ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಮಿಲ್ಕಿಪುರ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದೆ. ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಚಂದ್ರಭಾನು ಪಾಸ್ವಾನ್ ಅವರು ಸಮಾಜವಾದಿ ಪಕ್ಷ (ಎಸ್‌ಪಿ)ದ ಅಜಿತ್ ಪ್ರಸಾದ್ ಅವರನ್ನು 65,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಅದಗ್ಯೂ, ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಎಸ್‌ಪಿ ಆರೋಪಿಸಿದೆ. ಯುಪಿ ಉಪ ಚುನಾವಣೆ
ಮಿಲ್ಕಿಪುರ ಕ್ಷೇತ್ರದ ಉಪ ಚುನಾವಣೆಯನ್ನು ಸಮಾಜವಾದಿ ಪಕ್ಷ ಮತ್ತು ಬಿಜೆಪಿ ಪ್ರತಿಷ್ಠೆಯ ಕಣವಾಗಿ ಪರಿಗಣಿಸಿತ್ತು. ಚುನಾವಣೆಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸಿದ್ದರು. ಮಿಲ್ಕಿಪುರ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವ ಮೂಲಕ ಬಿಜೆಪಿ ಎಂಟು ವರ್ಷಗಳ ಅಂತರವನ್ನು ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪಾಸ್ವಾನ್ ಅವರು ತನ್ನ ಗೆಲುವಿಗೆ ಶನಿವಾರ ಬಿಜೆಪಿಗೆ ಕೃತಜ್ಞತೆ ಸಲ್ಲಿಸಿದ್ದು, “ಮೋದಿ ಅವರು ಮತ್ತು ಯೋಗಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಮತದಾರರ ಬೆಂಬಲಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ನನಗೆ ಅಪಾರ ಗೌರವ ಮತ್ತು ಬೆಂಬಲ ಸಿಕ್ಕಿದೆ.” ಎಂದು ಹೇಳಿದ್ದಾರೆ. ಯುಪಿ ಉಪ ಚುನಾವಣೆ
ಅಯೋಧ್ಯೆ ಮತ್ತು ಮಿಲ್ಕಿಪುರದ ಜನರು ಅಭಿವೃದ್ಧಿ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಒ.ಪಿ. ರಾಜ್‌ಭರ್ ಹೇಳಿದ್ದಾರೆ. “ಎನ್‌ಡಿಎ ಅಭ್ಯರ್ಥಿ ಭಾರಿ ಬಹುಮತದಿಂದ ಗೆಲ್ಲುತ್ತಾರೆ ಎಂದು ನಾನು ಮೊದಲೇ ಹೇಳಿದ್ದೆ. ಸಾರ್ವಜನಿಕರು ಅಭಿವೃದ್ಧಿಯನ್ನು ಬಯಸುತ್ತಾರೆ ಮತ್ತು ಅವರು ಯೋಗಿ ಅವರ ಕೆಲಸದಿಂದ ಸಂತೋಷಪಟ್ಟಿದ್ದಾರೆ” ಎಂದು ರಾಜ್‌ಭರ್ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
2024ರಲ್ಲಿ ಲೋಕಸಭೆಗೆ ಆಯ್ಕೆಯಾದ ಕಾರಣಕ್ಕೆ ಎಸ್‌ಪಿಯ ಅವಧೇಶ್ ಪ್ರಸಾದ್ ಕ್ಷೇತ್ರವನ್ನು ತೊರೆದಿದ್ದರು, ಹಾಗಾಗಿ ಮಿಲ್ಕಿಪುರ ಉಪಚುನಾವಣೆ ನಡೆದಿತ್ತು. ಫೈಜಾಬಾದ್ ಕ್ಷೇತ್ರದಲ್ಲಿ ಅವಧೇಶ್ ಪ್ರಸಾದ್ ಅವರು ಎರಡು ಬಾರಿ ಬಿಜೆಪಿ ಸಂಸದ ಲಲ್ಲು ಸಿಂಗ್ ಅವರನ್ನು ಸೋಲಿಸಿದ್ದರು. ಎಸ್‌ಪಿಯ ಉಪ ಚುನಾವಣೆ ಅಭ್ಯರ್ಥಿ ಅಜಿತ್ ಪ್ರಸಾದ್ ಅವರು ಅವದೇಶ್ ಪ್ರಸಾದ್ ಮಗ.
ಮತ ಎಣಿಕೆಯ ಸಮಯದಲ್ಲಿ, ಎಸ್‌ಪಿ ಸಂಸದ ಅವಧೇಶ್ ಪ್ರಸಾದ್ ಬಿಜೆಪಿಯನ್ನು “ಅಪ್ರಾಮಾಣಿಕ” ಪಕ್ಷ ಎಂದು ಆರೋಪಿಸಿದ್ದು, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿಯ ಗೆಲುವು ನಕಲಿ ಎಂದು ಕರೆದಿದ್ದಾರೆ.
ಕ್ಷೇತ್ರದ ಉಪಚುನಾವಣೆಯ ಮತದಾನ ಬುಧವಾರ ನಡೆದಿದ್ದು, ಒಟ್ಟು 3.70 ಲಕ್ಷ ಮತದಾರರಲ್ಲಿ 65% ಕ್ಕೂ ಹೆಚ್ಚು ಮತದಾರರು ತಮ್ಮ ಮತ ಚಲಾಯಿಸಿದ್ದರು. ಚುನಾವಣಾ ಆಯೋಗದ (EC) ಪ್ರಕಾರ, ಮತದಾನ ಪೂರ್ಣಗೊಳ್ಳುವವರೆಗೆ ಶೇ. 65.35 ರಷ್ಟು ಮತಗಳು ಚಲಾವಣೆಯಾಗಿವೆ. 2022 ರ ವಿಧಾನಸಭಾ ಚುನಾವಣೆಯಲ್ಲಿ ಶೇ. 60.23 ರಷ್ಟು ಮತದಾನ ದಾಖಲಾಗಿತ್ತು.
ಮತದಾನದ ದಿನ ಕೂಡಾ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಡಿಯೋ ಕ್ಲಿಪ್ ಅನ್ನು ಹಂಚಿಕೊಂಡು, ಇದು ಆಡಳಿತಾರೂಢ ಬಿಜೆಪಿಗೆ ಸಹಾಯ ಮಾಡಲು ಅದರ ಅಧ್ಯಕ್ಷರು “ನಕಲಿ ಮತದಾನ”ದ “ಗುರಿ”ಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ ಎಂದು ತೋರಿಸುತ್ತದೆ ಎಂದು ಹೇಳಿಕೊಂಡಿದ್ದರು.
ಇದನ್ನೂಓದಿ: ಪ್ಯಾಲೆಸ್ತೀನ್ ಕುರಿತ ಭಾರತದ ದೀರ್ಘಕಾಲದ ನಿಲುವು ಬದಲಾಗಿಲ್ಲ : ವಿದೇಶಾಂಗ ಕಾರ್ಯದರ್ಶಿ
ಪ್ಯಾಲೆಸ್ತೀನ್ ಕುರಿತ ಭಾರತದ ದೀರ್ಘಕಾಲದ ನಿಲುವು ಬದಲಾಗಿಲ್ಲ : ವಿದೇಶಾಂಗ ಕಾರ್ಯದರ್ಶಿ


