಲಿಲ್ಲ. ಪಕ್ಷ ನಿಷ್ಠರಾದ ಆ ಶಾಸಕರು ಮೋದಿಷಾಗೆ ತಕ್ಕ ಪಾಠವನ್ನು ಕಲಿಸಿದರು. ಬಿಜೆಪಿ ಹಿಂದಿನ ಸಾರಿ ಒಂದು ಸೀಟು ಗೆದ್ದಿತ್ತು. ಈ ಸಾರಿ ಒಂದೂ ಸೀಟು ಬಿಜೆಪಿಗೆ ದಕ್ಕಿಲ್ಲ. ಮುಖ್ಯಮಂತ್ರಿ ವಿಜಯನ್ ಫಲಿತಾಂಶ ಪ್ರಕಟವಾಗುವ ಎರಡು ದಿನಗಳ ಮೊದಲೇ ಅಧಿಕಾರಿಗಳಿಗೆ ಮಂತ್ರಿಗಳ ಪ್ರತಿಜ್ಞಾನಿಧಿ ತೆಗೆದುಕೊಳ್ಳುವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚನೆ ಕೊಟ್ಟರು.
ಇನ್ನು ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರಿಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರಿಗೂ ಜಿದ್ದಾಜಿದ್ದಿನ ಸ್ಪರ್ಧೆ ನಡೆದುಹೋಯಿತು. ಮೊದಲ ೨೦ ಸುತ್ತಿನ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜಾರಕಿಹೊಳಿ ಅವರಿಗಿಂತ ಸುಮಾರು ೧೦ ಸಾವಿರ ಮತಗಳಿಂದ ಮುಂದಿದ್ದರೆ ಜಾರಕಿಹೊಳಿ ೮೦ನೇ ಸುತ್ತಿನವರೆಗೆ ಸುಮಾರು ೨ ಸಾವಿರದಿಂದ ಹತ್ತು ಸಾವಿರ ಹೆಚ್ಚಿನ ಮತಗಳಿಸಿ ಮುಂದಿದ್ದರು. ಆದರೆ, ಕೊನೆಯ ೫-೬ ಸುತ್ತಿನ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮತಿ ಅಂಗಡಿಯವರು ಹೆಚ್ಚಿನ ಮತಗಳಿಸಿ ಜಯಶಾಲಿಗಳಾದರು.

ಮಮತಾ ಬ್ಯಾನರ್ಜಿಯವರಂತೆಯೇ ಜಾರಕಿಹೊಳಿಯವರೂ ಕೊನೆಯ ಸುತ್ತುಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಪರಾಭವಗೊಂಡರು.

ಪ್ರಜಾಪ್ರಭುತ್ವ ಎಂದರೆ ಚುನಾವಣೆಗಳಲ್ಲಿ ಗೆಲ್ಲುವುದು ಮಾತ್ರವಲ್ಲ, ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಸೂಕ್ತ ಪರಿಹಾರ ಮಾರ್ಗ ಕಂಡುಹಿಡಿಯುವುದು ಅದಕ್ಕಿಂತ ಮುಖ್ಯ. ಪ್ರಚಾರಪ್ರಿಯ ಮೋದಿ ಅವರು ಹೊಗಳಿಕೆಗಷ್ಟೇ ನಿಗಾ ಕೊಡುತ್ತಾರೆ. ಕೊರೊನಾವನ್ನು ಎದುರಿಸುವುದರಲ್ಲಿ ಮೋದಿ ಹೆಜ್ಜೆ ಹೆಜ್ಜೆಗೂ ಸೋತಿದ್ದರೂ ಬಿಜೆಪಿ ವಂದಿ ಮಾಗಧರು ಮತ್ತು ಮೋದಿ ಕೊಂಡುಕೊಂಡಿರುವ ದೃಶ್ಯಮಾಧ್ಯಮಗಳು ಮೋದಿಯವರ ಕಾರ್ಯ ವೈಖರಿಯನ್ನು ಹೊಗಳಿ ಹೊಗಳಿ ಅತನನ್ನು ಹೊನ್ನ ಶೂಲಕ್ಕೆ ಗುರಿಮಾಡಿದರು. ಕೊರೊನಾ ಎರಡನೆ ಅಲೆ ಇಡೀ ಭಾರತವನ್ನೇ ಅಪ್ಪಳಿಸಿದಾಗ ಮೋದಿ ಬೆಪ್ಪಾದರು. ಲಸಿಕೆಗಳ ಅಭಾವ, ವೈದ್ಯಕೀಯ ಬಳಕೆಯ ಶುದ್ಧ ಆಕ್ಸಿಜನ್ ಕೊರತೆ ಮೋದಿಯವರ ನಿಜ ಸ್ವರೂಪವನ್ನು ಬೆತ್ತಲೆ ಮಾಡಿತು. ಕೋವಿಡ್ ಸೋಂಕನ್ನು ತಡೆಹಿಡಿಯುವ ಸಂದರ್ಭದಲ್ಲಿಯೂ ಮೋದಿ ತನ್ನ ಏಕಪಾತ್ರ ಅಭಿನಯವನ್ನು ಮುಂದುವರೆಸಿದರು. ಕೇಂದ್ರ ಮಂತ್ರಿ ಮಂಡಲದ ಇತರ ಸಚಿವರ ಸಲಹೆ ಸೂಚನೆ ಪಡೆಯಲೂ ನಿರಾಕರಿಸಿದರು. ಭಾರತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಕ್ಕೂಟ ಸಂಸ್ಥೆ, ಆದರೆ ಮೋದಿ ಮನ್‌ಕಿಬಾತ್ ಮುಖಾಂತರ ತನ್ನ ತೀರ್ಮಾನಗಳನ್ನು ರಾಜ್ಯಗಳ ಮೇಲೆ ಹೇರಿದರೇ ಹೊರತು ರಾಜ್ಯಗಳನ್ನು ಈ ಹೋರಾಟದ ಪಾಲುದಾರರಾಗಿ ಪರಿಗಣಿಸಲಿಲ್ಲ.

ಲಸಿಕಾ ನೀತಿಯಲ್ಲಿ ನ್ಯಾಯಾಂಗದ ಹಸ್ತಕ್ಷೇಪ ವಿರೋಧಿಸಿದ ಕೇಂದ್ರ ಸರ್ಕಾರ

ಕಾಂಗ್ರೆಸ್ ಕೇರಳ ಸೋತು, ತಮಿಳುನಾಡು ಮತ್ತು ಬಂಗಾಳಗಳಲ್ಲಿ ಹೇಳಹೆಸರಿಲ್ಲದಂತಾಯಿತಾದರೂ ತಮಿಳುನಾಡಿನ ಕನ್ಯಾಕುಮಾರಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಿ ಕ್ಷೇತ್ರವನ್ನು ಉಳಿಸಿಕೊಂಡಿತು. ಬೆಳಾಗಾಂನಲ್ಲಿ ಅತ್ಯಲ್ಪ ಮತಗಳಿಂದ ಸೋಲನ್ನು ಅನುಭವಿಸಿತು.
ಈ ಎಲ್ಲ ಚುನಾವಣೆಗಳೂ, ಮೋದಿ ಸರ್ಕಾರದ ವೈಫಲ್ಯಗಳು ಒಂದಾದ ಮೇಲೆ ಒಂದು ಬಹಿರಂಗಗೊಂಡ ಸಮಯದಲ್ಲಿ ನಡೆದವು. ಭಾರತೀಯ ಮತದಾರರಿಗೆ ಮೋದಿಷಾಗಳ ಬಗೆಗೆ ಅಸಮಾಧಾನ ಹುಟ್ಟಿಕೊಂಡ ತರುಣದಲ್ಲಿ ಈ ಚುನಾವಣೆಗಳು ನಡೆದವು. ಹೀಗಾಗಿ ಈ ಚುನಾವಣೆಗಳಲ್ಲಿ ಮೋದಿಯವರ ವಿರೋಧ ಪೂರ್ಣಮಟ್ಟದಲ್ಲಿ ಅನಾವರಣಗೊಳ್ಳಲಿಲ್ಲ.

ಈ ಚುನಾವಣೆಗಳು ಕೋವಿಡ್ ಎರಡನೇ ಅಲೆ ಆರಂಭವಾದ ಮೇಲೆ ನಡೆದಿದ್ದರೆ ಕೋವಿಡ್ ಪೀಡಿತರು, ಆಕ್ಸಿಜನ್, ಕೋವಿಡ್ ಲಸಿಕೆ ಚುಚ್ಚುಮದ್ದು ಮತ್ತು ಬೆಡ್‌ಗಾಗಿ, ಆಕ್ಸಿಜನ್‌ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಪ್ರಾಣಬಿಟ್ಟ ಸಂದರ್ಭದಲ್ಲಿ ಆಗಿದ್ದರೆ ಮೋದಿಯವರಿಗೆ ಮಣ್ಣು ಮುಕ್ಕಿಸುತ್ತಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 293 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...