Homeಮುಖಪುಟಯುಪಿ ಸಿಎಂ ಆದಿತ್ಯನಾಥ್ ಭೇಟಿಗೆ ತೆರಳಿದ್ದ ವೈದ್ಯರಿಗೆ ಅವಕಾಶ ನಿರಾಕರಣೆ!

ಯುಪಿ ಸಿಎಂ ಆದಿತ್ಯನಾಥ್ ಭೇಟಿಗೆ ತೆರಳಿದ್ದ ವೈದ್ಯರಿಗೆ ಅವಕಾಶ ನಿರಾಕರಣೆ!

- Advertisement -
- Advertisement -

ಝಾನ್ಸಿಯಲ್ಲಿ ಭಾನುವಾರ ನಡೆದ ಪರಿಶೀಲನಾ ಸಭೆ ಸಂದರ್ಭದಲ್ಲಿ ಝಾನ್ಸಿ ವೈದ್ಯಕೀಯ ಕಾಲೇಜಿನ ವೈದ್ಯರು ಮುಖ್ಯಮಂತ್ರಿಗೆ ಒಂದು ಜ್ಞಾಪಕ ಪತ್ರವನ್ನು ಸಲ್ಲಿಸಲು ಬಯಸಿದ್ದರು. ಇದರಲ್ಲಿ ಸಂಸ್ಥೆಯ ಕೇಂದ್ರ ಗ್ರಂಥಾಲಯವನ್ನು 24 ಗಂಟೆಗಳ ಕಾಲ ತೆರೆದಿಡಬೇಕು ಎಂಬ ಬೇಡಿಕೆಯೊಂದಿಗೆ ಹಲವು ಮನವಿಗಳನ್ನು ಮಾಡಲಾಗಿತ್ತು. ಆದರೆ ವೈದ್ಯರು ಸಿಎಂ ಅವರನ್ನು ಭೇಟಿಯಾಗದಂತೆ ತಡೆಯಲಾಯಿತು ಎಂದು ಆರೋಪಿಸಲಾಗಿದೆ.

ಜ್ಞಾಪಕ ಪತ್ರವನ್ನು ಸಲ್ಲಿಸಲು ಬಯಸಿದ ಕಿರಿಯ ವೈದ್ಯರು, ಸಿಎಂ ಅವರನ್ನು ಭೇಟಿಯಾಗುವ ಕುರಿತು ಮೊದಲೇ ಆಡಳಿತದ ಗಮನಕ್ಕೆ ತಂದಿರಲಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅಂದ್ರಾ ವಂಸಿ ಹೇಳಿದ್ದಾರೆ.
ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ಯಾವುದೇ ಅಡ್ಡಿ ಉಂಟಾಗದಂತೆ ಕ್ರಮ ಕೈಗೊಳ್ಳಲು ಹೀಗೆ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟಕ್ಕೆ 6 ತಿಂಗಳು- ಹೇಗಿದೆ ಪ್ರತಿಭಟನಾ ನಿರತ ಗಡಿಗಳಲ್ಲಿನ ಪರಿಸ್ಥಿತಿ..?

ಕಿರಿಯ ವೈದ್ಯರಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ವಂಸಿ ಹೇಳಿದ್ದಾರೆ. ವೈದ್ಯಕೀಯ ಕಾಲೇಜಿನ ಜೂನಿಯರ್ ವೈದ್ಯರ ಸಂಘದ ಅಧ್ಯಕ್ಷ ಡಾ. ಹರ್ದೀಪ್ ತಮ್ಮ ಕೆಲವು ಸಹೋದ್ಯೋಗಿಗಳೊಂದಿಗೆ ಮೂರು ಅಂಶಗಳ ಜ್ಞಾಪಕ ಪತ್ರವನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸಲು ಬಯಸಿದ್ದರು.

ತಮ್ಮ ಜ್ಞಾಪಕ ಪತ್ರದಲ್ಲಿ, ಕಾಲೇಜಿನ ಕೇಂದ್ರ ಗ್ರಂಥಾಲಯವು 24 ಗಂಟೆಗಳ ಕಾಲ ತೆರೆದಿರಬೇಕು. ಸಾಕಷ್ಟು ಔಷಧಿಗಳನ್ನು ಲಭ್ಯಗೊಳಿಸಬೇಕು ಮತ್ತು ಆಡಳಿತ ಅಧಿಕಾರಿಗಳು ಅವರೊಂದಿಗೆ ಸಭ್ಯವಾಗಿ ವರ್ತಿಸಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದರು.

ತರುವಾಯ, ಕಿರಿಯ ವೈದ್ಯರೊಂದಿಗೆ ಡಿಎಂ ಮತ್ತು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಝಾನ್ಸಿಯಲ್ಲಿ ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, “ಯುಪಿ ಸರ್ಕಾರದ ಮಾದರಿ ಎಂದರೆ ಅಗತ್ಯವಿದ್ದಾಗ ಗೈರುಹಾಜರಾಗಿರುವುದು. ಸುಳ್ಳು ಪ್ರಚಾರದಲ್ಲಿ ತೊಡಗುವುದು. ಸಾರ್ವಜನಿಕ ಸೇವೆಯಲ್ಲಿರುವವರನ್ನು ಬಂಧಿಸುವುದು” ಎಂದಿದ್ದಾರೆ.

“ಪೊಲೀಸರು ಕೆಲವು  ವೈದ್ಯರನ್ನು ಬಂಧಿಸಿದರು, ಯಾಕೆಂದರೆ ಅವರು ತಮ್ಮ ಮೂರು ಬೇಡಿಕೆಗಳನ್ನು ಮುಖ್ಯಮಂತ್ರಿಯ ಮುಂದೆ ಮಂಡಿಸಲು ಹೋಗಿದ್ದರು. ಈ ಬೇಡಿಕೆಗಳು ತಪ್ಪೇ? ಮುಖ್ಯಮಂತ್ರಿ ಅವರ ಬೇಡಿಕೆಗಳನ್ನು ಆಲಿಸಬೇಕಿತ್ತು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟಿಎಂಸಿ ನಾಯಕರ ಗೃಹಬಂಧನಕ್ಕೆ ಅವಕಾಶ: ಹೈಕೋರ್ಟ್ ಆದೇಶ ವಿರೋಧಿಸಿ ಸುಪ್ರೀಂಗೆ ಹೋದ ಸಿಬಿಐ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...